ಕಾರಹುಣ್ಣಿಮೆ ದಿನ ಹುಲಿಗೆಮ್ಮ ದರ್ಶನಕ್ಕೆ 1.5 ಲಕ್ಷ ಭಕ್ತರು!
ಕಾರ ಹುಣ್ಣಿಮೆಯ ದಿನವಾದ ಭಾನುವಾರ ಸುಮಾರು ಒಂದೂವರೆ ಲಕ್ಷ ಭಕ್ತರು ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರದಲ್ಲಿ ಹುಲಿಗೆಮ್ಮದೇವಿ ದರ್ಶನ ಪಡೆದರು.
ಮುನಿರಾಬಾದ್ (ಜೂ.5) : ಕಾರ ಹುಣ್ಣಿಮೆಯ ದಿನವಾದ ಭಾನುವಾರ ಸುಮಾರು ಒಂದೂವರೆ ಲಕ್ಷ ಭಕ್ತರು ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರದಲ್ಲಿ ಹುಲಿಗೆಮ್ಮದೇವಿ ದರ್ಶನ ಪಡೆದರು.
ಕೊಪ್ಪಳ, ರಾಯಚೂರು, ಗದಗ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಇತರ ಜಿಲ್ಲೆಗಳಿಂದ ಶನಿವಾರ ಸಂಜೆ ಹುಲಿಗಿ ಗ್ರಾಮಕ್ಕೆ ಆಗಮಿಸಿದ್ದ ಭಕ್ತರು, ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾದ ತಂಗುದಾಣದಲ್ಲಿ ರಾತ್ರಿ ಕಳೆದು ತುಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಬೆಳಗಿನ ಜಾವ ಮೂರು ಗಂಟೆಯಿಂದಲೇ ಅಮ್ಮನವರ ದರ್ಶನ ಪಡೆಯಲು ದೇವಸ್ಥಾನದ ಮುಂದೆ ಸಾಲುಗಟ್ಟಿನಿಂತಿದ್ದರು.
ದೇವಸ್ಥಾನದ ಬಾಗಿಲು ತೆರೆಯುತ್ತಿದ್ದಂತೆ ಭಕ್ತಾದಿಗಳು ಅಮ್ಮನವರ ದರ್ಶನ ಪಡೆಯಲು ಪ್ರಾರಂಭಿಸಿದರು. ಬೆಳಗ್ಗೆ 8 ಗಂಟೆ ಸುಮಾರು 30,000 ಸಾವಿರಕ್ಕೂ ಅಧಿಕ ಜನ ಭಕ್ತಾದಿಗಳು ದರ್ಶನ ಪಡೆದರೆ, ಬೆಳಗ್ಗೆ 10 ಗಂಟೆಗೆ 50 ಸಾವಿರ ದಾಟಿತು. ಮಧ್ಯಾಹ್ನ 12 ಗಂಟೆಗೆ 75 ಸಾವಿರ ತಲುಪಿತ್ತು. 2 ಗಂಟೆಗೆ ಸುಮಾರು 1 ಲಕ್ಷ ದಾಟಿದ್ದು, ಸಂಜೆ ವೇಳೆ 1,50,000 ಭಕ್ತರು ಅಮ್ಮನವರ ದರ್ಶನ ಪಡೆದಿರಬಹುದು ಎಂದು ದೇವಸ್ಥಾನದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಆಗಿ ಹುಣ್ಣಿಮೆ ಹಿನ್ನಲೆ: ಚುನಾವಣೆ ಮಧ್ಯೆಯೂ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದ ಭಕ್ತ ಸಾಗರ
ಕೊರೋನಾ ಮಹಾಮಾರಿ ಆನಂತರ ಇತ್ತೀಚಿನ ದಿನಗಳಲ್ಲಿ ಹುಲಿಗೆಮ್ಮ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಇದಲ್ಲದೆ ಹುಲಿಗೆಮ್ಮ ದೇವಿ ಹುಂಡಿಯಲ್ಲಿ ಸಂಗ್ರಹವಾಗುತ್ತಿರುವ ಹಣದಲ್ಲೂ ಭಾರಿ ಏರಿಕೆ ಕಂಡಿದೆ.
ಕಳೆದ ತಿಂಗಳು ಏ. 20ರಿಂದ ಮೇ 24ರ ವರೆಗೆ ಅಂದರೆ 35 ದಿನಗಳಲ್ಲಿ ಹುಂಡಿಯಲ್ಲಿ .1.05 ಕೋಟಿ ಹಣ ಸಂಗ್ರಹವಾಗಿದೆ. ಇದು ದೇವಸ್ಥಾನದ 800 ವರ್ಷದ ಇತಿಹಾಸದಲ್ಲೇ ದೊಡ್ಡ ಮೊತ್ತದ ದಾಖಲೆ ಎಂದು ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಬ್ಯಾಂಕ್‌ನಲ್ಲೇ ₹ 53 ಕೋಟಿ ಇದ್ದರೂ ದೇಗುಲ ಅಭಿವೃದ್ಧಿಗೆ ಬಳಸುವಂತಿಲ್ಲ!