Asianet Suvarna News Asianet Suvarna News

ಮೊದಲ ನೋಟದಲಿ ಮೋಡಿ ಮಾಡುತ್ತಾರೆ ಈ ರಾಶಿಯವರು..!

ಕೆಲ ವ್ಯಕ್ತಿಗಳ ಮಾತಿನ ಶೈಲಿ, ಹಾವ-ಭಾವಗಳು ಜನರನ್ನು ಮೋಡಿ ಮಾಡುತ್ತವೆ. ಅಂತಹ ಜನರನ್ನು ಒಮ್ಮೆ ಭೇಟಿಯಾದರೆ ಸಾಕು ಅವರಲ್ಲಿ ಏನೋ ಒಂದು ರೀತಿ ಆಕರ್ಷಣೆ ಮೂಡುತ್ತದೆ. ಎಲ್ಲರಲ್ಲೂ ಸಹಜ ಸೌಂದರ್ಯಕ್ಕಿಂತ ಅವರಲ್ಲಿ ಒಂದು ಅತ್ಯುತ್ತಮ ಗುಣವಿರುತ್ತೆ. ಇದಕ್ಕೆ ಮುಖ್ಯ ಕಾರಣ ಅವರ ಜನ್ಮ ರಾಶಿ.

The most attention seeking zodiac signs ranked suh
Author
First Published Jun 6, 2023, 2:31 PM IST

ಕೆಲ ವ್ಯಕ್ತಿಗಳ ಮಾತಿನ ಶೈಲಿ, ಹಾವ-ಭಾವಗಳು ಜನರನ್ನು ಮೋಡಿ (charm) ಮಾಡುತ್ತವೆ. ಅಂತಹ ಜನರನ್ನು ಒಮ್ಮೆ ಭೇಟಿಯಾದರೆ ಸಾಕು ಅವರಲ್ಲಿ ಏನೋ ಒಂದು ರೀತಿ ಆಕರ್ಷಣೆ (attraction) ಮೂಡುತ್ತದೆ. ಎಲ್ಲರಲ್ಲೂ ಸಹಜ ಸೌಂದರ್ಯಕ್ಕಿಂತ ಅವರಲ್ಲಿ ಒಂದು ಅತ್ಯುತ್ತಮ ಗುಣವಿರುತ್ತೆ. ಇದು ಅವರನ್ನು ಸಹಜ ಸೌಂದರ್ಯದೊಂದಿಗೆ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಇದಕ್ಕೆ ಮುಖ್ಯ ಕಾರಣ ಅವರ ಜನ್ಮ ರಾಶಿ (birth sign).

ಕೆಲವು ರಾಶಿ ಚಕ್ರ (zodiac)ದ ಜನರು ಬಹುಬೇಗನೇ ಜನರ ಮನಸ್ಸನ್ನು ಗೆಲ್ಲುತ್ತಾರೆ. ಇದಕ್ಕೆ ಅವರ ರಾಶಿಯೇ ಕಾರಣ ಜ್ಯೋತಿಷ್ಯ ಶಾಸ್ತ್ರ (Astrology)ದ ಪ್ರಕಾರದ ತುಂಬಾ ಆಕರ್ಷಣೆ ಹೊಂದಿದ ರಾಶಿಗಳ ಪಟ್ಟಿಯನ್ನುನ ಇಲ್ಲಿ ಶ್ರೇಯಾಂಕದ ಅನುಗುಣವಾಗಿ ವಿವರಿಸಲಾಗಿದೆ.


ಸಿಂಹ ರಾಶಿ (Leo): ಈ ರಾಶಿಯ ಜನರು ಸ್ವಾಭಾವಿಕವಾಗಿ ಸುಂದರವಾಗಿ ಇರುತ್ತಾರೆ. ಇವರು ಐಷಾರಾಮಿ (Luxury) ಮತ್ತು ಗ್ಲಾಮರ್‌ ಆಗಿ ಕಾಣಿಕೊಂಡು ಜನರನ್ನು ತಮ್ಮತ್ತ ಸೆಳೆಯುತ್ತಾರೆ.

ಮಿಥುನ ರಾಶಿ (Gemini): ಇವರು ಸಹಜ ಸೌಂದರ್ಯ ಹೊಂದಿರುತ್ತಾರೆ. ಇವರದು ಮೃದು ಮತ್ತು ಸೌಮ್ಯವಾದ ಮುಖವಿರುವುದರಿಂದ ಜನರು ಇವರತ್ತ ಆಕರ್ಷಣೆ ಆಗುತ್ತಾರೆ. ಹುಡುಗರ ವ್ಯಕ್ತಿತ್ವ (personality) ವು ತುಂಬಾ ಚೆನ್ನಾಗಿರುತ್ತದೆ. ಇವರು ಸ್ನೇಹ ಮತ್ತು ಪ್ರೀತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

ಧನು ರಾಶಿ (Sagittarius): ಈ ರಾಶಿಯವರು ನಗು ಮುಖದವರಾಗಿದ್ದು, ಸಹಜವಾಗಿ ಜನರಿಗೆ ಮೋಡಿ ಮಾಡುತ್ತಾರೆ. ಇವರ ವ್ಯಕ್ತಿತ್ವವು ಸೌಂದರ್ಯ (beauty)ಕ್ಕೆ ಹಿಡಿದ ಕನ್ನಡಿಯಾಗಿದೆ. ಇವರು ಸಾಹಸಮಯ ಮನೋಭಾವ ಹೊಂದಿರುವುದರಿಂದ, ಇವರ ವ್ಯಕ್ತಿತ್ವ ಜನರಿಗೆ ಇಷ್ಟ ಆಗಲಿದೆ.

ಮೇಷ ರಾಶಿ (Aries): ಈ ರಾಶಿಯ ಕಾಂತೀಯುತ ತ್ವಚೆಯನ್ನು ಹೊಂದಿರುತ್ತಾರೆ. ಇದರಿಂದ ಜನರು ಇವರತ್ತ ಆಕರ್ಷಣೆಗೆ ಒಳಗಾಗುತ್ತಾರೆ. ಇವರು ಬಲವಾದ ದವಡೆಗಳನ್ನು ಹೊಂದಿರುವುದರಿಂದ, ಇದು ಜನರನ್ನು ಸೆಳೆಯುತ್ತದೆ.

ಮಕರ ರಾಶಿ (Capricorn): ಅತ್ಯಂತ ಸುಂದರವಾದ ರಾಶಿಚಕ್ರ (Zodiac) ಚಿಹ್ನೆಗಳಲ್ಲಿ ಮಕರ ಕೂಡ ಒಂದು. ಈ ರಾಶಿಯವರು ಶಿಸ್ತುಬದ್ಧರಾಗಿದ್ದು, ಹೆಚ್ಚಾಗಿ ಜನರನ್ನು ಆಕರ್ಷಿಸುತ್ತಾರೆ. 

ವೃಶ್ಚಿಕ ರಾಶಿ (Scorpio): ಈ ರಾಶಿಯವರು ಸೊಗಸಾದ ಮಾತುಗಾರರಾಗಿದ್ದು, ಇವರ ಮಾತಿನ ಶೈಲಿಯು ಜನರನ್ನು ಮೋಡಿ ಮಾಡಲಿದೆ. ಹಾಗೂ ಜೀವನಶೈಲಿ (lifestyle)ಯು ಜನರನ್ನು ಹತ್ತಿರ ಸೆಳೆಯುತ್ತದೆ. ಇವರು ಬಹಳ ಬೇಗನೇ ಎಲ್ಲರಿಗೂ ಆಪ್ತರಾಗುತ್ತಾರೆ.

ಸಾವಿನ ಸೂಚನೆ ನೀಡುವ ‘ಪಂಚ’ ಲಕ್ಷಣಗಳು: ಗರುಡ ಪುರಾಣ ಏನು ಹೇಳುತ್ತೆ?

 

ತುಲಾ ರಾಶಿ (Libra): ಇವರು ಜನರನ್ನು ತಮ್ಮೆಡೆಗೆ ಸಲೀಸಾಗಿ ಸೆಳೆಯುವ ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾರೆ. ಇವರ ಗುಣ ಮತ್ತು ಮುಖದ ಲಕ್ಷಣಗಳು ಜನರಿಗೆ ಇಷ್ಟವಾಗಲಿವೆ. ಇವರ ಜೊತೆ ಸ್ನೇಹಿತರಾಗಲು ಮತ್ತು ಭಾವನೆ (feeling)ಗಳನ್ನು ಹಂಚಿಕೊಳ್ಳಲು ಜನರು ತುಂಬಾ ಇಷ್ಟಪಡುತ್ತಾರೆ.

ವೃಷಭ ರಾಶಿ (Taurus): ಈ ರಾಶಿಯ ವ್ಯಕ್ತಿಗಳು ಸುಂದರವಾದ ಕಣ್ಣು (eye)ಗಳನ್ನು ಹೊಂದಿರುತ್ತಾರೆ. ಇದು ಜನರನ್ನು ಸೆಳೆಯುತ್ತದೆ. ಇವರ ಗುಣ ಜನರಿಗೆ ಇಷ್ಟವಾಗಲಿದೆ.

ಕನ್ಯಾ ರಾಶಿ (Virgo): ಈ ರಾಶಿಯವರು ತಮ್ಮ ಬುದ್ಧಿವಂತಿಕೆಯಿಂದ ಜನರನ್ನು ತಮ್ಮತ್ತ ಸೆಳೆಯುತ್ತಾರೆ. ಸಮಸ್ಯೆ (problem)ಗಳನ್ನು ಪರಿಹರಿಸುವ ಗುಣ ಜನರಿಗೆ ಮೋಡಿ ಮಾಡುತ್ತದೆ. ಇದು ಅವರನ್ನು ಗುಂಪಿನಲ್ಲಿ ಎದ್ದು ಕಾಣುವಂತೆ ಮಾಡುತ್ತದೆ.

 

ಮೀನ ರಾಶಿ (Pisces): ಇವರದು ಸಹಾಯ ಮಾಡುವ ಸ್ವಭಾವ ಆಗಿರುತ್ತದೆ. ಧೈರ್ಯ (Courage), ನಿರ್ಭಯ, ನಿರ್ಭೀಡೆಯಿಂದ ಇರುವುದರಿಂದ ಬಲು ಬೇಗನೇ ಜನರನ್ನು ತಮ್ಮತ್ತ ಸೆಳೆಯುತ್ತಾರೆ.

ಕಟಕ ರಾಶಿ (Cancer):  ಈ ರಾಶಿಯ ಜನರು ತುಂಬಾ ಅದ್ಭುತವಾಗಿ ಮಾತನಾಡುತ್ತಾರೆ. ಬ್ರಾಂಡೆಂಡ್ ಬಟ್ಟೆ (clothes)ಗಳನ್ನು ಧರಿಸುತ್ತಾರೆ. ಇದರಿಂದ ಜನರನ್ನು ತಮ್ಮತ್ತ ಸೆಳೆಯುವಂತೆ ಮಾಡ್ತಾರೆ. ಎಲ್ಲಿ ಹೋದರೂ ತಮ್ಮ ವರ್ಚಸ್ ಕಾಪಾಡಿಕೊಂಡು ಹೋಗ್ತಾರೆ.

ಕುಂಭ ರಾಶಿ (Aquarius): ಈ ರಾಶಿಯ ಜನರು ಎತ್ತರದ ಶರೀರ ಹೊಂದಿರುವುದರಿಂದ, ಸುಂದರವಾಗಿ ಕಾಣುತ್ತಾರೆ. ಈ ಜನರು ತುಂಬಾ ಪ್ರೀತಿ (love), ವಿಶ್ವಾಸ ಮತ್ತು ಸ್ನೇಹವನ್ನು ಸಂಪಾದನೆ ಮಾಡಿದ್ದಾರೆ. ಇತರರೊಂದಿಗೆ ಬೇಗನೇ ಬೆರೆಯುತ್ತಾರೆ. ಇವರ ಈ ಗುಣಗಳು ಜನರನ್ನು ಬಹು ಬೇಗನೇ ಆಕರ್ಷಣೆಗೊಳಿಸುತ್ತವೆ.
 

Follow Us:
Download App:
  • android
  • ios