Vermilion Remedies: ಹಣಕಾಸಿನ ಸಮಸ್ಯೆಗೆ ಕುಂಕುಮದ ಪರಿಹಾರ
ಯಶಸ್ಸು, ಹಣ, ಗೌರವವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಎಲ್ಲರೂ ಪ್ರತಿ ದಿನ ಕುಂಕುಮವನ್ನೂ ಬಳಕೆ ಮಾಡ್ತಾರೆ. ಆದ್ರೆ ದಿನನಿತ್ಯ ಬಳಸುವ ಕುಂಕುಮದಲ್ಲಿಯೇ ಈ ಎಲ್ಲದಕ್ಕೂ ಪರಿಹಾರವಿದೆ ಎಂಬುದು ಅನೇಕರಿಗೆ ತಿಳಿದಿಲ್ಲ.
ಪೂಜೆ (Worship) ಎಂಬ ವಿಷ್ಯ ಬಂದಾಗ ಅಲ್ಲಿ ಮೊದಲು ಅವಶ್ಯಕತೆಯಿರುವುದು ಕುಂಕುಮ (Vermilion). ಹಿಂದೂ ಧರ್ಮ (Hinduism) ದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಧಾರ್ಮಿಕ ಹಾಗೂ ಸಾಮಾಜಿಕ ಎರಡೂ ಕಾರ್ಯಗಳಿಗೆ ಕುಂಕುಮ ಬಳಸಲಾಗುತ್ತದೆ. ಕುಂಕುಮವನ್ನು ದೇವರ (God ) ಪೂಜೆಯಿಂದ ಹಿಡಿದು ತಾಂತ್ರಿಕ ವಿದ್ಯೆಯವರೆಗೆ ಎಲ್ಲದಕ್ಕೂ ಬಳಸಲಾಗುತ್ತದೆ. ವಿವಾಹಿತ ಮಹಿಳೆಯರು ಹಣೆಯ ಮೇಲೆ ಸಿಂಧೂರವನ್ನಿಟ್ಟುಕೊಳ್ತಾರೆ. ಇದರ ಹಿಂದೆ ಧಾರ್ಮಿಕ ಹಾಗೂ ವೈಜ್ಞಾನಿಕ ಎರಡೂ ಕಾರಣಗಳಿವೆ. ಮುತ್ತೈದೆ ಸಂಕೇತ ಕುಂಕುಮ ಎನ್ನಲಾಗುತ್ತದೆ. ಬಹುತೇಕ ಎಲ್ಲ ದೇವರ ಪೂಜೆಗೆ ಕುಂಕುಮ ಬಳಸಲಾಗುತ್ತದೆ. ಹನುಮಂತನ ಪೂಜೆಗೆ ಕಿತ್ತಳೆ ಬಣ್ಣದ ಕುಂಕುಮವನ್ನು ವಿಶೇಷವಾಗಿ ಬಳಸಲಾಗುತ್ತದೆ. ತಂತ್ರ - ಮಂತ್ರಗಳಲ್ಲೂ ಸಿಂಧೂರವನ್ನು ಬಳಸಲಾಗುತ್ತದೆ. ಕುಂಕುಮದಿಂದ ಮಾಡುವ ಅನೇಕ ತಂತ್ರಗಳಿಂದ ಜೀವನದ ತೊಂದರೆಗಳು ನಿವಾರಣೆಯಾಗುತ್ತವೆ. ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗಿದೆ. ಕುಂಕುಮದಿಂದ ಯಾವ ಉಪಾಯ ಮಾಡಿದ್ರೆ ಏನು ಲಾಭ ಎಂಬುದನ್ನು ನಾವಿಂದು ಹೇಳ್ತೇವೆ.
ಸಮಸ್ಯೆಗಳ ನಿವಾರಣೆ : ಜೀವನದ ಎಲ್ಲ ತೊಂದರೆಗಳನ್ನು ಬಗೆಹರಿಸಿಕೊಳ್ಳಲು ಮತ್ತು ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಕುಂಕುಮದ ಈ ಉಪಾಯಗಳನ್ನು ಮಾಡಬಹುದು. ಐದು ಮಂಗಳವಾರಗಳ ಕಾಲ ಮತ್ತು ಐದು ಶನಿವಾರಗಳವರೆಗೆ ಹನುಮಂತನಿಗೆ ಮಲ್ಲಿಗೆ ಎಣ್ಣೆ ಮತ್ತು ಕುಂಕುಮವನ್ನು ಅರ್ಪಿಸಬೇಕು. ಬೆಲ್ಲ ಮತ್ತು ಬೇಳೆ ಪ್ರಸಾದವನ್ನು ಸಹ ವಿತರಿಸಬೇಕು. ಇದ್ರಿಂದ ಸಮಸ್ಯೆಗಳು ಕೊನೆಗಾಣುತ್ತವೆ.
ವಾಸ್ತು ದೋಷ ನಿವಾರಣೆ : ಮನೆಯಲ್ಲಿ ವಾಸ್ತು ದೋಷ(Vastu dosh)ವಿದ್ದರೆ ಪ್ರತಿದಿನ ಮುಂಜಾನೆ ಬಾಗಿಲಿಗೆ ಕುಂಕುಮವನ್ನು ಹಚ್ಚಬೇಕು. ಇದ್ರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ. ಇದ್ರಿಂದ ಲಕ್ಷ್ಮಿ ಕೃಪೆ ನಿಮಗೆ ಸಿಗುತ್ತದೆ. ಲಕ್ಷ್ಮಿ ಮನೆಗೆ ಬಂದ್ರೆ ಆರ್ಥಿಕ ವೃದ್ಧಿ ನಿಶ್ಚಿತ. ಮನೆಯ ಮುಖ್ಯ ದ್ವಾರಕ್ಕೆ ಕುಂಕುಮ ಹಚ್ಚುವ ಜೊತೆಗೆ ಮುಖ್ಯ ದ್ವಾರದಲ್ಲಿ ಸಿಂಧೂರದ ಗಣೇಶನ ವಿಗ್ರಹವನ್ನು ಹಾಕಬೇಕು. ಹೀಗೆ ಮಾಡಿದಲ್ಲಿ ಮನೆಯಲ್ಲಿ ಸದಾ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ.
ಗೌರವ – ಆರ್ಥಿಕ ವೃದ್ಧಿ : ಪ್ರತಿಯೊಬ್ಬರೂ ಸಮಾಜದಲ್ಲಿ ಗೌರವ(respect) ಸಿಗಬೇಕೆಂದು ಬಯಸ್ತಾರೆ. ಇದಕ್ಕೆ ಸಾಕಷ್ಟು ಪ್ರಯತ್ನಗಳನ್ನು ಕೂಡ ಮಾಡ್ತಾರೆ. ಆದ್ರೆ ಅನೇಕ ಬಾರಿ ಗೌರವ ಸಿಗುವುದಿಲ್ಲ. ಜೊತೆಗೆ ಆರ್ಥಿಕ ವೃದ್ಧಿಯಾಗುವುದಿಲ್ಲ. ಇವೆರಡೂ ಬೇಕೆನ್ನುವವರು ವೀಳ್ಯದೆಲೆಯಲ್ಲಿ ಸ್ವಲ್ಪ ಹರಳೆಣ್ಣೆ ಮತ್ತು ಸಿಂಧೂರವನ್ನು ಕಟ್ಟಿ ಬುಧವಾರ ಬೆಳಗ್ಗೆ ಅಥವಾ ಸಂಜೆ ದೊಡ್ಡ ಮರದ ಕೆಳಗೆ ಗುಂಡಿ ಮಾಡಿ, ಅದ್ರೊಳಗೆ ಇದನ್ನಿಟ್ಟು ಅದ್ರ ಮೇಲೆ ಕಲ್ಲನ್ನಿಟ್ಟು ಬನ್ನಿ. ಮೂರು ಬುಧವಾರದವರೆಗೆ ಹೀಗೆ ಮಾಡುವುದ್ರಿಂದ ಶೀಘ್ರದಲ್ಲೇ ಹಣದ ಒಳಹರಿವು ಹೆಚ್ಚಾಗುತ್ತದೆ. ಗೌರವ, ಪ್ರತಿಷ್ಠೆ ಪ್ರಾಪ್ತಿಯಾಗುತ್ತದೆ.
VASTU TIPS: ಮನೆಯಲ್ಲಿರುವ ತುಳಸಿ ಗಿಡ ಒಣಗ್ತಿದ್ರೆ ಎಚ್ಚೆತ್ತುಕೊಳ್ಳಿ, ಇದು ಶುಭಸೂಚಕವಲ್ಲ !
ಹಣಕಾಸಿನ ಸಮಸ್ಯೆಗೆ ಇಲ್ಲಿದೆ ಪರಿಹಾರ : ಆರ್ಥಿಕ ಸಮಸ್ಯೆ ಎಲ್ಲರನ್ನು ಕಾಡುತ್ತದೆ. ಎಷ್ಟು ದುಡಿದ್ರೂ ಹಣ ಕೈನಲ್ಲಿ ನಿಲ್ಲುವುದಿಲ್ಲ. ಹಣದ ಸಮಸ್ಯೆಯಿಂದ ಮುಕ್ತಿ ಹೊಂದಲು ಒಂದು ತೆಂಗಿನಕಾಯಿಗೆ ಸಿಂಧೂರವನ್ನು ಹಚ್ಚಿ ಕೆಂಪು ಬಟ್ಟೆಯಲ್ಲಿ ಕಟ್ಟಿ ಪೂಜಿಸಬೇಕು. ಪೂಜೆ ನಂತ್ರ ಲಕ್ಷ್ಮಿಯನ್ನು ಪ್ರಾರ್ಥಿಸಬೇಕು. ನಂತ್ರ ಈ ತೆಂಗಿನ ಕಾಯಿಯನ್ನು ಹಣ ಇಡುವು ಜಾಗದಲ್ಲಿ ಅಥವಾ ಕಪಾಟಿನಲ್ಲಿ ಇಡಬೇಕು. ಇದ್ರಿಂದ ಕೆಲವೇ ದಿನಗಳಲ್ಲಿ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಆರ್ಥಿಕ ವೃದ್ಧಿಯಾಗುತ್ತದೆ.
ಅಯ್ಯಪ್ಪಾ, ಡೇಂಜರ್! ಹೆಚ್ಚಿನ Serial killers ಈ ರಾಶಿಯವರು!
ಎಗ್ಸಾಂ – ಇಂಟರ್ವ್ಯೂನ ಯಶಸ್ಸಿಗಾಗಿ : ಯಾವುದೇ ಪರೀಕ್ಷೆ ಅಥವಾ ಸಂದರ್ಶನದಲ್ಲಿ ಯಶಸ್ಸನ್ನು ಪಡೆಯಲು ಬಯಸಿದರೆ, ಗುರು ಪುಷ್ಯ ಯೋಗ ಅಥವಾ ಶುಕ್ಲ ಪಕ್ಷದ ಪುಷ್ಯ ಯೋಗದಲ್ಲಿ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಕುಂಕುಮವನ್ನು ದಾನದ ರೂಪದಲ್ಲಿ ನೀಡಬೇಕು. ಇದ್ರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಜೊತೆಗೆ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಗೆಲುವು ನಿಮ್ಮದಾಗುತ್ತದೆ.