Astrology: ಸಾಕುಪ್ರಾಣಿಗಳೆಂದ್ರೆ ಈ ರಾಶಿಯವ್ರಿಗೆ ಭಾರೀ ಇಷ್ಟ!

ನಾಯಿ, ಬೆಕ್ಕು, ಹಸುಗಳನ್ನು ಸಾಕುವುದೆಂದರೆ ಬಹಳಷ್ಟು ಜನ ಹಿಂದೇಟು ಹಾಕುತ್ತಾರೆ. ಆದರೆ, ಕೆಲವು ಜನರಿಗೆ ಸಾಕುಪ್ರಾಣಿಗಳೆಂದರೆ ಭಾರೀ ಇಷ್ಟ. ಅವುಗಳ ಒಡನಾಟದಲ್ಲಿ ಇವರು ಖುಷಿಯಾಗಿರುತ್ತಾರೆ. ಅವುಗಳ ಆರೈಕೆ ಮಾಡುತ್ತಾರೆ, ಪ್ರಾಣಿಗಳ ಮೇಲಿನ ಪ್ರೇಮದಿಂದಾಗಿ ಸಸ್ಯಾಹಾರಿಗಳಾಗಿಯೂ ಬದಲಾಗಬಲ್ಲರು. 
 

These zodiac signs have empathy towards animals and may turn vegan

ಕೆಲವು ಪ್ರಾಣಿಪ್ರಿಯರು ಮನೆಯಲ್ಲಿ ನಾಯಿ ಸಾಕುತ್ತಾರೆ, ಮುದ್ದಾಗಿ ಅವುಗಳನ್ನು ಸಾಕುತ್ತಾರೆ. ಅವುಗಳೊಂದಿಗೆ ಒಡನಾಡುತ್ತಾರೆ. ಅವುಗಳಿಗೆ ಮಾತು ಕಲಿಸುತ್ತಾರೆ. ಬೆಕ್ಕುಗಳೆಂದರೂ ಅವರಿಗೆ ಇಷ್ಟ. ಹಸುಗಳನ್ನೂ ಇಷ್ಟಪಡುತ್ತಾರೆ. ಅವುಗಳ ಕೆಲಸ ಮಾಡಲು ಚೂರೂ ಬೇಸರಿಸಿಕೊಳ್ಳುವುದಿಲ್ಲ. ಪ್ರಾಣಿಪ್ರಿಯರಲ್ಲದವರು ಇವರನ್ನು ಕಂಡರೆ “ಏನಪ್ಪಾ, ಇವರ ಅಭ್ಯಾಸ’ ಎಂದು ಬೇಸರ ಮೂಡಿಸಿಕೊಳ್ಳಬಹುದು, ಅಷ್ಟರಮಟ್ಟಿಗೆ ಪ್ರಾಣಿಸಂಕುಲವೆಂದರೆ ಇವರಿಗೆ ಇಷ್ಟ. ಅಷ್ಟಕ್ಕೂ, ಮನುಷ್ಯನಿಗೂ ಪ್ರಾಣಿಗಳಿಗೂ ಸಾಕಷ್ಟು ಹಿಂದಿನ ನಂಟಿದೆ. ಹಸುಗಳು ಮನುಷ್ಯನ ಜೀವನದ ಭಾಗವಾಗಿದ್ದರೆ, ನಾಯಿಗಳೊಂದಿಗೂ ಅಷ್ಟೇ ಬಾಂಧವ್ಯ ಎಂದಿನಿಂದಲೂ ಇದೆ. ಇವುಗಳನ್ನು ಸಾಕುವ, ಪರಿಪಾಲನೆ ಮಾಡುವ ಅಭ್ಯಾಸ ಎಂದಿನಿಂದ ಶುರುವಾಗಿಯೋ ತಿಳಿಯದು, ಆದರೆ ಪ್ರಾಣಿಗಳ ಒಡನಾಟದಿಂದ ಮನುಷ್ಯನ ಮನಸ್ಸು ಚೇತರಿಸಿಕೊಳ್ಳುವುದು ಸತ್ಯ.

ಕೆಲವು ಜನರಿರುತ್ತಾರೆ, ಪ್ರಾಣಿಪ್ರೀತಿಯಲ್ಲಿ ಇವರು ಎಲ್ಲರಿಗಿಂತ ಒಂದು ಕೈ ಮೇಲೆ. ನಾಯಿ, ಬೆಕ್ಕು, ಹಸು, ಮೊಲ ಸಾಕುವುದನ್ನು ಭಾರೀ ಇಷ್ಟಪಡುತ್ತಾರೆ. ಇಂತಹ ಪ್ರಾಣಿಪ್ರಿಯರನ್ನು ಕೆಲವು ರಾಶಿಗಳಲ್ಲಿ ಕಾಣಬಹುದು. ಈ ರಾಶಿಗಳ ಜನ ಬೇರೆಲ್ಲರಿಗಿಂತ ಗಾಢವಾಗಿ ಪ್ರಾಣಿಗಳನ್ನು ಪ್ರೀತಿಸುತ್ತಾರೆ. ಅವುಗಳ ಮೇಲಿನ ಪ್ರೇಮಕ್ಕೆ ಕಟ್ಟಾ ಸಸ್ಯಾಹಾರಿಗಳಾಗಿಯೂ ಬದಲಾಗುತ್ತಾರೆ. ಪ್ರಾಣಿಗಳ ಕುರಿತು ದಯೆ, ಕರುಣೆ ಹೊಂದಿರುವ ಈ ರಾಶಿಗಳ ಜನ ಅವುಗಳನ್ನು ಆಹಾರವಾಗಿ ಸೇವಿಸಲು ಹಿಂದೇಟು ಹಾಕುತ್ತಾರೆ.  ಅಂತಹ ರಾಶಿಗಳು ಯಾವುವು ನೋಡಿ.

•    ಮಕರ (Capricorn)
ಈ ರಾಶಿಗಳ ಜನ ಬೀದಿ ಪ್ರಾಣಿಗಳ (Stray Animals) ಆರೈಕೆ (Nurture) ಮಾಡುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ. ಬೀದಿಯಲ್ಲಿರುವ ಪ್ರಾಣಿಗಳ ಬಗ್ಗೆ ಕಾಳಜಿ (Care) ಹೊಂದಿದ್ದು, ಅವುಗಳನ್ನು ಕರುಣೆಯಿಂದ ಕಾಣುತ್ತಾರೆ. ಮನೆಯಲ್ಲೂ ಪ್ರಾಣಿಗಳನ್ನು ಸಾಕುವುದೆಂದರೆ ಇವರಿಗೆ ಇಷ್ಟ. ಬೆಕ್ಕು (Cat), ನಾಯಿ (Dog), ಮೊಲ (Rabbit) ಸೇರಿದಂತೆ ಯಾವುದೇ ಬಗೆಯ ಸಾಕುಪ್ರಾಣಿಗಳನ್ನಾದರೂ ಸಾಕಲು ಬಯಸುತ್ತಾರೆ. ಪ್ರಾಣಿಗಳಿಗಾಗಿ ತಾಜಾ ಆಹಾರ (Food) ಸಿದ್ಧಪಡಿಸುತ್ತಾರೆ, ತಾವೇ ಅವುಗಳಿಗೆ ಊಟ ನೀಡುತ್ತಾರೆ. ಪ್ರಾಣಿಗಳ ಮೇಲಿನ ಪ್ರೀತಿಯಿಂದಾಗಿ ಸಸ್ಯಾಹಾರಿಗಳಾಗಿ (Vegan) ಬದಲಾಗುತ್ತಾರೆ. 

Zodiac Signs: ಈ ರಾಶಿಯವ್ರನ್ನ ಸಂಗಾತಿಯಾಗಿ ಪಡೆದವ್ರು ಲಕ್ಕಿ, ಫೇವರ್ ಮಾಡೋದ್ರಲ್ಲಿ ಇವರೇ ಮುಂದು

•    ಮೇಷ (Aries)
ಮೇಷ ರಾಶಿಯವರು ತುಂಬ ಸಹಾನುಭೂತಿ (Empathy) ಹೊಂದಿರುತ್ತಾರೆ. ಪ್ರಾಣಿಗಳನ್ನು ಆರೈಕೆ ಮಾಡುವುದರಲ್ಲಿ ಎಂದಿಗೂ ವಿಮುಖತೆ ತೋರುವುದಿಲ್ಲ. ಭಾರೀ ಇಷ್ಟಪಡುತ್ತಾರೆ. ತಮ್ಮ ಸಾಕುಪ್ರಾಣಿಗಳಂತೂ (Pet) ಇವರಿಗೆ ಭಾರೀ ಇಷ್ಟ. ಬೀದಿನಾಯಿಗಳ (Street Dogs) ಕುರಿತೂ ಅಷ್ಟೇ ಕಾಳಜಿ ಹೊಂದಿರುತ್ತಾರೆ. ತಮ್ಮ ಸಮಯವನ್ನು ಪ್ರಾಣಿಗಳ ಪಾಲನೆಗೆ ಮೀಸಲಿಡುತ್ತಾರೆ. ಪ್ರಾಣಿಗಳೊಂದಿಗೆ ಒಡನಾಡುವುದು ಇವರಿಗೆ ಭಾರೀ ಹಿತ (Enjoy) ನೀಡುತ್ತದೆ. ಇದರಷ್ಟು ಅತ್ಯುತ್ತಮ ಹವ್ಯಾಸ ಇವರ ಪಾಲಿಗೆ ಬೇರೆ ಇಲ್ಲ. ಹೀಗಾಗಿ, ಸಸ್ಯಾಹಾರಿ ಪದ್ಧತಿ ಅನುಸರಿಸುತ್ತಾರೆ. 

•    ಮೀನ (Pisces)
ಮೀನ ರಾಶಿಯ ಜನ ಅಧಿಕ ಭಾವನಾತ್ಮಕ (Emotional) ನಿಲುವು ಹೊಂದಿರುತ್ತಾರೆ. ಸೂಕ್ಷ್ಮ ಬುದ್ಧಿಯವರಾಗಿರುವ ಇವರು, ಪ್ರಾಣಿಗಳಿಗೆ ನೋವಾದರೆ (Pain) ತೀರ ಬೇಸರ ಮಾಡಿಕೊಳ್ಳುತ್ತಾರೆ. ಪ್ರಾಣಿಗಳ ಸಂಕಟ, ಹಸಿವನ್ನು (Hungry) ನೋಡಲು ಇವರಿಂದ ಸಾಧ್ಯವಾಗದು. ಹೀಗಾಗಿ, ಇವರು ಪ್ರಾಣಿಗಳ ಹಕ್ಕುಗಳಿಗೆ (Animal Rights) ಹೋರಾಡಲು ಬಯಸುತ್ತಾರೆ. ಪ್ರಾಣಿಗಳನ್ನು ವಿವಿಧ ರೀತಿಯ ಪರೀಕ್ಷೆಗೆ ಒಳಪಡಿಸುವುದು, ಕೊಲ್ಲುವುದನ್ನು ವಿರೋಧಿಸುತ್ತಾರೆ. ಬೀದಿಯಲ್ಲಿ ಇರುವ ನಾಯಿಗಳ ಬಗ್ಗೆಯೂ ಕ್ರೂರ ಪದ್ಧತಿ ಅನುಸರಿಸಿದರೆ ಸಿಡಿದೇಳುತ್ತಾರೆ. ಸಸ್ಯ ಮೂಲದ ಆಹಾರ ಪದ್ಧತಿಯೇ ತಮಗೆ ಉತ್ತಮ ಎಂದು ಇವರು ಭಾವಿಸುತ್ತಾರೆ. 

Zodiac Signs: ಆಫೀಸ್ ಅಫೇರ್ಸ್‌ನಿಂದ ಈ ರಾಶಿಯ ಜನ ದೂರವೇ ಇರ್ತಾರೆ

•    ಮಿಥುನ (Gemini)
ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಆತಂಕ (Anxiety) ಹೆಚ್ಚಿರುತ್ತದೆ. ಈ ಆತಂಕದ ನಿವಾರಣೆಗೆ ಪ್ರಾಣಿಗಳ ಒಡನಾಟ ಉತ್ತಮ ಮಾರ್ಗವಾಗಿರುತ್ತದೆ. ಆತಂಕದ ಸಮಸ್ಯೆ ಕೆಲವೊಮ್ಮೆ ಇವರ ಹಾದಿಗೆ ಅಡೆತಡೆಯಾಗಿ ಪರಿಣಮಿಸುತ್ತದೆ. ಅದರಿಂದ ಬಚಾವಾಗಲು ಇವರು ಪ್ರಾಣಿಗಳನ್ನು ಸಾಕುವ ಮಾರ್ಗೋಪಾಯ ಅನುಸರಿಸುತ್ತಾರೆ. ಮೂಲತಃ ಕರುಣಾಮಯಿಗಳಾಗಿರುವ ಇವರು, ಪ್ರಾಣಿಗಳ ಒಡನಾಟದಲ್ಲಿ  ಕಂಫರ್ಟ್ (Comfort) ಭಾವನೆ ಅನುಭವಿಸುತ್ತಾರೆ ಹಾಗೂ ಖುಷಿಯಾಗಿ (Happy) ಇರುತ್ತಾರೆ. ಹೀಗಾಗಿ, ಮಿಥುನ ರಾಶಿಯ ಜನ ಸಸ್ಯಾಹಾರಿಗಳಾಗುವ ಸಾಧ್ಯತೆ ಹೆಚ್ಚು.

Latest Videos
Follow Us:
Download App:
  • android
  • ios