- ರಾಘವೇಂದ್ರ ಅಗ್ನಿಹೋತ್ರಿ

ಈಗ ಮತ್ತೆ ಅಗ್ನಿಹೋತ್ರ ಮುನ್ನೆಲೆಗೆ ಬಂದಿದೆ. ಕೊರೋನ ವೈರಸ್ ಹೊಡೆದೋಡಿಸಲು ಕೆಲವರು ಈಗ ಅಗ್ನಿಹೋತ್ರದ ಮೊರೆ ಹೋಗುತ್ತಿದ್ದಾರೆ. ಹಾಗಿದ್ದರೆ ಅಗ್ನಿಹೋತ್ರ ಎಂದರೇನು? ಅದರ ಮಹತ್ವವೇನು ಎಂಬುದನ್ನು  ಅರಿಯೋಣ.

ಅಗ್ನಿಹೋತ್ರ ಮಾಡುವುದು ಹೇಗೆ?
ಅಗ್ನಿಹೋತ್ರವನ್ನು ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ಮಾಡಬಹುದು. ಅಗ್ನಿಹೋತ್ರ  ಮಾಡುವ ವಿಧಾನವನ್ನು ಒಮ್ಮೆ  ಅರಿತರೆ ಯಾರೂ ಮಾಡಬಹುದು.
ಸೂರ್ಯೋದಯ (ಮುಂಜಾನೆ)ಮತ್ತು ಸೂರ್ಯಸ್ತದ (ಸಾಯಂಕಾಲ) ಸಮಯದಲ್ಲಿ ಅಗ್ನಿಹೋತ್ರ ಮಾಡಬೇಕು. 

ಬೇಕಾಗುವ ಸಾಮಗ್ರಿ
ಈ ಹೋಮಕ್ಕೆ ತಾಮ್ರದ ಹೋಮಕುಂಡ, ಬೆರಣಿ, ಶುದ್ಧ ತುಪ್ಪ, ಪಾಲಿಶ್ ಮಾಡಿರದ ಕೆಂಪು ಬಣ್ಣದ ಆಕ್ಕಿ ಬೇಕಾಗುತ್ತದೆ.

ಅಗ್ನಿಹೋತ್ರ ಮಾಡುವುದರಿಂದ ದುಷ್ಟ ಶಕ್ತಿಗಳ ಪ್ರಭಾವ ನಾಶವಾಗುತ್ತದೆ. ಮನೆಯಲ್ಲಿ  ಸಕಾರಾತ್ಮಕ ಶಕ್ತಿಯ ಪ್ರಭಾವ ತುಂಬಿರುತ್ತದೆ. ಎಲ್ಲರ ಆರೋಗ್ಯ ಉತ್ತಮವಾಗಿರುತ್ತದೆ. ಅನಾರೋಗ್ಯ ಪೀಡಿತ ರು ಈ ಹೋಮದಲ್ಲಿ ಭಾಗಿಯಾದರೆ ಅವರ ಆರೋಗ್ಯ ಸುಧಾರಿಸುತ್ತದೆ. ಏಕಾಗ್ರತೆ, ನೆಮ್ಮದಿ ಸುಖ, ಶಾಂತಿ ಹೆಚ್ಚುತ್ತದೆ ಎಂಬುದು ಅದನ್ನ ಮಾಡುತ್ತಿರುವವರ ಅನುಭವ ಹೇಳುತ್ತದೆ.

 ಭೋಪಾಲ್ ಅನಿಲ ದುರಂತದ ಸಂಭವಿಸಿದಾಗ ಸುಮಾರು 10 ಕಿ.ಮೀ ವರೆಗೆ ವಾಸವಿದ್ದ ಎಲ್ಲ ಜನರು ಸಾವೀಗಿಡಾದರು. ಆದರೆ ಕೇವಲ 1 ಕಿ.ಮೀ ಅಂತರದಲ್ಲಿದ್ದ  ನಾಲ್ಕು  ಕುಟುಂಬಗಳಿಗೆ  ಏನೂ ಆಗಿರಲಿಲ್ಲ. ಈ ಬಗ್ಗೆ ಅಧ್ಯಯನ  ನಡೆಸಿದಾಗ ತಿಳಿದು ಬಂದ ಸತ್ಯವೇನೆಂದರೆ ಅವರ ಮನೆಯಲ್ಲಿ ದಿನ ನಿತ್ಯ 2 ಹೊತ್ತು ಅಗ್ನಿ ಹೋತ್ರ ಹೋಮ ಮಾಡುತ್ತಿದ್ದಾರೆಂದು ತಿಳಿಯಿತು. 
HIV ಪೀಡಿತರ ಮೇಲೂ ಕೆಲವೆಡೆ ಈ ಪ್ರಯೋಗ ನಡೆದಿದೆ.

ಹಿಂದೂ ಧರ್ಮದಲ್ಲಿ ಆಚರಣೆಯಲ್ಲಿರೋ ಪದ್ಧತಿಗಳ ವೈಜ್ಞಾನಿಕ ಹಿನ್ನೆಲೆ

ಅಗ್ನಿಹೋತ್ರ ಮಾಡುವ ವಿಧಾನ
ಅಗ್ನಿ ಹೋತ್ರದ ವಿಧಾನ ಅಂದರೆ ಸಣ್ಣದಾದ ತಾಮ್ರದ ಹೋಮಕುಂಡಕ್ಕೆ ದೇಶಿಯ ದನದ ಒಣ ಸಗಣಿ (ಬೆರಣಿ), ದನದ ತುಪ್ಪ ಹಾಕಿ ಅಗ್ನಿ ಸ್ಪರ್ಶ ಮಾಡಬೇಕು. ಇದನ್ನು ಬೆಳಿಗ್ಗೆ ಸೂರ್ಯೋದಯದ ಮೊದಲು, ಸಂಜೆ ಸೂರ್ಯಾಸ್ತದ ನಂತರ ಮಾಡಬೇಕು.
 ತಾಮ್ರ ಬಿಸಿಯಾದಾಗ ಮತ್ತು ಸಗಣಿ, ದೇಶೀಯ ತುಪ್ಪ ಅಕ್ಕಿ ಸುಟ್ಟಾಗ ಬಿಡುಗಡೆಯಾಗುವ ಅನಿಲ ನಮ್ಮ ದೇಹ ಪ್ರವೇಶಿಸಿ ನಮ್ಮ ದೇಹದ ನರಗಳೆಲ್ಲ ಶುದ್ಧವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ಮಾನಸಿಕ ಒತ್ತಡ ನಿವಾರಿಸುತ್ತೆ ಅಗ್ನಿಹೋತ್ರ

ಕ್ಯಾನ್ಸರ್ ನಿಂದ ಹಿಡಿದು ತಲೆನೋವಿನ ತನಕ 5000 ಕಾಯಿಲೆಗಳಿಗೆ ದನದಲ್ಲಿ ಔಷಧಿ ಇದೆ ಎಂದು ಆಯುರ್ವೇದ ತಿಳಿಸುತ್ತದೆ.
ಇತ್ತೀಚೆಗೆ ದಕ್ಷಿಣ ಕನ್ನಡ ಪುತ್ತೂರು ಸೇವಾ ಭಾರತಿ ಸಹಯೋಗದಲ್ಲಿ ಗೂಗಲ್ ಮೀಟ್ ಮೂಲಕ ಅಗ್ನಿಹೋತ್ರ ತರಬೇತಿ, ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು. ಅದರಲ್ಲಿ ರಾಜ್ಯದ ನಾನಾ ಭಾಗಗಳಿಂದ 60 ಮಂದಿ ಆಸಕ್ತರು ಪಾಲ್ಗೊಂಡಿದ್ದರು.
 ಮುಂದಿನ ದಿನಗಳಲ್ಲಿ ಮತ್ತೆ ಆಯೋಜನೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಪ್ರವೀಣ ಸರಳಾಯ ಅವರನ್ನು 9591176337 ನಂಬರಲ್ಲಿ ಸಂಪರ್ಕಿಸಬಹುದು.

ವಿಡಿಯೋ ಕೃಪೆ: ರಾಜನಾರಾಯಣ ಮಳಿ, ಪುತ್ತೂರು