Sabarimala Income: 39 ದಿನಗಳಲ್ಲಿ ಶಬರಿಮಲೆ ದೇಗುಲಕ್ಕೆ 223 ಕೋಟಿ ಆದಾಯ ಸಂಗ್ರಹ

ಮಂಡಲ ಅವಧಿಯ ಆರಂಭದಿಂದ 39 ದಿನಗಳಲ್ಲಿ ಶಬರಿಮಲೆಯಲ್ಲಿ 223 ಕೋಟಿ ರು. ಆದಾಯ ಸಂಗ್ರಹವಾಗಿದೆ.

Sabarimala records a sharp surge in income Revenue reaches around Rs 225 crore skr

ಪಟ್ಟಣಂತಿಟ್ಟ: ಇಲ್ಲಿನ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿಯ(Sabarimala Ayyappa Swamy temple) ವಾರ್ಷಿಕ 41 ದಿನಗಳ ಮಂಡಲಂ ಮಕರವಿಳಕ್ಕು ಯಾತ್ರೆಗೆ ಮಂಗಳವಾರ ತೆರೆ ಬೀಳಲಿದೆ. ಈ ನಡುವೆ ನ.17ರಿಂದ ಆರಂಭವಾದ ಯಾತ್ರೆಯ ಅವಧಿಯಲ್ಲಿ ಸೋಮವಾರದವರೆಗೂ ದೇಗುಲ ಸನ್ನಿಧಿಯಲ್ಲಿ 223 ಕೋಟಿ ರು. ಆದಾಯ ಸಂಗ್ರಹವಾಗಿದೆ. ಈ ಬಾರಿ 30 ಲಕ್ಷ ಭಕ್ತಾಧಿಗಳು ದೇವರ ದರ್ಶನ ಪಡೆದು ಕೊಂಡಿದ್ದಾರೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಿಳಿಸಿದೆ. ಡಿ.27ರಿಂದ 3 ದಿನ ದೇವಸ್ಥಾನ ಮುಚ್ಚಿರಲಿದೆ. ಡಿ.30 ಬಾಗಿಲು ತೆರೆದು ಮಕರವಿಳಕ್ಕು ಪೂಜೆಗಳು ಶುರುವಾಗಿ ಜ.14ಕ್ಕೆ ಮಕರಜ್ಯೋತಿ ಕಾಣಲಿದೆ.

ಈ ಬಾರಿ ಹೆಚ್ಚು ಮಕ್ಕಳ ಭೇಟಿ
ಈ ಬಗ್ಗೆ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಅಡ್. ಕೆ.ಅನಂತ ಗೋಪನ್ ಮಾಹಿತಿ ನೀಡಿ, 39 ದಿನಗಳ ಅವಧಿಯಲ್ಲಿ  29,08,500 ಯಾತ್ರಿಕರು ಆಗಮಿಸಿದ್ದಾರೆ. ಅವರಲ್ಲಿ ಸುಮಾರು 20 ಪ್ರತಿಶತ ಮಕ್ಕಳು. ಇದರಿಂದ ಒಟ್ಟು ಆದಾಯ ರೂ.222,98,70,250 ಸಂಗ್ರಹವಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ನಿರ್ಬಂಧ ಹೇರಿರುವುದು ಮಕ್ಕಳ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ತಿಳಿಸಿದ್ದಾರೆ. 

ಈ ಬಾರಿ ಮಕ್ಕಳು, ಅಂಗವಿಕಲರು ಮತ್ತು ವೃದ್ಧರಿಗೆ ವಿಶೇಷ ಸರತಿ ಸಾಲು ಪರಿಣಾಮಕಾರಿಯಾಗಿತ್ತು. ಕನಿಷ್ಠ ದೂರುಗಳೊಂದಿಗೆ ಯಾತ್ರೆಯನ್ನು ಪೂರ್ಣಗೊಳಿಸಲಾಯಿತು. ಒಂದು ದಿನ ಮಾತ್ರ ದರ್ಶನಕ್ಕೆ ಜನರು ಹೆಚ್ಚು ಸಮಯ ತಂಗಬೇಕಾಯಿತು ಎಂದು ದೂರಿದರು. ಶಬರಿಮಲೆಯಲ್ಲಿ ಸಾಮಾನ್ಯವಾಗಿ ಜನಸಂದಣಿ ಇರುತ್ತದೆ. ಆದರೆ ಅಯ್ಯಪ್ಪ ದರ್ಶನಕ್ಕೆ ಭಕ್ತರು ವಾಡಿಕೆಗಿಂತ ಹೆಚ್ಚು ಹೊತ್ತು ಕಾಯಬೇಕಾದ ಪರಿಸ್ಥಿತಿ ಬಂದರೆ ಪರಿಶೀಲಿಸಲಾಗುವುದು ಎಂದು ದೇವಸ್ವಂ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ. ಈ ಬಾರಿ ಮಂಡಲ ಅವಧಿಯನ್ನು ಮಂಡಳಿಯು ಯಶಸ್ವಿಯಾಗಿ ನಿರ್ವಹಿಸಿದೆ.

ತಿರುಪತಿ ದೇವಾಲಯದ ಗೋಪುರಕ್ಕೆ ಚಿನ್ನದ ಲೇಪನ, 6-8 ತಿಂಗಳು ದೇಗುಲ ಕ್ಲೋಸ್?

ಮಂಡಲ ಪೂಜೆ ಮುಕ್ತಾಯ
ಶಬರಿಮಲೆಯಲ್ಲಿ 41 ದಿನಗಳ ಮಂಡಲ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ಮಂಡಲ ಪೂಜೆ ನಡೆಯಲಿದೆ. ನಂತರ ಅಭಿಷೇಕ ಮತ್ತು ನಿತ್ಯದ ಪೂಜೆ ನಡೆಯಲಿದೆ. ಮಧ್ಯಾಹ್ನ 12.30 ರಿಂದ 1 ಗಂಟೆಯವರೆಗೆ ಮಂಡಲ ಪೂಜೆ ನಡೆಯಲಿದೆ. ಮಂಡಲ ಪೂಜೆಯ(Mandala puja) ನಂತರ ದೇವಾಲಯವನ್ನು ಮುಚ್ಚಲಾಗುತ್ತದೆ ಮತ್ತು ಸಂಜೆ ಮತ್ತೆ ತೆರೆಯಲಾಗುತ್ತದೆ. ಅಯ್ಯಪ್ಪ ಭಕ್ತರಿಗೆ ಮಂಡಲ ಪೂಜೆ ಹಾಗೂ ತಂಗಯಂಕಿ ಮೆರವಣಿಗೆಗೆ ದೇವಸ್ವಂ ಬೋರ್ಡ್ ಹಾಗೂ ಪೊಲೀಸರು ಜಂಟಿಯಾಗಿ ಸಕಲ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. 
ಈ ದಿನದ ವಿಶೇಷವೆಂದರೆ ತಿರುವಿತಾಂಕೂರ್ ರಾಜಮನೆತನದವರು ಅಯ್ಯಪ್ಪನಿಗೆ ಸಮರ್ಪಿಸಿರುವ ತಂಕಾ ವಸ್ತ್ರದೊಂದಿಗಿನ ಪೂಜೆ. ತಂಗಯಂಗಿ(ಬಂಗಾರದ ಆಭರಣಗಳನ್ನೊಳಗೊಂಡ ವಸ್ತ್ರ)ಯನ್ನು ವರ್ಷಕ್ಕೊಮ್ಮೆ ಮಾತ್ರ ಶಬರಿಮಲೆ ಸನ್ನಿಧಾನಕ್ಕೆ ಕರೆತರಲಾಗುತ್ತದೆ. ಮಂಡಲ ಪೂಜೆಯ ಹಿಂದಿನ ದಿನ ಸಂಜೆ ದೀಪಾರಾಧನೆ ಮತ್ತು ಮಂಡಲ ಪೂಜೆಯ ಸಮಯದಲ್ಲಿ ಮಾತ್ರ ಅಯ್ಯಪ್ಪನ ಮೂರ್ತಿಗೆ ತಂಕಾ ವಸ್ತ್ರವನ್ನು ಹೊದಿಸಲಾಗುತ್ತದೆ. ಮೂರು ದಿನಗಳ ಹಿಂದೆ ಆರನ್ಮುಲ್ಲಾ ಪಾರ್ಥಸಾರಥಿ ದೇವಸ್ಥಾನ(Aranmulla Parthasarathi Temple)ದಿಂದ ತಂಗ ಅಂಗಿ ಮೆರವಣಿಗೆ ಹೊರಟಿತ್ತು.

ಕೊಪ್ಪಳ ಅಜ್ಜನ ಜಾತ್ರೆಗಾಗಿ ಸಿದ್ಧವಾಗುತ್ತಿವೆ 4 ಲಕ್ಷ ಶೇಂಗಾ ಹೋಳಿಗೆ!

ಡಿಸೆಂಬರ್ 27 ರಂದು ರಾತ್ರಿ ಹರಿವರಾಸನಂ ಗಾಯನದೊಂದಿಗೆ ಮುಕ್ತಾಯವಾಗುವ ನಟ ಮಕರವಿಳಕವು ಡಿಸೆಂಬರ್ 30 ರಂದು ಸಂಜೆ 5 ಗಂಟೆಗೆ ಉತ್ಸವಕ್ಕೆ ತೆರೆಯುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios