ಸಂಗಾತಿ ರಾಶಿ ನಕ್ಷತ್ರ ಇದಾದರೆ ಮುಗೀತು ಕಥೆ, ಸಿಟ್ಟು ಮೂಗಿನ ತುದಿ ಇರುತ್ತೆ!

ನೀವು ಕೆಲವು ಜನರನ್ನು ಗಮನಿಸಿರುವ ಹಾಗೆ, ಸಣ್ಣ ಪುಟ್ಟ ವಿಚಾರಗಳಿಗೂ ಅವರು ತಮ್ಮ ಸಂಗಾತಿಯ ಮೇಲೆ ಬಹುಬೇಗ ಕೋಪಾಗೊಳ್ಳುತ್ತಾರೆ. ಇಲ್ಲಿರುವ ಕೆಲವು ರಾಶಚಕ್ರದ ಜನರು ತಮ್ಮ ಸಂಗಾತಿಯ ವಿಚಾರದಲ್ಲಿ ಬಹಳ ಕಡಿಮೆ ತಾಳ್ಮೆಯನ್ನು ಹೊಂದಿದ್ದಾರೆ.

These are Zodiacs which have less patience about their partners

ಒಂದು ದಾಂಪತ್ಯ ಜೀವನ (Married Life) ಸುಖಕರವಾಗಿ ಸಾಗಬೇಕು ಎಂದರೆ, ನಿಸ್ವಾರ್ಥ ಪ್ರೀತಿ (Selfless love) ಮತ್ತು ತಾಳ್ಮೆಯು ಅತೀ ಮುಖ್ಯ ಅಂಶವಾಗಿರುತ್ತದೆ ಎಂಬುದು ಅನೇಕ ಜನರು ನಂಬಿಕೆಯಾಗಿದೆ. ಆದರೆ, ಕೆಲವು ರಾಶಿಚಕ್ರದ ಚಿಹ್ನೆಗಳು (Zodiac sign) ಸಹಿಷ್ಣುತೆ ಅಥವಾ ತಾಳ್ಮೆಯನ್ನು ಹೊಂದಿರುವುದಿಲ್ಲ, ದೀರ್ಘಾವಧಿಯ ಸಂಬಂಧಗಳನ್ನು ನಿಭಾಯಿಸುವ ಸಂದರ್ಭದಲ್ಲಿ ಕೂಡ ಈ ಜನರು ತಾಳ್ಮೆಯನ್ನು ಹೊಂದಿರುವುದಿಲ್ಲ. ಅವರಲ್ಲಿ ಕೆಲವರು ವೈಯಕ್ತಿಕ ಸ್ಥಳವನ್ನು ಪಡೆಯದಿದ್ದಾಗ ತಾಳ್ಮೆ ಕಳೆದುಕೊಳ್ಳುತ್ತಾರೆ. ಇನ್ನು ಕೆಲವರು ಪ್ರೇಮಿ ಮಾಡುವ ಯಾವುದೇ ತಪ್ಪುಗಳನ್ನು ಸಹಿಸುವುದಿಲ್ಲ. ಈ ಚಿಹ್ನೆಗಳು ಯಾರು ಮತ್ತು ಅವರು ಸಹಿಸದ ವಿಷಯಗಳನ್ನು ನೋಡೋಣ.

ಮೀನ ರಾಶಿ (Pisces)
ಮೀನ ರಾಶಿಯನ್ನು ಹೊಂದಿರುವವರು ಬಲಿಪಶುವಿನ ಕಾರ್ಡ್ ಅನ್ನು (Victim card) ಆಡುವ ಪ್ರವೃತ್ತಿಯನ್ನು ಹೊಂದಿರುತ್ತರೆ. ಆದರೂ, ತಮ್ಮ ಸಂಗಾತಿ ತಪ್ಪು ಮಾಡಿದಾಗ ಅವರಿಗೆ ಸಹನೆ ಇರುವುದಿಲ್ಲ. ಅಂದರೆ, ಅವರ ಸಂಗಾತಿ ಮುಖ್ಯವಾದ ದಿನಾಂಕಗಳನ್ನು ಮರೆತು ಅಂದಿನ ದಿನ ಮನೆಗೆ ತಡವಾಗಿ ತೆರಳುವುದು ಅಥವಾ ನಿಮ್ಮ ವಾರ್ಷಿಕೋತ್ಸವವನ್ನು ಮರೆತುಬಿಡುವುದು ಹೀಗೆ ಸರಳವಾದ ಸಂಗತಿಯಾಗಿರಲಿ ಇಂತಹ ಯಾವುದೇ ತಪ್ಪುಗಳನ್ನು ಮೀನ ರಾಶಿಯ ಜನರು ಸಹಿಸುವುದಿಲ್ಲ ಅದರಿಂದಾಗಿ ಬಹುಬೇಗ ತಾಳ್ಮೆಯನ್ನು ಕಳೆದುಕೊಂಡು ಬಿಡುತ್ತಾರೆ. ಅವರನ್ನು ಕ್ಷಮಿಸಲು ಅವರು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ ಮತ್ತು ಯುಗಯುಗಾಂತರಗಳವರೆಗೆ ಅವರನ್ನು ನರಳುವಂತೆ ಮಾಡುತ್ತಾರೆ, ಇದು ವಿಷಕಾರಿ (Toxic) ಲಕ್ಷಣವಾಗಿದೆ.
Numerology Today: ಈ ದಿನ ಹೇಗಿರಲಿದೆ? ನಿಮ್ಮ ಸಂಖ್ಯೆ ಏನನ್ನುತ್ತೆ?

ಧನು ರಾಶಿ (Sagittarius)
ಸಹಬಾಳ್ವೆ ನಡೆಸುತ್ತಿರುವ ದಂಪತಿಗಳು ಅವರು ಒಂದೇ ಮನೆಯಲ್ಲಿ ಹಂಚಿಕೊಂಡು ಬಾಳಬೇಕು ಮತ್ತು ಮನೆಯಲ್ಲಿರುವ ತಮ್ಮ ಸಂಗಾತಿ ಆರಾಮದಾಯಕವಾಗಲು ತಮ್ಮ ಸ್ವಂತ ಜಾಗವನ್ನು ಬಿಟ್ಟುಕೊಡಬೇಕು ಎಂದು ಅರಿತುಕೊಳ್ಳುತ್ತಾರೆ. ಆದರೆ, ಧನು ರಾಶಿಯ ಜನರಲ್ಲಿ ಹಂಚಿಕೊಳ್ಳುವ ಅಭ್ಯಾಸ ಬಹಳ ಕಡಿಮೆ ಇರುತ್ತದೆ. ಮತ್ತು ಅವರ ವೈಯಕ್ತಿಕ ಜಾಗವನ್ನು ಸಂಗಾತಿ (Partner) ಪಡೆದುಕೊಳ್ಳಲು ಹೋದರೆ ಆ ಸಂದರ್ಭದಲ್ಲಿ ಸಹಿಷ್ಣುತೆಯನ್ನು ಹೊಂದಿರದೆ ರೆಗಾಡುವ ಸಾಧ್ಯತೆ ಇರುತ್ತದೆ. ಅವರ ಕಪಾಟಿನಲ್ಲಿ ಒಂದು ಶೆಲ್ಫ್ ಅನ್ನು ತೆಗೆದುಕೊಳ್ಳುವಂತಹ ಸರಳವಾದ ವಿಷಯವು ಅವರನ್ನು ಕೆರಳುವ ಹಾಗೆ ಮಾಡುತ್ತದೆ.

ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯವರು ನೀವು ಅವರನ್ನು ಮದುವೆಯಾಗುವವರೆಗೆ ಮತ್ತು ಹಣಕಾಸಿನಲ್ಲಿ ಸೇರುವವರೆಗೆ ವಿಶ್ವದ ಅತ್ಯಂತ ಹೊಂದಾಣಿಕೆಯ ಪಾಲುದಾರರಂತೆ ಕಾಣಿಸಬಹುದು. ಅವರು ತಮ್ಮ ಸ್ವಂತ ಆರ್ಥಿಕ ಸ್ವಾತಂತ್ರ್ಯಕ್ಕೆ ಬಹು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಮತ್ತು ಯಾವುದೇ ವೆಚ್ಚಗಳನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಅವರ ಸಂಗಾತಿ ಗೃಹಿಣಿಯಾಗಿದ್ದರೆ (House Wife), ಅವರು ಪ್ರತಿ ಪೈಸೆಯನ್ನು ಖರ್ಚು ಮಾಡಲು ಅವರನ್ನು ಬೇಡಿಕೊಳ್ಳುತ್ತಾರೆ ಮತ್ತು ಅವರು ಅನಗತ್ಯವೆಂದು ಭಾವಿಸುವ ಯಾವುದೇ ವೆಚ್ಚವನ್ನು ಸಹಿಸುವುದಿಲ್ಲ. ಅವರು ಕೂಡ ಪ್ರತಿಯೊಂದು ವಿಚಾರಗಳಲ್ಲಿಯೂ ಲೆಕ್ಕ ಇಟ್ಟುಕೊಳ್ಳುತ್ತಾರೆ. ಹಾಗಾಗಿ ಇಂತಹ ವಿಚಾರಗಳ ನಿರ್ವಹಣೆಯಲ್ಲಿ ಕಡಿಮೆ ತಾಳ್ಮೆ ಹೊಂದಿರುತ್ತಾರೆ.

ಅಬ್ಬಾ, ಈ ರಾಶಿಯವರು ಎಲ್ಲವನ್ನೂ ನೆಗಟಿವ್ ಆಗಿಯೋ ನೋಡೋದು ಹೆಚ್ಚು!

ವೃಷಭ ರಾಶಿ (Taurus)
ನೀವೇನಾದರೂ ವೃಷಭ ರಾಶಿಯ ಸಂಗಾತಿಯನ್ನು ಹೊಂದಿದ್ದರೆ, ಅವರು ಹಂಚಿಕೊಳ್ಳುವ ಅಭ್ಯಾಸವನ್ನು ಬಹಳ ಕಡಿಮೆ ಹೊಂದಿರುತ್ತಾರೆ. ಇನ್ನು ನೀವು ಎಂದಾದರೂ ಹೊರಗಿನಿಂದ ಮನೆಗೆ ಊಟವನ್ನು ತಂದು ಹಂಚಿಕೊಂಡು ತಿನ್ನೋಣ ಎಂದು ಬಯಸಿದರೆ ಕಂಡಿತವಾಗಿ ವೃಷಭ ರಾಶಿಯವರ ಕೋಪಕ್ಕೆ ಗುರಿಯಾಗುತ್ತೀರ. ರಸವತ್ತಾದ ಊಟವನ್ನು ಅವರು ಹಂಚಿಕೊಂಡು ತಿನ್ನುವ ಸಹಿಷ್ಣುತೆಯನ್ನು (Tolerance) ಹೊಂದಿರುವುದಿಲ್ಲ. ಇಂತಹ ವಿಚಾರಗಳು ಇವರನ್ನು ಬಹುಬೇಗ ಕೋಪಾಗೊಳ್ಳುವ ಹಾಗೆ ಮಾಡುತ್ತದೆ. ಅವರು ಇಷ್ಟ ಪಡುವ ಯಾವುದೇ ವಸ್ತುವನ್ನು ಇತರರು ಮುಟ್ಟಲು ಬಂದರೆ ತಾಳ್ಮೆ ಕಳೆದುಕೊಂಡು ಬಿಡುತ್ತಾರೆ. 

These are Zodiacs which have less patience about their partners

 

Latest Videos
Follow Us:
Download App:
  • android
  • ios