ಪ್ರತಿ ಗ್ರಹಗಳ ಚಲನೆಯಲ್ಲಿ ಆಗುವ ಬದಲಾವಣೆಯು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕರ್ಮಕ್ಕೆ ತಕ್ಕ ಫಲ ನೀಡುವ ಶನಿ ಗ್ರಹವು ಈಗ ಮಾರ್ಗಿಯಾಗಿ ಸಂಚಾರ ಆರಂಭಿಸಲಿದೆ. ಜಾತಕದ ಆಧಾರದ ಮೇಲೆ ಶನಿಯ ಪ್ರಭಾವವು ಅಶುಭವಾಗಿದ್ದರೆ ಅದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಂಡಲ್ಲಿ ಶನಿಯ ಆಶೀರ್ವಾದವನ್ನು ಪಡೆಯಬಹುದಾಗಿದೆ. ಶನಿಯ ಈ ಸಂಚಾರದಿಂದ ಹಲವು ರಾಶಿಯವರು ಉತ್ತಮ ಫಲವನ್ನು ನಿರೀಕ್ಷಿಸಬಹುದಾಗಿದೆ. ಶನಿಯ ಈ ಬದಲಾವಣೆಯು ಯಾವ್ಯಾವ ರಾಶಿಯವರಿಗೆ ಯಾವ ರೀತಿಯ ಫಲ ನೀಡಲಿದೆ ಎಂಬುದನ್ನು ತಿಳಿಯೋಣ....
ಕರ್ಮಕ್ಕೆ ತಕ್ಕ ಫಲವನ್ನು ನೀಡುವ ಶನಿ ಗ್ರಹದ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದೇ ಸೆಪ್ಟೆಂಬರ್ 29ಕ್ಕೆ ಶನಿ ಗ್ರಹವು ಮಾರ್ಗಿಯಾಗಿ ಸಂಚರಿಸಲು ಆರಂಭಿಸುತ್ತದೆ. ಇಲ್ಲಿಯವರೆಗೆ ವಕ್ರಿಯಾಗಿ ಸಂಚರಿಸುತ್ತಿದ್ದ ಶನಿಯಿಂದ ಹಲವು ತಾಪತ್ರಯಗಳನ್ನು ಅನುಭವಿಸಿರುವ ಹಲವು ರಾಶಿಯವರು ಒಳಿತನ್ನು ನಿರೀಕ್ಷಿಸಬಹುದಾಗಿದೆ.
ಸರಿಯಾದ (ನೇರ) ದಿಕ್ಕಿನಲ್ಲಿ ಗ್ರಹಗಳು ಸಂಚರಿಸಿದರೆ ಅದನ್ನು ಮಾರ್ಗಿ ಎಂದು ಕರೆಯಲಾಗುತ್ತದೆ. ಇದರಿಂದ ಉತ್ತಮ ಪ್ರಭಾವ ಉಂಟಾಗಿ ಶುಭ ಫಲವನ್ನು ಕೊಡುತ್ತದೆ. ಅದೇ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿದರೆ ಅದನ್ನು ವಕ್ರಿ ಎನ್ನಲಾಗುತ್ತದೆ. ಇದರಿಂದ ಅಶುಭ ಫಲ ದೊರೆಯುತ್ತದೆ. ಶನಿಯ ಈ ಬದಲಾವಣೆಯು ಪ್ರತಿ ರಾಶಿ ಚಕ್ರಕ್ಕೆ ಯಾವ ರೀತಿಯ ಫಲವನ್ನು ನೀಡಲಿದೆ ಎಂಬ ಬಗ್ಗೆ ತಿಳಿಯೋಣ..
![]()
ಮೇಷ ರಾಶಿ
ಈ ರಾಶಿಯವರು ಶನಿಯಿಂದ ಉತ್ತಮ ಫಲವನ್ನು ನಿರೀಕ್ಷಿಸಬಹುದಾಗಿದೆ. ಶನಿ ಗ್ರಹದ ಮಾರ್ಗಿ ಸಂಚಾರದಿಂದ ಮೇಷ ರಾಶಿಯವರಿಗೆ ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣವಾಗುತ್ತವೆ. ಜೀವನದಲ್ಲಿ ವೇಗವಾಗಿ ಮುಂದುವರಿಯುವ ಕನಸನ್ನು ನೀವೀಗ ಕಾಣಬಹುದಾಗಿದೆ. ಈ ಬಾರಿ ಶನಿಯ ಉತ್ತಮ ಪ್ರಭಾವದ ಜೊತೆಗೆ ಅದೃಷ್ಟವು ನಿಮ್ಮ ಕೈ ಹಿಡಿಯಲಿದೆ. ಈ ರಾಶಿಯಲ್ಲಿ ಭಾಗ್ಯ ಸ್ಥಾನದಲ್ಲಿ ವಕ್ರಿಯಾಗಿದ್ದ ಶನಿಯು ಈಗ ಮಾರ್ಗಿಯಾಗಿದ್ದಾನೆ. ಇದರಿಂದ ಏಳಿಗೆಯನ್ನು ಕಾಣಬಹುದಾಗಿದೆ. ಸರ್ಕಾರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಇದು ಅತ್ಯಂತ ಉತ್ತಮ ಸಮಯವಾಗಲಿದೆ.
ಇದನ್ನು ಓದಿ: ಬುಧವಾರ ಈ ವಸ್ತುಗಳನ್ನು ಮನೆಗೆ ತಂದರೆ ಶುಭ...
ವೃಷಭ ರಾಶಿ
ಈ ರಾಶಿಯಿಂದ ಎಂಟನೇ ಮನೆಯಲ್ಲಿ ಮಾರ್ಗಿಯಾಗಲಿದ್ದಾನೆ. ಇದರಿಂದ ಧನ ವೃದ್ಧಿಯಾಗುವುದರ ಜೊತೆಗೆ ಯಾತ್ರಾ ಸ್ಥಳಗಳಿಗೆ ಪ್ರಯಾಣ ಮಾಡುವ ಯೋಗವಿದೆ. ಬರಬೇಕಿದ್ದ ಹಣ ಯಾವುದಾದರೂ ಇದ್ದಲ್ಲಿ ಈ ಬಾರಿ ನಿಮ್ಮ ಕೈ ಸೇರಲಿದೆ. ವೃತ್ತಿ ಕ್ಷೇತ್ರದಲ್ಲೂ ಉತ್ತಮ ಪರಿಣಾಮವನ್ನು ಕಾಣಬಹುದಾಗಿದೆ. ಪ್ರೀತಿಯ ನಿವೇದನೆ ಮಾಡಿಕೊಳ್ಳಲು ಈಗ ಸುಸಮಯವಾಗಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಏಳನೇ ಮನೆಯಲ್ಲಿರುವ ಶನಿಯು ಮಾರ್ಗಿಯಾಗಿದ್ದಾನೆ. ವಕ್ರಿ ಶನಿಯ ಕಾರಣದಿಂದ ದಾಂಪತ್ಯ ಜೀವನದಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳು ನಿವಾರಣೆಯಾಗಲಿವೆ. ಸಂಗಾತಿಗೆ ಸಂಬಂಧಪಟ್ಟವರಿಂದ ಲಾಭವಾಗುವ ಸಾಧ್ಯತೆ ಇದೆ. ಶನಿಯ ಈ ಬದಲಾವಣೆಯಿಂದ ಭಾಗ್ಯವು ನಿಮ್ಮ ಜೊತೆಗಿರುತ್ತದೆ. ಹಲವು ಸಮಯಗಳಿಂದ ಎದುರಿಸುತ್ತಿದ್ದ ತೊಂದರೆಯಿಂದ ಮುಕ್ತಿ ಪಡೆಯುವ ಕಾಲ ಇದಾಗಿದೆ.
ಕರ್ಕಾಟಕ ರಾಶಿ
ಈ ರಾಶಿಯವರಿಗೆ ಆರನೇ ಸ್ಥಾನದಲ್ಲಿದ್ದ ಶನಿಯ ಚಲನೆ ಬದಲಾಗಲಿದೆ. ಪ್ರತಿ ಸ್ಪರ್ಧಿಗಳಿಂದ ಮತ್ತು ಶತ್ರುಗಳಿಂದ ಆಗುತ್ತಿದ್ದ ತೊಂದರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಆರೋಗ್ಯದ ವಿಷಯದಲ್ಲಿಯೂ ಸುಧಾರಣೆಯನ್ನು ಕಾಣಬಹುದಾಗಿದೆ. ಸಣ್ಣಪುಟ್ಟ ಪ್ರಯಾಣಗಳನ್ನು ಮಾಡಬೇಕಾದ ಸಂದರ್ಭ ಬಂದೊದಗುತ್ತದೆ. ಕೆಲಸದ ನಿಮಿತ್ತ ಮಾಡುವ ಪ್ರಯಾಣ ಲಾಭದಾಯಕವಾಗಲಿದೆ. ಕ್ಷಮತೆಗೆ ತಕ್ಕ ಫಲವನ್ನು ಈ ಸಮಯದಲ್ಲಿ ಪಡೆಯಬಹುದಾಗಿದೆ.
