ಶಕ್ತಿ ಯೋಜನೆ ಎಫೆಕ್ಟ್: ಹುಲಿಗಿ ದೇವಸ್ಥಾನದ ಹುಂಡಿಯಲ್ಲಿ ₹99.70 ಲಕ್ಷ ಕಾಣಿಕೆ ಸಂಗ್ರಹ!

ಉತ್ತರ ಕರ್ನಾಟಕದ ಶಕ್ತಿಸ್ಥಳಗಳಲ್ಲೊಂದಾದ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿರುವ ಹುಲಿಗೆಮ್ಮ ದೇವಸ್ಥಾನದ ಹುಂಡಿಯಲ್ಲಿ ಮತ್ತೊಮ್ಮೆ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ. ಒಂದು ತಿಂಗಳ ಅವಧಿಯಲ್ಲಿ ದೇವಸ್ಥಾನದ ಹುಂಡಿಯಲ್ಲಿ ₹99.70 ಲಕ್ಷ ರೂಪಾಯಿ ನಗದು, 225 ಗ್ರಾಂ ಬಂಗಾರ, 14 ಕೆಜಿ ಬೆಳ್ಳಿ ಸಂಗ್ರಹವಾಗಿದೆ.

 

Shakti scheme effect Record hundi collection in Huligi temple at koppal rav

ಮುನಿರಾಬಾದ್ (ಜೂ.29) : ಉತ್ತರ ಕರ್ನಾಟಕದ ಶಕ್ತಿಸ್ಥಳಗಳಲ್ಲೊಂದಾದ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿರುವ ಹುಲಿಗೆಮ್ಮ ದೇವಸ್ಥಾನದ ಹುಂಡಿಯಲ್ಲಿ ಮತ್ತೊಮ್ಮೆ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ. ಒಂದು ತಿಂಗಳ ಅವಧಿಯಲ್ಲಿ ದೇವಸ್ಥಾನದ ಹುಂಡಿಯಲ್ಲಿ ₹99.70 ಲಕ್ಷ ರೂಪಾಯಿ ನಗದು, 225 ಗ್ರಾಂ ಬಂಗಾರ, 14 ಕೆಜಿ ಬೆಳ್ಳಿ ಸಂಗ್ರಹವಾಗಿದೆ.

ಶಕ್ತಿ ಯೋಜನೆ ಎಫೆಕ್ಟ್:

 ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಉದ್ದೇಶದಿಂದ ಶಕ್ತಿ ಯೋಜನೆ ಜಾರಿ ತಂದ ಬಳಿಕ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಳ ಹಿನ್ನೆಲೆ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ. ಕಳೆದು ತಿಂಗಳು ಹುಲಿಗಿ ಜಾತ್ರೆಯಲ್ಲಿ 1.03 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಜಾತ್ರೆ ಹೊರತು ಪಡಿಸಿದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹವಾಗಿದ್ದಿಲ್ಲ ಆದರೆ ಈಗ ಶಕ್ತಿ ಯೋಜನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ಮಹಿಳಾ ಭಕ್ತರು. 

ಮಹಿಳಾ ಭಕ್ತರಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ. ಸುಮಾರು 800 ವರ್ಷಗಳಿಂದಲೂ ದೇಶಾದ್ಯಂತ ಸರ್ವಧರ್ಮದ ಭಕ್ತರನ್ನು ಸೆಳೆಯುತ್ತಿರುವ ಹುಲಿಗೆಮ್ಮ ದೇವಸ್ಥಾನ. 

ಕಾರಹುಣ್ಣಿಮೆ ದಿನ ಹುಲಿಗೆಮ್ಮ ದರ್ಶನಕ್ಕೆ 1.5 ಲಕ್ಷ ಭಕ್ತರು!

Latest Videos
Follow Us:
Download App:
  • android
  • ios