Astrology Tips : ಸ್ವಸ್ತಿಕ ಚಿಹ್ನೆಯ ನಾಲ್ಕು ಭುಜಗಳ ಅರ್ಥ ಏನು ಗೊತ್ತಾ?

ಹಿಂದೂ ಧರ್ಮದಲ್ಲಿ ಓಂ, ಸ್ವಸ್ತಿಕ  ಹೀಗೆ ಅನೇಕ ಚಿಹ್ನೆಗಳನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಅನೇಕ ಮನೆಯಲ್ಲಿ ನೀವು ಸ್ವಸ್ತಿಕ ಚಿಹ್ನೆಯನ್ನು ನೋಡ್ಬಹುದು. ಅದನ್ನು ಬಿಡಿಸುವಾಗ ನಾಲ್ಕು ಭುಜ ಸಮನಾಗಿಬೇಕು ಎನ್ನಲಾಗುತ್ತದೆ. ಇದಕ್ಕೆ ಕಾರಣವಿದೆ. 
 

Signs Of Swastika Arms

ಹಿಂದೂ ಧರ್ಮದಲ್ಲಿ ಒಂದೊಂದು ದೇವರಿಗೆ ಒಂದೊಂದು ರೀತಿಯ ಮಂತ್ರಗಳು, ಮಂಡಲಗಳು, ಚಿಹ್ನೆಗಳು ಇವೆ. ಆಯಾ ದೇವರ ಪೂಜೆ ಕೈಗೊಳ್ಳುವಾಗ ಅದಕ್ಕೆ ಸಂಬಂಧಪಟ್ಟ ಮಂಡಲಗಳನ್ನು ಹಾಕಿ, ಮಂತ್ರಗಳನ್ನು ಪಠಿಸಲಾಗುತ್ತದೆ. ಹಾಗೆ ಪ್ರತಿನಿತ್ಯ ಬಾಗಿಲಿಗೆ ರಂಗೋಲಿ ಹಾಕುವ ಪದ್ಧತಿಯೂ ಹಿಂದೂ ಧರ್ಮದಲ್ಲಿದೆ. ಲಕ್ಷ್ಮಿ ಮನೆಯೊಳಗೆ ಬರುವ ದಾರಿಯಲ್ಲಿ ಹೀಗೆ ರಂಗೋಲಿ ಹಾಕಬೇಕು ಎಂಬ ನಂಬಿಕೆ ಹಿಂದಿನಿಂದಲೂ ನಡೆದುಬಂದಿದೆ.

ಸಾಮಾನ್ಯವಾಗಿ ಬಾಗಿಲಿಗೆ ಸ್ವಸ್ತಿಕ (Swastik) ಚಿಹ್ನೆಯ ರಂಗೋಲಿ (Rangoli) ಯನ್ನು ಬಿಡಿಸುತ್ತಾರೆ. ಹೊಸ ಮನೆಯ ಗೃಹ ಪ್ರವೇಶದ ಸಮಯದಲ್ಲಿ ಕೂಡ ಎಲ್ಲ ಕಡೆ ಸ್ವಸ್ತಿಕ ಚಿಹ್ನೆಯನ್ನು ಹಾಕುತ್ತಾರೆ. ಇದರ ಹೊರತಾಗಿ ಅನೇಕ ಹೋಮ ಹವನಗಳಲ್ಲಿ ಕೂಡ ಸ್ವಸ್ತಿಕ ಚಿಹ್ನೆಯನ್ನು ಬರೆಯಲಾಗುತ್ತದೆ. ಮಂಗಲ ಕಾರ್ಯಗಳಲ್ಲಿ ಈ ಚಿಹ್ನೆಯನ್ನು ಮನೆಯಲ್ಲಿ ಹಾಕಿದರೆ ಶುಭ ಕಾರ್ಯಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಹಿಂದೆ ಋಷಿ (Sage) ಮುನಿಗಳು ತಮ್ಮ ತಪಶಕ್ತಿಯಿಂದ ಈ ಸ್ವಸ್ತಿಕ ಚಿಹ್ನೆಯನ್ನು ನಿರ್ಮಾಣ ಮಾಡಿದರು. ನಮ್ಮ ದೇಶದಲ್ಲಿ ಹುಟ್ಟಿದ ಈ ಚಿಹ್ನೆಗೆ ಸುಮಾರು ಆರು ಸಾವಿರ ವರ್ಷಗಳ ಇತಿಹಾಸವಿದೆ. ಸ್ವಸ್ತಿಕ ಚಿಹ್ನೆಯನ್ನು ವಿಷ್ಣು (Vishnu) ವಿನ ಆಸನದ ಪ್ರತೀಕ, ಲಕ್ಷ್ಮಿಯ ರೂಪ, ಗಣೇಶನ ಚಿಹ್ನೆ ಎಂದು ಕೂಡ ಹೇಳಲಾಗುತ್ತೆ. ಸ್ವಸ್ತಿಕ ಚಿಹ್ನೆಯನ್ನು ಚಂದನದಿಂದ ಬರೆದರೆ ಗ್ರಹ ದೋಷಗಳೆಲ್ಲ ನಿವಾರಣೆಯಾಗುತ್ತವೆ, ಸಿಂಧೂರದಿಂದ ಬರೆದರೆ ಸೌಭಾಗ್ಯ ದೊರಕುತ್ತೆ ಮತ್ತು ಕುಂಕುಮದಿಂದ ಬರೆದರೆ ಲಕ್ಷ್ಮಿಯ ಕೃಪೆ ನಮ್ಮ ಮೇಲಿರುತ್ತೆ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಪೂಜೆಯ ಮೊದಲು ಕಳಶ, ತೆಂಗಿನಕಾಯಿ, ಮನೆಯ ಮುಖ್ಯ ಬಾಗಿಲು ಮುಂತಾದೆಡೆ ಸ್ವಸ್ತಿಕ ಚಿಹ್ನೆಯನ್ನು ಹಾಕಲಾಗುತ್ತದೆ.

ರಾಶಿಗನುಗುಣವಾಗಿ ವಿದ್ಯಾರ್ಥಿಗಳು ಯಾವ ವಿಷಯ ಆರಿಸಿಕೊಳ್ಳಬೇಕು?

ನಿಮಗೆಲ್ಲ ತಿಳಿದ ಹಾಗೆ ಸ್ವಸ್ತಿಕದಲ್ಲಿ ನಾಲ್ಕು ಭುಜಗಳಿರುತ್ತೆ. ಇದು ಕೇವಲ ಒಂದು ಸಾಧಾರಣ ಚಿಹ್ನೆಯಲ್ಲ ಇದನ್ನು ಗಣಿತ ಮತ್ತು ಧರ್ಮ ಎರಡರ ಆಧಾರದ ಮೇಲೂ ಮಾಡಲಾಗಿದೆ. ಈ ನಾಲ್ಕು ಭುಜಗಳು ಹಿಂದೂ ಧರ್ಮ ಮತ್ತು ವಾಸ್ತು ಶಾಸ್ತ್ರದಲ್ಲಿ ಮಹತ್ವದ ಸ್ಥಾನ ಹೊಂದಿದ ನಾಲ್ಕು ದಿಕ್ಕುಗಳನ್ನು ಪ್ರತಿಬಿಂಬಿಸುತ್ತದೆ. ಈ ನಾಲ್ಕು ಭುಜಗಳು ಸಂಧಿಸುವ ಜಾಗ ಸೂರ್ಯನನ್ನು ಸೂಚಿಸುತ್ತದೆ. ಸ್ವಸ್ತಿಕವನ್ನು ಸರಿಯಾದ ದಿಕ್ಕಿನಲ್ಲಿ ಮಾಡದಿದ್ದರೆ ಅದು ಅಶುಭವಾಗುತ್ತದೆ. ಮನೆಯ ಮುಂಬಾಗಿಲಿನಲ್ಲಿ ಸ್ವಸ್ತಿಕ ಚಿಹ್ನೆಯಿದ್ದರೆ ದುಷ್ಟಶಕ್ತಿಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ ಎಂಬ ನಂಬಿಕೆಯಿದೆ. ಮನೆಯ ಬಾಗಿಲಿನ ಮೇಲೆ ಅಥವಾ ದೇವರ ಕೋಣೆಯಲ್ಲಿನ ಸ್ವಸ್ತಿಕ ಚಿಹ್ನೆಗಳಿಗೆ ದೇವರ ತೀರ್ಥ, ಗಂಗಾಜಲ, ಹಸುವಿನ ಗಂಜಲ, ಅಕ್ಷತೆಯನ್ನು ಆಗಾಗ ಚಿಮುಕಿಸುತ್ತಿದ್ದರೆ ಅದರ ಶಕ್ತಿ ಹೆಚ್ಚುತ್ತದೆ. ಕೆಲವರು ಸ್ವಸ್ತಿಕವನ್ನು ಹಿತ್ತಾಳೆ ಅಥವಾ ಪಂಚಲೋಹದಿಂದ ಮಾಡಿ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಹೀಗೆ ಮಾಡಿಟ್ಟುಕೊಂಡ ಲಾಂಛನದ ಮೇಲೆ ಧೂಳು ಕೂರದಂತೆ ಹಾಗೂ ಅದು ವಿಘ್ನವಾಗದಂತೆ ಎಚ್ಚರವಹಿಸಬೇಕು.

ಬ್ರೇಕಪ್ ಬಳಿಕ ನೋವು ಮರೆತು ಮುಂದೆ ಸಾಗಲು ಇಲ್ಲಿವೆ Vastu tips

ಸ್ವಸ್ತಿಕ ಚಿಹ್ನೆಯ ಶುಭ ಫಲಗಳು : 

• ಸ್ವಸ್ತಿಕ ಚಿಹ್ನೆಯಲ್ಲಿ ಮೇಲ್ಮುಖವಾಗಿರುವ ಗೆರೆಗಳು ನಾಲ್ಕೂ ದಿಕ್ಕಿನಲ್ಲಿ ಧನ ಸಂಪತ್ತಿನ ಬಾಗಿಲನ್ನು ತೆರೆಯುತ್ತದೆ. ಇದು ಸೌಭಾಗ್ಯದ ವೃದ್ಧಿಯ ಸಂಕೇತವೂ ಆಗಿದೆ. ಸ್ವಸ್ತಿಕ ಚಿಹ್ನೆ ಅಭಿವೃದ್ಧಿಯ ಸಂಕೇತವೂ ಆಗಿದೆ.
• ಮನೆಯ ಮುಖ್ಯ ಬಾಗಿಲಲ್ಲಿ ಹಾಕುವ ಸ್ವಸ್ತಿಕ ಚಿಹ್ನೆ ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಇದರಿಂದ ವಾಸ್ತುದೋಷಗಳು ಕೂಡ ದೂರವಾಗುತ್ತವೆ.
• ಮನೆಯ ಬಾಗಿಲ ಮೇಲೆ ಶುಭ-ಲಾಭ ಮತ್ತು ಸ್ವಸ್ತಿಕ ಚಿಹ್ನೆಯಿದ್ದರೆ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆ.
• ಈ ಮಂಗಳಕರ ಚಿಹ್ನೆಯಿಂದ ಲಕ್ಷ್ಮಿದೇವಿಯ ಅನುಗ್ರಹ ಯಾವಾಗಲೂ ಇರುತ್ತೆ.
• ದೇವರ ಕೋಣೆಯಲ್ಲಿ ಮತ್ತು ವಾರ್ಡ್ ರೋಬಿನಲ್ಲಿ ಸ್ವಸ್ತಿಕ ಚಿಹ್ನೆ ಬಿಡಿಸುವುದರಿಂದ ಒಳ್ಳೆಯ ಫಲ ದೊರಕುತ್ತದೆ. ವಾರ್ಡ್ ರೋಬ್ ನಲ್ಲಿ ಸ್ವಸ್ತಿಕ ಚಿಹ್ನೆ ಇರುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ.
• ಸ್ವಸ್ತಿಕ ಚಿಹ್ನೆ ಆರ್ಥಿಕ ಕಷ್ಟಗಳನ್ನು ಹೋಗಲಾಡಿಸುತ್ತದೆ.
 

Latest Videos
Follow Us:
Download App:
  • android
  • ios