Astrology Secrets: ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ತನ್ನದೇ ಆದ ವ್ಯಕ್ತಿತ್ವ ಹೊಂದಿರುತ್ತದೆ. ಕೆಲವರು ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಾರೆ. ಇನ್ನು ಕೆಲವರು ಹೊರಗೆ ಒಳ್ಳೆಯವರಾಗಿದ್ದರೂ, ಒಳಗೆ ಇತರರಿಗೆ ಕೆಟ್ಟದ್ದನ್ನು ಬಯಸುತ್ತಾರೆ. ಈ ಎಲ್ಲಾ ರಹಸ್ಯ ಜ್ಯೋತಿಷ್ಯದ ಪ್ರಕಾರ ಕಂಡುಹಿಡಿಯಬಹುದು.
ಪ್ರತಿಯೊಬ್ಬ ವ್ಯಕ್ತಿಯೂ ಕೆಲವೊಂದು ರಹಸ್ಯವನ್ನ ಮರೆಮಾಡ್ತಾನೆ. ಅವರು ಆ ರಹಸ್ಯವನ್ನು ಹೊರಗೆ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಅದನ್ನು ತಮ್ಮ ಮನಸ್ಸಿನಲ್ಲಿ ಮಾತ್ರ ಇಟ್ಟುಕೊಳ್ಳುತ್ತಾರೆ. ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ವಿಶಿಷ್ಟ ವ್ಯಕ್ತಿತ್ವ ಮತ್ತು ಗುಪ್ತ ಭಾವನೆಗಳನ್ನು ಹೊಂದಿರುತ್ತದೆ. ಯಾವ ರಾಶಿಚಕ್ರ ಚಿಹ್ನೆಗಳು ಹೊರಗೆ ಧೈರ್ಯಶಾಲಿಯಾಗಿ ಕಾಣುತ್ತವೆ, ಆದರೆ ಒಳಗೆ ಗೊಂದಲದಲ್ಲಿರುತ್ತವೆ ಎಂಬುದನ್ನು ನೋಡೋಣ.
ಮೇಷ ರಾಶಿ
ಇವರು ಹೊರಗೆ ತುಂಬಾ ಧೈರ್ಯಶಾಲಿ ಮತ್ತು ಆತ್ಮವಿಶ್ವಾಸದಿಂದ ಕಾಣುತ್ತಾರೆ. ಆದರೆ ಒಳಗೆ ತುಂಬಾ ಅಸಹಾಯಕರು ಮತ್ತು ಗೊಂದಲದಲ್ಲಿರುತ್ತಾರೆ. ತಮ್ಮ ಜೀವನ ತಮ್ಮ ನಿಯಂತ್ರಣದಲ್ಲಿದೆ ಎಂದು ನಟಿಸುತ್ತಾರೆ. ಆದರೆ ವಾಸ್ತವದಲ್ಲಿ ಅವರ ಜೀವನ ಹಾಗಿರಲ್ಲ. ಅವರು ಹೊರಗೆ ನಗುತ್ತಾರೆ, ಆದರೆ ಒಳಗೆ ತುಂಬಾ ಗೊಂದಲ್ಲಿರುತ್ತಾರೆ.
ವೃಷಭ ರಾಶಿ
ವೃಷಭ ರಾಶಿಯವರು ತಮ್ಮ ನೋವನ್ನು ಯಾವಾಗಲೂ ಒಳಗೊಳಗೆ ಮರೆಮಾಡುತ್ತಾರೆ. ಒಳಗೆ ಎಷ್ಟೇ ನೋವು ಇದ್ದರೂ ಯಾವಾಗಲೂ ಹೊರಗೆ ನಗುತ್ತಿರುತ್ತಾರೆ. ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವುದು ಅಸಾಧ್ಯ. ತಮ್ಮ ನೋವನ್ನು ನಗುವಿನ ಮೂಲಕ ತೋರಿಸಲು ಬಿಡುವುದಿಲ್ಲ.
ಮಿಥುನ ರಾಶಿ
ಮಿಥುನ ರಾಶಿಯವರು ತಮ್ಮೊಳಗೆ ನಡೆಯುತ್ತಿರುವ ಯುದ್ಧವನ್ನು ಯಾರಿಗೂ ತೋರಿಸುವುದಿಲ್ಲ. ಅವರ ಹೃದಯ ಒಡೆದಿದ್ದರೂ ಸಹ ಮಾತನಾಡುವಾಗ ಮತ್ತು ನಗುವಾಗ ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಾರೆ. ಒಳಗೆ ಬಿರುಗಾಳಿ ಬೀಸುತ್ತಿದ್ದರೂ ಸಹ ಹೊರಗೆ ಶಾಂತವಾಗಿ ಕಾಣುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಎಲ್ಲರಿಂದಲೂ ಪ್ರೀತಿಯನ್ನು ಬಯಸುತ್ತಾರೆ. ಆದರೆ ಆ ಪ್ರೀತಿಗೆ ದ್ರೋಹ ಬಗೆದರೆ ಅವರು ಸಹಿಸುವುದಿಲ್ಲ. ಅವರು ಆ ನೋವನ್ನು ತೋರಿಸುವುದಿಲ್ಲ. ಆ ನೋವು ಅವರನ್ನು ಒಳಗಿನಿಂದ ಬದಲಾಯಿಸುತ್ತದೆ ಮತ್ತು ಅವರು ಬಲಶಾಲಿಯಾಗಲು ಗುರಾಣಿಯ ಹಿಂದೆ ಅಡಗಿಕೊಳ್ಳುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ಹೊರಗೆ ತುಂಬಾ ಧೈರ್ಯಶಾಲಿ ಮತ್ತು ಆತ್ಮವಿಶ್ವಾಸದಿಂದ ಕಾಣುತ್ತಾರೆ. ಆದರೆ ಒಳಗೆ ಅವರು ಭಯಪಡುತ್ತಾರೆ ಮತ್ತು ಒಂದು ಕ್ಷಣ ಎಡವಬಹುದು. ಅವರ ನಗುವಿನ ಹಿಂದೆ ಭಯ ಅಡಗಿರುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ತಿರಸ್ಕಾರವನ್ನು ಸಹಿಸುವುದಿಲ್ಲ. ತಾವು ಪ್ರೀತಿಸುವ ಜನರು ದೂರವಾದರೆ ಅದನ್ನು ಸಹಿಸುವುದಿಲ್ಲ. ಅದಕ್ಕಾಗಿಯೇ ಅವರು ಮೊದಲಿನಿಂದಲೂ ಎಲ್ಲರಿಂದ ದೂರವಿರುತ್ತಾರೆ. ಅವರ ಹೃದಯದಲ್ಲಿ ಪ್ರೀತಿ ಇದ್ದರೂ ಸಹ ಅವರು ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುವುದಿಲ್ಲ.
ತುಲಾ ರಾಶಿ
ಯಾರಾದರೂ ತಮಗೆ ನೋವುಂಟು ಮಾಡಿದರೂ ಅಥವಾ ಅವಮಾನಿಸಿದರೂ ತಮ್ಮ ನೋವು ಅಥವಾ ಕೋಪವನ್ನು ತೋರಿಸುವುದಿಲ್ಲ. ಆ ಮೌನದಲ್ಲಿ ಅವರ ನೋವಿರುತ್ತದೆ. ಆದರೆ ಹೊರಗೆ ಅವರು ಯಾವಾಗಲೂ ಮೃದುವಾಗಿ ಮತ್ತು ಶಾಂತವಾಗಿ ವರ್ತಿಸುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಇತರರ ಯಶಸ್ಸಿನ ಬಗ್ಗೆ ಅಸೂಯೆ ಪಡುತ್ತಾರೆ. ಅವರು ತಾವು ಸಾಧಿಸಬಹುದಾದದ್ದನ್ನು ಸಾಧಿಸಿಲ್ಲ ಎಂದು ದೂರಬಹುದು. ಆದರೆ ಅದನ್ನು ತೋರಿಸುವುದಿಲ್ಲ. ತಮ್ಮ ಅಸೂಯೆಯನ್ನು ಒಳಗೆ ಇಟ್ಟುಕೊಂಡು ನಿಮ್ಮನ್ನು ಗಮನಿಸುತ್ತಾರೆ.
ಧನು ರಾಶಿ
ಧನು ರಾಶಿಯವರು ತಮ್ಮ ಕೋಪ ಮತ್ತು ಅಸಮಾಧಾನವನ್ನು ಒಳಗೆ ಬಚ್ಚಿಟ್ಟುಕೊಂಡು ನಗುತ್ತಾರೆ. ಆದರೆ ಅವರೊಳಗೆ ಸಂಗ್ರಹವಾಗಿರುವ ಕೋಪವು ಒಂದು ಹಂತದಲ್ಲಿ ಹೊರಬರಲೇಬೇಕು. ಅದು ಇದ್ದಕ್ಕಿದ್ದಂತೆ ಹೊರಬಂದಾಗ ನಿಮಗೆ ಆಶ್ಚರ್ಯವಾಗಬಹುದು.
ಮಕರ ರಾಶಿ
ಮಕರ ರಾಶಿಯವರು ತಮ್ಮ ನಕಾರಾತ್ಮಕ ಭಾವನೆಗಳನ್ನು ಹೊರನೋಟಕ್ಕೆ ತೋರಿಸುವುದಿಲ್ಲ. ಅದರಿಂದ ಬರುವ ಸಮಸ್ಯೆಗಳನ್ನು ಎದುರಿಸಲು ಅವರು ಸಿದ್ಧರಿರುವುದಿಲ್ಲ. ತಮ್ಮ ಸ್ವಂತ ವ್ಯಕ್ತಿತ್ವವು ನಕಾರಾತ್ಮಕವಾಗಿರುತ್ತದೆ ಎಂದು ಅವರು ಚಿಂತಿಸುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರು ತಮ್ಮನ್ನು ಯಾರು ದ್ವೇಷಿಸುತ್ತಾರೆ ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಈ ದ್ವೇಷ ಅವರು ಪ್ರೀತಿಸುವ ವ್ಯಕ್ತಿಯಿಂದ ಬಂದಾಗ ಅದನ್ನು ಸಹಿಸಲು ಸಾಧ್ಯವಿಲ್ಲ. ಅವರಿಗೆ ಪ್ರೀತಿ ಮಾತ್ರ ಬೇಕು.
ಮೀನ ರಾಶಿ
ಮೀನ ರಾಶಿಯವರು ಯಾವಾಗಲೂ ತಮ್ಮ ದುಃಖವನ್ನು ಮರೆಮಾಡುತ್ತಾರೆ. ದುಃಖವನ್ನು ಮುಚ್ಚಿಟ್ಟು, ಮನಸ್ಸಿನ ಕತ್ತಲೆಯ ಕೋಣೆಗಳಿಗೆ ಎಸೆದು ಬೀಗ ಹಾಕಿರುತ್ತಾರೆ. ಅವರು ಒಬ್ಬಂಟಿಯಾಗಿರುವಾಗ ಮಾತ್ರ ಏಕಾಂತದಲ್ಲಿ ಕುಳಿತು ಬಳಲುತ್ತಾರೆ.
