Asianet Suvarna News Asianet Suvarna News

ಸೂರ್ಯ ಗೋಚಾರ ಜೂನ್ 2022: ಹೊಳೆಯಲಿದೆ ಈ ನಾಲ್ಕು ರಾಶಿಗಳ ವೃತ್ತಿಜೀವನ

ಎಲ್ಲ ಗ್ರಹಗಳ ರಾಜನೆನಿಸಿರುವ ಸೂರ್ಯನು ಜೂನ್ 15ರಂದು ಬುಧ ಗ್ರಹದ ಚಿಹ್ನೆಯಾದ ಮಿಥುನ ರಾಶಿಗೆ ಕಾಲಿಡುತ್ತಿದ್ದಾನೆ. ಸೂರ್ಯನ ಈ ಮಿಥುನ ಸಂಕ್ರಮಣದಿಂದ ನಾಲ್ಕು ರಾಶಿಗಳ ವೃತ್ತಿಜೀವನದಲ್ಲಿ ಅದೃಷ್ಟ ಹೆಚ್ಚಲಿದೆ. 

Sun Transit June 2022 career life of these zodiac signs shine skr
Author
Bangalore, First Published Jun 13, 2022, 11:09 AM IST

ಸೂರ್ಯ ಗೋಚಾರ ಜೂನ್ 2022: ಗ್ರಹಗಳ ಗೋಚಾರವು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಸಿಂಹ ರಾಶಿಯ ಅಧಿಪತಿಯಾದ ಸೂರ್ಯ(Sun God)ನು ಶೀಘ್ರದಲ್ಲೇ ಮಿಥುನ(gemini) ರಾಶಿಯನ್ನು ಪ್ರವೇಶಿಸಲಿದ್ದಾನೆ. ವಿಶೇಷವೆಂದರೆ ಇದು ಸೂರ್ಯದೇವನ ಮಿತ್ರ ಗ್ರಹದ ರಾಶಿ. ವ್ಯಕ್ತಿಯ ಜಾತಕದಲ್ಲಿ ಸೂರ್ಯನು ಉತ್ತಮ ಆರೋಗ್ಯ, ಕೀರ್ತಿ, ಹೆಸರು, ಸರ್ಕಾರಿ ಉದ್ಯೋಗ, ಯಶಸ್ಸು, ಉನ್ನತ ಸ್ಥಾನದ ಅಂಶವಾಗಿದ್ದಾನೆ. 
ಸೂರ್ಯನು ಪ್ರತಿ ರಾಶಿಚಕ್ರದಲ್ಲಿ ಸುಮಾರು ಒಂದು ತಿಂಗಳ ಕಾಲ ಇರುತ್ತಾನೆ. ಜೂನ್ 15ರಂದು, ಗ್ರಹಗಳ ರಾಜ, ಸೂರ್ಯ ದೇವನು ಮಿಥುನ ರಾಶಿಯಲ್ಲಿ ಸಂಕ್ರಮಣ ಆರಂಭಿಸುತ್ತಿದ್ದಾನೆ. ಮತ್ತು ಜುಲೈ 16ರವರೆಗೆ ಈ ರಾಶಿಯಲ್ಲಿ ಇರುತ್ತಾನೆ. ಸೂರ್ಯನ ಈ ಸಂಕ್ರಮಣದಿಂದ 4 ರಾಶಿಚಕ್ರ ಚಿಹ್ನೆಗಳ ವೃತ್ತಿಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು, ಹೊಸ ಅವಕಾಶಗಳು ಲಭಿಸಲಿವೆ. ಈ ನಾಲ್ಕು ರಾಶಿಗಳು ಯಾವುವು ನೋಡೋಣ. 

ಸಿಂಹ ರಾಶಿ(Leo): ಸೂರ್ಯನ ಮಿಥುನ ಸಂಕ್ರಮಣದ ಈ ಸಮಯದಲ್ಲಿ ಸಿಂಹ ರಾಶಿಯವರ ಹಣಕಾಸಿನ ಪರಿಸ್ಥಿತಿ(financial situation)ಯು ತುಂಬಾ ಬಲವಾಗಿರುವಂತೆ ತೋರುತ್ತಿದೆ. ವಿವಿಧ ಮೂಲಗಳಿಂದ ಲಾಭ ಪಡೆಯುವ ಸಾಧ್ಯತೆಗಳಿವೆ. ಸಂಬಳ ಹೆಚ್ಚಳ ಸೇರಿದಂತೆ ಮನೆಯ ಇತರ ಸದಸ್ಯರ ದುಡಿಮೆಯಿಂದ ಆದಾಯದಲ್ಲಿ ಹೆಚ್ಚಳವಾಗುವ ಬಲವಾದ ಸಾಧ್ಯತೆಯಿದೆ. ಪ್ರೇಮ ವ್ಯವಹಾರಗಳಿಗೆ ಉತ್ತಮ ಸಮಯ. ಉದ್ಯೋಗಸ್ಥರಿಗೆ ನಿರೀಕ್ಷೆಗೂ ಮೀರಿ ಬಡ್ತಿ ದೊರೆಯುವ ಸಾಧ್ಯತೆ ಇದೆ.

ಉದ್ಯೋಗ ಸಿಗ್ತಿಲ್ವಾ? ವೃತ್ತಿಯಲ್ಲಿ ನೆಮ್ಮದಿ ಇಲ್ವಾ? ಈ ಜ್ಯೋತಿಷ್ಯ ಪರಿಹಾರ ಟ್ರೈ ಮಾಡಿ

ಕನ್ಯಾ ರಾಶಿ(Virgo): ವೃತ್ತಿಯಲ್ಲಿ ಉನ್ನತಿಯನ್ನು ಪಡೆಯುವ ಬಲವಾದ ಅವಕಾಶಗಳಿವೆ. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ನಿಮ್ಮ ಬಾಸ್‌ನೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಕ್ಷೇತ್ರದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಒಂದಕ್ಕಿಂತ ಹೆಚ್ಚು ಮಾಧ್ಯಮಗಳ ಮೂಲಕ ಹಣವನ್ನು ಪಡೆಯಬಹುದು. ಹಣಕಾಸಿನ ಬಹುತೇಕ ಸಮಸ್ಯೆಗಳು ತಗ್ಗುತ್ತವೆ.

ಮಕರ ರಾಶಿ(Capricorn): ಈ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ವಿಶೇಷ ಲಾಭಗಳನ್ನು ಪಡೆಯುತ್ತಾರೆ. ನೀವು ಎಲ್ಲಿಂದಲಾದರೂ ಸಾಲವನ್ನು ತೆಗೆದುಕೊಂಡಿದ್ದರೆ, ಈ ಅವಧಿಯಲ್ಲಿ ನೀವು ಅದನ್ನು ಪಾವತಿಸಲು ಸಾಧ್ಯವಾಗುತ್ತದೆ. ನ್ಯಾಯಾಲಯದ ಪ್ರಕರಣಗಳಲ್ಲಿಯೂ ಯಶಸ್ಸು ಕಂಡುಬರುತ್ತದೆ. ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ(Confidence) ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ಅವಕಾಶ ದೊರೆಯುತ್ತದೆ. 

ಮೀನ ರಾಶಿ(Pisces): ಈ ರಾಶಿಯವರಿಗೆ ಸೂರ್ಯನ ಈ ಸಂಚಾರವು ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ಉತ್ತಮ ಲಾಭ ಪಡೆಯುವ ಸಾಧ್ಯತೆಗಳಿವೆ. ಉದ್ಯೋಗವನ್ನು ಬದಲಾಯಿಸುವ ಆಲೋಚನೆಯಲ್ಲಿರುವವರಿಗೆ ಸಮಯವು ತುಂಬಾ ಅನುಕೂಲಕರವಾಗಿದೆ. ನಿಮ್ಮ ಬಾಸ್‌ನೊಂದಿಗಿನ ನಿಮ್ಮ ಸಂಬಂಧವು ಕೆಲಸದ ಸ್ಥಳದಲ್ಲಿ ಉತ್ತಮವಾಗಿರುತ್ತದೆ. ಕಠಿಣ ಪರಿಶ್ರಮದ ಸಂಪೂರ್ಣ ಫಲವು ಗೋಚರಿಸುತ್ತದೆ.

ಈ ರಾಶಿಗಳಿಗೆ ನಿದ್ದೆಗಿಂತ ಹೆಚ್ಚಿನದು ಮತ್ತೇನೂ ಇಲ್ಲ!

ಇನ್ನೊಂದೆಡೆ ಸೂರ್ಯನ ಈ ಸಂಚಾರದ ಕಾರಣ ನಾಲ್ಕು ರಾಶಿಗಳು ಹೆಚ್ಚು ನಕಾರಾತ್ಮಕ ಫಲಿತಾಂಶಗಳನ್ನು ಅನುಭವಿಸುತ್ತವೆ. ಅವೆಂದರೆ, ಮೇಷ, ವೃಷಭ, ಕರ್ಕಾಟಕ, ತುಲಾ. ಈ ರಾಶಿಗಳಿಗೆ ಸೂರ್ಯ ಸಂಕ್ರಮಣದ ಪರಿಣಾಮವಾಗಿ ಧನನಷ್ಟ, ಒಡಹುಟ್ಟಿದವರೊಡನೆ ಜಗಳ, ಕಠಿಣ ಪರಿಶ್ರಮದ ನಂತರವೂ ಫಲಿತಾಂಶವನ್ನು ಪಡೆಯದಿರುವುದು, ಆದಾಯಕ್ಕಿಂತ ಖರ್ಚು ಹೆಚ್ಚಾಗುವುದು, ಆರೋಗ್ಯ ಸಮಸ್ಯೆಗಳು, ಕೆಲಸಗಳಲ್ಲಿ ವೈಫಲ್ಯ, ಅಸಮಾಧಾನ ಮುಂತಾದ ನಕಾರಾತ್ಮಕ ಫಲಿತಾಂಶಗಳನ್ನು ಎದುರಿಸಬೇಕಾಗುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios