ಉಪ್ಪಿಲ್ಲದೆ ಊಟವಿಲ್ಲ. ಆಹಾರದ ರುಚಿ ಹೆಚ್ಚಿಸುವ ಈ ಉಪ್ಪು ಬರೀ ಅಡುಗೆಗೆ ಮಾತ್ರವಲ್ಲ ಆರ್ಥಿಕ ಜೀವನದಲ್ಲಿ ಏಳ್ಗೆ ಕಾಣಲು ಸಹಕಾರಿ. ಕೆಲಸ ಸಿಗದವರಿಗೆ ಉದ್ಯೋಗ ಪ್ರಾಪ್ತಿ ಮಾಡುವ ಶಕ್ತಿ ಉಪ್ಪಿಗಿದೆ.  

ವಾಸ್ತು ಶಾಸ್ತ್ರದ ಪ್ರಕಾರ ದಿಕ್ಕುಗಳಿಗೆ ಬಹಳ ಮಹತ್ವವಿದೆ. ಆಯಾ ದಿಕ್ಕುಗಳಿಗೆ ಅನುಸಾರವಾಗಿ ವಸ್ತುಗಳನ್ನು ಇಡುವುದು, ಮನೆಯನ್ನು ಕಟ್ಟುವುದು ಇವೆಲ್ಲ ರೂಢಿಯಲ್ಲಿದೆ. ಅದರ ಅನುಸಾರವಾಗಿಯೇ ಅಗ್ನಿ ಮೂಲೆ, ಕುಬೇರ ಮೂಲೆಗಳೆಲ್ಲ ಇವೆ. ಹೀಗೆ ನಿಶ್ಚಿತ ಪ್ರದೇಶದಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಆರ್ಥಿಕವಾಗಿ, ಶಾರೀರಿಕವಾಗಿ, ಕೌಟುಂಬಿಕವಾಗಿ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಎಲ್ಲ ವಸ್ತುಗಳಂತೆ ಉಪ್ಪು ಕೂಡ ನಮ್ಮ ಏಳ್ಗೆಗೆ ಸಹಕಾರಿಯಾಗಲಿದೆ. ಉಪ್ಪನ್ನು ಬಳಸದೇ ಯಾವ ಅಡುಗೆಯೂ ರುಚಿಯೆನಿಸಲು ಸಾಧ್ಯವಿಲ್ಲ. ಯಾವುದೇ ಅಡುಗೆಯಾದರೂ ಉಪ್ಪಿಲ್ಲದೇ ಇದ್ದರೆ ಅದಕ್ಕೆ ಪರಿಪೂರ್ಣತೆ ಸಿಗಲಾರದು. ಆಹಾರದ ರುಚಿ ಹೆಚ್ಚಿಸುವ ಉಪ್ಪು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತೆ.

Add Asianetnews Kannada as a Preferred SourcegooglePreferred

ವಿದ್ಯಾಭ್ಯಾಸ (Education) ಮುಗಿಸಿ ವೃತ್ತಿ (Career) ಆರಂಭಿಸುವುದು ಜೀವನದ ಪ್ರಮುಖ ಘಟ್ಟ. ಕೆಲವೊಮ್ಮೆ ಎಷ್ಟೇ ಕಲಿತಿದ್ದರೂ ನಾವು ಅಂದುಕೊಂಡಂತೆ ನಮ್ಮ ಕರೀಯರ್ ಶುರು ಮಾಡಲು ಏನೇನೋ ವಿಘ್ನಗಳು ಬರುತ್ತಲೇ ಇರುತ್ತದೆ. ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು, ದುಡಿಯಬೇಕು ಎನ್ನುವ ಹಂಬಲ ಇರುವವರಿಗೆ ಪದೇ ಪದೇ ಎದುರಾಗುವ ತೊಂದರೆಗಳಿಂದ ರೋಸಿಹೋಗಬಹುದು. ಇಂತಹ ಸಮಸ್ಯೆ (Problem) ಇರುವವರು ನಿಮ್ಮ ಮನೆಯ ಕೆಲವು ಪ್ರದೇಶದಲ್ಲಿ ಉಪ್ಪನ್ನು ಸೋಕಿದರೆ ನಿಮ್ಮ ವೃತ್ತಿಯಲ್ಲಿ ಉತ್ತಮ ಅಭಿವೃದ್ಧಿಯನ್ನು ಕಾಣಬಹುದು. 

ಭಾರತೀಯ (Indian) ಅಡುಗೆಯಲ್ಲಿ ಬಳಸುವ ಬಹುತೇಕ ಎಲ್ಲ ಮಸಾಲೆಗಳ ಕೂಡ ಒಂದೊಂದು ಗ್ರಹಕ್ಕೆ ಸಂಬಂಧಪಟ್ಟಿದೆ. ಅದರಂತೆ ಉಪ್ಪು ಸೂರ್ಯ ಗ್ರಹಕ್ಕೆ ಸಂಬಂಧಿಸಿದೆ. ಗ್ರಹಗಳಿಗೆ ಅಧಿಪತಿ ಸೂರ್ಯ. ಸೂರ್ಯ ವೃತ್ತಿ ಜೀವನದ ಪ್ರಮುಖ ಅಂಶ ಎಂದು ಹೇಳಲಾಗುತ್ತೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಉಪ್ಪಿನಿಂದ ನಡೆಸುವ ಎಲ್ಲ ಪ್ರಯೋಗಗಳು ಕೂಡ ಸೂರ್ಯನ ಪ್ರಭಾವವನ್ನು ಹೆಚ್ಚಿಸುತ್ತದೆ. ಇದರಿಂದ ವ್ಯಕ್ತಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು. ನಿಮಗೂ ಕೂಡ ಕರೀಯರ್ ನಲ್ಲಿ ಹೆಚ್ಚಿನ ಗ್ರೋಥ್ ಬೇಕಿದ್ದರೆ ಹೀಗೆ ಮಾಡಿ.

ಹಗಲಿನಲ್ಲಿ ನಿಮ್ಮ ಮನೆಯ ಒಳಗಿನ ಮತ್ತು ಹೊರಗಿನ ಚರಂಡಿಗಳಿಗೆ ಸ್ವಲ್ಪ ಉಪ್ಪು ಚಿಮುಕಿಸಿ. ಇದರಿಂದ ನಿಮ್ಮ ವೃತ್ತಿಜೀವನದಲ್ಲಿ ಹೆಚ್ಚಿನ ಬೆಳವಣಿಗೆ ಕಾಣಬಹುದು. ಚರಂಡಿಗಳು ನಕಾರಾತ್ಮಕ ಶಕ್ತಿಯ ಮೂಲವೆಂದು ಹೇಳಲಾಗುತ್ತೆ. ಉಪ್ಪಿಗೆ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಗುಣವಿದೆ. ಹಾಗಾಗಿ ಅಂತಹ ಜಾಗಗಳಲ್ಲಿ ಉಪ್ಪನ್ನು ಸಿಂಪಡಿಸಬೇಕು. ಹಾಗಾಗಿ ಪ್ರತಿನಿತ್ಯ ಸ್ವಲ್ಪ ಉಪ್ಪನ್ನು ಚರಂಡಿಗೆ ಹಾಕುವುದರಿಂದ ವೃತ್ತಿ ಜೀವನದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು.

LAL KITAB REMEDIES: ಕರ್ಕಾಟಕ, ವೃಶ್ಚಿಕ ರಾಶಿ ನಿಮ್ಮದಾದರೆ, ಶನಿ ಧೈಯ್ಯಾದಿಂದ ಬಿಡುಗಡೆಗೆ ಹೀಗೆ ಮಾಡಿ..

ಕೆಲವೊಮ್ಮೆ ನೌಕರಿ ಸಿಕ್ಕ ನಂತರ ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ ಉದ್ಯೋಗದಲ್ಲಿ ಪ್ರಮೋಶನ್ ಸಿಕ್ಕಿರುವುದಿಲ್ಲ. ಉಪ್ಪನ್ನು ಹೀಗೆ ಚರಂಡಿಗೆ ಹಾಕುವುದರಿಂದ ನೀವು ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಾಧ್ಯತೆಗಳು ಕೂಡ ಹೆಚ್ಚುತ್ತದೆ. ಉಪ್ಪು ಸೂರ್ಯ ಗ್ರಹಕ್ಕೆ ಸಂಬಂಧಿಸಿರುವುದರಿಂದ ಸೂರ್ಯನ ಪ್ರಭಾವ ವ್ಯಕ್ತಿಯ ಮೇಲೆ ಉಂಟಾಗಿ ವ್ಯಕ್ತಿಯು ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದುತ್ತಾನೆ.

ಒಂದು ಗಾಜಿನ ಪಾತ್ರೆಯಲ್ಲಿ ಸ್ವಲ್ಪ ಉಪ್ಪು ಮತ್ತು ಲವಂಗವನ್ನು ಹಾಕಿ ಮನೆಯ ಯಾವುದಾದರೊಂದು ಮೂಲೆಯಲ್ಲಿಡಿ. ಇದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ದೂರವಾಗಿ ಸಂಪತ್ತು, ಶಾಂತಿ ನೆಲೆಸುತ್ತದೆ.
ಉಪ್ಪು ಕಾಸ್ಮಿಕ್ ಎನರ್ಜಿಯನ್ನು ನೀಡುತ್ತದೆ. ಹಾಗಾಗಿ ಒಂದು ಬಟ್ಟಲಿಗೆ ನೀರನ್ನು ಹಾಕಿ ಅದಕ್ಕೆ ಉಪ್ಪನ್ನು ಹಾಕಿ ಮನೆಯಲ್ಲಿಡಿ. ಇದು ದುಷ್ಟ ಶಕ್ತಿಯು ಮನೆಯ ಒಳಗೆ ಬರುವುದನ್ನು ತಡೆಯುತ್ತದೆ. ಇದನ್ನು ಯಾರೂ ಚೆಲ್ಲದಂತೆ, ಮುಟ್ಟದಂತೆ ನಿಗಾವಹಿಸಿ.

ಸಂಪತ್ತು, ಸುಖ ಪ್ರಾಪ್ತಿಗೆ ಸಾಲಿಗ್ರಾಮ ಪೂಜಿಸಿ

ಉಪ್ಪಿನಿಂದ ಮಾಡುವ ಇಂತಹ ಪ್ರಯೋಗಗಳು ಯಾರಿಗೂ ಕಾಣದಂತೆ ನೋಡಿಕೊಳ್ಳಬೇಕು. ಯಾರ ಎದುರಿನಲ್ಲಿಯೂ ನೀವು ಹೀಗೆ ಮಾಡಬಾರದು. ಅದರಿಂದ ಉಪ್ಪಿನ ಪ್ರಭಾವ ಕಡಿಮೆಯಾಗಿ ಒಳಿತಿನ ಬದಲು ಕೆಡುಕಾಗಬಹುದು.