Zodiac Sign: ಸಂಬಂಧ ಹಾಳಾಗೋಕೆ ಒತ್ತಡವೇ ಕಾರಣವಾಗುತ್ತೆ ಈ ಮಂದಿಗೆ
ಸಂಬಂಧದಲ್ಲಿ ಗಂಡು-ಹೆಣ್ಣು ಇಬ್ಬರೂ ಮುಖ್ಯ. ಯಾರೊಬ್ಬರು ವಿಭಿನ್ನವಾಗಿ ವರ್ತಿಸಿದರೂ ಅದರ ಪರಿಣಾಮ ಸಂಬಂಧದ ಮೇಲಾಗುತ್ತದೆ. ಕೆಲ ರಾಶಿಗಳ ಜನ ಒತ್ತಡದ ಸಮಯದಲ್ಲಿ ಸಂಗಾತಿಯೊಂದಿಗೆ ಚೆನ್ನಾಗಿ ನಡೆದುಕೊಳ್ಳುವುದಿಲ್ಲ. ಇವರ ಸಂಬಂಧ ಹಾಳಾಗಲು ಇವರ ಒತ್ತಡವೇ ಮುಖ್ಯ ಕಾರಣವಾಗಿ ಪರಿಣಮಿಸುತ್ತದೆ.
ಕಚೇರಿಯಿಂದ ಮನೆಗೆ ಬಂದಾಕ್ಷಣ ವಿನಾಕಾರಣ ಪತ್ನಿಯ ಮೇಲೆ ರೇಗುವವರನ್ನು ಕಾಣಬಹುದು. ಅವರ ಸ್ವಭಾವ ಅರಿತಿರುವ ಪತ್ನಿಗೆ ಆಗ “ಕಚೇರಿಯಲ್ಲಿ ಏನೋ ಸಮಸ್ಯೆಯಾಗಿದೆʼ ಎನ್ನುವ ಅರಿವಾಗುತ್ತದೆ. ಆದರೂ ಪದೇ ಪದೆ ಹೀಗಾದರೆ ಬೇಸರ ಉಂಟಾಗುತ್ತದೆ. ಮನಸ್ಸು ಮುದುಡುತ್ತದೆ. ಎಷ್ಟೇ ಸಮಾಧಾನದಿಂದ ಇರಲು ಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಇಂಥ ವರ್ತನೆಯೊಂದೇ ಅಲ್ಲ, ಒತ್ತಡದಲ್ಲಿರುವಾಗ ಹಲವು ಜನ ಇನ್ನೂ ಹಲವಾರು ರೀತಿಯಲ್ಲಿ ತಮ್ಮ ಸಂಗಾತಿಯ ಮನ ನೋಯಿಸುವ ಕೆಲಸ ಮಾಡುತ್ತಾರೆ. ಕೆಲವರು ತಮ್ಮ ಒತ್ತಡವನ್ನು ನಿಭಾಯಿಸಲಾಗದೆ ಸಂಬಂಧವನ್ನು ಹಾಳು ಮಾಡಿಕೊಳ್ಳುವುದು ಕಂಡುಬರುತ್ತದೆ. ಇವರಿಗೆ ಒತ್ತಡ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ವಿನಾಕಾರಣ ಸಂಗಾತಿಯೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ. ಅಲ್ಲಿ ಯಾವುದೇ ತರ್ಕವಿರುವುದಿಲ್ಲ. ಸಂಗಾತಿಗೆ ಕಿರಿಕಿರಿ ನೀಡುತ್ತಾರೆ. ಅವರ ಒತ್ತಡದ ಒಂದೇ ಕಾರಣದಿಂದ ಸಂಬಂಧವೂ ಮುರಿದು ಬೀಳಬಹುದು, ಅಷ್ಟರಮಟ್ಟಿಗೆ ಅತಿಯಾಗಿ ವರ್ತಿಸುತ್ತಾರೆ. ಕೆಲವು ರಾಶಿಗಳ ಜನರಲ್ಲಿ ಈ ಧೋರಣೆ ಕಂಡುಬರುವುದು ಹೆಚ್ಚು. ಇವರು ತಾವು ಒತ್ತಡದಲ್ಲಿರುವಾಗ ಸಂಗಾತಿಯ ಜತೆ ವಿನಾಕಾರಣ ಜಗಳ ಮಾಡಬಹುದು, ರೇಗುತ್ತಿರಬಹುದು, ಭಾವನೆಗಳನ್ನು ಹಂಚಿಕೊಳ್ಳದೆ ಕಠಿಣವಾಗಬಹುದು ಅಥವಾ ಸಂಗಾತಿಯನ್ನು ಕೆಟ್ಟದಾಗಿ ಟೀಕಿಸಬಹುದು. ಈ ಗುಣ ಯಾವ ರಾಶಿಗಳಲ್ಲಿರುತ್ತದೆ ಎಂದು ನೋಡಿಕೊಳ್ಳಿ.
• ಕರ್ಕಾಟಕ (Cancer)
ಭಾವನಾತ್ಮಕ (Emotional) ಜನರಾಗಿರುವ ಕರ್ಕಾಟಕ ರಾಶಿಯವರು ಕಷ್ಟದ (Difficult) ದಿನಗಳಲ್ಲಿ ಸಂಬಂಧಕ್ಕೆ (Relation) ವಿರುದ್ಧವಾಗಿ ವರ್ತಿಸುತ್ತಾರೆ. ಭಾರೀ ಮೂಡ್ (Mood) ಏರಿಳಿತ ಅನುಭವಿಸುತ್ತಾರೆ. ಕಾರಣವೇ ಇಲ್ಲದೆ ಇನ್ನೊಬ್ಬರೊಂದಿಗೆ ಕಿರಿಕಿರಿ (Irritate) ಮಾಡಿಕೊಳ್ಳುತ್ತಾರೆ. ಇವರ ಸಂವಹನ ಕಳೆಗುಂದುತ್ತದೆ. ಮೂಡಿ (Moody) ಕರ್ಕಾಟಕ ರಾಶಿಯವರು ಭಾವನೆ, ಒತ್ತಡಗಳನ್ನು ಹೇಗೆ ನಿಯಂತ್ರಿಸಿಕೊಳ್ಳಬೇಕೆಂದು ಅರಿತಿರುವುದಿಲ್ಲ. ಮನಬಿಚ್ಚಿ ಸಂಗಾತಿಯೊಂದಿಗೆ (Partner) ಒತ್ತಡ (Stress)ಹಂಚಿಕೊಳ್ಳುವುದಿಲ್ಲ. ಹೀಗಾಗಿ, ಸಂಗಾತಿಯಿಂದ ದೂರ ಕಾಯ್ದುಕೊಳ್ಳಲು ಆರಂಭಿಸುತ್ತಾರೆ. ಇದರಿಂದ ಇವರ ಸಂಬಂಧ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಮೇಷದಿಂದ ಸಿಂಹದವರೆಗೆ; ಈ ರಾಶಿಯ ಒಡಹುಟ್ಟಿದವರನ್ನು ಹೊಂದಲು ಪುಣ್ಯ ಮಾಡಿರಬೇಕು!
• ಕನ್ಯಾ (Virgo)
ಸಂಪೂರ್ಣತೆ (Perfection) ಬಯಸುವ ಕನ್ಯಾ ರಾಶಿಯ ಜನ ತಮ್ಮ ಪ್ರಯತ್ನ ಫಲಿಸುವವರೆಗೂ ಯಾರೊಂದಿಗೂ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದಿಲ್ಲ. ತಮ್ಮ ನೋವುಗಳನ್ನು (Pain) ಹೊರಹಾಕಿಕೊಳ್ಳಲು ದಾರಿ ಕಾಣದಾದಾಗ ಒತ್ತಡಕ್ಕೆ ಒಳಗಾಗುತ್ತಾರೆ. ತಮ್ಮ ಹವ್ಯಾಸವನ್ನೆಲ್ಲ (Habits) ಬಿಟ್ಟುಬಿಡುತ್ತಾರೆ. ಇದರಿಂದಾಗಿ ಇವರ ಮಾನಸಿಕ ಸ್ಥಿತಿ (Mental State) ಕುಸಿಯುತ್ತದೆ. ಸಂಬಂಧದ ಮೇಲೂ ಪರಿಣಾಮ ಉಂಟಾಗುತ್ತದೆ. ತಾವು ಮಾಡುವ ಕೆಲಸಗಳಲ್ಲಿ ಅತ್ಯುತ್ತಮವಾಗಿರುವ ಇವರು, ಅಗತ್ಯವಾದ ಜವಾಬ್ದಾರಿ ಪೂರೈಸಲು ಸೋತಾಗ ಜಂಜಾಟ ಮಾಡುತ್ತಾರೆ. ಸಂಬಂಧದ ಮೇಲೆಯೂ ಇವರ ಮನಸ್ಥಿತಿ ಪರಿಣಾಮ ಬೀರುತ್ತದೆ.
• ವೃಶ್ಚಿಕ (Scorpio)
ಸೂಕ್ಷ್ಮವಾಗಿ ಗಮನಿಸುವ (Observer) ಬುದ್ಧಿ ಹೊಂದಿರುವ ವೃಶ್ಚಿಕ ರಾಶಿಯ ಜನ ಒತ್ತಡದಲ್ಲಿರುವಾಗ ಸಂಗಾತಿಯೊಂದಿಗೆ ಕಿರಿಕಿರಿ ಮಾಡಿಕೊಳ್ಳುವುದು ಹೆಚ್ಚು. ತಮ್ಮ ಸಂಗಾತಿಯ ಅಭದ್ರತೆಯನ್ನು (Insecure) ಫೀಲ್ ಮಾಡಿಕೊಳ್ಳುವ ಇವರು ಒತ್ತಡಕ್ಕೆ ಒಳಗಾಗಬಲ್ಲರು. ಸಂಬಂಧದಲ್ಲಿ ಪ್ರಾಮಾಣಿಕತೆ (Honesty) ಮತ್ತು ಖಚಿತತೆ ಬಯಸುವ ಇವರು, ಅತಿಯಾದ ಗಮನಿಸುವ ಗುಣದಿಂದಾಗಿ ಸಂಗಾತಿಯನ್ನು ಸಹ ಅತಿಯಾಗಿ ಟೀಕಿಸುತ್ತಾರೆ. ಇವರು ಸಂಗಾತಿಯನ್ನು ಯಾವುದಾದರೊಂದು ಕಾರಣಕ್ಕೆ ದೋಷಾರೋಪಣೆ (Blame) ಮಾಡುತ್ತಲೇ ಇರುತ್ತಾರೆ. ಇಂತಹ ಗುಣದಿಂದಾಗಿ ತಮ್ಮ ಪ್ರೀತಿಗೆ (Love) ಸಂಪೂರ್ಣವಾಗಿ ಬದ್ಧರಾಗಲು ಇವರಿಂದ ಸಾಧ್ಯವಾಗುವುದಿಲ್ಲ.
Zodiac Sign: ಸಂಗಾತಿ ಜತೆ ಪ್ರೀತಿ ಭಾವನೆ ಹಂಚ್ಕೊಳೋಕೆ ಈ ರಾಶಿಯವರೇಕೆ ಹಿಂದೇಟು ಹಾಕ್ತಾರೆ?
• ತುಲಾ (Libra)
ಖುಷಿಯಾಗಿರಲು ಇಷ್ಟಪಡುವ ತುಲಾ ರಾಶಿಯ ಜನ ಜೀವನದಲ್ಲಿ ಒತ್ತಡದ ಸನ್ನಿವೇಶ ಅನುಭವಿಸುತ್ತಾರೆ. ತಮ್ಮದೇ ಹವ್ಯಾಸ ಹೊಂದಿದ್ದು ಎಲ್ಲವನ್ನೂ ನಿಭಾಯಿಸಲು (Manage) ಬಯಸುತ್ತಾರೆ. ಇದರಿಂದಾಗಿ ಒಮ್ಮೊಮ್ಮೆ ಇವರು ತೀವ್ರ ಒತ್ತಡಕ್ಕೆ ತುತ್ತಾಗುತ್ತಾರೆ. ಇಂತಹ ಸನ್ನಿವೇಶದಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕಷ್ಟ ಎದುರಿಸುತ್ತಾರೆ. ಭಾವನೆಗಳನ್ನು ವ್ಯಕ್ತಪಡಿಸುವ (Express) ಬಗ್ಗೆ ಗೊಂದಲ ಹೊಂದುತ್ತಾರೆ. ಈ ಕುರಿತು ತಮ್ಮೊಳಗೇ ಹೋರಾಟ ನಡೆಸುತ್ತಾರೆ. ಇದರಿಂದಾಗಿ ಸಂಗಾತಿ ಜತೆಗೆ ಉತ್ತಮ ಸಂವಹನ ಹೊಂದಲು ಇವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ, ಇವರ ಸಂಬಂಧ ಸೊರಗುತ್ತದೆ.