Astrology Tips: ಈ ರಾಶಿಯವರು ಬ್ರೇಕಪನ್ನು ಸುಲಭವಾಗಿ ಮರ್ತು ಬಿಡ್ತಾರೆ

ಗರ್ಲ್‌ ಫ್ರೆಂಡ್‌, ಬಾಯ್‌ ಫ್ರೆಂಡ್‌ ದೂರವಾದರೆ ಮುಂದೆ ಜೀವನವೇ ಇಲ್ಲ ಎಂದು ವರ್ತಿಸುವ ಜನ ಸಾಕಷ್ಟಿದ್ದಾರೆ. ಆದರೆ, ಕೆಲವು ರಾಶಿಗಳ ಜನ ಮಾತ್ರ ತಮ್ಮ ಬ್ರೇಕಪ್‌ ಅನ್ನು ಬಹುಬೇಗ ಮರೆತುಬಿಡುತ್ತಾರೆ. ಹಳೆಯ ಸಂಗಾತಿಯನ್ನು ನೆನಪಿಸಿಕೊಂಡು ಕೊರಗದೆ ಜೀವನವನ್ನು ಬಂದಂತೆ ಸ್ವೀಕರಿಸುತ್ತಾರೆ. ಎಕ್ಸ್‌ ಅನ್ನು ಮಿಸ್‌ ಮಾಡಿಕೊಳ್ಳುವುದಿಲ್ಲ.
 

These people never miss their ex in life

ಮನದನ್ನೆ ದೂರವಾದ ಬಳಿಕ ದೇವ್‌ ದಾಸ್‌ ಆಗಿರುವವರನ್ನು ನೋಡಿದ್ದೇವೆ. ಜೀವನದಲ್ಲಿ ಬೇಸರ ಹುಟ್ಟಿ, ಮುಂದೆ ಬದುಕೇ ಇಲ್ಲ ಎನ್ನುವಂತೆ ವರ್ತಿಸುವವರನ್ನು ಕಂಡು ಮರುಗಿದ್ದೇವೆ. ಲವರ್‌ ದೂರವಾದ ಬಳಿಕ ಮನಸ್ಸು ಕುಗ್ಗುವುದು, ನೋವಾಗುವುದು ಸಹಜ. ಆದರೆ, ಅದಕ್ಕೂ ಒಂದು ಮಿತಿಯಿದೆ. ತಿಂಗಳಾನುಟ್ಟಲೆ ಅದೇ ನೋವಿನಲ್ಲಿ ಬದುಕುವುದು ವಿಪರೀತವೆನಿಸುತ್ತದೆ. ಆ ನೋವು ದೀರ್ಘಕಾಲ ಅಥವಾ ಶಾಶ್ವತವಾಗಿ ಮನದಲ್ಲಿ ಇರಬಹುದಾದರೂ ಅದೊಂದೇ ಕಾರಣಕ್ಕೆ ಬದುಕೇ ಮುಗಿದುಹೋಯಿತು ಎನ್ನುವಂತೆ ವರ್ತಿಸುವುದು ಅತಿ ಎನಿಸುತ್ತದೆ. ಪ್ರೀತಿಸಿದ ಗೆಳೆಯ ಅಥವಾ ಗೆಳತಿ ದೂರವಾದಳು ಎಂದು ಮುಂದಿನ ಜೀವನವನ್ನು ಏಕಾಂಗಿಯಾಗಿ ಕಳೆಯುವವರೂ ಇದ್ದಾರೆ. ಅವರ ಭಾವನೆ ಅಷ್ಟು ತೀವ್ರವಾಗಿರುತ್ತದೆ. ಗರ್ಲ್‌ ಫ್ರೆಂಡ್‌ ಅಥವಾ ಬಾಯ್‌ ಫ್ರೆಂಡ್‌ ಆಗಿದ್ದವರು ದೂರವಾದಾಗ ಆ ನೋವಿನಿಂದ ಹೊರಬರಲು ಸ್ವಲ್ಪ ಸಮಯ ಎಲ್ಲರಿಗೂ ಬೇಕು. ಆದರೆ, ಕೆಲವು ರಾಶಿಗಳ ಜನ ಮಾತ್ರ ಇದಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ.

ಹಳೆಯ ಸ್ನೇಹವನ್ನು ಮರೆಯಲು ಇವರಿಗೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಅವರ ನೆನಪಿನಿಂದ ಬಹುಬೇಗ ದೂರವಾಗಿ ಆ ಚಾಪ್ಟರ್‌ ಅನ್ನು ಕ್ಲೋಸ್ ಮಾಡಿಬಿಡುತ್ತಾರೆ. ಸಂಬಂಧ ಕೊನೆಗೊಂಡ ಬಳಿಕ ಆ ನೋವು ತಮ್ಮನ್ನು ಕಾಡಿಸಲು ಇವರು ಬಿಡುವುದಿಲ್ಲ. ಸನ್ನಿವೇಶವನ್ನು ಧನಾತ್ಮಕವಾಗಿ ಪರಿಗಣಿಸಿ ಬದುಕು ಹೇಗೆ ಬಂತೋ ಹಾಗೆ ಎದುರಿಸುತ್ತಾರೆ. ದೀರ್ಘಕಾಲ ತಮ್ಮ ಎಕ್ಸ್ ಅನ್ನು ಮಿಸ್‌ ಮಾಡಿಕೊಳ್ಳಲು ಹೋಗುವುದಿಲ್ಲ. ಈ ಗುಣವನ್ನು ಕೇವಲ ಐದು ರಾಶಿಗಳಲ್ಲಿ ಕಾಣಬಹುದು.

ಕರ್ಕಾಟಕ (Cancer): ಕರ್ಕಾಟಕ ರಾಶಿಯವರು ಸ್ವ ಭರವಸೆಯ (Self-Assured) ಗುಣದವರು.  ಒಂದೊಮ್ಮೆ ಬ್ರೇಕಪ್‌ (Breakup) ಆದರೆ ಹಿಂದೆಂದೂ ತಿರುಗಿ ನೋಡುವುದಿಲ್ಲ. ತಮ್ಮ ಘನತೆ, ಸ್ಥಾನಮಾನವನ್ನು  ಕಾಪಾಡಿಕೊಳ್ಳಲು ಇವರು ಬದ್ಧರಾಗಿರುತ್ತಾರೆ. ಗುಡ್ ಬೈ (Goodbye) ಹೇಳಿದ ಸಂಗಾತಿಯ ಬಗ್ಗೆ ಇವರು ಕಿಂಚಿತ್ತೂ ಯೋಚಿಸುವುದಿಲ್ಲ. ಹೀಗಾಗಿ, ಬ್ರೇಕಪ್‌ ಆದ ಬಳಿಕ ಈ ರಾಶಿಯವರನ್ನು ಮಗದೊಮ್ಮೆ ಸಂಪರ್ಕಿಸುವ ಅಗತ್ಯವಿಲ್ಲ. ಹೊರಟುಹೋದವರಿಗೆ ಸಮಯ ನೀಡುವ ಮನಸ್ಸು ಇವರಿಗೆ ಇರುವುದಿಲ್ಲ. 

ಈ ರಾಶಿಯ ಹುಡುಗಿಯರು ಪ್ರೀತಿಯಲ್ಲಿ ಶ್ರೀಮಂತರು, ಪತಿ ಜೊತೆ ಸೂಪರ್ ಹೊಂದಾಣಿಕೆ ಇವರದು..

ಮೇಷ (Aries): ಮೇಷ ರಾಶಿಯ ಜನ ಬ್ರೇಕಪ್‌ ಅನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಆದರೆ, ಈ ದೌರ್ಬಲ್ಯವನ್ನು (Weakness) ಇತರರಿಗೆ ತೋರ್ಪಡಿಸಿಕೊಳ್ಳುವುದು ಇವರಿಗೆ ಇಷ್ಟವಾಗುವುದಿಲ್ಲ. ತಮ್ಮ ಭಾವನೆಗಳನ್ನು (Feelings) ಸ್ವಲ್ಪವೂ ವ್ಯಕ್ತಪಡಿಸುವುದಿಲ್ಲ ಹಾಗೂ ತಮ್ಮ ಎಕ್ಸ್‌ (Ex) ಬಳಿ ಎಂದಿಗೂ ವಾಪಸ್‌ ಹೋಗುವುದಿಲ್ಲ. ಬದಲಿಗೆ, ಸ್ವಾತಂತ್ರ್ಯವನ್ನು (Freedom) ಎಂಜಾಯ್‌ ಮಾಡುತ್ತಾರೆ. ಸಂಘರ್ಷಮಯ ಸನ್ನಿವೇಶದ ಬಗ್ಗೆ ಅಸಹ್ಯ ಪಟ್ಟುಕೊಳ್ಳುತ್ತಾರೆ. ಬ್ರೇಕಪ್‌ ಬಯಸುವುದಿಲ್ಲ, ಆದರೆ ಒಂದೊಮ್ಮೆ ಸಂಭವಿಸಿದರೆ ಅದನ್ನು ಬಹುಬೇಗ ಮರೆತು(Forget)ಬಿಡುತ್ತಾರೆ.

ವೃಶ್ಚಿಕ (Scorpio): ಸ್ವ ಗೌರವ (Respect) ಹಾಗೂ ಸ್ವಂತಿಕೆಯ ಮೌಲ್ಯಕ್ಕೆ ಹೆಚ್ಚು ಬೆಲೆ ನೀಡುವ ಇವರು ಇದನ್ನು ತಮ್ಮ ಶಕ್ತಿದಾಯಕ ರಕ್ಷಾಕವಚವನ್ನಾಗಿ ಬಳಕೆ ಮಾಡಿಕೊಳ್ಳುತ್ತಾರೆ. ಯಾವುದೇ ರೀತಿಯ ದ್ವೇಷ (Hatred), ತಿರಸ್ಕಾರ (Rejection) ಹಾಗೂ ನಿರ್ಲಕ್ಷ್ಯವನ್ನು  ಸಹಿಸುವುದಿಲ್ಲ. ಇವರು ಯಾವತ್ತೂ ವಿನೋದ (Fun), ಸ್ವಾತಂತ್ರ್ಯವನ್ನು ಬಯಸುತ್ತಾರೆ. ಸದಾಕಾಲ ಖುಷಿಯಾಗಿರುವ ಜನರೊಂದಿಗೆ ಮಾತುಕತೆ ನಡೆಸಲು ಇಷ್ಟಪಡುತ್ತಾರೆ. ಇವರ ಆಪ್ತರ ಸಾಲಿನಲ್ಲಿ ನೀವು ಇಲ್ಲದೆ ಹೋದರೆ ಇವರಿಗಾಗಿ ಪರಿತಪಿಸುವುದು ಬೇಡ. ಏಕೆಂದರೆ, ಇವರು ಸಂಗಾತಿ (Partner) ಅಥವಾ ಎಕ್ಸ್‌ ಗಮನ ಸೆಳೆಯಲು ಎಂದಿಗೂ ಬಯಸುವುದಿಲ್ಲ.

ಜನವರಿಯಲ್ಲಿ ವಿಪರೀತ ರಾಜಯೋಗದಿಂದ ಈ 3 ರಾಶಿಗೆ ವಿಪರೀತ ಲಾಭ

ವೃಷಭ (Taurus): ಇವರ ಪಾಲಿಗೆ ಸಂಬಂಧ (Relationship) ಎಂದರೆ ಸುರಕ್ಷತೆ (Safety), ಬದ್ಧತೆ, ಸ್ಥಿರತೆ (Stability). ತಮ್ಮ ಘನತೆಗೆ ಬೆಲೆ ನೀಡುವ ಇವರು ಮಾಜಿ ಲವರ್‌ ಬಳಿ ಎಂದಿಗೂ ವಾಪಸ್‌ (Return) ಹೋಗುವುದಿಲ್ಲ. ಬ್ರೇಕಪ್‌ ಆದ ಬಳಿಕ ಸಂಬಂಧಕ್ಕೆ ಬದ್ಧರಾಗಿರುವ ಜನರನ್ನು ಆಯ್ಕೆ ಮಾಡಿಕೊಳ್ಳಲು ಬಯಸುತ್ತಾರೆ.

ಮೀನ (Pisces): ಮೀನ ರಾಶಿಯ ಕೆಲವರು ಬ್ರೇಕಪ್‌ ಬಳಿಕ ಸುಧಾರಿಸಿಕೊಳ್ಳಲು ವರ್ಷಾನುಗಟ್ಟಲೆ ಸಮಯ (Time) ತೆಗೆದುಕೊಂಡರೆ, ಕೆಲವರು ಕೆಲವೇ ತಿಂಗಳಲ್ಲಿ ಹಳೆಯದನ್ನು ಮರೆಯುತ್ತಾರೆ. ಬ್ರೇಕಪ್‌ ಅನ್ನು ನಿಭಾಯಿಸಲು ಇವರು ಕಷ್ಟಪಡುತ್ತಾರೆ. ನೋವಿನ (Painful) ಸನ್ನಿವೇಶದಿಂದ ಬೇಗ ದೂರವಾಗಲು ಇಷ್ಟಪಡುತ್ತಾರೆ. ಹೀಗಾಗಿ, ಇತಿಹಾಸವನ್ನು ಮರೆತುಬಿಡುತ್ತಾರೆ.   

Latest Videos
Follow Us:
Download App:
  • android
  • ios