Asianet Suvarna News Asianet Suvarna News

ದುಡ್ಡು ಅಶಾಶ್ವತ, ಯಾವಾಗ ಬೇಕಿದ್ರೂ ದುಡೀಬಹ್ದು ಅನ್ನೋ ರಾಶಿಯವರು ಇವ್ರು!

ಜೀವನದಲ್ಲಿ ಒಬ್ಬೊಬ್ಬರದು ಒಂದೊಂದು ರೀತಿಯ ಆದ್ಯತೆ. ಕೆಲವು ಹಣಕ್ಕೆ ಸಿಕ್ಕಾಪಟ್ಟೆ ಪ್ರಾಮುಖ್ಯತೆ ನೀಡಿದರೆ ಕೆಲವರು ಸ್ವಲ್ಪವೂ ಆದ್ಯತೆ ನೀಡುವುದಿಲ್ಲ. ಕೆಲವರು ಹಣದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರೆ, ಕೆಲವರಿಗೆ ಹಣವೆಂದರೆ ಅಲರ್ಜಿ. ಕೆಲವೇ Zodiac Sign ಜನರು ಮಾತ್ರ ಹಣವೆನ್ನುವುದು ಕ್ಷಣಿಕ ಎನ್ನುವ ಸತ್ಯವನ್ನು ಅರಿತಿರುತ್ತಾರೆ.

 

Some people says money is fleeting and can be earn later sum
Author
First Published Jun 19, 2023, 5:01 PM IST | Last Updated Jun 19, 2023, 5:39 PM IST

ಕೆಲವರಿಗೆ ಜೀವನದಲ್ಲಿ ದುಡ್ಡೇ ಮುಖ್ಯ. ಸಾಕಷ್ಟು ಹಣ ಗಳಿಸಲು ಸಿಕ್ಕಾಪಟ್ಟೆ ಶ್ರಮ ಪಡುತ್ತಾರೆ. ಬ್ಯಾಂಕ್‌ ಖಾತೆಯಲ್ಲಿ ಸ್ವಲ್ಪವಾದರೂ ಹಣವಿದ್ದರೆ ಮಾತ್ರ ನೆಮ್ಮದಿಯಾಗಿರುತ್ತಾರೆ. ದುಡ್ಡಿಲ್ಲದಿದ್ದರೆ ಚಡಪಡಿಕೆ ಅನುಭವಿಸುತ್ತಾರೆ, ತಾವೂ ಕಿರಿಕಿರಿ ಮಾಡಿಕೊಂಡು ಇನ್ನೊಬ್ಬರಿಗೂ ಸಮಸ್ಯೆ ತಂದೊಡ್ಡುತ್ತಾರೆ. ಆದರೆ, ಕೆಲವು ಜನ ಹಣಕ್ಕೆ ಬೆಲೆ ನೀಡಿದರೂ ಅದು ಕ್ಷಣಿಕ ಎನ್ನುವ ಸತ್ಯವನ್ನು ಅರಿತಿರುತ್ತಾರೆ. ದುಡ್ಡು ಅಶಾಶ್ವತ, ಅದನ್ನು ಎಂದಿಗೆ ಬೇಕಿದ್ದರೂ ದುಡಿಯಬಹುದು ಎನ್ನುವುದು ಅವರ ಭಾವನೆ. ಹೀಗಾಗಿ, ಅವರು ಹಣದ ಹಿಂದೆ ಓಡುವುದಿಲ್ಲ. ತಮ್ಮ ಬಳಿ ಹಣವಿರಲಿ, ಇಲ್ಲದಿರಲಿ ಅವರಿಗೆ ತಮ್ಮ ಕುರಿತಾದ ವಿಶ್ವಾಸ ಕಡಿಮೆ ಆಗುವುದಿಲ್ಲ. ಕೆಲವರು ಹಣವಿಲ್ಲದಿರುವಾಗ ಕೀಳರಿಮೆ ಅನುಭವಿಸುತ್ತಾರೆಲ್ಲವೇ? ಈ ಸಮಸ್ಯೆ ಇವರಿಗೆ ಇರುವುದೇ ಇಲ್ಲ. ಬದಲಿಗೆ ಅವರು ತಮ್ಮ ಶಕ್ತಿಯನ್ನು ಬೇರೆಡೆ ಹರಿಸುತ್ತಾರೆ. ತಮ್ಮ ಸಾಮರ್ಥ್ಯ ಹೆಚ್ಚಳದ ಕಡೆಗೆ ಗಮನ ನೀಡುತ್ತಾರೆ, ಹೆಚ್ಚು ಶಖ್ತಿವಂತರಾಗಲು ಯತ್ನಿಸುತ್ತಾರೆ. ವೃತ್ತಿಯ ಕುರಿತು ಅಗಾಧ ಪ್ರೀತಿ ಬೆಳೆಸಿಕೊಳ್ಳುತ್ತಾರೆ. ಆದರೂ, ಹಣವೆನ್ನುವುದು ಎಷ್ಟು ಪವರ್‌ ಫುಲ್‌ ಎಂದು ಅರಿತರೂ ಅದಕ್ಕಾಗಿ ಹೋರಾಡುವುದಿಲ್ಲ. ಅದನ್ನು ಜೀವನದ ಯಾವುದೇ ಹಂತದಲ್ಲಿ ಗಳಿಕೆ ಮಾಡಬಹುದು ಎನ್ನುತ್ತಾರೆ. ಕೆಲವೇ ರಾಶಿಗಳ ಜನರಲ್ಲಿ ಇಂತಹ ಗುಣ ಕಾಣಬಹುದು. 

•    ಮೀನ (Pisces)
ತುಂಬಾ ಸೂಕ್ಷ್ಮ (Sensitive) ಜನರಾಗಿ ಕಂಡುಬಂದರೂ ಮೀನ ರಾಶಿಯವರು ಹಣದ (Money) ವಿಚಾರಕ್ಕೆ ಬಂದರೆ ಸಾಕಷ್ಟು ಉದಾರ (Generous) ಭಾವನೆ ಹೊಂದಿರುತ್ತಾರೆ. ಹಣಕಾಸಿನ ಸಮಸ್ಯೆಯಲ್ಲಿರುವವರಿಗೆ ಹೇಗೆ ನೆರವು (Help) ನೀಡಬೇಕು ಎನ್ನುವುದರ ಬಗ್ಗೆ ಜ್ಞಾನ ಹೊಂದಿರುತ್ತಾರೆ. ಅಗತ್ಯವಿರುವಾಗ ಸ್ನೇಹಿತರಿಗೆ ಚಿಕ್ಕಪುಟ್ಟ ಸಾಲ (Lend) ನೀಡುತ್ತಾರೆ. ಹಣದ ವಿಚಾರಕ್ಕೆ ಮೀನ ರಾಶಿಯರನ್ನು ಚೆನ್ನಾಗಿ ನಂಬಬಹುದು. ಶ್ರಮದಿಂದ ಕೆಲಸ ಮಾಡುವುದೊಂದೇ ಹಣ ಗಳಿಕೆಯ ಮಾರ್ಗ ಎಂದು ಭಾವಿಸುವ ಇವರು, ಹಣಕ್ಕಾಗಿ ಯಾವುದೇ ರೀತಿಯಲ್ಲಿ ರಿಸ್ಕ್‌ ತೆಗೆದುಕೊಳ್ಳುವುದಿಲ್ಲ. ಹಣವೆನ್ನುವುದು ಕ್ಷಣಿಕ (Fleeting) ಎನ್ನುವ ಭಾವನೆ ಹೊಂದಿದ್ದು, ಸುರಕ್ಷಿತವಾಗಿರಲು ಬಯಸುತ್ತಾರೆ.

Health Astrology: ಈ ಗ್ರಹಗಳು ಬೊಜ್ಜು ಹೆಚ್ಚಿಸುತ್ತವೆ, ಕರಗಿಸೋಕೆ ಹೀಗೆ ಮಾಡಿ..

•    ಕರ್ಕಾಟಕ (Cancer)
ತಮ್ಮದೇ ದುಡಿಮೆಯ (Income) ಹಣದ ಬಗ್ಗೆ ಕರ್ಕಾಟಕ ರಾಶಿಯ ಜನ ಸಾಕಷ್ಟು ಸುರಕ್ಷಿತ (Safe) ಮತ್ತು ರಕ್ಷಣಾತ್ಮಕವಾಗಿ ವರ್ತಿಸುತ್ತಾರೆ. ಆದರೆ, ಬೇರೆಯವರು ನೀಡುವ ಹಣದ ಬಗ್ಗೆ ಮೋಹ (Passion) ಹೊಂದಿರುವುದಿಲ್ಲ. ಯಾರಾದರೂ ಇವರ ಹೆಸರಿನಲ್ಲಿ ಹಣ ನೀಡಿದರೂ ಅದನ್ನು ಪ್ರಾಯೋಗಿಕವಾಗಿ ನೋಡುತ್ತಾರೆ. ಪ್ರಾಮಾಣಿಕವಾಗಿ ಹಂಚಿಕೆ ಮಾಡುತ್ತಾರೆ. ಚಾರಿಟಿಗಳಿಗೆ ದಾನ ನೀಡಬಹುದು, ಮನೆಯವರ ಕಷ್ಟ ಪರಿಹರಿಸಲು ನೀಡಬಹುದು. ದೊರೆತ ಹಣಕ್ಕೆ ತಾವೇ ಬಾಸ್‌ ಎನ್ನುವಂತೆ ಎಂದಿಗೂ ವರ್ತಿಸುವುದಿಲ್ಲ. ಇತರರಿಗೆ ಯಾವುದೇ ರೀತಿಯಲ್ಲೂ ಕೆಟ್ಟದ್ದನ್ನು ಮಾಡಲು ಇಷ್ಟಪಡದ ಕರ್ಕಾಟಕ ರಾಶಿಯ ಜನ ಹಣದ ವಿಚಾರದಲ್ಲೂ ಅಷ್ಟೆ ಪ್ರಾಮಾಣಿಕತೆ (Prompt) ತೋರುತ್ತಾರೆ.

•    ತುಲಾ (Libra)
ಹಣ ಅಶಾಶ್ವತ, ಹೆಚ್ಚು ದಿನ ಬಾಳಿಕೆ ಬರುವುದಿಲ್ಲ ಎನ್ನುವುದು ತುಲಾ ರಾಶಿಯವರ ನಂಬಿಕೆ. ಹೀಗಾಗಿ, ಕಷ್ಟಪಟ್ಟು (Hard Work) ದುಡಿದ ಹಣವನ್ನು ಖರ್ಚು (Spend) ಮಾಡಲು ಹಿಂದೆಮುಂದೆ ನೋಡುವುದಿಲ್ಲ. ಸಹೋದ್ಯೋಗಿಗಳು, ಸ್ನೇಹಿತರಿಗೆ ಹಣ ನೀಡಲು ಬೇಸರ ಪಟ್ಟುಕೊಳ್ಳುವುದಿಲ್ಲ. ಹಣವನ್ನು ನಿಭಾಯಿಸಲು ಕಷ್ಟಪಡುತ್ತಾರೆ. ಆದರೆ, ಪ್ರಾಮಾಣಿಕತೆ ತೋರುತ್ತಾರೆ. 

ಹಾಸಿಗೆ ಮೇಲೆ ಕುಳಿತು ತಿಂತೀರಾ? ಇದ್ನೆಲ್ಲ ಫೇಸ್ ಮಾಡ್ಬೇಕಾಗತ್ತೆ!

•    ಸಿಂಹ (Leo)
ಸಿಂಹ ರಾಶಿಯವರ ಪಯಣದಲ್ಲಿ ಹಣ ಎನ್ನುವುದು ಗಮ್ಯವಲ್ಲ. ಹಣವೊಂದೇ ತಮ್ಮನ್ನು ಚೆನ್ನಾಗಿರಲು ಸಾಧ್ಯವಿಲ್ಲ ಎನ್ನುವ ಸತ್ಯ ಅರಿತಿರುತ್ತಾರೆ. ಹಣವೆನ್ನುವುದು ಕೇವಲ ಬಟ್ಟೆ (Clothes), ಆಹಾರ (Food), ವಾಹನ (Vehicle), ಮನೆ ಇತ್ಯಾದಿ ಅಗತ್ಯತೆಗಳನ್ನು ಪೂರೈಸುವ ಸಾಧನೆ ಎಂದು ಭಾವಿಸುತ್ತಾರೆ. ಆದರೂ, ಪ್ರಸ್ತುತ ಆದಾಯದ ಬಗ್ಗೆ ಮಾತ್ರ ಇವರ ಗಮನವಿರುವುದಿಲ್ಲ. ಭವಿಷ್ಯದ (Future) ಬಗೆಗೂ ಯೋಚಿಸುತ್ತಾರೆ. ಹಣದೊಂದಿಗೆ ಅತ್ಯದ್ಭುತ ಸಂಬಂಧ (Relation) ಹೊಂದಿರುತ್ತಾರೆ. ಆರೋಗ್ಯಪೂರ್ಣ ವಿಧಾನದಲ್ಲಿ ಅಪಾರ ಹಣ (Wealth) ಹೊಂದಲು ಬಯಸುತ್ತಾರೆ. ಮತ್ತೊಬ್ಬರ ಹಣಕ್ಕೆ ಆಸೆ ಪಡುವುದಿಲ್ಲ. 

Latest Videos
Follow Us:
Download App:
  • android
  • ios