ಈ ವಾರ ಬಂಪರ್ ಲಾಟ್ರಿ ಹೊಡೆಯೋ ರಾಶಿಗಳಿವು!

ಅಮವಾಸ್ಯೆ ಕಳೆದಿದ್ದೇ ಕೆಲವು ರಾಶಿಗಳ ದೆಸೆ ಬದಲಾಗಿದೆ. ಕೆಲವು ರಾಶಿಗಳಿಗೆ ಈ ವಾರ ಧನಲಾಭವಿದೆ. ನಿಮ್ ರಾಶಿ ಈ ಲೀಸ್ಟ್ ನಲ್ಲಿದೆಯಾ ಚೆಕ್ ಮಾಡಿ.

 

This week these zodiac born will get huge luck

ಮಿಥುನ
ಹೊಸ ಪ್ರಾಜೆಕ್ಟ್ ಗಳನ್ನು ನೀವೀಗ ಶುರು ಮಾಡಬಹುದು. ಈ ದಿನ‌, ಈ ವಾರ ದೊಡ್ಡ ದೊಡ್ಡ ಕನಸು ಕಾಣಿರಿ. ಅವುಗಳ ಬೆನ್ನುಹತ್ತಿ. ಖಂಡಿತಾ ಯಶಸ್ಸು ನಿಮ್ಮದಾಗುತ್ತೆ.‌ ಹಿತೈಷಿಗಳಿಂದ ಸಹಕಾರ ಸಿಗುತ್ತೆ. ಸಕ್ಸಸ್ ಗೆ ಎಲ್ಲೂ ಅಡೆತಡೆಗಳಿರೋದಿಲ್ಲ. ನಿಮ್ಮ ಆತ್ಮವಿಶ್ವಾಸ ವೃದ್ದಿಸುತ್ತದೆ. ಇದೊಂಥರ ಹೇಗಂದರೆ ಆನೆ ನಡೆದದ್ದೇ ದಾರಿ ಅನ್ನೋ ಥರ ನೀವು ಹೊಸ ಪ್ರಾಜೆಕ್ಟ್ ಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗುತ್ತೀರಿ. ಈ ಟೈಮ್ ನಲ್ಲಿ ಅನಿರೀಕ್ಷಿತ ಸೋರ್ಸ್ ಗಳಿಂದ ಅಧಿಕ‌ ಆದಾಯ ಬತಬಹುದು. ಬ್ಯುಸಿನೆಸ್ ಗೆ ಇಳಿಯಲು ಇದು ಸಕಾಲ. ನಿಮ್ಮ‌ಸ್ಮಾರ್ಟ್ ನೆಸ್, ಚಾಣಾಕ್ಷತನಕ್ಕೆ ಈವರೆಗೂ ಸಿಗದ ಬೆಲೆ ಈಗ ಸಿಗುತ್ತೆ. ಈ ಸಂದರ್ಭದಲ್ಲಿ ಅನೇಕ ಸರ್ಪೈಸ್ ಗಳು ಎದುರಾಗುತ್ತವೆ. ಗೆಲುವನ್ನು ಸಂಭ್ರಮಿಸಿ.

ಮೇಷ
ನಿಮಗೀಗ ಆರ್ಥಿಕ ಚೈತನ್ಯ ಹೆಚ್ಚಲಿದೆ. ಇಷ್ಟು ದಿನ ಹಣ ಉಳಿತಾಯ ಮಾಡಬೇಕೆಂದು ಬಯಸಿದರೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ನೀವು ಬಯಸಿದರೂ, ಬಯಸದೇ ಇದ್ದರೂ ಹಣದ ಉಳಿತಾಯ ಆಗಿಯೇ ಆಗುತ್ತದೆ. ಖರ್ಚುಗಳೂ ಕಡಿಮೆಯಾಗುತ್ತವೆ. ಸಡನ್ನಾಗಿ ಅನಿರೀಕ್ಷಿತ ಮೂಲಗಳಿಂದ ಆದಾಯ ಒದಗಿಬರಬಹುದು. ಹೊಸ ಹೊಸ ಖರೀದಿಗಳಲ್ಲೂ ನಿಮಗೆ ಅನ್ಯಾಯವಾಗದು. ಬ್ಯುಸಿನೆಸ್ ಗಳಲ್ಲಿ ತೊಡಗಿಸಿಕೊಳ್ಳಲು ಸಕಾಲ. ಕೃಷಿಯಲ್ಲಿ ಇನ್‌ವೆಸ್ಟ್ ಮಾಡುತ್ತೀನಿ ಅಂದರೆ ಅದಕ್ಕೂ ಇದು ಬೆಸ್ಟ್ ಟೈಮ್. ಆದರೆ ನಿಮಗೆ, ನಿಮ್ಮ ಈ ಸಕ್ಸಸ್ ನ ದಾರಿಗೆ ಅಡ್ಡ ಬರೋದು ಒಂದಿದೆ. ಅದು ನಿಮ್ಮ ಸ್ವಭಾವ. ಕೈಯಲ್ಲಿ ಹಣ ಓಡಾಡತೊಡಗಿದಾಗ, ಯಶಸ್ಸು ಬಂದಾಗ ನೀವು ವಿಪರೀತ ತಲೆಗೇರಿಸಿಕೊಂಡು ಬಿಡುತ್ತೀರಿ. ಅಹಂನಿಂದ ವರ್ತಿಸುತ್ತೀರಿ. ಈ ಸ್ವಭಾವ ನಿಮ್ಮ ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತದೆ ಅನ್ನುವುದು ನೆನಪಿರಲಿ. 

ಪೌರಾಣಿಕ ಕತೆಗಳ ಪರಮ ಪ್ರೇಮಿಗಳಿವರು 

ಕನ್ಯಾ
ನಿಮ್ಮ ಜ್ಞಾನವನ್ನು ಬಳಸಿಕೊಂಡು ಹಣ ಗಳಿಸಲು ಇದು ಸಕಾಲ. ನೀವು ಅಂದುಕೊಂಡ ಹಾಗೇ ಹಣದ ಹರಿವು ಇರುತ್ತೆ. ಆದಾಯ ಹೆಚ್ಚುತ್ತದೆ. ಆದಾಯದ ಮೂಲಗಳೂ ವಿಸ್ತರಣೆಯಾಗುತ್ತಾ ಹೋಗುತ್ತವೆ, ಹೊಸ ಮನೆ ಕಟ್ಟಬೇಕು ಅನ್ನೋ ಕನಸು ನನಸಾಗಬಹುದು. ಇಲ್ಲವೇ ಹಳೆಮನೆಯನ್ನು ರಿನೋವೇಟ್ ಮಾಡಬೇಕು ಅಂದುಕೊಂಡಿದ್ದು ಈಗ ಈಡೇರಬಹುದು. ಹೊಸ ಕೆಲಸಗಳಲ್ಲಿ ಹಣ ಹೂಡಿಕೆ ಮಾಡುತ್ತೀರಿ. ನಿಮ್ಮ ನಿರೀಕ್ಷೆಗೂ ಮೀರಿ ಅವುಗಳಿಂದ ಲಾಭ ಹರಿದುಬರಲಿದೆ. ಉದ್ಯೋಗದಲ್ಲಿ ಭಡ್ತಿಯಾಗುವ ಸಾಧ್ಯತೆ ಇದೆ. ಒಂದುವೇಳೆ ಕೆಲಸಕ್ಕೇನಾದರೂ ಸಂಚಕಾರ ಬರುವ ಹಾಗಿದ್ದರೂ ಅದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಿ. ನಿಮ್ಮ ಉನ್ನತಿಗೆ ಇದನ್ನು ಮೆಟ್ಟಿಲಾಗಿ ಬಳಸಿಕೊಳ್ಳಿ. ಕೆಲವೊಮ್ಮೆ ಕಂಫರ್ಟ್ ಕಾರಣಕ್ಕೆ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುತ್ತೇವೆ. ಆದರೆ ಕೆಲವೊಮ್ಮೆ ಸನ್ನಿವೇಶಗಳೇ ನಮ್ಮನ್ನು ರಿಸ್ಕ್ ಗೆ ನೂಕಿ ಬಿಡುತ್ತವೆ. ಹೆಚ್ಚಿನ ಸಲ ಇದರಿಂದ ಮುಳುಗಿಹೋಗಬಹುದು ಅಂತ ಭಯ ಪಡುತ್ತೇವೆ. ಆದರೆ ಪರಿಣಾಮ ಉಲ್ಟಾ ಆಗಿರುತ್ತೆ. ಹಾಗೇ ನಿಮಗೂ ಯಶಸ್ಸು ಬರಬಹುದು.

ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ! 

ವೃಶ್ಚಿಕ
ನಿಮ್ಮ ಬ್ಯುಸಿನೆಸ್ ಗೆ ಹೊಸ ಪಾಲುದಾರರು ಸಿಗಬಹುದು. ಉದ್ಯೋಗದಲ್ಲಿ ಔನತ್ಯ ಸಿಗಬಹುದು. ಹಣದ ಹರಿವು ಇದ್ದಕ್ಕಿದ್ದ ಹಾಗೆ ಅಧಿಕವಾಗಬಹುದು. ಈ ಬೆಳವಣಿಗೆ ನಿಮಗೇ ಅಚ್ಚರಿ ಹುಟ್ಟಿಸಬಹುದು. ಅದೇ ರೀತಿ ಈ ವಾರ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಜಯ ನಿಮ್ಮ ಪಾಲಾಗಲಿದೆ. ನೀವು ಸಿಗಲ್ಲ ಅಂದುಕೊಂಡಿದ್ದ ಆಸ್ತಿಯೋ, ಹಣವೋ ನಿಮಗೆ ಸಿಗಬಹುದು. ಬಂಡವಾಳ ಹೂಡಲೂ ಇದು ಸಕಾಲ. ಹೊಸ ಹೊಸ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು. ಆದರೆ ಇದನ್ನೆಲ್ಲ ಈ ವಾರದ ಮಧ್ಯಭಾಗದೊಳಗೆ ಮುಗಿಸಿ. ಆಮೇಲಿಂದ ಪರಿಸ್ಥಿತಿ ಹೀಗೇ ಇರುತ್ತೆ ಅಂತ ಹೇಳೋದು ಕಷ್ಟ. ದೊಡ್ಡ ದೊಡ್ಡ ಯೋಚನೆಗಳನ್ನೆಲ್ಲ ಮಂಗಳವಾರ, ಬುಧವಾರದಷ್ಟು ಹೊತ್ತಿಗೆ ಕಂಪ್ಲೀಟ್ ಮಾಡಲು ಪ್ರಯತ್ನಿಸಿ. ಸಂಕೋಚ ನಿಮ್ಮ ಸ್ವಭಾವದಲ್ಲಿದೆ. ಇದನ್ನು ಸಾಧ್ಯವಾದಷ್ಟು ಬದಿಗಿರಿಸಿ ಧೈರ್ಯದಿಂದ ಮುನ್ನುಗ್ಗಲು ಯತ್ನಿಸಿ. ಶಕ್ತಿಮೀರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಯಶಸ್ಸು ನಿಮ್ಮದಾಗುತ್ತೆ. 

ಕ್ರೂರ-ಪಾಪ ಗ್ರಹಗಳಿಂದ ಬಚಾವಾಗಲು ಈ ಉಪಾಯ ಮಾಡಿ! 

Latest Videos
Follow Us:
Download App:
  • android
  • ios