ತುಲಾ ರಾಶಿಗೆ ಸೂರ್ಯ: ನಿಮ್ಮ ರಾಶಿಗೆ ಶುಭ ಫಲ ಇದೆಯಾ ನೋಡಿ

ಇಂದು (ಅಕ್ಟೋಬರ್‌ 17) ಸೂರ್ಯನು ತುಲಾ ರಾಶಿಯಲ್ಲಿ ಪ್ರವೇಶಿಸಿ ಸಂಚಾರವನ್ನು ಆರಂಭಿಸುತ್ತಾನೆ. ಇದರಿಂದ ಕೆಲವು ರಾಶಿಗಳವರಿಗೆ ಶುಭವೂ, ಇನ್ನು ಹಲವರಿಗೆ ಅಶುಭವೂ ಆಗಲಿದೆ. ಯಾರಿಗೆ ಶುಭ, ನೋಡೋಣ.

 

Sun in Libra zodiac what your zodiac will have to you

ಅ.17ರಂದು ಸೂರ್ಯನು ರಾಶಿಚಕ್ರದ ಏಳನೇ ಮನೆಯಾದ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಅಲ್ಲಿ ಒಂದು ಮಾಸ ಕಾಲ ತನ್ನ ಅಧಿಪತ್ಯವನ್ನು ನಡೆಸಲಿದ್ದಾನೆ. ಸೂರ್ಯನ ಈ ಸಂಚಾರದಿಂದ ದ್ವಾದಶ ರಾಶಿಗಳ ಮೇಲೆ ಶುಭ ಹಾಗೂ ಅಶುಭ ಪರಿಣಾಮಗಳು ಉಂಟಾಗುತ್ತವೆ. ಆರು ರಾಶಿಯವರಿಗೆ ಇದು ಶುಭ ಫಲವನ್ನು ತರಲಿದೆ.

​​​ಸಿಂಹ ರಾಶಿ
ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿರುವ ಕಾರಣ ನಿಮಗೆ ಧನಲಾಭ ಹಾಗೂ ಆರೋಗ್ಯಲಾಭವಾಗುತ್ತದೆ. ಸಿಕ್ಕಿಹಾಕಿಕೊಂಡಿರುವ ನಿಮ್ಮ ಹಣವು ನಿರಾತಂಕವಾಗಿ ವಾಪಸ್ ಬರುತ್ತದೆ. ಈ ಅವಧಿಯಲ್ಲಿ ಗೌರವ ಮತ್ತು ಲಾಭ ಹೆಚ್ಚಾಗುವ ಸಾಧ್ಯತೆಗಳಿವೆ. ಪೋಷಕರೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಅಧಿಕಾರಿಗಳ ಸಹಾಯದಿಂದ ಆಸ್ತಿಗೆ ಸಂಬಂಧಿಸಿದ ಸಮಸ್ಯೆ ಪರಿಹಾರವಾಗುತ್ತದೆ. ನಿಮ್ಮ ಪತ್ನಿಯ ಸಲಹೆಯು ವ್ಯವಹಾರದಲ್ಲಿ ಸಹಾಯಕವಾಗಲಿದೆ. ನೀವು ಅಭಿವೃದ್ಧಿ ವಿಷಯದಲ್ಲಿ ಕೈ ಹಾಕಿದರೆ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ.

Sun in Libra zodiac what your zodiac will have to you


​ವೃಷಭ ರಾಶಿ
ಈ ಸಮಯದಲ್ಲಿ ನಿಮ್ಮ ಶಕ್ತಿ ವೃದ್ಧಿಯಾಗುತ್ತದೆ. ಉದ್ಯೋಗದಲ್ಲಿನ ಜವಾಬ್ದಾರಿಗಳೂ ಹೆಚ್ಚಾಗಬಹುದು. ಹೊಸ ಆದಾಯದ ಮೂಲದ ಬಗ್ಗೆ ನೀವು ಮಾಹಿತಿಯನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ಮುಂದಿನ ಯೋಜನೆಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಯಶಸ್ವಿಯಾಗುತ್ತಾರೆ. ಶತ್ರುಗಳು ನಿಮ್ಮಿಂದ ದೂರವಿರುತ್ತಾರೆ. ಸೂರ್ಯನ ಸಂಚಾರ ನಿಮ್ಮ ಬದುಕಿನಲ್ಲಿ ಒಳ್ಳೆಯ ದಿನಗಳನ್ನು ತರುತ್ತದೆ. ಈ ಸಮಯದಲ್ಲಿ ನಿಮ್ಮ ಉದ್ಯಮ ಪಾಲುದಾರರು ಪ್ರಯೋಜನ ಪಡೆಯುತ್ತಾರೆ. ನೀವು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ನಿಮ್ಮ ಕ್ಷೇತ್ರದಲ್ಲಿ ಜಯ ಗಳಿಸುತ್ತೀರಿ.

ಇಂದಿನಿಂದ ನವರಾತ್ರಿ ಪ್ರಾರಂಭ: ತಾಯಿ ದುರ್ಗಾಮಾತೆಯ ಪೂಜೆ, ಹಿನ್ನಲೆ, ಮಹತ್ವವಿದು! 

​ಮಿಥುನ ರಾಶಿ
ದೀರ್ಘಕಾಲದಿಂದ ನಿಮ್ಮನ್ನು ಕಾಡುತ್ತಿದ್ದ ಅನಾರೋಗ್ಯವು ನಿವಾರಣೆಯಾಗುತ್ತದೆ. ಈ ಸಂಚಾರ ಅವಧಿಯಲ್ಲಿ ನಿಮಗೆ ಎಲ್ಲರ ಪ್ರೀತಿ ಲಭ್ಯವಾಗುತ್ತದೆ. ಅದು ಜೀವನದ ದಿಕ್ಕನ್ನು ಬದಲಿಸುತ್ತದೆ. ವ್ಯಾಪಾರ ಉದ್ದೇಶಿತ ಪ್ರಯಾಣವು ಯಶಸ್ವಿಯಾಗಲಿದೆ ಮತ್ತು ಕುಟುಂಬ ವ್ಯವಹಾರದಲ್ಲಿ ಸಹೋದರ-ಸಹೋದರಿಯ ಬೆಂಬಲ ಇರುತ್ತದೆ. ಪ್ರೀತಿಪಾತ್ರರಿಂದ ಉಡುಗೊರೆ ಸಿಗುವ ಸಾಧ್ಯತೆಯಿದೆ. ಈ ಅವಧಿಯು ನಿಮ್ಮ ಬದುಕಿಗೆ ಶುಭ ಫಲ ನೀಡುತ್ತದೆ. ನಿಮ್ಮ ಕುಟುಂಬದ ಸಮಸ್ಯೆಗಳು ದೂರವಾಗುತ್ತವೆ. ಈ ಸಮಸ್ಯೆಯು ನಿಮ್ಮಿಂದಲೇ ಪರಿಹಾರವಾಗುತ್ತದೆ. ಇದರಿಂದಾಗಿ ಕುಟುಂಬದಲ್ಲಿ ನಿಮ್ಮ ಮೇಲಿನ ಗೌರವ ಹೆಚ್ಚಾಗುತ್ತದೆ. ಹಿರಿಯರ ಆಸ್ತಿ ವಿವಾದವು ಬಗೆಹರಿಯುತ್ತದೆ. 

ರಾಶಿಗನುಣವಾಗಿ ನಿಮ್ಮ ಲಕ್ಕಿ ನಂಬರ್ ಯಾವುದೆಂದು ತಿಳಿಯಿರಿ..!? 

​ಕನ್ಯಾ ರಾಶಿ
ನಿಮಗಿದು ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ. ನೀವು ಉದ್ಯೋಗಸ್ಥರಾಗಿದ್ದರೆ ನಿಮ್ಮ ಬಾಸ್‌ನ ಸಂಪೂರ್ಣ ಬೆಂಬಲ ಸಿಗುತ್ತದೆ. ಕುಟುಂಬದ ಸಂಪೂರ್ಣ ಬೆಂಬಲ ಇರುತ್ತದೆ ಮತ್ತು ಮನೆಯ ಕಿರಿಯ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುತ್ತೀರ. ಕುಟುಂಬದವರೊಂದಿಗೆ ಹೊರಗೆ ಹೋಗಲು ಯೋಜನೆ ರೂಪಿಸುತ್ತೀರ. ಸರ್ಕಾರದ ಬೆಂಬಲದಿಂದ ನಿಮ್ಮ ಯೋಜನೆಗಳು ಪೂರ್ಣಗೊಳ್ಳುತ್ತವೆ. ಅನಗತ್ಯ ಖರ್ಚುಗಳನ್ನು ತಡೆಯುವುದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಒಲವು ತೋರುತ್ತಾರೆ ಮತ್ತು ಉದ್ಯೋಗಿಗಳ ಆದಾಯ ಹೆಚ್ಚಳವಾಗುವ ಸಾಧ್ಯತೆ ಇದೆ. 

ಧನು ರಾಶಿ
ಈ ಅವಧಿಯಲ್ಲಿ ಹಣಕಾಸಿನ ವಿಷಯದಲ್ಲಿ ನೀವು ಕೈ ಹಾಕಿದ ಕಾರ್ಯಗಳು ಈಡೇರುತ್ತವೆ. ನಿಮ್ಮ ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ಪೋಷಕರಿಂದ ವಾತ್ಸಲ್ಯ ಸಿಗುತ್ತದೆ. ನಿಮ್ಮ ಹಳೆಯ ಸಮಸ್ಯೆಗಳು ಕೊನೆಗೊಳ್ಳುತ್ತವೆ. ತಂದೆ ತಾಯಿ ಸಮಾನರಾದವರ ಸಹಾಯದಿಂದ ವ್ಯವಹಾರದಲ್ಲಿ ಲಾಭವಾಗುತ್ತದೆ. ನಿಮ್ಮ ಪ್ರಮುಖ ಕಾರ್ಯಗಳು ಪೂರ್ಣಗೊಳ್ಳುತ್ತವೆ ಮತ್ತು ಧಾರ್ಮಿಕ ಕಾರ್ಯಗಳು ನಿಮ್ಮ ಮನೆಯಲ್ಲಿ ನಡೆಯುತ್ತವೆ. ವಿದೇಶದಲ್ಲಿ ಕೆಲಸ ಮಾಡಲು ಅಥವಾ ಅಧ್ಯಯನ ಮಾಡಲು ಬಯಸುವವರ ಆಸೆ ಈಡೇರುತ್ತದೆ.

ಈ ನವರಾತ್ರಿಯ ದುರ್ಲಭ ಯೋಗದ ಪ್ರಭಾವ ಯಾವ ರಾಶಿಗೆ, ಹೇಗಿದೆ ಗೊತ್ತಾ..? 

​ಮಕರ ರಾಶಿ
ನಿಮಗೆ ಸೂರ್ಯನ ಸಂಚಾರ ಹೆಚ್ಚಿನ ಆದಾಯ, ಆರೋಗ್ಯ ತರುತ್ತದೆ. ನಿಮ್ಮ ಆದಾಯದ ಮೂಲಗಳಿಂದ ಹೆಚ್ಚಿನ ಹಣದ ಹರಿವು ಇರುತ್ತದೆ. ಹೂಡಿಕೆಗೆ ಇದು ಒಳ್ಳೆಯ ಸಮಯ. ವಾಹನ ಮತ್ತು ಭೂಮಿ ಖರೀದಿಸುವ ಸಾಧ್ಯತೆ. ನಿಮ್ಮ ವೃತ್ತಿಜೀವನದಲ್ಲಿನ ಸ್ನೇಹಿತರ ಸಹಾಯದಿಂದ, ನೀವು ಬೆಳವಣಿಗೆ ಹೊಂದುತ್ತೀರಿ. ನಿಮ್ಮ ಶಕ್ತಿ ಹೆಚ್ಚಾಗುತ್ತದೆ. ಕುಟುಂಬದ ಜೊತೆಗಿನ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ. ನಿಮ್ಮ ತಂದೆಯ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಯಾಗುತ್ತದೆ. ಇದು ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಖುಷಿ ತರುತ್ತದೆ. ಸಂಗಾತಿಯಿಂದ ಉತ್ತಮ ಉಡುಗೊರೆ ಸಿಗಬಹುದು.

Latest Videos
Follow Us:
Download App:
  • android
  • ios