Indications For Bad Time: ಕೆಟ್ಟ ಸಮಯ ಬರೋಕೂ ಮುಂಚೆ ನೀಡುತ್ತೆ ಈ ಸೂಚನೆ!
ಎಲ್ಲರ ಜೀವನದಲ್ಲೂ ಕೆಟ್ಟ ಸಮಯ ಆಗಾಗ ಬರುತ್ತದೆ. ಅದನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದರೆ ಪರವಾಗಿಲ್ಲ. ಹಾಗಂಥ ಅದು ಹೇಳಿ ಬರುವುದಿಲ್ಲ. ಹೀಗಾಗಿ, ಆ ಸಮಯಕ್ಕಾಗಿ ಮೊದಲೇ ತಯಾರಾಗಿರುವುದು ಸುಲಭವಲ್ಲ. ಆದರೆ, ಜ್ಯೋತಿಷ್ಯ ಹೇಳುತ್ತೆ ಕೆಟ್ಟ ಸಮಯ ಕೂಡಾ ಬರುವ ಮುಂಚೆ ಕೆಲ ಸೂಚನೆಗಳನ್ನು ನೀಡುತ್ತೆ ಅಂತ.
ಜ್ಯೋತಿಷ್ಯವು ಬರಲಿರುವ ನಾಳೆಗಳ ಬಗ್ಗೆ ಹೇಳುತ್ತದೆ. ಹಾಗಾಗಿಯೇ ಜ್ಯೋತಿಷ್ಯ ಸಾವಿರಾರು ವರ್ಷಗಳಿಂದ ತನ್ನ ಸ್ಥಾನ ಭದ್ರವಾಗಿರಿಸಿಕೊಂಡಿದೆ. ಇದೊಂದು ವಿಶೇಷ ಜ್ಞಾನವಾಗಿದ್ದು, ಹಿಂದಾಗಿದ್ದನ್ನು, ಮುಂದಾಗುವುದನ್ನು ವ್ಯಕ್ತಿಯ ಜಾತಕ, ಗ್ರಹ ಇತ್ಯಾದಿ ಲೆಕ್ಕಾಚಾರದ ಮೂಲಕ ತಿಳಿಸಬಲ್ಲದು.
ಪ್ರತಿಯೊಬ್ಬರ ಜೀವನದಲ್ಲೂ ಒಳ್ಳೆಯ ಹಾಗೂ ಕೆಟ್ಟ ಸಮಯವೆಂದಿರುತ್ತದೆ. ಅದೊಂದು ಚಕ್ರದ ಹಾಗೆ ಆಗಾಗ ಒಂದೊಂದು ಭಾಗ ಮೇಲೆ ಬರುತ್ತಿರುತ್ತದೆ. ಆದರೆ, ಸುಖವಾಗಿದ್ದಾಗ, ನಮ್ಮ ನಾಳೆಗಳಲ್ಲಿ ತೊಂದರೆ ಎದುರಾಗಬಹುದೆಂಬ ಕಲ್ಪನೆ ಮಾಡಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಹಾಗಾಗಿ, ಅದಕ್ಕೆ ಸಿದ್ಧರಾಗಿರುವುದೂ ಇಲ್ಲ. ಇದರಿಂದ ಆಕಸ್ಮಾತ್ ಕೆಟ್ಟ ಸಮಯ ಎದುರಾದರೆ ಅದನ್ನು ಎದುರಿಸುವ ಮಾರ್ಗ ತಿಳಿಯದೆ ಕಂಗಾಲಾಗುತ್ತೇವೆ. ಅದರಲ್ಲೂ ಕೆಲವೊಮ್ಮೆ ಈ ಕೆಟ್ಟ ಸಮಯ ನಮ್ಮನ್ನು ಪರೀಕ್ಷಿಸಲೇ ಬಂದ ಹಾಗೆ ಒಂದರ ಮೇಲೊಂದು ಕಷ್ಟ ಕೊಟ್ಟು ನೋಡುತ್ತದೆ. ಯಾವುದೇ ವ್ಯಕ್ತಿಯ ಜೀವನದಲ್ಲಿ ಯಾವಾಗ ಮತ್ತು ಹೇಗೆ ಕೆಟ್ಟ ಸಮಯಗಳು ಬರುತ್ತವೆ ಮತ್ತು ಯಾವ ಗ್ರಹಗಳ ಕಾರಣದಿಂದ ಬರುತ್ತದೆ- ಇವು ಬರುವ ಮುನ್ನ ಯಾವ ರೀತಿಯಲ್ಲಿ ಸೂಚನೆ ನೀಡುತ್ತವೆ ಎಂಬುದನ್ನು ನೋಡಬೇಕಿದೆ.
ತೊಂದರೆಗಳು ಮತ್ತು ಕೆಟ್ಟ ಸಮಯಗಳಿಗೆ ಕಾರಣವಾಗುವ ಗ್ರಹಗಳು
ರಾಹು, ಶನಿ ಮತ್ತು ಕೇತು ಯಾರೊಬ್ಬರ ಜೀವನದಲ್ಲಿ ಪ್ರವೇಶಿಸಿದಾಗ, ವ್ಯಕ್ತಿಯ ಜೀವನದಲ್ಲಿ ಇದ್ದಕ್ಕಿದ್ದಂತೆ ಕೆಟ್ಟ ಸಮಯಗಳು ಪ್ರಾರಂಭವಾಗುತ್ತವೆ. ಈ ಕಾರಣದಿಂದಾಗಿ, ಒಂದರ ನಂತರ ಒಂದರಂತೆ ಬಿಕ್ಕಟ್ಟುಗಳು ವ್ಯಕ್ತಿಯ ಮೇಲೆ ಬರಲು ಪ್ರಾರಂಭಿಸುತ್ತವೆ.
ಶನಿಯ ವಕ್ರಿ ಸಂಚಾರ; 5 ರಾಶಿಗಳಿಗೆ ನಾಕೂವರೆ ತಿಂಗಳು ಸಂಚಕಾರ
ನಾಯಿ ಬೆಕ್ಕುಗಳ ಕೂಗಾಟ
ತಡರಾತ್ರಿ ನಾಯಿ, ಬೆಕ್ಕಿನಂತಹ ಪ್ರಾಣಿಗಳು ಊಳಿಟ್ಟಂತೆ ಕೂಗುವುದು ಸರಿಯಲ್ಲ. ನಾಯಿಗಳು ಅಥವಾ ಬೆಕ್ಕುಗಳು ನಿಮ್ಮ ಮನೆಯ ಸುತ್ತಲೂ ಪ್ರತಿ ದಿನ ಹೀಗೆ ಕೂಗಿದರೆ, ಇದು ನಿಮ್ಮ ಕೆಟ್ಟ ದಿನಗಳು ಪ್ರಾರಂಭವಾಗಲಿದೆ ಎಂಬುದರ ಸಂಕೇತವಾಗಿದೆ. ನೀವು ತೊಂದರೆಯಲ್ಲಿ ಸಿಲುಕುವಿರಿ. ಆದರೆ ಹೆದರದಿರಿ, ಶಿವನ ಆರಾಧನೆಯಿಂದ ಆಗುವ ತೊಂದರೆಯನ್ನು ತಪ್ಪಿಸಬಹುದು.
ದೀಪ ಆರುವುದು
ಕೆಲವೊಮ್ಮೆ ಪೂಜೆ ಮಾಡುವಾಗ ಗಾಳಿ ಅಥವಾ ಬತ್ತಿಯ ಕಾರಣದಿಂದ ದೀಪವು ಆರಿ ಹೋಗುವುದು ಕಂಡುಬರುತ್ತದೆ. ಆದರೆ, ಮತ್ತೆ ಮತ್ತೆ ದೀಪ ನಂದಿ ಹೋಗುತ್ತಿದ್ದರೆ ಅದು ಶುಭವಲ್ಲ. ಇದು ನಿಮ್ಮ ಜೀವನದಲ್ಲಿ ಒಂದು ವಿಚಿತ್ರ ಸನ್ನಿವೇಶವು ಉದ್ಭವಿಸಲಿದೆ ಎಂಬುದರ ಸಂಕೇತವಾಗಿದೆ. ನಿಮ್ಮ ಜೀವನದಲ್ಲಿ ಕೆಲವು ದೊಡ್ಡ ತೊಂದರೆಗಳು ಬರಲಿವೆ.
ಚಿನ್ನ ಕಳೆದು ಹೋಗುವುದು
ಚಿನ್ನವನ್ನು ಖರೀದಿಸುವುದು ಎಂದರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ. ಮತ್ತೊಂದೆಡೆ, ಚಿನ್ನವನ್ನು ಕಳೆದುಕೊಳ್ಳುವುದು ಶುಭವಲ್ಲ. ಚಿನ್ನ ಕಳೆದು ಹೋದರೆ, ಮುಂಬರುವ ದಿನಗಳಲ್ಲಿ ನೀವು ಆರ್ಥಿಕ ಮುಗ್ಗಟ್ಟು ಎದುರಿಸಬಹುದು ಎಂಬುದರ ಸಂಕೇತವಾಗಿದೆ.
ಗಾಜು ಒಡೆಯುವುದು
ಕೆಲವೊಮ್ಮೆ ಗಾಜು ಅಥವಾ ಗಾಜಿನ ಸಾಮಾನುಗಳು ಕೈ ಬಿಟ್ಟಿದ್ದರಿಂದ ಒಡೆದು ಹೋದರೂ ಮತ್ತೆ ಮತ್ತೆ ಗಾಜು ಒಡೆಯುವುದು ಶುಭವಲ್ಲ. ಇದು ಶೀಘ್ರದಲ್ಲೇ ನಿಮ್ಮ ಮನೆಗೆ ತೊಂದರೆ ಬರಲಿದೆ ಎಂಬುದರ ಸಂಕೇತವಾಗಿದೆ. ನೀವು ಕೆಲವು ದೊಡ್ಡ ತೊಂದರೆಗಳನ್ನು ಎದುರಿಸಲಿದ್ದೀರಿ. ಇದು ಬಡತನದ ಸಂಕೇತವೂ ಹೌದು.
Shukra Gochar 2023: ವೃಷಭ, ಮಿಥುನ ಸೇರಿ 4 ರಾಶಿಗಳಿಗೆ ಶುರುವಾಗಲಿದೆ ಶುಕ್ರದೆಸೆ
ತುಳಸಿ ಒಣಗುವುದು
ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಆದರೆ, ಮನೆಯಲ್ಲಿ ನೆಟ್ಟ ತುಳಸಿ ಗಿಡ ದಿಢೀರ್ ಒಣಗುವುದು ಶುಭವಲ್ಲ. ಹಿಂದೂ ಧರ್ಮದಲ್ಲಿ ತುಳಸಿ ಸೊಂಪಾಗಿ ಬೆಳೆದರೆ, ಲಕ್ಷ್ಮೀ ನಿಮ್ಮೊಂದಿಗೆ ಸಂತೋಷವಾಗಿದ್ದಾಳೆ, ಮನೆಯಲ್ಲಿ ಆರ್ಥಿಕ ಸಮೃದ್ಧಿಯಾಗಲಿದೆ ಎಂದು ನಂಬಲಾಗುತ್ತದೆ. ಅದೇ ತುಳಸಿ ಒಣಗಿದರೆ ಇದು ಆರ್ಥಿಕ ಬಿಕ್ಕಟ್ಟಿನ ಅಂದರೆ ಬಡತನದ ಸಂಕೇತವಾಗಿದೆ. ಇದರರ್ಥ ಬಡತನವು ನಿಮ್ಮ ಮನೆಗೆ ಬರಲಿದೆ.
ಕೆಟ್ಟ ಕನಸುಗಳು
ಸಾಮಾನ್ಯವಾಗಿ ಎಲ್ಲರಿಗೂ ಕೆಟ್ಟ ಕನಸುಗಳಿರುತ್ತವೆ. ಕೆಟ್ಟ ಕನಸುಗಳನ್ನು ಕಾಣುವುದು ದೊಡ್ಡ ವಿಷಯವಲ್ಲ. ಆದರೆ ಕೆಟ್ಟ ಕನಸುಗಳು ನಿಮಗೆ ನಿರಂತರವಾಗಿ ಬರಲು ಪ್ರಾರಂಭಿಸಿದರೆ, ಕುಟುಂಬ ಸದಸ್ಯರಿಗೆ ದೊಡ್ಡ ತೊಂದರೆಗಳ ಸಾಧ್ಯತೆಯಿದೆ. ಇದನ್ನು ತಪ್ಪಿಸಲು, ನೀವು ಹನುಮಾನ್ ಚಾಲೀಸಾವನ್ನು ಪ್ರತಿದಿನ ರಾತ್ರಿಯಲ್ಲಿ ಪಠಿಸಬೇಕು ಅಥವಾ ನೀವು ನಂಬುವ ನಿಮ್ಮ ದೇವರನ್ನು ಪೂಜಿಸಬೇಕು ಮತ್ತು ನಿಮ್ಮ ಪ್ರೀತಿಪಾತ್ರರನ್ನು ಸ್ಮರಿಸುತ್ತಾ ಮಲಗಬೇಕು.