Spirituality: ಬ್ರಹ್ಮ, ವಿಷ್ಣು, ಶಿವನ ಆವಾಸಸ್ಥಾನ ಅಶ್ವತ್ಥ ಮರ
ಮಹಾಭಾರತದಲ್ಲಿ ಕೃಷ್ಣನು ತಾನೇ ಅಶ್ವತ್ಥ ಮರ ಎನ್ನುತ್ತಾನೆ. ಈ ಮರದ ಆಧ್ಯಾತ್ಮಿಕ ಮಹತ್ವವೇನು?
ಅಶ್ವತ್ಥ ಮರ- ಇದಕ್ಕೇ ಬೋಧಿ ವೃಕ್ಷವೆನ್ನುವುದು. ಬುದ್ಧನಿಗೆ ಜ್ಞಾನೋದಯವದದ್ದು ಇದೇ ಮರದ ಕೆಳಗೆ. ಇದು ಟ್ರೀ ಆಫ್ ಲೈಫ್. ಇದು ಉಳಿದ ವೃಕ್ಷಗಳಂತೆ ರಾತ್ರಿ ಹೊತ್ತು ಇಂಗಾಲ ಬಿಡುಗಡೆ ಮಾಡುವುದಿಲ್ಲ. ಬೆಳಗ್ಗೆ, ರಾತ್ರಿ ಎಲ್ಲ ಸಮಯವೂ ಆಮ್ಲಜನಕವನ್ನೇ ಹೊರ ಹಾಕುತ್ತದೆ. ನಮ್ಮ ಹಲವಾರು ಗ್ರಹ ದೋಷಗಳಿಗೆ, ಪಿತೃ ದೋಷಗಳಿಗೆ ಅಶ್ವತ್ಥ ಮರವನ್ನು ಪೂಜಿಸುವುದರಲ್ಲಿ ಪರಿಹಾರವಿದೆ. ಆರೋಗ್ಯ ಸಮಸ್ಯೆಗಳಿಗೆ ಇದರ ನಾರು ಬೇರಲ್ಲಿ ಔಷಧವಿದೆ. ಅಶ್ವತ್ಥ ಮರವು ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ, ಪೌರಾಣಿಕವಾಗಿ ಬಹಳಷ್ಟು ಪ್ರಾಮುಖ್ಯತೆ ಪಡೆದಿದೆ.
'ಮೂಲತೋ ಬ್ರಹ್ಮ ರೂಪಾಯ,
ಮಧ್ಯತೋ ವಿಷ್ಣು ರೂಪಿನೆ,
ಅಗ್ರತೋ ಶಿವ ರೂಪಾಯ
ವೃಕ್ಷ ರಾಜಯ ತೇ ನಮಃ'
ಅಂದರೆ ಅಶ್ವತ್ಥ ಮರ(Peepal tree)ದ ಬೇರುಗಳಲ್ಲಿ ಬ್ರಹ್ಮನೂ, ಕಾಂಡದಲ್ಲಿ ವಿಷ್ಣುವೂ, ಎಲೆಗಳಲ್ಲಿ ಶಿವನೂ ವಾಸಿಸುತ್ತಾರೆ.
ಎಲ್ಲ ವೃಕ್ಷಗಳ ರಾಜ ಎನಿಸಿಕೊಂಡಿದೆ ಅಶ್ವತ್ಥ ವೃಕ್ಷ. ಋಗ್ವೇದದಲ್ಲಿ ಈ ವೃಕ್ಷ ದೇವರೆನಿಸಿಕೊಂಡಿದ್ದರೆ, ಅಥರ್ವ ವೇದ(Atharva Veda)ದಲ್ಲಿ ಇದನ್ನು ಎಲ್ಲ ದೇವರುಗಳ ಮನೆ ಎನ್ನಲಾಗುತ್ತದೆ. ಯಜುರ್ ವೇದ(Yajur Veda)ದಲ್ಲಿ, ಪ್ರತಿ ಯಜ್ಞಕ್ಕೂ ಅರಳಿ ಮರ ಬೇಕೇ ಬೇಕು ಎನ್ನಲಾಗುತ್ತದೆ. ಅಂದರೆ ನಾಗರೀಕತೆ ಆರಂಭವಾದಂದಿನಿಂದಲೂ ಅರಳೀ ಮರಕ್ಕೆ ದೈವೀ ಸ್ಥಾನವಿದೆ. ಇದಕ್ಕೆ ವಾಸುದೇವ, ಚೈತನ್ಯ, ವಿಶ್ವವೃಕ್ಷ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಹಿಂದೂ, ಜೈನ, ಬೌದ್ಧರೆಲ್ಲರಿಗೂ ಈ ಮರದ ಮೇಲೆ ಧಾರ್ಮಿಕ ನಂಬಿಕೆಗಳಿವೆ. ಈ ಮರದ ಆಧ್ಯಾತ್ಮಿಕ ಪ್ರಾಮುಖ್ಯತೆ ನೋಡೋಣ.
ಇದು ಹುಟ್ಟು ಸಾವಿನ ಪ್ರತಿನಿಧಿ
ಅರಳೀ ಮರವು ತನ್ನೆಲ್ಲ ಎಲೆಗಳನ್ನೂ ಒಂದೇ ಬಾರಿ ಕೆಡವಿ ಬೋಳಾದ ಉದಾಹರಣೆಯೇ ಇಲ್ಲ. ಒಮ್ಮೆ ಮರದಿಂದ ಎಲೆಗಳು(leaves) ಉದುರಲಾರಂಭಿಸಿದರೆ ಹೊಸ ಎಲೆಗಳೂ ಚಿಗುರಲಾರಂಭಿಸುತ್ತವೆ. ಇದು ಸಮಸ್ತ ಜೀವಿಗಳ ಹುಟ್ಟು ಸಾವಿನ ವೃತ್ತವನ್ನೇ ಪ್ರತಿನಿಧಿಸುತ್ತದೆ.
Donate And Get: ಸಂಕ್ರಾಂತಿ ದಿನ ಇವನ್ನು ದಾನ ಮಾಡಿದ್ರೆ ವರ್ಷವಿಡೀ ದುಡ್ಡಿಗೆ ಎಂದೂ ಬರವಿರೋಲ್ಲ!
ಬ್ರಹ್ಮನ ಜೊತೆ ನಂಟು
ಮೊದಲೇ ಹೇಳಿದಂತೆ ಅರಳೀ ಮರದ ಬೇರುಗಳಲ್ಲಿ ಬ್ರಹ್ಮ(Lord Brahma) ವಾಸಿಸುತ್ತಾನೆ. ಈತ ಹುಟ್ಟು ಸಾವಿಲ್ಲದವ. ಅಲ್ಲದೆ, ಎಲ್ಲ ಆತ್ಮಗಳೂ ಕಡೆಯಲ್ಲಿ ಬ್ರಹ್ಮನಲ್ಲೇ ಲೀನವಾಗುತ್ತವೆ ಎಂಬ ನಂಬಿಕೆ ಇದ. ಇದೇ ಕಾರಣಕ್ಕೆ ಸತ್ತವರ ಅಂತ್ಯಕ್ರಿಯೆ(last rites)ಗಳನ್ನು ಅಶ್ವತ್ಥ ವೃಕ್ಷದ ಕೆಳಗೆ ನಡೆಸಲಾಗುತ್ತದೆ.
Past Life: ಹಿಂದಿನ ಜನ್ಮದಲ್ಲಿ ನೀವೇನಾಗಿದ್ದಿರಿ ಅಂತ ತಿಳ್ಕೋಬೇಕಾ?
ವಿಷ್ಣು(Lord Vishnu)ವಿನ ಮನೆ
ಭಗವದ್ಗೀತೆಯಲ್ಲಿ ಕೃಷ್ಣನು ತಾನೇ ಅಶ್ವತ್ಥ ವೃಕ್ಷ ಎಂದಿದ್ದಾನೆ. ಆತ ಈ ಮರದ ಬೇರು ವಿಷ್ಣುವಾದರೆ, ರೆಂಬೆಕೊಂಬೆಗಳು ನಾರಾಯಣ, ಕಾಂಡವು ಕೇಶವ, ಎಲೆಗಳು ಶ್ರೀ ಹರಿ ಎಂದಿದ್ದಾನೆ. ಹಾಗಾಗಿ, ವಿಷ್ಣುವಿನ ಭಕ್ತರು ಅಶ್ವತ್ಥ ವೃಕ್ಷವನ್ನು ಪೂಜಿಸುತ್ತಾರೆ. 'ಬ್ರಹ್ಮ ಪುರಾಣ'ದಲ್ಲಿ ಕೂಡಾ ವಿಷ್ಣುವು ಅರಳೀ ಮರದ ಕೆಳಗೆ ಹುಟ್ಟುತ್ತಾನೆ ಎಂದು ಹೇಳಲಾಗುತ್ತದೆ.
ಶಾಶ್ವತ ಆಧ್ಯಾತ್ಮ(permanent spirituality)
ಅರಳಿ ಮರವು ಶಾಶ್ವತವಾದುದು ಎನ್ನಲಾಗುತ್ತದೆ. ಇದು ಸಾಯುವುದಿಲ್ಲ. ಪ್ರಕೃತಿಯು ಹೇಗೆ ಶಾಶ್ವತವೋ, ಆತ್ಮ ಹೇಗೆ ಶಾಶ್ವತವೋ ಇದೂ ಹಾಗೆಯೇ. ದೇಹ ಹೋದರೂ ಆತ್ಮವಿರುವಂತೆ ಅಶ್ವತ್ಥ ಮರ ಶಾಶ್ವತವಾಗಿದೆ.
ಸತ್ಯವಾನ್ ಸಾವಿತ್ರಿ(Savitri and Satyavan)
ಮಹಾಭಾರತದಲ್ಲಿ ಸಾವಿತ್ರಿಯ ಕತೆ ಬರುತ್ತದೆ. ಸಾವಿತ್ರಿಯ ಪತಿ ಸತ್ಯವಾನ್ ಅರಳೀ ವೃಕ್ಷದ ಕೆಳಗೆ ಸಾವನ್ನಪ್ಪಿರುತ್ತಾನೆ. ಆಗ ಸಾವಿತ್ರಿಯು ಯಮನನ್ನು ಪ್ರಾರ್ಥಿಸುತ್ತಾ ಅಶ್ವತ್ಥ ವೃಕ್ಷಕ್ಕೆ ಪವಿತ್ರ ದಾರವನ್ನು ಸುತ್ತಲು ಆರಂಭಿಸುತ್ತಾಳೆ. ಕಡೆಗೆ ಯಮನೇ ಸಾವಿತ್ರಿಗೆ ಸೋತು ಸತ್ಯವಾನ್‌ಗೆ ಜೀವ ಮರಳಿಸುತ್ತಾನೆ.