ಶನಿ ಗ್ರಹವು ಈಗ ಅಂದರೆ 2021ರಲ್ಲಿ ಮಕರ ರಾಶಿಯಲ್ಲಿ ಸ್ಥಿತವಾಗಿರಲಿದ್ದು, ಈ ಮೂರು ರಾಶಿಗಳಾದ  ಧನು, ಮಕರ ಮತ್ತು ಕುಂಭ ರಾಶಿಯ ಮೇಲೆ ಶನಿ ಸಾಡೇ ಸಾತ್ ನಡೆಯುತ್ತಿದೆ. ಶನಿಗ್ರಹವು ಚಂದ್ರ ರಾಶಿಯಿಂದ ಹನ್ನೆರಡನೇ, ಮೊದಲನೆ ಮತ್ತು ಎರಡನೇ ಮನೆಯಿಂದ ಸಂಚರಿಸುವ ಅವಧಿಯನ್ನು ಸಾಡೇಸಾತ್ ಎಂದು ಜ್ಯೋತಿಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ಅವಧಿಯು ಏಳೂವರೆ ವರ್ಷಗಳದ್ದಾಗಿರುತ್ತದೆ.

ಈ ಅವಧಿಯಲ್ಲಿ ಶನಿಯು ಕರ್ಮಕ್ಕೆ ಅನುಸಾರವಾಗಿ ಫಲಗಳನ್ನು ನೀಡುತ್ತಾನೆ. ಧರ್ಮ ಮಾರ್ಗದಲ್ಲಿ ನಡೆದವರಿಗೆ ಒಳ್ಳೆಯ ಫಲಗಳನ್ನು ಮತ್ತು ಕೆಟ್ಟ ಮಾರ್ಗದಲ್ಲಿ ನಡೆದವರಿಗೆ ತಕ್ಕ ಶಿಕ್ಷೆಯನ್ನು ನೀಡುತ್ತಾನೆ. ಈ 3 ರಾಶಿಯವರ ಮೇಲೆ ಶನಿ ಸಾಡೇ ಸಾತ್‌ನಿಂದ ಆಗುವ ಪರಿಣಾಮ ಮತ್ತು ಅದಕ್ಕೆ ಹೇಳಿರುವ ಉಪಾಯಗಳ ಬಗ್ಗೆ ತಿಳಿಯೋಣ...

ಇದನ್ನು ಓದಿ: ವ್ಯಾಪಾರ ಮತ್ತು ಉದ್ಯೋಗದಲ್ಲಿ ಲಾಭ ಪಡೆಯಲು ಹೀಗಿರಲಿ ವಾಸ್ತು!

ಧನು ರಾಶಿ

ಈ ರಾಶಿಯವರ ಮೇಲೆ ಶನಿ ಸಾಡೇ ಸಾತ್ ನಡೆಯುತ್ತಿದೆ. ಧನು ರಾಶಿಯವರಿಗೆ ಇದು ಸಾಡೇಸಾತ್‌ನ ಕೊನೆಯ ಚರಣವಾಗಿದೆ. ಧನು ರಾಶಿಯ ಅಧಿಪತಿ ಗುರು ಗ್ರಹವಾಗಿದ್ದು , ಈ ರಾಶಿಯವರಿಗೆ ಶನಿ ಸಾಡೇ ಸಾತ್ ಆರ್ಥಿಕವಾಗಿ ಶುಭ ಫಲವನ್ನು ನೀಡುತ್ತದೆ. ಉದ್ಯೋಗ ಮತ್ತು ಕಾರ್ಯ ಕ್ಷೇತ್ರದಲ್ಲಿ ಬದಲಾವಣೆಯನ್ನು ಕಾಣಬೇಕಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಅಷ್ಟೇ ಅಲ್ಲದೆ ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ.

ಪರಿಹಾರ: ಶನಿಯ ಸಾಡೇ ಸಾತ್‌ನ ಅಶುಭ ಪ್ರಭಾವದಿಂದ ಪಾರಾಗಲು, ಶಮೀ ವೃಕ್ಷದ ಬೇರನ್ನು ಕಪ್ಪು ಬಟ್ಟೆಯಲ್ಲಿ ಸುತ್ತಬೇಕು. ಅದನ್ನು ಶನಿವಾರದ ದಿನ ಸಂಜೆ ಬಲಗೈಗೆ ಕಟ್ಟಿಕೊಳ್ಳಬೇಕು. ಹಾಗೆಯೇ ಶನಿ ಗ್ರಹಕ್ಕೆ ಸಂಬಂಧಿಸಿದ ಮಂತ್ರಗಳನ್ನು ಹೇಳಿಕೊಳ್ಳಬೇಕು.

ಇದನ್ನು ಓದಿ: ವಾಸ್ತು ಪ್ರಕಾರ ಮನೆಗೆ ಅಡಿಪಾಯ ಹಾಕಿ, ಇಲ್ಲದಿದ್ರೆ ಕೇಡಾಗಬಹುದು..!

ಮಕರ ರಾಶಿ 

ಶನಿ ಗ್ರಹವು ಮಕರ ರಾಶಿಯಲ್ಲಿ ಸ್ಥಿತವಾಗಿದ್ದು, ಈ ವರ್ಷವೂ ಅದೇ ರಾಶಿಯಲ್ಲಿರಲಿದೆ. ಮಕರ ರಾಶಿಯವರಿಗೆ ಶನಿ ಸಾಡೇ ಸಾತ್‌ನ ಎರಡನೇ ಚರಣ ನಡೆಯುತ್ತಿದೆ. ಮಕರ ರಾಶಿಯ ಅಧಿಪತಿ ಶನಿ ದೇವನೇ ಆಗಿದ್ದಾನೆ. ಈ ರಾಶಿಯವರ ಜಾತಕದಲ್ಲಿ ಉಚ್ಚ ಸ್ಥಿತಿಯಲ್ಲಿರುವ ಗ್ರಹದ ಪ್ರಭಾವದಿಂದ ಕೆಲ ಬದಲಾವಣೆಗಳನ್ನು ಕಾಣಬೇಕಾಗುತ್ತದೆ. ಸಮಾಜದಲ್ಲಿ ಸ್ಥಾನ-ಮಾನಗಳು ವೃದ್ಧಿಸಲಿದೆ. ಅರ್ಧಕ್ಕೆ ನಿಂತಿರುವ ಕೆಲಸ ಕಾರ್ಯಗಳು ಈ ಅವಧಿಯಲ್ಲಿ ಪೂರ್ಣಗೊಳ್ಳಲಿವೆ. ಕಾರ್ಯಕ್ಷೇತ್ರದಲ್ಲೂ ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ.

ಪರಿಹಾರ: ಶನಿಯ ಅಶುಭ ಪ್ರಭಾವದಿಂದ ರಕ್ಷಣೆ ಪಡೆಯಲು ಶಿವನ ಆರಾಧನೆ ಮಾಡುವುದು ಉತ್ತಮ. ಶಿವ ಸಹಸ್ರನಾಮ ಅಥವಾ ಶಿವ ಪಂಚಾಕ್ಷರಿಯನ್ನು ನಿಯಮಿತವಾಗಿ ಪಠಿಸುವುದರಿಂದ ಶನಿಯ ಕೆಟ್ಟ ಪ್ರಭಾವದಿಂದ ಪಾರಾಗಬಹುದಾಗಿದೆ. ಇದರಿಂದ ಸಮಸ್ಯೆಗಳೆಲ್ಲ ದೂರವಾಗಿ, ಶನಿದೇವನ ಕೃಪೆ ಲಭಿಸಲಿದೆ.

ಕುಂಭ ರಾಶಿ:

ಈ ರಾಶಿಯವರಿಗೆ ಶನಿ ಸಾಡೇ ಸಾತ್‌ನ ಮೊದಲ ಚರಣ ನಡೆಯುತ್ತಿದೆ. ಕುಂಭ ರಾಶಿಗೆ ಶನಿದೇವನು ಅಧಿಪತಿಯಾಗಿದ್ದಾನೆ. ಇದರ ಪ್ರಭಾವದಿಂದ ಈ ರಾಶಿಯವರಿಗೆ ಜವಾಬ್ದಾರಿಗಳು ಹೆಚ್ಚುತ್ತವೆ. ಹೆಚ್ಚು ಜವಾಬ್ದಾರಿಯು ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆಯಿದೆ. ಶನಿಯ ಕೃಪೆಯಿಂದ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯಬಹುದಾಗಿದೆ. ಇದರಿಂದ ಹೆಚ್ಚಿನ ಧನ ಲಾಭವೂ ಆಗಲಿದೆ. ವಿದೇಶದಿಂದ ಅಥವಾ ದೂರದ ಸ್ಥಳದಿಂದ ಲಾಭವಾಗುವ ಸಾಧ್ಯತೆ ಇದೆ.

ಇದನ್ನು ಓದಿ: ಕುಂಭ ರಾಶಿ ಪ್ರವೇಶಿಸುತ್ತಿರುವ ಸೂರ್ಯ- ಈ ರಾಶಿಗೆ ಸಿಗುತ್ತೆ ಸರ್ಕಾರಿ ಉದ್ಯೋಗ

ಪರಿಹಾರ: ಶನಿವಾರದಂದು ಶನಿದೇವನಿಂದ ಶಂಖಪುಷ್ಪವನ್ನು ಅರ್ಪಿಸುವುದರಿಂದ ಒಳಿತು ಆಗುತ್ತದೆ. ಕಪ್ಪು ಬತ್ತಿಯಿಂದ ಎಳ್ಳೆಣ್ಣೆ ದೀಪವನ್ನು ಹಚ್ಚಬೇಕು. ಶನಿವಾರ ಶನಿಸ್ತೋತ್ರವನ್ನು ಪಠಿಸಬೇಕು. ಶನಿವಾರ ಅಥವಾ ಅಮವಾಸ್ಯೆಯಂದು ಸೂರ್ಯಾಸ್ತದ ನಂತರ ಅಶ್ವತ್ಥ ಮರವನ್ನು ಪೂಜಿಸುಬೇಕು. ಶನಿದೇವನಿಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಬೇಕು. ಇದರಿಂದ ಶನಿ ಗ್ರಹದ ಅಶುಭ ಪ್ರಭಾವಗಳಿಂದ ಪಾರಾಗಬಹುದಾಗಿದೆ.