ಕೆಲವರಿಗೆ ಇಡೀ ದಿನದ ಪರಿಶ್ರಮದ ಕೆಲಸದ ನಂತರ ತಮ್ಮ ಸಂಗಾತಿಗಳನ್ನು ಅಪ್ಪಿಕೊಂಡು ಹೊತ್ತು ಕಳೆಯುವುದು ಅಂದರೆ ತುಂಬಾ ಇಷ್ಟ. ಇನ್ನು ಕೆಲವರಿಗೆ ಎದ್ದು ಎಷ್ಟು ಹೊತ್ತಾದರೂ ಸಂಗಾತಿಯನ್ನು ತಬ್ಬಿಕೊಂಡು ಮಲಗಿರುವುದು ತುಂಬಾ ಇಷ್ಟ. ಇನ್ನು ಕೆಲವರು ತಮ್ಮ ಸಂಗಾತಿ ಅಡುಗೆ ಮನೆಯಲ್ಲಿದ್ದರೂ,  ತುಂಬಾ ಕೆಲಸದಲ್ಲಿದ್ದರೂ ಹೋಗಿ ಅಪ್ಪಿಕೊಂಡು ಸಂತೋಷ ಅನುಭವಿಸುತ್ತಾರೆ.

ಅಪ್ಪುಗೆ ಎಂಬುದು ಪ್ರೇಮದ ನಿಷ್ಕಲ್ಮಷ ಅಭಿವ್ಯಕ್ತಿ. ಅಲ್ಲಿ ಕಾಮ ಇರಲೇಬೇಕೆಂದಿಲ್ಲ. ಕೆಲವು ರಾಶಿಗಳು ಬರೀ ಅಪ್ಪುಗೆಯಿಂದಲೇ ಇಡೀ ದಿನಕ್ಕೆ ಬೇಕಾಗುವ ಮೂಡ್ ಸಂಪಾದಿಸಿಕೊಳ್ಳಬಲ್ಲರು. ಬನ್ನಿ, ಹೀಗೆ ಅಪ್ಪಿಕೋ ಚಳವಳಿ ಅಂದರೆ ತುಂಬಾ ಇಷ್ಟ ಪಡುವ ರಾಶಿಗಳು ಯಾವುದು ನೋಡೋಣ.

ವೃಷಭ ರಾಶಿ

ಇವರಿಗೆ ಅಪ್ಪುಗೆ ತುಂಬಾ ಇಷ್ಟ. ಎಷ್ಟು ಇಷ್ಟ ಎಂದರೆ ಸಂಗಾತಿಗಳನ್ನು ಕಿಸ್ ಮಾಡುವುದಕ್ಕಿಂತಲೂ ಅಪ್ಪುಗೆಯನ್ನೇ ಹೆಚ್ಚು ಇಷ್ಟಪಡುತ್ತಾರೆ. ಕೈ ಕೈ ಹಿಡಿದುಕೊಂಡು ಭಾವನಾಲೋಕದಲ್ಲಿ ವಿಹರಿಸುತ್ತಾರೆ. ಇವರಿಗೆ ವಯಸ್ಸಿನ ಹಂಗಿಲ್ಲ. ಎಷ್ಟು ವಯಸ್ಸಾದರೂ ಸಂಗಾತಿಯನ್ನು ತಬ್ಬಿಕೊಂಡು ಆನಂದವನ್ನೂ ನೀಡುತ್ತಾರೆ, ಪಡೆಯುತ್ತಾರೆ. ಇಡೀ ದಿನ ದಣಿದಿದ್ದರೆ ಅದರ ಆಯಾಸ ಪರಿಹರಿಸಿಕೊಳ್ಳೋಕೆ ಈ ವೃಷಭ ರಾಶಿಯವರು ಪರ್‌ಫೆಕ್ಟ್ ಪಾರ್ಟ್‌ನರ್‌. ಯಾಕೆಂದರೆ ಒಂದು ಅಪ್ಪುಗೆಯಿಂದ ನಿಮ್ಮ ದಣಿವು ಪರಿಹರಿಸಿಬಿಡುತ್ತಾರೆ. 

ಈ ವಾಸ್ತು ಸಲಹೆಗಳಿಂದ ಕರಿಯರ್‌ನಲ್ಲಿ ಉನ್ನತ ಸ್ಥಾನಕ್ಕೇರಬಹುದು ನೋಡಿ ...

ವೃಶ್ಚಿಕ ರಾಶಿ

ಇವರು ಟೆಡ್ಡಿ ಬೇರ್‌ಗ ಹಾಗೆ. ಎಲ್ಲೆಂದರಲ್ಲಿ ಅಪ್ಪಿಕೊಂಡು ಬಿಡುತ್ತಾರೆ. ಇವರ ಅಪ್ಪುಗೆಗೆ ಕಾಮದ ಹಂಗಿಲ್ಲ. ಬರಿಯ ಪ್ರೀತಿಯನ್ನು ತೋರಿಸೋದಿರುತ್ತೆ. ಕೆಲವೊಮ್ಮೆ ಸೆಕ್ಸ್‌ಗೆ ಪೂರ್ವಭಾವಿಯಾಗಿ ಅಪ್ಪುಗೆಯಲ್ಲಿ ತೊಡಗಿಕೊಂಡರೂ, ಸೆಕ್ಸನ್ನೇ ಮರೆತು ಅಪ್ಪಿಕೊಂಡೇ ಇರುವವರು ಇವರು! ಅಪ್ಪಿಕೊಂಡು ಮಾತಾಡುವುದು ಇಷ್ಟ. ಅಪ್ಪಿಕೊಂಡು ಸಿನೆಮಾ ನೋಡುವುದು, ಹಾಡು ಕೇಳುವುದನ್ನು ಇಷ್ಟಪಡುತ್ತಾರೆ. ಆಲಿಂಗನದಿಂದಲೇ ನಿಮ್ಮಲ್ಲಿ ತುಂಬಾ ಎನರ್ಜಿ ತುಂಬುತ್ತಾರೆ.

ಸಿಂಹ ರಾಶಿ

ಇವರು ತಬ್ಬಿಕೊಳ್ಳುವುದರ ಎಲ್ಲಾ ವೈವಿಧ್ಯಗಳನ್ನೂ ಇಷ್ಟಪಡುತ್ತಾರೆ. ಮುಂದಿನಿಂದ, ಹಿಂದಿನಿಂದ, ಒರಟಾಗಿ, ಮೃದುವಾಗಿ, ಮೈತುಂಬಾ ಮುತ್ತಿಡುತ್ತ ತಬ್ಬಿಕೊಳ್ಳುವುದು ಇವಅರಿಗೆ ಇಷ್ಟ. ಒಂಥರಾ ಸಿಂಹದ ಹಾಗೇ ಎಂದರೂ ತಪ್ಪಲ್ಲ. ಸಿಂಹ ಸ್ವಲ್ಪ ಒರಟು. ಆದರೆ ಅಪ್ಪುಗೆಯ ವಿಚಾರದಲ್ಲಿ ಧಾರಾಳಿ. ತಮ್ಮ ಸಂಗಾತಿಯನ್ನು ತಬ್ಬಿಕೊಳ್ಳುವ ಯಾವುದೇ ಅವಕಾಶವನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಕೆಲವರಿಗೆ ಇದು ಸ್ವಲ್ಪ ಇರಿಟೇಟಿಂಗ್ ಅನಿಸಬಹುದು. ಆದರೆ ಸ್ತ್ರೀಯರು ಇವರನ್ನು ಈ ಕಾರಣಕ್ಕಾಗಿಯೇ ತುಂಬಾ ಇಷ್ಟಡಬಹುದು. 

ಈ 6 ರಾಶಿಯವರಿಗೆ ಮದುವೆ ಬಗ್ಗೆ ಆಸಕ್ತಿಯೇ ಇರೋದಿಲ್ವಂತೆ..! ...

ಮೀನ ರಾಶಿ

ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ ಅಪ್ಪಿಕೋ ಚಳವಳಿ ನಡೆಸಲು ಇಷ್ಟಪಡುತ್ತಾರೆ. ಸಂಗಾತಿ ಇದ್ದರೆ ಓಕೆ. ಇಲ್ಲವಾದರೆ ಟೆಡ್ಡಿ ಬೇರ್‌ ಅನ್ನಾದರೂ ತಬ್ಬಿಕೊಂಡು ಇದ್ದು ಸಂತೋಷಪಡುತ್ತಾರೆ. ಇವರಿಗೆ ಮನೆ ತುಂಬಾ ದಿಂಬುಗಳು ಬೇಕು. ತಬ್ಬಿಕೊಳ್ಳಲು. ಸಿಂಹ ಹಾಗೂ ಮೀನ ರಾಶೀಯವರು ಇವರ ಜೊತೆ ಚೆನ್ನಾಗಿ ಸಹಕರಿಸಬಹುದು. ತಬ್ಬಿಕೊಳ್ಳುವುದರಿಂದ ಪ್ರಣಯದ ಆವೇಶ ಇವರಲ್ಲಿ ಉಂಟಾಗುತ್ತದೆ. ಸಂಗಾತಿ ತಮ್ಮನ್ನು ಹಿಂದಿನಿಂದ ತಬ್ಬಿಕೊಂಡು ಕತ್ತಿನ ಹಿಂಭಾಗಕ್ಕೆ ಮುತ್ತಿಕ್ಕಿದರೆ ಇವರಿಗೆ ಎಲ್ಲಿಲ್ಲದ ಸಂತೋಷ. 

ಮೇಷ ರಾಶಿ

ಅಪ್ಪಿಕೋ ವಿಚಾರದಲ್ಲಿ ಇವರು ಅನುಭವಿಗಳು ಅಥವಾ ಪರಿಣತರು. ಅಪ್ಪಿಕೊಳ್ಳಲು ಮುನ್ನ ಹಾಗೂ ನಂತರ ಏನು ಮಾಡಬೇಕು ಎಂಬುದು ಇವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಈ ವಿಭಾಗದಲ್ಲಿ ಇವರ ಕೌಶಲ್ಯ ಅಪರಿಮಿತ. ಟ್ರಯಲ್ ಆಂಡ್ ಎರರ್ ಮೆಥಡ್‌ನಿಂದಲೂ ಎಲ್ಲದರಲ್ಲೂ ಎಕ್ಸ್‌ಪರ್ಟ್ ಆಗಿರ್ತಾರೆ. ಇವರ ಜೊತೆ ಇರುವವರನ್ನು ಅಪ್ಪಿಕೋ ಸಂದರ್ಭದಲ್ಲಿ ಕಂಫರ್ಟ್ ಜೋನ್‌ನಲ್ಲಿ ಇಟ್ಟಿರುತ್ತಾರೆ. ಚಳಿಗಾಲದಲ್ಲಿ ಇವರ ಜೊತೆಗಿರೋದು ಬೆಚ್ಚಬೆಚ್ಚಗೆ ಖುಷಿಯಾದ ಫೀಲ್ ಕೊಡುತ್ತೆ. 

ಈ ರಾಶಿಯವರಿಗೆ ಸೆಕ್ಸ್ ಊಟದಷ್ಟೇ ಇಂಪಾರ್ಟೆಂಟು! ...

ತುಲಾ ರಾಶಿ

ಇವರಿಗೆ ಅಪ್ಪಿಕೊಳ್ಳುವ ಗುಣ ಜೀನ್‌ನಲ್ಲೇ ಬಂದಿರುತ್ತೆ. ಗರ್ಭದಿಂದಲೇ ಬರೋ ಗುಣ ಅಂತಾರಲ್ಲ, ಹಾಗೆ. ಇವರಿಗೆ ತಮ್ಮ ಸಂಗಾತಿಯನ್ನು ಅಥವಾ ಮಕ್ಕಳನ್ನು ಅಪ್ಪಿಕೊಳ್ಳುವುದು ಎಂದರೆ ತಮ್ಮ ಬಾಲ್ಯದಲ್ಲಿ ತಾವು ತಾಯಿಯಿಂದ ಅನುಭವಿಸಿದ ಅಪ್ಪುಗೆಯ ಸೊಗಸು ಸುಖಗಳ ಮರುಕಳಿಕೆ, ಪುನರಾವರ್ತನೆ ಅಥವಾ ಸವಿನೆನಪು. ನಿಂತಲ್ಲೇ ಗಂಟೆಗಟ್ಟಲೆ ಅಪ್ಪಿಕೊಂಡು ನಿಲ್ಲಬಲ್ಲರು. ಮಲಗಿ ಅಪ್ಪಿಕೊಂಡು ಸಿನಿಮಾ ನೋಡಬಲ್ಲರು. 

ಕನ್ಯಾ, ಕುಂಭ, ಮಿಥುನ

ಈ ರಾಶಿಗಳು ಪರ್ಸನಲ್‌ ಸ್ಪೇಸ್ ಅನ್ನು ಹೆಚ್ಚು ಇಷ್ಟಪಡುತ್ತಾರೆ. ತಬ್ಬಿಕೊಂಡು ಹೆಚ್ಚು ಹೊತ್ತು ಕಳೆಯಲು ಇಷ್ಟಪಡೋಲ್ಲ. ಯಾಕೆಂದರೆ ಅದಕ್ಕಿಂತ ಉಪಯುಕ್ತ ಕೆಲಸ ಮಾಡಬಹುದಲ್ಲಾ ಎಂಬ ಆಲೋಚನೆ. ಪ್ರಣಯದಲ್ಲಿ ಇಷ್ಟ, ಆದರೆ ಅಪ್ಪುಗೆಯಲ್ಲಿ ಇವರಿಗೆ ಕಷ್ಟ.