ಶನಿಗ್ರಹದಿಂದ ಶುಭವಾಗಲು ನಿಮ್ಮ ಜನ್ಮರಾಶಿಗೆ ತಕ್ಕಂತೆ ಈ ಹರಳು ಧರಿಸಿ!
ಶನಿ ಶುಭಕಾರಕನೂ ಹೌದು. ಶನಿ ದೇವರಿಂದ ಶುಭ ಫಲ ಪಡೆಯಬೇಕು ಅಂದರೆ ಈ ಹರಳು ಧರಿಸಿ.

ಶನಿಯು ಕ್ರೂರ ಎಂದು ತುಂಬಾ ಮಂದಿ ತಪ್ಪಾಗಿ ತಿಳಿಯುತ್ತಾರೆ. ಅವನು ಶುಭಕಾರಕನೂ ಹೌದು. ನಿಮ್ಮ ಜನ್ಮರಾಶಿಗೆ ಸೂಕ್ತ ಹರಳು ಧರಿಸುವುದರಿಂದ ಶನಿಯ ವಕ್ರದೃಷ್ಟಿಯಿಂದಲೂ ಪಾರಾಗಬಹುದು, ಅವನ ಆಶೀರ್ವಾದವನ್ನೂ ಪಡೆಯಬಹುದು. ಅವನು ನಿಮಗೆ ಶುಭವನ್ನು ಎಸಗುವಂತೆ ಮಾಡಲು, ನಿಮ್ಮ ಜನ್ಮರಾಶಿಗೆ ತಕ್ಕಂತೆ ಯಾವ ಹರಳನ್ನು ನೀವು ಆಭರಣದಲ್ಲಿ ಧರಿಸಬೇಕು?
ಮೇಷ- ವೃಶ್ಚಿಕ
ಈ ಎರಡೂ ರಾಶಿಯವರಿಗೆ ಕುಜ ಅಧಿಪತಿ. ಇವರು ಹವಳ ಧರಿಸಿದರೆ ಉತ್ತಮ. ಇನ್ನು ಹವಳವನ್ನು ಬೆಳ್ಳಿಯಲ್ಲಿ ಧರಿಸಿದರೆ ಉತ್ತಮ ಫಲ. ತ್ರಿಕೋಣದ ಆಕಾರದಲ್ಲಿ ಹವಳವಿರಬೇಕು. ಆ ವ್ಯಕ್ತಿಯ ದೇಹದ ತೂಕದ ಹತ್ತನೇ ಒಂದು ಭಾಗದಷ್ಟು ತೂಕವಾದರೂ ಅ ರತ್ನ ಇರಬೇಕು ಎಂಬುದು ತಜ್ಞರ ಅಭಿಮತ. ಉದಾಹರಣೆಗೆ ಅರವತ್ತು ಕೇಜಿ ತೂಕದ ವ್ಯಕ್ತಿ, ತೂಕದ ಹತ್ತನೇ ಒಂದು ಭಾಗ. ಅಂದರೆ ಆರು ಕ್ಯಾರೆಟ್ ತೂಕದ ಹವಳವನ್ನು ಧರಿಸಿದರೆ ಉತ್ತಮ ಫಲ ನೀಡುತ್ತದೆ. ಮಂಗಳವಾರದಂದು ಉಂಗುರ ಧಾರಣೆ ಮಾಡಬೇಕು.
ವೃಷಭ- ತುಲಾ
ಈ ಎರಡೂ ರಾಶಿಯವರಿಗೆ ಶುಕ್ರ ಅಧಿಪತಿ. ಆದ್ದರಿಂದ ವಜ್ರವನ್ನು ಧರಿಸಬಹುದು. ಉಂಗುರ ಬೆರಳಿಗೆ ಚಿನ್ನ ಅಥವಾ ಪ್ಲಾಟಿನಂನಲ್ಲಿ ಮಾಡಿಸಿ ಧರಿಸಬಹುದು. ವಜ್ರದ ಮೂಲೆಗಳು ನಿಖರವಾಗಿರಬೇಕು. ಮೊಂಡಾಗಿ ಇರಬಾರದು. ಅದರ ಮೇಲೆ ಯಾವುದೇ ಕಲೆ ಇರಬಾರದು. ಶುಕ್ರವಾರದಂದೇ ಉಂಗುರ ಧಾರಣೆ ಮಾಡಬೇಕು.
ನವರಾತ್ರಿ ವೇಳೆ ಇವುಗಳನ್ನು ನೋಡಿದ್ರೆ ದೇವಿಯ ಕೃಪೆ ನಿಮ್ಮ ಮೇಲಿರುತ್ತೆ!
ಮಿಥುನ- ಕನ್ಯಾ (Virgo)
ಈ ಎರಡೂ ರಾಶಿಗೂ ಬುಧ ಅಧಿಪತಿ. ಇವರು ಕಿರುಬೆರಳಲ್ಲಿ ಪಚ್ಚೆ ಧರಿಸಬಹುದು. ನೆನಪಿಡಿ, ಕಿರು ಬೆರಳಲ್ಲಿ ಧರಿಸಿದರೆ ಉತ್ತಮ ಫಲ. ಬುಧವಾರದಂದು ಧರಿಸಬೇಕು. ಕೆಲವರು ಪಚ್ಚೆ ಎಂದು ಹಸಿರು ಬಣ್ಣದ ಕಲ್ಲನ್ನೆಲ್ಲ ನೀಡುತ್ತಾರೆ. ಸರಿಯಾಗಿ ಸರ್ಟಿಫೈಡ್ ಮಾಡಿದ ರತ್ನಗಳನ್ನೇ ತಂದು ಧರಿಸುವುದು, ಜೆಮ್‌ಸ್ಟೋನ್ ತಜ್ಞರ ಬಳಿ ಮೌಲ್ಯಮಾಪನ ಮಾಡಿಸುವುದು ವಿಹಿತ.
ಕಟಕ (Scorpio)
ಈ ರಾಶಿಗೆ ಚಂದ್ರ ಅಧಿಪತಿ. ಮುತ್ತನ್ನು ತೋರು ಬೆರಳಲ್ಲಿ ಧರಿಸಿದರೆ ಉತ್ತಮ. ಚಂದ್ರ ಮನಸ್ಸಿನ ಕಾರಕ. ಮುತ್ತಿನ ಗುಣ ತಂಪು. ಚಂದ್ರನ ಗುಣವೂ ತಂಪದಾರೂ, ಅಮಾವಾಸ್ಯೆ ಹುಣ್ಣೆಮಗಳಂದು ಕ್ಷೋಭೆಯನ್ನು ಉಂಟಮಾಡುತ್ತಾನೆ. ಆಗ ಮುತ್ತು ನಿಮ್ಮನ್ನು ನಿರಾಳವಾಗಿ ಇಡುತ್ತದೆ. ಸೋಮವಾರದಂದು ಧಾರಣೆ ಮಾಡಬೇಕು.
ನವರಾತ್ರಿ 5 ನೇ ದಿನ ಸ್ಕಂದಮಾತೆಯನ್ನು ಪೂಜಿಸಿದರೆ ವಿಶೇಷ ಫಲ
ಸಿಂಹ (Leo)
ಈ ರಾಶಿಗೆ ರವಿ (sun) ಕಾರಕ. ಸ್ಟಾರ್ ರೂಬಿ (rooby) ರತ್ನ ಧರಿಸಿದರೆ ಉತ್ತಮ. ಭಾನುವಾರದಂದು ಉಂಗುರ ಬೆರಳಿಗೆ ಈ ರತ್ನವನ್ನು ಧರಿಸಬೇಕು. ರೂಬಿಯು ರವಿಯಿಂದ ಉಂಟಾಗುವ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.
ಧನು- ಮೀನ
ಈ ಎರಡೂ ರಾಶಿಗೆ ಗುರು ಅಧಿಪತಿ. ಕನಕ ಪುಷ್ಯರಾಗ ಧಾರಣೆ ಮಾಡಬಹುದು. ಗುರುವಾರದಂದು ತೋರು ಬೆರಳಿಗೆ ಉಂಗುರ (ring) ಧರಿಸಬೇಕು. ಗುರುವು ಜ್ಞಾನದ ಅಧಿಪತಿ. ಕನಕ ಪುಷ್ಯರಾಗವು ಜ್ಞಾನಪ್ರಚೋದಕ ಹಾಗೂ ಧರಿಸಿದಾಗ ನರವ್ಯೂಹವನ್ನು ಸ್ಪಂದಿಸಿ ಮೆದುಳಿನಲ್ಲಿ ಸಂವೇದನೆಯನ್ನು ಉಂಟುಮಾಡುತ್ತದೆ.
ಮಕರ- ಕುಂಭ
ಈ ಎರಡೂ ರಾಶಿಗೆ ಶನಿ ಅಧಿಪತಿ. ನೀಲ ಧರಿಸಬಹುದು. ಶನಿವಾರದಂದು ಮಧ್ಯದ ಬೆರಳಿಗೆ (middle finger) ಈ ಉಂಗುರ ಧಾರಣೆ ಮಾಡಬೇಕು. ಬೆಳ್ಳಿಯಲ್ಲಿ ಧರಿಸಿದರೆ ಉತ್ತಮ. ಈ ರತ್ನವನ್ನು ಧರಿಸಲು ಕೆಲವು ಕ್ರಮವಿದೆ. ನೀಲಿ ರತ್ನವನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿಟ್ಟು, ಎಳ್ಳಿನಲ್ಲಿಟ್ಟು ಪೂಜಿಸಿ ನಂತರ ಧರಿಸಬೇಕು. ಹೀಗೆ ಇತರ ರತ್ನಗಳಿಗೂ ಬೇರೆ ಕ್ರಮವಿದೆ. ಅದನ್ನು ಜ್ಞಾನಿಗಳಿಂದ ತಿಳಿಯಬೇಕು.