Ugadi 2023ಕ್ಕೂ ಮೊದಲು ಮನೆಯಿಂದ ಈ ವಸ್ತುಗಳನ್ನು ಹೊರ ಹಾಕಿ, ಇಲ್ಲದಿದ್ದರೆ ದುರದೃಷ್ಟ ಬಿಡೋದಿಲ್ಲ!

ಇನ್ನೊಂದು ವಾರದಲ್ಲಿ ಯುಗಾದಿ. ಹಿಂದೂ ಹೊಸ ವರ್ಷದ ಈ ದಿನಾರಂಭಕ್ಕೆ ಮುನ್ನ ಮನೆ ಸ್ವಚ್ಛತಾ ಕಾರ್ಯ ನಡೆಸುವುದು ಇದ್ದೇ ಇದೆ. ಈ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತಿರಬಹುದಾದ ಈ ವಸ್ತುಗಳನ್ನು ಹೊರಕ್ಕೆಸೆಯಿರಿ.

Throw these things out of the house before Ugadi 2023 otherwise misfortune will not leave you skr

ಹಿಂದೂ ಕ್ಯಾಲೆಂಡರ್ ಪ್ರಕಾರ, ಯುಗಾದಿಯು ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪಾದ ತಿಥಿಯಿಂದ ಪ್ರಾರಂಭವಾಗುತ್ತದೆ. ಇದೇ ದಿನದಿಂದ ಚೈತ್ರ ನವರಾತ್ರಿಯೂ ಶುರುವಾಗುತ್ತದೆ. ಈ ಬಾರಿ ಮಾರ್ಚ್ 22ರಂದು ಯುಗಾದಿಯಾಗಿದೆ. 

ಯುಗಾದಿ ಎಂದರೆ ವಾರದ ಮುಂಚೆಯೇ ಮನೆಮನೆಗಳಲ್ಲಿ ಸ್ವಚ್ಛತಾ ಅಭಿಯಾನ ಶುರುವಾಗುತ್ತದೆ. ಬಲೆ ಹೊಡೆಯುವುದು, ಕಸ ತೆಗೆಯುವುದು, ಬಣ್ಣ ಹೊಡೆಸುವುದು ಸೇರಿದಂತೆ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಪೇರಿಸಿಟ್ಟುಕೊಳ್ಳುವ ಕಾರ್ಯದಲ್ಲಿ ಮಹಿಳೆಯರು ತೊಡಗುತ್ತಾರೆ. ಹೀಗೆ ಸ್ವಚ್ಛ ಮಾಡುವಾಗ ಮನೆಯಲ್ಲಿರುವ ಬೇಡದ ವಸ್ತುಗಳನ್ನು ಎಸೆಯುವುದೂ ಅಷ್ಟೇ ಮುಖ್ಯ. ಏಕೆಂದರೆ ಕೆಲ ವಸ್ತುಗಳು ಮನೆಯಲ್ಲಿ ನಕಾರಾತ್ಮಕತೆ ಹರಡುವುದು ಬಿಟ್ಟು ಬೇರೇನೂ ಉಪಯೋಗಕ್ಕೆ ಬರುತ್ತಿರುವುದಿಲ್ಲ. ಆದರೂ, ಅವನ್ನು ಯಾವುದೋ ಮುಂದಾಲೋಚನೆಯಿಂದಲೋ ಅಥವಾ ಕಡೆಗಣನೆಯಿಂದಲೋ ಮನೆಯಲ್ಲೇ ಇಟ್ಟುಕೊಂಡಿರುತ್ತೇವೆ. ಇಂಥ ವಸ್ತುಗಳು ಹೆಚ್ಚಾದಷ್ಟೂ ನಕಾರಾತ್ಮಕತೆ ಹೆಚ್ಚಿ ಮನೆಯಲ್ಲಿ ತೊಂದರೆ ಹೆಚ್ಚುತ್ತದೆ. ಅವು ಮನೆಗೆ ದುರದೃಷ್ಟವನ್ನು ತರುತ್ತವೆ. ಯುಗಾದಿಗೂ ಮುನ್ನ ಮನೆಯಿಂದ ಹೊರ ಹಾಕಬೇಕಾದ ವಸ್ತುಗಳು ಯಾವೆಲ್ಲ ನೋಡೋಣ. 

ನವರಾತ್ರಿಯ ಮೊದಲು ಈ ವಸ್ತುಗಳನ್ನು ಮನೆಯಿಂದ ತೆಗೆದು ಹಾಕಿ..
ಮುರಿದ ವಿಗ್ರಹಗಳು

ವಾಸ್ತು ಶಾಸ್ತ್ರದ ಪ್ರಕಾರ ದೇವತೆಗಳ ವಿಗ್ರಹಗಳು ಎಂದಿಗೂ ಮನೆಯಲ್ಲಿ ಒಡೆಯಬಾರದು. ಒಂದು ವೇಳೆ ವಿಗ್ರಹವು ಎಲ್ಲೋ ಸ್ವಲ್ಪ ಮುರಿದಿದ್ದರೆ, ಅದನ್ನು ಹರಿಯುವ ನೀರಿನಲ್ಲಿ ಎಸೆಯಬೇಕು. ಇಲ್ಲದಿದ್ದರೆ ಅದು ಮನೆಗೆ ದುರದೃಷ್ಟವನ್ನು ತರುತ್ತದೆ.

Guru Asta 2023ದಿಂದ 3 ರಾಶಿಗಳಿಗೆ ಹೆಚ್ಚುವ ಸಮಸ್ಯೆ

ನಿಂತ ವಾಚ್
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ನಿಂತ ಗಡಿಯಾರದಂತೆ, ವ್ಯಕ್ತಿಯ ಅದೃಷ್ಟವೂ ನಿಲ್ಲುತ್ತದೆ. ಆದ್ದರಿಂದ, ಮನೆಯಲ್ಲಿ ಗಡಿಯಾರ ಸ್ಥಗಿತಗೊಂಡರೆ, ಅದನ್ನು ತಕ್ಷಣವೇ ಸರಿ ಪಡಿಸಬೇಕು ಅಥವಾ ಅದನ್ನು ಎಸೆಯಬೇಕು. ಏಕೆಂದರೆ ನಿಂತ ಗಡಿಯಾರವು ವ್ಯಕ್ತಿಯ ಪ್ರಗತಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಕೆಟ್ಟು ನಿಂತ ಗಡಿಯಾರ ಅಥವಾ ವಾಚನ್ನು ಕೂಡಲೇ ಸರಿಪಡಿಸಿ ಇಲ್ಲವೇ ಎಸೆಯಿರಿ.

ಒಡೆದ ಗಾಜು
ವಾಸ್ತು ಶಾಸ್ತ್ರದ ಪ್ರಕಾರ ಒಡೆದ ಗಾಜು ಅಥವಾ ಅದರಿಂದ ತಯಾರಿಸಿದ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದರಿಂದ ಆರ್ಥಿಕ ಸ್ಥಿತಿ ದುರ್ಬಲವಾಗುತ್ತದೆ. ಅದಕ್ಕಾಗಿಯೇ ಗಾಜಿಗೆ ಸಂಬಂಧಿಸಿದ ಮುರಿದ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ.

ಉಗ್ರ ವಿಗ್ರಹ
ವಾಸ್ತು ಶಾಸ್ತ್ರದ ಪ್ರಕಾರ, ಉಗ್ರ ಸ್ವರೂಪದಲ್ಲಿರುವ ದೇವತೆಯ ವಿಗ್ರಹವನ್ನು ದೇವರ ಕೋಣೆಯಲ್ಲಿ ಇಡಬಾರದು. ಏಕೆಂದರೆ ಅವರು ಕೆಟ್ಟದ್ದಕ್ಕೆ ಕಾರಣವೆಂದು ಪರಿಗಣಿಸಲಾಗಿದೆ. ಉದಾಹರಣೆಗೆ ಉಗ್ರ ನರಸಿಂಹ, ಶನಿ, ಸಂಹರಿಸುತ್ತಿರುವ ರೂಪದಲ್ಲಿರು ದುರ್ಗೆ ಇತ್ಯಾದಿ..

ಹರಿದ ಧಾರ್ಮಿಕ ಪುಸ್ತಕಗಳು
ವಾಸ್ತು ಶಾಸ್ತ್ರದ ಪ್ರಕಾರ ಹರಿದ ಧಾರ್ಮಿಕ ಪುಸ್ತಕಗಳನ್ನು ಮನೆಯಲ್ಲಿ ಇಡಬಾರದು. ಹರಿದರೆ, ನಂತರ ಹರಿಯುವ ನೀರಿನಲ್ಲಿ ಹರಿಯಲು ಬಿಡಿ. 

ಯೂಟ್ಯೂಬಲ್ಲಿ ಅತಿ ಹೆಚ್ಚು ವೀಕ್ಷಣೆಗೊಳಗಾದ ಭಾರತದ ವಿಡಿಯೋ ಯಾವ್ದು ಗೊತ್ತಾ?

ಹಳೆಯ ಕುಂಕುಮ, ಅರಿಶಿನ, ಪ್ರಸಾದ
ಕುಂಕುಮ, ಅರಿಶಿನ ಇತ್ಯಾದಿ ಪ್ರಸಾದಗಳನ್ನು ಎಷ್ಟೇ ವರ್ಷವಾದರೂ ಎಸೆಯಲು ಮನಸ್ಸಾಗುವುದಿಲ್ಲ, ಅವು ಖಾಲಿಯಾಗುವುದಿಲ್ಲ. ಆದರೆ, ಗ್ರಹಣವೊಂದು ಮುಗಿಯುತ್ತಿದ್ದಂತೆಯೇ ಆ ಪ್ರಸಾದಕ್ಕೆ ಬಿಡುಗಡೆ ಕೊಡಬೇಕು. ಅಂಥ ಪ್ರಸಾದವನ್ನು ಹರಿವ ನೀರಿನಲ್ಲಿ ಬಿಡಬೇಕು.

ದಿನಾಂಕ ಮುಗಿದ ಔಷಧಿಗಳು
ಔಷಧಿಗಳು, ಮಾತ್ರೆಗಳು ಪ್ರತಿ ಬಾರಿ ಅನಾರೋಗ್ಯವಾದಾಗಲೂ ಮನೆಗೆ ಬರುತ್ತವೆ. ಆದರೆ, ಅವು ಪೂರ್ತಿ ಖಾಲಿಯಾಗುವುದರೊಳಗೆ ಆರಾಮವಾಗಿರುತ್ತೇವೆ. ಈ ಔಷಧಿಗಳು ಮುಂದಿನ ಬಾರಿ ಅನಾರೋಗ್ಯವಾದರೆ ಎಂಬ ಕಾರಣಕ್ಕೆ ಕುಳಿತಲ್ಲಿಯೇ ವಯಸ್ಸಾಗಿ ಎಕ್ಸ್‌ಪೈರಿ ಡೇಟ್ ತಲುಪಿರುತ್ತವೆ. ಆದರೆ, ಅದನ್ನ ನೋಡುವ ವ್ಯವಧಾನ ಹೆಚ್ಚಿನವರಿಗಿರುವುದಿಲ್ಲ. ಈ ಬಾರಿ ಯುಗಾದಿಗಾಗಿ ಮನೆ ಸ್ವಚ್ಛಗೊಳಿಸುವಾಗ ಮನೆಯಲ್ಲಿರುವ ಎಲ್ಲ ಔಷಧಿಗಳ ಎಕ್ಸ್‌ಪೈರಿ ಡೇಟ್ ಚೆಕ್ ಮಾಡಿ. ದಿನಾಂಕ ಮುಗಿದವನ್ನು ಕೂಡಲೇ ಎಸೆಯಿರಿ.
 

Latest Videos
Follow Us:
Download App:
  • android
  • ios