Asianet Suvarna News Asianet Suvarna News

ಕರ್ಕಾಟಕ ರಾಶಿಯವರು ಈ ರತ್ನ ಧರಿಸಿದರೆ ಶ್ರೀಮಂತರಾಗ್ಬೋದು! ಧರಿಸೋ ವಿಧಾನ ತಿಳಿಯಿರಿ..

ಕರ್ಕಾಟಕ ರಾಶಿಯ ಅದೃಷ್ಟ ರತ್ನ ಯಾವುದು, ಅದನ್ನು ಧರಿಸುವುದರ ಲಾಭಗಳೇನು, ಹೇಗೆ ಧರಿಸಬೇಕು, ಯಾವಾಗ ಧರಿಸಬೇಕು ತಿಳಿಯೋಣ.

This white gem can make Cancer people rich know how to wear it skr
Author
Bangalore, First Published Jun 19, 2022, 5:36 PM IST | Last Updated Jun 19, 2022, 5:36 PM IST

ರತ್ನಶಾಸ್ತ್ರ(Gemology)ದಲ್ಲಿ ಗ್ರಹಗಳು ಮತ್ತು ರಾಶಿಚಕ್ರದ ಚಿಹ್ನೆಗಳಿಗೆ ಸಂಬಂಧಿಸಿದ ರತ್ನಗಳನ್ನು ಧರಿಸುವುದು ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುತ್ತದೆ ಮತ್ತು ತೊಂದರೆಗಳಿಂದ ಮುಕ್ತಿಯನ್ನು ಪಡೆಯಬಹುದು ಎಂದು ನಂಬಲಾಗಿದೆ. ಎಲ್ಲಾ 12 ರಾಶಿಚಕ್ರದ ಚಿಹ್ನೆ(zodiac signs)ಗಳಿಗೆ ವಿವಿಧ ರತ್ನಗಳನ್ನೂ, ಅವನ್ನು ಧರಿಸುವುದರ ಪ್ರಾಮುಖ್ಯತೆಯನ್ನು ಹೇಳಲಾಗಿದೆ. ಸಧ್ಯ ಕರ್ಕಾಟಕ ರಾಶಿ(Cancer)ಯ ಬಗ್ಗೆ ತಿಳಿಯೋಣ. 

ಕರ್ಕಾಟಕವನ್ನು ಆಳುವ ಗ್ರಹವನ್ನು ಚಂದ್ರ(moon). ಚಂದ್ರನು ಕರ್ಕಾಟಕ ರಾಶಿಗೆ ಅಧಿಪತಿಯಾಗಿರುವುದರಿಂದ ಈ ರಾಶಿಯವರಿಗೆ ತಂಪು ಸ್ವಭಾವದ ಮುತ್ತುಗಳನ್ನು ಧರಿಸುವುದರಿಂದ ಅಪರಿಮಿತ ಲಾಭವಿದೆ. ಕರ್ಕಾಟಕ ರಾಶಿಗೆ ಶ್ರೀಮಂತಿಕೆಯನ್ನೂ, ಮಾನಸಿಕ ನೆಮ್ಮದಿಯನ್ನೂ, ಸಂತೋಷವನ್ನೂ ತಂದುಕೊಡುತ್ತದೆ ಮುತ್ತು. ಆದರೆ, ಯಾವುದೇ ರತ್ನ ಧರಿಸುವ ಮುನ್ನ ಒಮ್ಮೆ ಜ್ಯೋತಿಷಿಯನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ. 

ಮುತ್ತು ರತ್ನಗಳನ್ನು ಧರಿಸುವುದು ಕರ್ಕ ರಾಶಿಯ ಜನರಿಗೆ ಫಲಪ್ರದ. ಹಾಗಾದರೆ ಮುತ್ತು ರತ್ನಗಳನ್ನು ಧರಿಸುವುದರ ನಿಯಮಗಳು ಮತ್ತು ಪ್ರಯೋಜನಗಳನ್ನು ತಿಳಿಯೋಣ.

ಮುತ್ತು ರತ್ನವನ್ನು ಧರಿಸುವುದು ಹೇಗೆ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ ಶುಕ್ಲ ಪಕ್ಷದ ಸೋಮವಾರ(Monday) ಅಥವಾ ಹುಣ್ಣಿಮೆಯ ದಿನದಂದು ಮುತ್ತನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ಬೆಳ್ಳಿ(Silver)ಯ ಉಂಗುರದಲ್ಲಿ ಮುತ್ತನ್ನು ಧರಿಸಬಹುದು. ಈ ರತ್ನವನ್ನು ಧರಿಸುವ ಮೊದಲು ಮುತ್ತು ರತ್ನದ ಉಂಗುರವನ್ನು ಗಂಗಾಜಲದಿಂದ ಶುದ್ಧೀಕರಿಸಿ. ನಂತರ ಅದನ್ನು ಶಿವನಿಗೆ ಅರ್ಪಿಸಿ. ನಂತರ ಅದನ್ನು ನಿಮ್ಮ ಕೈಯ ಕಿರುಬೆರಳಿಗೆ ಹಾಕಿಕೊಳ್ಳಿ.

ಮುತ್ತನ್ನು ಧರಿಸುವುದರಿಂದ ಆಗುವ ಪ್ರಯೋಜನಗಳು(benefits)
ಕರ್ಕಾಟಕದ ಜನರು ತುಂಬಾ ಕೋಪಗೊಳ್ಳುತ್ತಾರೆ, ಆದ್ದರಿಂದ ಅವರು ಮುತ್ತನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಇದು ಕೋಪವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಮುತ್ತುಗಳನ್ನು ಧರಿಸುವುದರಿಂದ, ವ್ಯಕ್ತಿಯ ಮನಸ್ಸು ಶಾಂತವಾಗಿರುತ್ತದೆ ಮತ್ತು ಅವನು ಯಾವುದೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಲು ಸಾಧ್ಯವಾಗುತ್ತದೆ. ಧಾರಕನಿಗೆ ಮಾನಸಿಕ ಶಾಂತಿ ಮತ್ತು ಯೋಗಕ್ಷೇಮವನ್ನು ತರಲು ಹೆಚ್ಚಾಗಿ ಬಳಸಲಾಗುತ್ತದೆ. 
ಶಾಂತಿಯ ಜೊತೆಗೆ ಇದು ಧೈರ್ಯವನ್ನೂ ತರುತ್ತದೆ. ಇದು ಯಾವುದೇ ವ್ಯಕ್ತಿಯ ಮುಖದ ಆಕರ್ಷಣೆ ಮತ್ತು ದೇಹದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದು ಖಿನ್ನತೆ, ಮಾನಸಿಕ ಅಸ್ವಸ್ಥತೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ, ಸ್ಮರಣೆಯನ್ನು ಸುಧಾರಿಸುತ್ತದೆ ಮತ್ತು ವ್ಯಕ್ತಿಗಳ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾರು ಎಲ್ಲದರ ಬಗ್ಗೆ ಚಿಂತೆ ಮತ್ತು ಒತ್ತಡವನ್ನು ಹೊಂದಿರುತ್ತಾರೋ, ಅಂತಹ ಜನರು ಮುತ್ತು ರತ್ನಗಳನ್ನು ಧರಿಸುವುದರಿಂದ ಪ್ರಯೋಜನಗಳನ್ನು ಪಡೆಯಬಹುದು. ಈ ಕಲ್ಲನ್ನು ಧರಿಸುವುದರಿಂದ ವ್ಯಕ್ತಿಗೆ ಒಳ್ಳೆಯ ನಿದ್ದೆ ಬರುತ್ತದೆ ಮತ್ತು ಮನಸ್ಸಿನ ಅನಾವಶ್ಯಕ ಭಯ ಕಡಿಮೆಯಾಗುತ್ತದೆ.
ಇದು ಧರಿಸಿದವರ ಮೇಲೆ ಯಾವುದೇ ಋಣಾತ್ಮಕ ಪರಿಣಾಮಗಳನ್ನು ಬೀರುವುದಿಲ್ಲ. ಹೀಗಾಗಿ ಇದನ್ನು ಯಾರಾದರೂ ಧರಿಸಬಹುದು. 

ಆರ್ಥಿಕ ಪರಿಸ್ಥಿತಿ ಸುಧಾರಣೆ
ದುರ್ಬಲ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹ ಮುತ್ತು ಸಹಾಯಕವೆಂದು ಪರಿಗಣಿಸಲಾಗಿದೆ. ಅಲ್ಲದೆ, ಈ ರತ್ನವನ್ನು ಧರಿಸುವುದು ನಿಮಗೆ ಕೆಲಸದಲ್ಲಿ ಯಶಸ್ಸನ್ನು ನೀಡುತ್ತದೆ.

ಆರೋಗ್ಯ ಲಾಭ(health benefits)
ವೈದ್ಯಕೀಯವಾಗಿ, ಮುತ್ತು ರಕ್ತದೊತ್ತಡ ಮತ್ತು ಮೂತ್ರಕೋಶದ ರೋಗವನ್ನು ಗುಣಪಡಿಸಲು ತುಂಬಾ ಒಳ್ಳೆಯದು. ನಮ್ಮ ದೈಹಿಕ ದ್ರವಗಳನ್ನು ಸಮತೋಲನಗೊಳಿಸಲು ಮತ್ತು ನಿರ್ವಹಿಸಲು ಸಹಕಾರಿಯಾಗಿದೆ. ಮುತ್ತನ್ನು ಧರಿಸುವುದರ ಇತರ ವೈದ್ಯಕೀಯ ಪ್ರಯೋಜನಗಳೆಂದರೆ ನಿದ್ರಾಹೀನತೆ, ಮಾನಸಿಕ ಸಮಸ್ಯೆಗಳು, ಕ್ಷಯರೋಗ, ಮಲಬದ್ಧತೆ ಮತ್ತು ಹೃದಯ ಸಮಸ್ಯೆಗಳು ಇತ್ಯಾದಿ ಕಡಿವಾಣಕ್ಕೆ ಬರುತ್ತವೆ. 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios