Asianet Suvarna News Asianet Suvarna News

ಗರ್ಭಪಾತ ತಪ್ಪಿಸಲು ಮಹಾಭಾರತದಲ್ಲಿದೆ ಸರಳ ಸೂತ್ರ; ಧರಿಸಿ ಈ ಶ್ರೀವಾಸುದೇವ ರಕ್ಷಾಸೂತ್ರ

ಗರ್ಭದಲ್ಲಿರುವ ಮಗುವನ್ನು ರಕ್ಷಿಸಲು ಗರ್ಭರಕ್ಷಕ ಶ್ರೀವಾಸುದೇವ ಸೂತ್ರವನ್ನು ಬಳಸಲಾಗುತ್ತದೆ. ಇದು ಜ್ಯೋತಿಷ್ಯ ಬಳಕೆಯಾಗಿದೆ, ಇದರಿಂದ ಮಗುವನ್ನು ರಕ್ಷಿಸಲಾಗುತ್ತದೆ ಮತ್ತು ಗರ್ಭಪಾತದ ಅಪಾಯವಿರುವುದಿಲ್ಲ.

This formula prevents abortion description is found in the story of Mahabharata skr
Author
First Published Jun 1, 2023, 12:54 PM IST

ಮನೆಗೆ ಬರಲಿರುವ ಪುಟ್ಟ ಅತಿಥಿಯ ಜನನವು ಆರೋಗ್ಯಕರ ಮತ್ತು ಸುರಕ್ಷಿತವಾಗಿರಬೇಕು ಎಂದು ತಾಯಿಯೊಂದಿಗೆ ಇಡೀ ಕುಟುಂಬವೂ ಬಯಸುತ್ತದೆ. ಇದಕ್ಕಾಗಿ ಗರ್ಭಿಣಿ ಮಹಿಳೆಯ ಆಹಾರ, ವ್ಯಾಯಾಮ, ಜೀವನಶೈಲಿ ಮತ್ತು ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಲಾಗುತ್ತದೆ. ಏಕೆಂದರೆ ಸ್ವಲ್ಪ ತಪ್ಪಾದರೂ ಗರ್ಭಪಾತವಾಗುವ ಅಪಾಯವಿರುತ್ತದೆ. ಅದರಲ್ಲೂ ಈಗಿನ ಜೀವನಶೈಲಿಯಲ್ಲಿ ಗರ್ಭ ಕಟ್ಟುವುದೇ ಕಷ್ಟ ಎಂಬಂಥ ಪರಿಸ್ಥಿತಿ ಇದೆ. ಇದರೊಂದಿಗೆ ಗರ್ಭಿಣಿಯಾದ ಮೇಲೂ ಗರ್ಭಪಾತದ ಭಯ ಇದ್ದೇ ಇರುತ್ತದೆ. ಆದರೆ, ಈ ಗರ್ಭಪಾತದ ಅಪಾಯ ತಪ್ಪಿಸಲು ಬಹಳ ಹಿಂದಿನಿಂದಲೇ ಕೆಲ ಸೂತ್ರಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ. 

ಹೌದು, ಜ್ಯೋತಿಷ್ಯದಲ್ಲಿ, ಗರ್ಭರಕ್ಷಕ ಶ್ರೀವಾಸುದೇವ ಸೂತ್ರದ ಬಳಕೆಯು ಗರ್ಭಪಾತವನ್ನು ತಡೆಯಲು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಈ ಮೂಲಕ, ಗರ್ಭಾಶಯದಲ್ಲಿ ಬೆಳೆಯುತ್ತಿರುವ ಮಗುವಿಗೆ ರಕ್ಷಣೆ ನೀಡಲಾಗುತ್ತದೆ. ಈ ಸೂತ್ರದ ಬಗ್ಗೆ ಹೇಳುವುದಾದರೆ, ಅಭಿಮನ್ಯುವಿನ ಹೆಂಡತಿ ಉತ್ತರೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು ಗರ್ಭರಕ್ಷಕ ಶ್ರೀವಾಸುದೇವ ಸೂತ್ರದಿಂದ ರಕ್ಷಿಸಲಾಯಿತು ಎಂದು ಹೇಳಲಾಗುತ್ತದೆ.

ಅಶ್ವತ್ಥಾಮನು ಉತ್ತರೆಯ ಗರ್ಭದ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಾಗ..
ಗರ್ಭರಕ್ಷಕ ಸೂತ್ರಕ್ಕೆ ಸಂಬಂಧಿಸಿದಂತೆ ಮಹಾಭಾರತ ಯುದ್ಧದ ಘಟನೆ ಇದೆ. ಅದರ ಪ್ರಕಾರ ದುರ್ಯೋಧನನ ಎಲ್ಲಾ ಸಹೋದರರು ಮಹಾಭಾರತ ಯುದ್ಧದಲ್ಲಿ ಕೊಲ್ಲಲ್ಪಟ್ಟರು ಮತ್ತು ಕೊನೆಯಲ್ಲಿ ಭೀಮನು ದುರ್ಯೋಧನನನ್ನು ಕೊಂದನು. ಇನ್ನೊಂದೆಡೆ ಗುರು ದ್ರೋಣಾಚಾರ್ಯರ ಮಗ ಅಶ್ವತ್ಥಾಮನೊಳಗೆ ಪಾಂಡವರ ಮೇಲೆ ಸೇಡು ತೀರಿಸಿಕೊಳ್ಳುವ ಬೆಂಕಿ ಹೊತ್ತಿ ಉರಿಯುತ್ತಿತ್ತು. ಆ ಸಮಯದಲ್ಲಿ ಅರ್ಜುನನ ಸೊಸೆಯೂ ಅಭಿಮನ್ಯುವಿನ ಹೆಂಡತಿಯೂ ಆದ ಉತ್ತರೆಯು ಗರ್ಭಿಣಿಯಾಗಿದ್ದಳು. ಪಾಂಡವರ ಮೇಲೆ ಸೇಡು ತೀರಿಸಿಕೊಳ್ಳಲು ಮತ್ತು ಅವರ ಭವಿಷ್ಯದ ಸಂತತಿಯನ್ನು ನಾಶ ಮಾಡಲು, ಅಶ್ವತ್ಥಾಮನು ಉತ್ತರೆಯ ಗರ್ಭದ ಮೇಲೆ ವಿಫಲವಾಗದ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು.

ಮೊದಲ ಭೇಟಿಯಲಿ 'ವಿಶೇಷ ಸೆಳೆತ' : ಇವರೇ ನಿಮ್ಮ ಆತ್ಮ ಸಂಗಾತಿ...

ಆಗ ಉತ್ತರೆಯ ಕೂಗು ಶ್ರೀ ಕೃಷ್ಣನ ಕಿವಿಯಲ್ಲಿ ಕೇಳಿಸಿತು ಮತ್ತು ಶ್ರೀ ಕೃಷ್ಣನು ತಕ್ಷಣವೇ ಉತ್ತರೆಯ ಗರ್ಭವನ್ನು ತನ್ನ ಮಾಯಾ ಕವಚದಿಂದ ಮುಚ್ಚಿದನು. ಈ ರೀತಿಯಾಗಿ, ಭಗವಾನ್ ವಾಸುದೇವನು ಉತ್ತರೆಯ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ರಕ್ಷಕನಾದನು ಮತ್ತು ಅಶ್ವತ್ಥಾಮನು ಪ್ರಯೋಗಿಸಿದ ವಿಫಲಗೊಳ್ಳದ ಬ್ರಹ್ಮಾಸ್ತ್ರವು ಕೂಡಾ ನಿಷ್ಪರಿಣಾಮಕಾರಿಯಾಯಿತು.

ಗರ್ಭರಕ್ಷಕ ಶ್ರೀ ವಾಸುದೇವ ಸೂತ್ರ ಮತ್ತು ಅದನ್ನು ಹೇಗೆ ಬಳಸುವುದು?
ಗರ್ಭರಕ್ಷಕ ಶ್ರೀ ವಾಸುದೇವ ಸೂತ್ರವನ್ನು ಕಚ್ಚಾ ದಾರದಿಂದ ತಯಾರಿಸಲಾಗುತ್ತದೆ ಮತ್ತು ಮಂತ್ರದಿಂದ ರಕ್ಷಾ ದಾರ ಮಾಡಿದ ನಂತರ ಗರ್ಭಿಣಿ ಮಹಿಳೆ ಅದನ್ನು ಧರಿಸಬೇಕು. ಇದು ಹುಟ್ಟುವ ಮಗುವನ್ನು ರಕ್ಷಿಸುತ್ತದೆ ಮತ್ತು ಗರ್ಭಪಾತವನ್ನು ತಡೆಯುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.
ಗರ್ಭರಕ್ಷಕ ಸೂತ್ರವನ್ನು ಮಾಡಲು, ಗರ್ಭಿಣಿ ಮಹಿಳೆ ಸ್ನಾನದ ನಂತರ ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ಇದರ ನಂತರ ಶ್ರೀ ಕೃಷ್ಣ, ಗಣೇಶ ಮತ್ತು ನವಗ್ರಹಗಳ ಶಾಂತಿ ಪೂಜೆಯನ್ನು ಮಾಡಿಸಬೇಕು.
ಇದಾದ ನಂತರ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಿ. ಶುದ್ಧವಾಗಿರುವ ಹಸಿ ಹತ್ತಿ, ಕೇಸರಿ ದಾರ ಅಥವಾ ರೇಷ್ಮೆ ದಾರದಿಂದ ಗರ್ಭಿಣಿಯ ತಲೆಯಿಂದ ಕಾಲ್ಬೆರಳವರೆಗೆ 7 ಬಾರಿ ಅಳೆಯಬೇಕು ಮತ್ತು ದಾರವನ್ನು ಏಳು ಮಡಿಕೆಗಳಾಗಿ ಮಡಿಸಬೇಕು.
ಈಗ ಗರ್ಭರಕ್ಷಕ ಶ್ರೀವಾಸುದೇವ ಮಂತ್ರವನ್ನು 'ಓಂ ಅಂತಃಸ್ಥಃ ಸರ್ವಭೂತಾನಮಾತ್ಮಾ ಯೋಗೇಶ್ವರೋ ಹರಿಃ ಸ್ವಾಮಯ್ಯವೃಣೋದ್ ಗರ್ಭ ವೈರತ್ಯಃ ಕುರುತಂತವೇ ಸ್ವಾಹಾ' ಎಂದು 21 ಬಾರಿ ಜಪಿಸುತ್ತಾ ದಾರದಲ್ಲಿ ಗಂಟು ಕಟ್ಟಿಕೊಳ್ಳಿ. ಈ ರೀತಿ ದಾರದಲ್ಲಿ 21 ಗಂಟುಗಳನ್ನು ಕಟ್ಟಿದ ನಂತರ ಪೂಜೆ ಮಾಡಿ.
ಶ್ರೀಕೃಷ್ಣನನ್ನು ಧ್ಯಾನಿಸುವಾಗ, ಗರ್ಭಿಣಿಯು ಗರ್ಭದ ರಕ್ಷಣೆಗಾಗಿ ಪ್ರಾರ್ಥಿಸಬೇಕು ಮತ್ತು ಈ ದಾರವನ್ನು ಕುತ್ತಿಗೆ, ಎಡಗೈ ಅಥವಾ ಸೊಂಟದಲ್ಲಿ ಧರಿಸಬೇಕು.
ಗರ್ಭರಕ್ಷಕ ಶ್ರೀವಾಸುದೇವ ಸೂತ್ರವನ್ನು ಮಾಡಲು ನೀವು ಯಾವುದೇ ಪುರೋಹಿತರು ಅಥವಾ ಜ್ಯೋತಿಷಿಗಳಿಂದ ಸಲಹೆಯನ್ನು ತೆಗೆದುಕೊಳ್ಳಬಹುದು.
ಈ ರೀತಿಯಾಗಿ, ಗರ್ಭರಕ್ಷಕ ಶ್ರೀವಾಸುದೇವ ಸೂತ್ರವನ್ನು ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಅನುಸರಿಸಿ, ಗರ್ಭವನ್ನು ರಕ್ಷಿಸಲಾಗುತ್ತದೆ.

Shani Vakri 2023: ಶನಿಯ ಹಿಮ್ಮುಖ ಚಲನೆಗೆ 4 ರಾಶಿಗಳ ಬದುಕಲ್ಲಿ ಏಳಲಿದೆ ಬಿರುಗಾಳಿ

ಸೂತ್ರವನ್ನು ಧರಿಸುವಾಗ ಈ ನಿಯಮಗಳನ್ನು ಅನುಸರಿಸಿ

  • ಮಗುವಿನ ಜನನದ ನಂತರ ಒಂದೂಕಾಲು ತಿಂಗಳು ಗರ್ಭರಕ್ಷಕ ಸೂತ್ರವನ್ನು ಧರಿಸಿ, ನಂತರ ಅದನ್ನು ನೀರಿನಲ್ಲಿ ಹರಿಯುವಂತೆ ಮಾಡಿ.
  • ಪ್ರಸವವಾದ ಒಂದೂಕಾಲು ತಿಂಗಳ ನಂತರ ಹೊಸ ದಾರವನ್ನು ತಯಾರಿಸಿ ಮಗುವಿನ ಕುತ್ತಿಗೆಗೆ ಧರಿಸಬಹುದು.
  • ಗರ್ಭರಕ್ಷಕ ಸೂತ್ರವನ್ನು ಧರಿಸಿದ ನಂತರ, ಗರ್ಭಿಣಿಯು ಯಾವುದೇ ಸೂತಕದ ಮನೆಗೆ ಹೋಗುವುದನ್ನು ತಪ್ಪಿಸಬೇಕು. ಅದೇನೆಂದರೆ, ಯಾರಾದರೂ ಸತ್ತ ಅಥವಾ ಮಗು ಜನಿಸಿದ ಮನೆಗೆ ಹೋಗಬೇಡಿ.
  • ಗರ್ಭರಕ್ಷಕ ಸೂತ್ರವನ್ನು ಧರಿಸಿರುವ ಮಹಿಳೆಯು ಮಾಂಸಾಹಾರವನ್ನು ಸಹ ಸೇವಿಸಬಾರದು.
Follow Us:
Download App:
  • android
  • ios