ಆಗಸ್ಟ್ 27ರಂದು ಶನಿವಾರ, ಶನಿ ಅವಮಾಸ್ಯೆ ಬಂದಿದೆ. ಶನಿ ಅಮಾವಾಸ್ಯೆಯ ದಿನದಂದು ಶಿವ ಮತ್ತು ಸಿದ್ಧ ಯೋಗ ಕೂಡ ರೂಪುಗೊಳ್ಳುತ್ತಿದೆ. ಸಾಡೆ ಸಾಥ್ ಶನಿ ಹಾಗೂ ಶನಿ ಧೈಯಾ ಇದ್ದವರು ಶನಿ ಕೃಪೆಗೆ ಪಾತ್ರರಾಗಲು ಈ ದಿನ ಏನು ಮಾಡ್ಬೇಕು ಗೊತ್ತಾ? 

ಭಾದ್ರಪದ ಮಾಸದ ಅಮವಾಸ್ಯೆಯ ತಿಥಿ ಬಹಳ ವಿಶೇಷ. ಈ ಮಾಸವು ಶನಿವಾರದಂದು ಬರುವ ಕಾರಣ ಇದನ್ನು ಶನಿಶ್ಚರಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಅಮವಾಸ್ಯೆಯನ್ನು ಕುಶಗ್ರಹಣಿ ಎಂದೂ ಕರೆಯುತ್ತಾರೆ. ಶನಿ ಅಮಾವಾಸ್ಯೆಯ ದಿನ ಸ್ನಾನ ಮತ್ತು ದಾನಕ್ಕೆ ವಿಶೇಷ ಮಹತ್ವವಿದೆ. ಇದರೊಂದಿಗೆ ಈ ದಿನ ಶನಿವಾರವಾಗಿರುವುದರಿಂದ ಶನಿದೋಷ, ಶನಿಯ ಅರ್ಧಾರ್ಧ ಮತ್ತು ಧೈಯವನ್ನು ಸಹ ತೊಲಗಿಸಬಹುದು. ಭಾದ್ರಪದ ಅಮಾವಾಸ್ಯೆಯ ದಿನಾಂಕ, ಶುಭ ಸಮಯ ಮತ್ತು ಮಹತ್ವ ಇಲ್ಲಿದೆ. 
ಶನಿ (Shani ) ಅಮಾವಾಸ್ಯೆ (Amavasya) ದಿನಾಂಕ ಮತ್ತು ಶುಭ ಸಮಯ : ಭಾದ್ರಪದ ಮಾಸದ ಅಮವಾಸ್ಯೆಯ ದಿನಾಂಕ ಆಗಸ್ಟ್ 26, ಶುಕ್ರವಾರ ಮಧ್ಯಾಹ್ನ 12.24 ರಿಂದ ಶುರುವಾಗುತ್ತದೆ. ಭಾದ್ರಪದ ಮಾಸದ ಅಮವಾಸ್ಯೆ ತಿಥಿ ಆಗಸ್ಟ್ 27, ಶನಿವಾರ ಮಧ್ಯಾಹ್ನ 1 ಗಂಟೆ 47 ನಿಮಿಷಕ್ಕೆ ಮುಕ್ತಾಯವಾಗಲಿದೆ.

ಈ ಬಾರಿ ಶನಿ ಅಮವಾಸ್ಯೆಯದ ಸೂರ್ಯೋದಯ (Sunrise) ಆಗಸ್ಟ್ 27 ರಂದು ಆಗುವ ಕಾರಣ ಈ ದಿನಾಂಕವನ್ನು ಶನಿ ಅಮವಾಸ್ಯೆಯೆಂದು ಆಚರಿಸಲಾಗುವುದು. ಶನಿ ಅಮವಾಸ್ಯೆಯ ಅಭಿಜೀತ್ ಮುಹೂರ್ತ ಬೆಳಿಗ್ಗೆ 11.57 ರಿಂದ 12.48 ರವರೆಗೆ ಇರಲಿದೆ.

ಶನಿ ಅಮಾವಾಸ್ಯೆಯಂದು ಶುಭ ಯೋಗ : ಶನಿ ಅಮಾವಾಸ್ಯೆಯ ದಿನದಂದು ಶಿವ ಮತ್ತು ಸಿದ್ಧ ಯೋಗ ಕೂಡ ರೂಪುಗೊಳ್ಳುತ್ತಿದೆ. ಶಿವಯೋಗವು ಆಗಸ್ಟ್ 27 ರಂದು ಬೆಳಿಗ್ಗೆ 2 ಗಂಟೆ 11 ರಿಂದ ಪ್ರಾರಂಭವಾಗಿ ಆಗಸ್ಟ್ 28 ರಂದು ಬೆಳಿಗ್ಗೆ 2 ಗಂಟೆ 6 ನಿಮಿಷದವರೆಗೆ ಇರಲಿದೆ. ಇದೇ ವೇಳೆಗೆ ಆಗಸ್ಟ್ 28 ರ ಮುಂಜಾನೆ 2 ಗಂಟೆ 7ರಿಂದ ಸಿದ್ಧಯೋಗ ಆರಂಭವಾಗುತ್ತಿದೆ.

ಕುಶ ಗ್ರಹಣಿ ಅಮವಾಸ್ಯೆ : ಭಾದ್ರಪದ ಅಮಾವಾಸ್ಯೆಯನ್ನು ಕುಶ ಗೃಹಿಣಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಕುಶ ಎಂದರೆ ಹುಲ್ಲು. ಅದಕ್ಕಾಗಿಯೇ ಇದನ್ನು ಕುಶೋತ್ಪತಿನಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ.

ಶನಿ ಅಮವಾಸ್ಯೆಯಂದು ಕೆಲವು ಉಪಾಯಗಳನ್ನು ಮಾಡುವುದ್ರಿಂದ ಶನಿ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದು. ಶನಿ ಅಮವಾಸ್ಯೆಯಂದು ಮಾಡಿ ಈ ಕೆಲಸ : ಶನಿಶ್ಚರಿ ಅಮವಾಸ್ಯೆಯಂದು ಮುಂಜಾನೆ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿ ಸಮೀಪದ ಶನಿದೇವಾಲಯಕ್ಕೆ ಹೋಗಿ ಸಾಸಿವೆ ಎಣ್ಣೆಯನ್ನು ಶನಿದೇವನಿಗೆ ಅರ್ಪಿಸಬೇಕು. ನೀಲಿ ಹೂವುಗಳು, ಕಪ್ಪು, ಎಳ್ಳು ಮತ್ತು ಕಪ್ಪು ಉದ್ದನ್ನು ಸಹ ಅರ್ಪಿಸಬೇಕು. ಇದಾದ ನಂತರ ತೊಂದರೆಗಳನ್ನು ಕಡಿಮೆ ಮಾಡುವಂತೆ ಶನಿ ದೇವರನ್ನು ಪ್ರಾರ್ಥಿಸಬೇಕು. ಶನಿಶ್ಚರಿ ಅಮವಾಸ್ಯೆಯಂದು ಈ ಕೆಲಸ ಮಾಡಿದ್ರೆ ನಿಮ್ಮೆಲ್ಲ ಆಸೆ ಈಡೇರುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

ಶನಿಶ್ಚರಿ ಅಮಾವಾಸ್ಯೆಯಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಉತ್ತಮ. ಪವಿತ್ರ ನದಿಯಲ್ಲಿ ಸ್ನಾನ ಮಾಡಿ, ಹಳೆಯ ಬಟ್ಟೆ, ಪಾದರಕ್ಷೆ, ಚಪ್ಪಲಿ ಬಿಟ್ಟು ಹೊಸ ಬಟ್ಟೆ, ಚಪ್ಪಲಿ ಧರಿಸಬೇಕು. ಇದರ ನಂತರ, ನಿಮ್ಮ ಇಚ್ಛೆಯ ಪ್ರಕಾರ, ಆಹಾರ, ಧಾನ್ಯಗಳು, ಪಾದರಕ್ಷೆಗಳು, ಬಟ್ಟೆ ಇತ್ಯಾದಿಗಳನ್ನು ಅಗತ್ಯವಿರುವವರಿಗೆ ದಾನ ಮಾಡಬೇಕು. ಈ ಪರಿಹಾರವು ತುಂಬಾ ಪರಿಣಾಮಕಾರಿಯಾಗಿದೆ. ಶನಿಯ ಕೃಪೆಗೆ ಪಾತ್ರರಾಗುವುದಲ್ಲದೆ ಸಾಡೆ ಸಾಥ್ ಶನಿ ದೋಷ ಕಡಿಮೆಯಾಗಲಿದೆ.

ಹೊಸ ಮನೆಯಲ್ಲಿ ಹ್ಯಾಪಿಯಾಗಿರಲು ಖರೀದಿಗೂ ಮುನ್ನ ಈ ವಿಷ್ಯ ನೆನಪಿಡಿ

ನಂಬಿಕೆಗಳ ಪ್ರಕಾರ, ಕುಷ್ಠರೋಗಿಗಳ ಸೇವೆ ಮಾಡಿದ್ರೆ ಶನಿ ದೇವನು ತುಂಬಾ ಸಂತೋಷಪಡುತ್ತಾನೆ. ಶನಿಶ್ಚರಿ ಅಮಾವಾಸ್ಯೆಯಂದು ಕುಷ್ಠರೋಗಿಗಳಿಗೆ ಪುರಿ ಸೇರಿದಂತೆ ಎಣ್ಣೆಯಲ್ಲಿ ಬೇಯಿಸಿದ ಆಹಾರ ಇತ್ಯಾದಿಗಳನ್ನು ತಿನ್ನಿಸಿ ಮತ್ತು ನಿಮ್ಮ ಇಚ್ಛೆಯಂತೆ ಸ್ವಲ್ಪ ಹಣವನ್ನು ದಾನ ಮಾಡಿ. ಇದರಿಂದ ನಿಮ್ಮ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡಬಹುದು.

ಗಣೇಶ ಚತುರ್ಥಿ 2022: ಮೂರ್ತಿ ಪ್ರತಿಷ್ಠಾಪನೆ ಸಮಯ ಈ ತಪ್ಪು ಖಂಡಿತಾ ಮಾಡ್ಬೇಡಿ!

ಶನಿಶ್ಚರಿ ಅಮವಾಸ್ಯೆಯಂದು ದಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನ ಗೋಶಾಲೆಯಲ್ಲಿ ಮೇವು ದಾನ ಮಾಡಿ. ಇರುವೆಗಳಿಗೆ ಸಕ್ಕರೆ ಮಿಶ್ರಿತ ಹಿಟ್ಟು ಮರದ ಕೆಳಗೆ ಹಾಕಿ. ಈ ಸಣ್ಣ ಕೆಲಸಗಳು ಕೂಡ ನಿಮ್ಮ ಆಸೆಯನ್ನು ಈಡೇರಿಸಲು ನೆರವಾಗುತ್ತವೆ.