2026ರ ಶನಿ ಗೋಚರ; ಮುಂದಿನ 96 ದಿನಗಳವರೆಗೆ 4 ರಾಶಿಗೆ ಹಣ ಸಂಪಾದನೆಯ ಸೂಪರ್ ಚಾನ್ಸ್
2026ರ ಡಿಸೆಂಬರ್ 11ರಂದು ಶನಿಯು ತನ್ನ ಸ್ಥಾನವನ್ನು ಬದಲಾಯಿಸಲಿದ್ದು, ಫೆಬ್ರವರಿಯಲ್ಲಿ ರೇವತಿ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಇದರಿಂದ ಮುಂದಿನ 96 ದಿನಗಳ ಕಾಲ 4 ರಾಶಿಗಳಿಗೆ ಆರ್ಥಿಕ ಸುಧಾರಣೆ ಹಾಗೂ ವೃತ್ತಿಜೀವನದಲ್ಲಿ ಅದ್ಭುತ ಲಾಭಗಳು ದೊರೆಯಲಿವೆ.
15

Image Credit : Chat GPt
11ನೇ ಡಿಸೆಂಬರ್ 2026
11ನೇ ಡಿಸೆಂಬರ್ 2026ರಂದು ಶನಿಯು ನೇರವಾಗಿ ತನ್ನ ಸ್ಥಾನ ಬದಲಾಯಿಸಲಿದ್ದು, ಫೆಬ್ರವರಿಯಲ್ಲಿ ಉತ್ತರ ಭಾದ್ರಪದ ನಕ್ಷತ್ರವನ್ನು ಬಿಟ್ಟು ರೇವತಿ ನಕ್ಷತ್ರವನ್ನು ಪ್ರವೇಶಿಸುತ್ತದೆ. ಈ ಬದಲಾಗುತ್ತಿರುವ ಶನಿಯ ಚಲನೆಯು ಮುಂದಿನ 96 ದಿನಗಳಲ್ಲಿ ನಾಲ್ಕು ರಾಶಿಚಕ್ರ ಚಿಹ್ನೆಗಳಿಗೆ ಸಕಾರಾತ್ಮಕ ಫಲಿತಾಂಶಗಳನ್ನು ತರಬಹುದು. ಶನಿಯ ಈ ಚಲನೆಯು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ರೆ 12 ರಾಶಿಗಳ ಪೈಕಿ ನಾಲ್ಕು ರಾಶಿಗಳ ಹಣಕಾಸಿನ ಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನುಂಟು ಮಾಡಲಿದ್ದು, ಲಾಭ ಪಡೆಯುವ ಸಾಧ್ಯತೆಗಳಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
25
Image Credit : OTHERS
ತುಲಾ ರಾಶಿ
- ಮುಂಬರುವ ಸಮಯ ಅನುಕೂಲಕರವಾಗಿದ್ದು, ಕಠಿಣ ಪರಿಶ್ರಮಕ್ಕೆ ನಿರೀಕ್ಷಿತ ಲಾಭ ಸಿಗಲಿದೆ.
- ವೃತ್ತಿ ಪ್ರಗತಿಗೆ ಹೊಸ ಅವಕಾಶ ಜೊತೆ ಜವಾಬ್ದಾರಿ ಹೆಚ್ಚಳ, ಹೊಸ ಉದ್ಯೋಗ ಹುಡುಕುತ್ತಿರೋರಿಗೆ ಗುಡ್ನ್ಯೂಸ್
- ಆರ್ಥಿಕ ಪರಿಸ್ಥಿತಿ ಸುಧಾರಣೆ, ಕುಟುಂಬದೊಂದಿಗೆ ಸಮಯ ಕಳೆಯುತ್ತೀರಿ.
35
Image Credit : SOCIAL MEDIA
ಮಕರ ರಾಶಿ
- ಈ ಸಮಯದಲ್ಲಿ ಸಮಸ್ಯೆಗಳು ಕಡಿಮೆಯಾಗಲಿದ್ದು, ನೆಮ್ಮದಿ ಜೀವನ ನಿಮ್ಮದಾಗಲಿದೆ.
- ಹೊಸ ಉದ್ಯೋಗವಕಾಶ, ಆರ್ಥಿಕ ಪರಿಸ್ಥಿತಿ ಸುಧಾರಣೆ, ವ್ಯಾಪಾರಗಳಲ್ಲಿ ಅತ್ಯಧಿಕ ಲಾಭ
- ಉದ್ದಿಮೆಗಳಿಗೆ ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ.
- ಹಳೆಯ ಹೂಡಿಕೆಗಳಿಂದ ಆದಾಯ ಸಿಗಲಿದೆ. ಹೊಸ ಪರಿಚಯದಿಂದಲೂ ಹಣಕಾಸಿನ ಸದೃಢತೆ
45
Image Credit : SOCIAL MEDIA
ಕುಂಭ ರಾಶಿ
- ದೀರ್ಘಕಾಲದಿಂದ ಬಾಕಿ ಉಳಿದಿರೋ ಕೆಲಸಗಳು ಪೂರ್ಣಗೊಳ್ಳಲಿವೆ
- ಹೊಸ ಉದ್ಯೋಗವಕಾಶಗಳು ಉದ್ಭವಿಸುತ್ತವೆ.
- ಆದಾಯ ಏರಿಕೆಯಾಗಿ, ಮನಸ್ಸಿನ ಶಾಂತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
- ಹಲವು ದಿನಗಳಿಂದ ಎದುರಾಗಿರುವ ಸಮಸ್ಯೆಗಳು ದೂರವಾಗುವ ಕಾಲ ಸನ್ನಿಹಿತ
55
Image Credit : others
ವೃಷಭ ರಾಶಿ
- ಮೇಲಾಧಿಕಾರಿಗಳಿಂದ ಬೆಂಬಲ ಮತ್ತು ಪ್ರಶಂಸೆ
- ಉದ್ಯಮಿಗಳ ಜೀವನದಲ್ಲಿ ಹೊಸ ಪ್ರಗತಿ
- ದೀರ್ಘಕಾಲದಿಂದ ಸ್ಥಗಿತಗೊಂಡ ಕೆಲಸಗಳು ವೇಗ ಪಡೆದುಕೊಳ್ಳಲಿವೆ.
- ಆದಾಯ ಹೆಚ್ಚಳವಾಗಿ ಇಡೀ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ
ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.













