ಪದೇ ಪದೇ ಕನಸಿನಲ್ಲಿ ಒಂದೇ ವ್ಯಕ್ತಿ ಕಂಡ್ರೆ ಏನರ್ಥ..?

ರಾತ್ರಿ ಬೀಳುವ ಕನಸು ಚಿತ್ರವಿಚಿತ್ರವಾಗಿರುತ್ತದೆ. ನಾವು ಕಲ್ಪಿಸಿಕೊಳ್ಳದ ವ್ಯಕ್ತಿಗಳು ಕೂಡ ನಮ್ಮ ಕನಸಿನಲ್ಲಿ ಕಾಣಿಸಿಕೊಳ್ತಾರೆ. ಒಂದೇ ವ್ಯಕ್ತಿ ಆಗಾಗ ಬರೋದಿದೆ. ಇದ್ರ ಹಿಂದೆ ಅನೇಕ ಕಾರಣವಿದೆ. ಸಂತೋಷದ ಜೊತೆ ದುಃಖ, ನಿರಾಶೆಗೆ ಕೂಡ ಇದು ಮೂಲವಾಗುತ್ತದೆ.
 

Seeing Only One Person In Dream Meaning

ಕನಸಿನ ಬಗ್ಗೆ ನಾವು ಪ್ರತಿನಿತ್ಯ ಮಾತನಾಡ್ತೇವೆ. ಮಕ್ಕಳಂತೂ ಬೆಳಿಗ್ಗೆ ಎದ್ದಾಕ್ಷಣ ನನಗೆ ರಾತ್ರಿ ಆ ಕನಸು ಬಿತ್ತು, ಈ ಕನಸು ಬಿತ್ತು ಎಂದು ಹೇಳ್ತಾನೆ ಇರ್ತಾರೆ. ಈ ಕನಸು ದೊಡ್ಡವರು ಚಿಕ್ಕವರೆನ್ನದೆ ಎಲ್ಲರ ನಿದ್ದೆಯನ್ನೂ ಹಾಳುಮಾಡುತ್ತದೆ. ಕೆಟ್ಟ ಕನಸುಗಳು ಬಿದ್ದಾಗ ಬೆಚ್ಚಿ ಬಿದ್ದು ಹೆದರುವವರಿದ್ದಾರೆ.  ಕೆಲವೊಮ್ಮೆ ಕನಸುಗಳು ಮುಂದೆ ಆಗುವ ಅನಾಹುತದ ಸೂಚನೆಯನ್ನು ನೀಡುತ್ತವೆ. ಮತ್ತೆ ಕೆಲವೊಮ್ಮೆ ಕನಸುಗಳು ಮಧುರ ಸಂತೋಷವನ್ನು ನೀಡುತ್ತವೆ. ಒಂದೊಂದು ಕನಸುಗಳು ಒಂದೊಂದು ಅರ್ಥವನ್ನು ಸೂಚಿಸುತ್ತವೆ. ಒಮ್ಮೊಮ್ಮೆ ಒಂದೇ ರೀತಿಯ ಕನಸು ಮತ್ತೆ ಮತ್ತೆ ಬೀಳುತ್ತದೆ. ಒಬ್ಬ ವ್ಯಕ್ತಿಯೋ ಅಥವಾ ಯಾವುದೋ ಸ್ಥಳವೋ ನಮಗೆ ಪದೇ ಪದೇ ಕಾಣ್ತಿರುತ್ತದೆ. ಕೆಲವೊಮ್ಮೆ ಕನಸು ಬಾಯಿಪಾಠವಾಗಿರುತ್ತದೆ. ಮುಂದೇನು ನಡೆಯುತ್ತದೆ ಎಂಬುದು ಕೂಡ ನಮಗೆ ಮೊದಲೇ ತಿಳಿದಿರುತ್ತದೆ. ಅಂತಹ ಕನಸು ಏನನ್ನು ಸೂಚಿಸುತ್ತದೆ ಎಂಬುದನ್ನು ನಾವು ತಿಳಿಯೋಣ.

ಪದೇ ಪದೇ ಒಂದೇ ಕನಸು (Dream) ಬಿದ್ರೆ ಏನು ಅರ್ಥ :  

ಆಪ್ತರ ಅಗಲುವಿಕೆಯ ಸೂಚನೆ : ನಿಮ್ಮ ಕನಸಿನಲ್ಲಿ ಒಂದೇ  ವ್ಯಕ್ತಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆಂದರೆ ನಿಮಗೆ ಹತ್ತಿರವಾದವರು ಯಾರೋ ನಿಮ್ಮಿಂದ ದೂರವಾಗಿದ್ದಾರೆ ಎಂದರ್ಥ. ನಿಮ್ಮ ಜೊತೆ ತುಂಬ ಸಲುಗೆಯಿಂದ ಇರುವವರು, ಆಪ್ತರು ಅಥವಾ ಅಕ್ಕ ಪಕ್ಕದವರು ಯಾರಾದರೂ ದೂರವಾಗುವ ಮುನ್ನ ಇಂತಹ ಕನಸುಗಳು ಬೀಳುತ್ತವೆ. ಶಾಲೆ, ಕಾಲೇಜ್, ಆಫೀಸ್ ಸಿಬ್ಬಂದಿಯವರಿಗೆ ಸಂಬಂಧಪಟ್ಟ ಯಾವುದಾದರೂ ಒತ್ತಡ (stress) ವಿದ್ದರೂ ಇಂತಹ ಕನಸು ಬೀಳುತ್ತದೆ. ನಿಮ್ಮಲ್ಲಿ ತುಂಬ ಆತಂಕ ಅಥವಾ ಒತ್ತಡ ಇದ್ದಾಗಲೂ ಈ ರೀತಿಯ ಕನಸು ಬೀಳಬಹುದು. 

ಆಳವಾದ ಬಾಂಧವ್ಯವನ್ನು ತೋರಿಸುತ್ತೆ : ಒಬ್ಬರೊಂದಿಗೆ ನಿಮಗೆ ಹೆಚ್ಚು ಭಾವನಾತ್ಮಕ (Emotional) ಸಂಬಂಧವಿದ್ದು ಅವರೊಂದಿಗೆ ಸಂಬಂಧ ಮುರಿದಾಗಲೂ ಕೂಡ ಅವರು ಪದೇ ಪದೇ ಕನಸಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ನಮ್ಮನ್ನು ಹೆಚ್ಚು ಪ್ರೀತಿಸುವ ಮತ್ತು ನಮ್ಮ ಬಗ್ಗೆ ಹೆಚ್ಚು ಕಾಳಜಿ ತೋರಿಸುವವರು ಕೂಡ ಕನಸಿನಲ್ಲಿ ಬರುತ್ತಿರುತ್ತಾರೆ.

ಬ್ರಹ್ಮ ಮುಹೂರ್ತದಲ್ಲೆದ್ದು ಆರೋಗ್ಯದ ಜೊತೆ ಅದೃಷ್ಟ ಪಡೆದ್ಕೊಳ್ಳಿ

ದೊಡ್ಡ ಆಘಾತ (Shock) ದ ಸೂಚನೆ : ಕನಸುಗಳು ನಾವು ಬಹಳ ಹಿಂದೆ ಕಳೆದುಕೊಂಡದ್ದನ್ನು ತೋರಿಸುತ್ತದೆ. ಇವು ಹಿಂದಿನ ನೋವನ್ನು ಅಥವಾ ನಷ್ಟವನ್ನು ನಿವಾರಿಸಲು ಕೂಡ ಬರಬಹುದು. ಆ ಕನಸು ಒಳ್ಳೆಯದೋ ಕೆಟ್ಟದ್ದೋ ಎಂದು ನಾವು ನಿರ್ಧರಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಮೇಲೆ ನಮಗಿರುವ ಭಾವನೆಗಳನ್ನು ನಾವು ಅವರೆದುರು ವ್ಯಕ್ತಪಡಿಸದೇ ಇದ್ದಾಗ ಕೂಡ ಇಂಥ ಕನಸು ಬೀಳುತ್ತದೆ. ಮಕ್ಕಳು ಕನಸಿನಲ್ಲಿ ಕಾಣುತ್ತಾರೆ. ನಮಗೆ ಇಷ್ಟವಾದವರು, ಬಹಳ ಬೇಕಾದವರ ಎದುರಲ್ಲಿ ನಾವು ಕೆಲವು ವಿಷಯಗಳನ್ನು ಮಾತನಾಡಲು ಹಿಂಜರಿಯುತ್ತೇವೆ. ಆಗ ಅವರು ನಮ್ಮ ಕನಸಿನಲ್ಲಿ ಬರುತ್ತಾರೆ. ಕನಸಿನಲ್ಲಿ ನಾವು ನಮ್ಮ ಭಾವನೆಗಳನ್ನು ಅವರ ಬಳಿ ಹೇಳುತ್ತೇವೆ. ಕೆಲವೊಮ್ಮೆ ಕನಸಿನಲ್ಲಿಯೇ ನಮ್ಮ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಚೆಂದದ ದಾಂಪತ್ಯ ನಿಮ್ಮದಾಗಬೇಕು ಅಂದ್ರೆ ಈ ವಾಸ್ತು ಟಿಪ್ಸ್ ಫಾಲೋ ಮಾಡೋದು ಅನಿವಾರ್ಯ

ಅಪರಾಧಿ ಮನೋಭಾವ : ನಮ್ಮ ವರ್ತನೆ ಹಾಗೂ ಮಾತಿನಿಂದ ಕೆಲವೊಮ್ಮೆ ಬೇರೆಯವರಿಗೆ ಬೇಸರವಾಗಿರುತ್ತದೆ. ಅವರು ಬೇಸರ ಮಾಡಿಕೊಂಡಿದ್ದಾರೆ, ನನ್ನಿಂದ ತಪ್ಪಾಗಿದೆ ಎಂಬ ತಪ್ಪಿತಸ್ಥ ಭಾವನೆ ನಮ್ಮಲ್ಲಿದ್ದರೂ ನಾವು ಅವರ ಬಳಿ ಕ್ಷಮೆ ಕೇಳಿರುವುದಿಲ್ಲ. ಹೀಗೆ ಅಪರಾಧಿ ಮನೋಭಾವ ಯಾರಲ್ಲಿ ಇರುತ್ತದೆಯೋ ಅವರ ಕನಸಿನಲ್ಲಿ ಬೇಸರ ಪಟ್ಟುಕೊಂಡ ವ್ಯಕ್ತಿ ಕಾಣಿಸುತ್ತಾನೆ. ನಿಮಗೆ ಒಂದೇ ಕನಸು ಮತ್ತೆ ಮತ್ತೆ ಬೀಳುತ್ತಿದೆ ಅದರಿಂದ ನಿಮಗೆ ತೊಂದರೆ ಆಗುತ್ತಿದೆ ಎಂದಾದರೆ ಅದನ್ನು ಹೆಚ್ಚು ದಿನ ಹಾಗೇ ಬಿಡಬೇಡಿ. ಸೂಕ್ತ ವೈದ್ಯರ ಬಳಿ ಹೋಗಿ ಅದಕ್ಕೆ ಬೇಕಾದ ಚಿಕಿತ್ಸೆಯನ್ನು ತಕ್ಷಣವೇ ಪಡೆದುಕೊಳ್ಳಿ.

Latest Videos
Follow Us:
Download App:
  • android
  • ios