Numerology Today: ಈ ದಿನ ಹೇಗಿರಲಿದೆ? ನಿಮ್ಮ ಸಂಖ್ಯೆ ಏನನ್ನುತ್ತೆ?

ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ಈ ದಿನದ ಭವಿಷ್ಯವೇನು ಎಂಬುದನ್ನು ತಿಳಿಯಿರಿ. 

Daily Numerology predictions of June 13th 2022 in Kannada SKR

ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28 ರಂದು ಜನಿಸಿದ ಜನರು)
ಈ ಸಮಯದಲ್ಲಿ ನಿಮ್ಮೊಳಗೆ ಮಂಗಳಕರ ಶಕ್ತಿಯನ್ನು ಅನುಭವಿಸುವಿರಿ. ಹೊಸ ಆಲೋಚನೆಗಳು ಮನಸ್ಸಿಗೆ ಬರಲಿವೆ. ಒಡಹುಟ್ಟಿದವರ ನಡುವಿನ ಸಂಬಂಧದಲ್ಲಿಯೂ ಮಾಧುರ್ಯ ಬೆಳೆಯುತ್ತದೆ. ಯಾವುದೇ ಭೂಮಿ ಸಂಬಂಧಿತ ಚಟುವಟಿಕೆಗಳು ನಡೆಯುತ್ತಿದ್ದರೆ ಕಾಗದದ ಸಂಬಂಧಿತ ಕ್ರಮಕ್ಕೆ ಸಂಬಂಧಿಸಿದಂತೆ ಕೆಲವು ತಪ್ಪು ತಿಳುವಳಿಕೆ ಉಂಟಾಗಬಹುದು. ನಿಮ್ಮ ಕೋಪ ಮತ್ತು ಮೊಂಡುತನವನ್ನು ನಿಯಂತ್ರಿಸಿ ಏಕೆಂದರೆ ನಿಮ್ಮ ವಿವೇಚನೆಯಿಂದ ನೀವು ಪರಿಸ್ಥಿತಿಯನ್ನು ಸರಿ ಹೊಂದಿಸಬಹುದು. ನಿದ್ರಾಹೀನತೆ ಸಮಸ್ಯೆಯಾಗಬಹುದು.

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಜನರು)
ಆಧ್ಯಾತ್ಮದಲ್ಲಿ ನಿಆಸಕ್ತಿ ಹೆಚ್ಚಾಗುತ್ತದೆ. ಇದು ನಿಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತದೆ. ಕೆಲಸದ ಜೊತೆಗೆ ಸಂಬಂಧಗಳನ್ನು ಗಟ್ಟಿಗೊಳಿಸುವ ಅವಶ್ಯಕತೆಯಿದೆ. ಹೆಚ್ಚಿನ ಸಮಯವನ್ನು ಮಾರ್ಕೆಟಿಂಗ್ ಮತ್ತು ಹೊರಾಂಗಣ ಚಟುವಟಿಕೆಗಳಲ್ಲಿ ಕಳೆಯಲಾಗುತ್ತದೆ. ಮನೆ ಮತ್ತು ಕುಟುಂಬಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ. ಮಳೆಯ ವಾತಾವರಣವು ಚರ್ಮದ ಸೋಂಕುಗಳಿಗೆ ಕಾರಣವಾಗಬಹುದು.

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಜನರು)
ಇಂದು ಕೆಲವು ಸಮಸ್ಯೆಗಳಿರಬಹುದು. ನೀವು ಭಯ ಪಡುವ ಬದಲು ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ ಯಶಸ್ವಿಯಾಗುತ್ತೀರಿ. ಕುಟುಂಬ ಸದಸ್ಯರ ವಿವಾಹದ ಯೋಜನೆಯೂ ಇರುತ್ತದೆ. ಇತರರ ವಿಷಯದಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡಬೇಡಿ. ಮಾಧ್ಯಮ, ಕಲೆ, ಪ್ರಯಾಣ ಇತ್ಯಾದಿಗಳಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಲಾಭದಾಯಕ ಪರಿಸ್ಥಿತಿ ಇದೆ. ಆದಾಗ್ಯೂ, ನೀವು ಸ್ಪರ್ಧೆ ಎದುರಿಸಬೇಕಾಗುತ್ತದೆ. 

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರು)
ಗೌರವಾನ್ವಿತ ವ್ಯಕ್ತಿಗಳೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ಇದು ನಿಮಗೆ ಅನೇಕ ಹೊಸ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಬಹುದು. ತಾಂತ್ರಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಯುವಕರು ಶೀಘ್ರದಲ್ಲೇ ಗಮನಾರ್ಹ ಯಶಸ್ಸನ್ನು ಕಾಣುತ್ತಾರೆ. ಅಹಂಕಾರ ಬಿಡಿ. ಅತ್ತೆಯ ಜೊತೆಗಿನ ಜಗಳ ನಿಮ್ಮ ದಾಂಪತ್ಯದ ಮೇಲೂ ಪರಿಣಾಮ ಬೀರಬಹುದು. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಪೈಪೋಟಿ ಎದುರಾಗಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಈ ರಾಶಿಗಳಿಗೆ ನಿದ್ದೆಗಿಂತ ಹೆಚ್ಚಿನದು ಮತ್ತೇನೂ ಇಲ್ಲ!

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದ ಜನರು)
ಮಗುವಿನ ಯಾವುದೇ ಸಮಸ್ಯೆ ಪರಿಹರಿಸುವಲ್ಲಿ ನಿಮ್ಮ ಸಹಕಾರವು ಧನಾತ್ಮಕವಾಗಿರುತ್ತದೆ. ಯಾವುದೇ ಆಸ್ತಿ ಸಂಬಂಧಿತ ಕ್ರಮಗಳು ನಡೆಯುತ್ತಿದ್ದರೆ, ಅದನ್ನು ಇಂದು ಗಂಭೀರವಾಗಿ ಪರಿಗಣಿಸಿ. ಸೋಮಾರಿತನವು ನಿಮ್ಮನ್ನು ಆಳಲು ಬಿಡಬೇಡಿ. ಅನಗತ್ಯ ಓಡಾಟ ಬೇಡ. ವ್ಯವಹಾರಕ್ಕೆ ಆಂತರಿಕ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳ ಅಗತ್ಯವಿದೆ. ಪತಿ ಪತ್ನಿಯ ನಡುವೆ ಉದ್ವಿಗ್ನತೆ ಇರುತ್ತದೆ. ರಕ್ತದೊತ್ತಡ ಮತ್ತು ಮಧುಮೇಹಕ್ಕೆ ನಿಯಮಿತ ತಪಾಸಣೆ ಮಾಡಿಸಿಕೊಳ್ಳಿ.

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು)
ಆಸ್ತಿ ಖರೀದಿ ಅಥವಾ ಮಾರಾಟ ಮಾಡಲು ಯೋಜಿಸುತ್ತಿದ್ದರೆ ಅದನ್ನು ತಕ್ಷಣವೇ ಕಾರ್ಯಗತಗೊಳಿಸಿ. ಗ್ರಹಗಳ ಪರಿಸ್ಥಿತಿ ಅನುಕೂಲಕರವಾಗಿದೆ. ಹಣಕಾಸಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ತಪ್ಪುಗಳನ್ನು ಮಾಡುವುದು ನಷ್ಟಕ್ಕೆ ಕಾರಣವಾಗಬಹುದು. ನಿಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇರಿಸಿ. ಕೆಲಸದ ಸ್ಥಳದಲ್ಲಿ ಹಿನ್ನಡೆ ಉಂಟಾಗಬಹುದು. ಗಂಡ ಹೆಂಡತಿ ಕೆಲಸದಲ್ಲಿ ನಿರತರಾಗಿರುವುದರಿಂದ ಒಬ್ಬರಿಗೊಬ್ಬರು ಸಮಯ ಕೊಡಲು ಸಾಧ್ಯವಾಗುವುದಿಲ್ಲ. ನಿಮಗೆ ಥೈರಾಯ್ಡ್ ಸಮಸ್ಯೆ ಇದ್ದರೆ, ಒಮ್ಮೆ ತಪಾಸಣೆ ಮಾಡಿಸಿ.

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು)
ನಿಮ್ಮ ಸಾಮರ್ಥ್ಯ ಮತ್ತು ಕೌಶಲ್ಯವನ್ನು ಪ್ರಶಂಸಿಸಲಾಗುತ್ತದೆ. ಉಳಿತಾಯದತ್ತ ಗಮನ ಹರಿಸಿ. ಧಾರ್ಮಿಕ ಯೋಜನೆ ಕೂಡ ಸಾಧ್ಯ. ಇತರ ಜನರ ಜಗಳಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ಮಹಿಳಾ ವರ್ಗವು ಅತ್ತೆಯಿಂದ ಸಮಸ್ಯೆ ಅನುಭವಿಸಬಹುದು. ಉತ್ತಮ ಸಂಬಂಧ ಕಾಪಾಡಿಕೊಳ್ಳಲು ಪ್ರಯತ್ನಿಸಿ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಹೊಸ ಮಾರ್ಗಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ಕಾರ್ಯಾಚರಣೆಗಳಲ್ಲಿ ಗೌಪ್ಯತೆಯ ಬಗ್ಗೆ ಗಮನವಿರಲಿ. ಪತಿ ಪತ್ನಿಯರ ನಡುವೆ ಇದ್ದ ಮನಸ್ತಾಪ ದೂರವಾಗುತ್ತದೆ. 

ಈ ವಾರ ನಿಮ್ಮ ಭವಿಷ್ಯದಲ್ಲೇನಿದೆ? ಟ್ಯಾರೋ ಕಾರ್ಡ್ ಸೂಚಿಸೋದೇನು?

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರು)
ಸುತ್ತಮುತ್ತಲಿನ ಚಟುವಟಿಕೆಗಳಲ್ಲಿ ಸಮಯವನ್ನು ವ್ಯರ್ಥ ಮಾಡದೆ ನಿಮ್ಮ ಕೆಲಸದತ್ತ ಗಮನಹರಿಸಿ. ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶ ಪಡೆಯುತ್ತೀರಿ. ಔದ್ಯೋಗಿಕ ಒತ್ತಡವು ಮನೆಯ ವಾತಾವರಣವನ್ನು ಹದಗೆಡಿಸುತ್ತದೆ. ಅನಗತ್ಯ ಪ್ರವಾಸ ತಪ್ಪಿಸುವುದು ಉತ್ತಮ. ಕೆಲ ದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು)
ಯಾವುದೇ ದೀರ್ಘಕಾಲದ ಆತಂಕ ಮತ್ತು ಒತ್ತಡವನ್ನು ಇಂದು ನಿವಾರಿಸಬಹುದು. ನಿಕಟ ಸಂಬಂಧಿಗಳು ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತೊಡಗಿಸಿಕೊಳ್ಳುತ್ತಾರೆ. ಎಲ್ಲಿಂದಲೋ ಒಳ್ಳೆಯ ಸುದ್ದಿ ಬರುವುದು. ವಿರೋಧಿಗಳು ನಿಮಗೆ ತೊಂದರೆ ನೀಡಲು ನೋಡಿದರೂ ಅವರು ಯಶಸ್ವಿಯಾಗುವುದಿಲ್ಲ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ವ್ಯಾಪಾರ ಸ್ಥಳದಲ್ಲಿ ಶಾಂತಿಯುತ ವಾತಾವರಣ ಇರುತ್ತದೆ. ಪ್ರೇಮ ಸಂಬಂಧಗಳು ಮದುವೆಯತ್ತ ಮುಖ ಮಾಡಬಹುದು. 

Latest Videos
Follow Us:
Download App:
  • android
  • ios