Asianet Suvarna News Asianet Suvarna News

ಯಾದಗಿರಿ: ಗುರಮಠಕಲ್‌ನಲ್ಲಿ ಅಯ್ಯಪ್ಪ ಸ್ವಾಮಿಯ ಮಹಾ ಪಡಿಪೂಜೆ..!

ದೇಶದ ವಿವಿಧ ರಾಜ್ಯದ ತಂತ್ರಿಗಳು ಹಾಗೂ ಭಕ್ತರು ಭಾಗಿ, ಕನ್ಯಾಸ್ವಾಮಿ ಶರಣಗೌಡ ಕಂದಕೂರು ನೇತೃತ್ವದ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗಿ

Sabarimala Ayyappa Swamy Padi Pooja Held at Gurumitkal in Yadgir grg
Author
First Published Dec 22, 2022, 12:00 AM IST

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ(ಡಿ.22): ನಮ್ಮ ದೇಶ ಭಕ್ತಿ ಮತ್ತು ಶಕ್ತಿ ತಮ್ಮದೆಯಾದ ಇತಿಹಾದ ಹೊಂದಿದೆ. ಆ ದೇವರಲ್ಲಿ ಭಕ್ತರು ಅಪೇಕ್ಷ ಪಡದೇ ಆತನ ಭಕ್ತಿಯಲ್ಲಿ ಬಿದ್ದರೆ, ಆ ದೇವರು ಭಕ್ತ ಯಾವುನೇ ಇರಲಿ ಆತನಿಗೆ ತನ್ನದೆಯಾದ ಶಕ್ತಿಯನ್ನು ನೀಡುತ್ತಾನೆ. ಅಂತಹ ಭಕ್ತರ ಭಕ್ತಿ, ಶವರಿಮಲೈ ಅಯ್ಯಪ್ಪ ಸ್ವಾಮಿಯ ಶಕ್ತಿ ಸಾಕ್ಷಾತ್ ಕಂಡಬಂದಿದ್ದು, ಯಾದಗಿರಿ ಜಿಲ್ಲೆಯ ಗುರಮಠಕಲ್ ಪಟ್ಟಣದಲ್ಲಿ. ಎಲ್ಲಿ ನೋಡಿದ್ರೂ ಅಯ್ಯಪ್ಪ ಮಾಲಾಧಾರಿಗಳು, ಇದರ ನೇತೃತ್ವ ವಹಿಸಿದ್ದು ಗುರಮಠಕಲ್ ಮತಕ್ಷೇತ್ರದ 2023 ರ ಜೆಡಿಎಸ್ ಅಭ್ಯರ್ಥಿ ಕನ್ಯಾಸ್ವಾಮಿ ಶರಣಗೌಡ ಕಂದಕೂರು. ಗುರಮಠಕಲ್ ಶಾಸಕ ನಾಗನಗೌಡ ಕಂದಕೂರು ಅವರ ಜನಸಂಪರ್ಕ ಕಚೇರಿಯ ಆವರಣದಲ್ಲಿ ಅಯ್ಯಪ್ಪ ಸ್ವಾಮಿಯ ಮಹಾ ಪಡಿಪೂಜೆ ಕಾರ್ಯಕ್ರಮಕ್ಕೆ ಇಡೀ ದೇಶದ ಭಕ್ತಗಣವೇ ಸಾಕ್ಷಿಯಾಯಿತು.

ಗುರಮಠಕಲ್‌ನಲ್ಲೇ ಅಯ್ಯಪ್ಪನ ದರ್ಶನ ಪಡೆದ ಸಾವಿರಾರು ಜನ

ಶಬರಿಮಲೆಯ ಅಯ್ಯಪ್ಪ ಸ್ವಾಮಿಗೆ ದೇಶದ ಮೂಲೆಯಿಂದ ಭಕ್ತರು ಹೋಗಿ ಸಂಕ್ರಾಂತಿ ದಿನದಂದು ದಿವ್ಯಜ್ಯೋತಿಯ ದರ್ಶನ ಪಡೆಯುತ್ತಾರೆ. ಆದ್ರೆ ಯಾದಗಿರಿ ಜಿಲ್ಲೆಯ ಗುರಮಠಕಲ್ ಶಾಸಕ ನಾಗನಗೌಡ ಕಂದಕೂರು ಅವರ ಪುತ್ರ 2023 ರ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು ಅವರ ನೇತೃತ್ವದಲ್ಲಿ ಸುಮಾರು 48 ದಿನಗಳ ಕಾಲ ಕಠಿಣ ವೃತ ಕೈಗೊಳ್ಳಲಾಗುತ್ತದೆ. ಜೊತೆಗೆ ಸುಮಾರು 250 ಜನ ಗುರುಸ್ವಾಮಿಗಳು ವೇದಿಕೆಯಲ್ಲಿ ಆಸೀನರಾಗಿದ್ದರು. ಈ ಐತಿಹಾಸಿಕ ಕಾರ್ಯಕ್ರಮವೂ ಬಹಳ ವಿಶಿಷ್ಟ ಮತ್ತು ವೈಭವ ನಡೆದಿದ್ದು, ಕೇರಳದಿಂದ ಎಂಟು ಜನ ತಂತ್ರಿಗಳು ಆಗಮಿಸಿದ್ದರು. ಅಯ್ಯಪ್ಪ ಸ್ವಾಮಿಯ ಪ್ರೀಯವಾದ 18 ಮೆಟ್ಟಿಲುಗಳನ್ನ ಸ್ಥಾಪಿಸಲಾಗಿತ್ತು. ಆ 18 ಮೆಟ್ಟಿಲುಗಳಿಗೆ ಹೂವಿನಿಂದ ವಿಶೇಷ ಅಲಂಕಾರ ಹಾಗೂ ಮೆಟ್ಟಿಲುಗಳ ಮೇಲೆ ದೀಪಗಳನ್ನು ಪ್ರಜ್ವಲಿಸುವಂತೆ ಮಾಡಲಾಗಿತ್ತು. ಈ ದೀಪಗಳಿಗೆ ಕೇರಳದ ಎಂಟು ತಂತ್ರಿಗಳು ಪೂಜೆ-ಕೈಂಕರ್ಯಗಳನ್ನು ಕೈಗೊಂಡರು. 

ಹಿಂದೂ ಧರ್ಮದ ಐದು ಶಕ್ತಿಯುತ ಹಾವುಗಳು ಇವೇ ನೋಡಿ.

ಈ ಮಹಾ ಪಡಿಪೂಜೆ ಕಾರ್ಯಕ್ರಮವೂ ಬೆಳಗಿನ ಜಾವ 5 ಗಂಟೆಗೆ ಆರಂಭಗೊಂಡು, ಕನ್ಯಾಸ್ವಾಮಿ ಶರಣಗೌಡ ಕಂದಕೂರು ಅವರಿಂದ ಗಣಪತಿ ಪೂಜೆ ಮಾಡಿಸಲಾಯಿತು. ಕನ್ಯಾಸ್ವಾಮಿಯಾದ ಶರಣಗೌಡ ಕಂದಕೂರು ಅವರಿಗೆ ವೇದಿಕೆಯ ಮುಂಭಾಗದಲ್ಲಿ ವಿಶೇಷ ಆಸನದ ವ್ಯವಸ್ಥೆ ಮಾಡಿದ್ದರು. ಅವರು ಅಯ್ಯಪ್ಪ ಸ್ವಾಮಿ ಮೂರ್ತಿಗೆ ಸೇವಂತಿಗೆ, ತಾವರೆ, ತುಳಸಿ, ಮಲ್ಲಿಗೆ, ಬಿಲ್ವಪತ್ರೆಗಳಿಂದ ಪುಷ್ಪಾಭಿಷೇಕ ಮಾಡಿದರು. ಈ ಮಹಾ ಪಡಿಪೂಜೆ ಕಾರ್ಯಕ್ರಮದಲ್ಲಿ ಅಯ್ತಪ್ಪನ ಗೀತ -ಗಾಯನಗಳು ಭಕ್ತರಲ್ಲಿ ಸಂಗೀತ ಸುಧೆಯಲ್ಲಿ ಮಿಂದೆಳುವಂತೆ ಮಾಡಿತು. ಸುಮಾರು 30-40 ತಾಲೂಕುಗಳಿಂದ ಪಕ್ಷಾತೀತವಾಗಿ, ಯಾವುದೇ ಜಾತಿ-ಧರ್ಮ, ಬೇಧ-ಭಾವ ಎಂಬುದನ್ನು ಬಿಟ್ಟು ಜನ ಸೇರಿದ್ದು ಇದು ಗುರಮಠಕಲ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸುವಂತೆ ಮಾಡಿತು.

Palmistry: ಹಸ್ತರೇಖೆ ನೋಡಿ ಸರ್ಕಾರಿ ನೌಕರಿ ಸಿಗುವುದೋ ಇಲ್ಲವೋ ತಿಳಿಯಿರಿ..

2023 ಕ್ಕೆ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಸಂಕಲ್ಪ: ಶರಣಗೌಡ ಕಂದಕೂರು

2023 ರ ಗುರಮಠಕಲ್ ಜೆಡಿಎಸ್ ಅಭ್ಯರ್ಥಿ ಅಯ್ಯಪ್ಪ ಮಾಲಾಧಾರಿ ಕನ್ಯಾಸ್ವಾ‌ಮಿ ಶರಣಗೌಡ ಕಂದಕೂರು ಅವರ ನೇತೃತ್ವದಲ್ಲಿ ನಡೆದ ಪಡಿಪೂಜೆ ಕಾರ್ಯಕ್ರಮ ರಾಜಕೀಯಕ್ಕೂ ಕೂಡ ಸಾಕ್ಷಿಯಾಯಿತು. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಶರಣಗೌಡ ಕಂದಕೂರು ಮಾತನಾಡಿ, ನಮ್ಮ ತಂದೆ ನಾಗನಗೌಡ ಕಂದಕೂರು ಶಾಸಕರಾಗಬೇಕು ಎಂದು ನಾನು ಕೆಲವು ವರ್ಷದ ಹಿಂದೆ ಸಂಕಲ್ಪ ಮಾಡಿದ್ದೆ. ಅದು ಕೋವಿಡ್ ಹಾಗೂ ಇತರೆ ಕಾರಣಗಳಿಂದ ಸಾಕಾರಗೊಳಸಿಲು ಆಗಿರಲಿಲ್ಲ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ನಾನು ಕನ್ಯಾಸ್ವಾಮಿ ಆಗಿದ್ದೇನೆ ಅಂದ್ರೆ ಮೊದಲು ಬಾರಿ ಅಯ್ಯಪ್ಪ ಮಾಲೆ ಧರಿಸುವವರಿಗೆ ಕನ್ಯಾಸ್ವಾಮಿ ಅಂತ ಕರೆಯುತ್ತಾರೆ. ಹಾಗಾಗಿ ನನ್ನ ಜೊತೆಗೆ ಹಲವು ಜನರು ಅಯ್ಯಪ್ಪನ ಮಾಲೆ ಧರಿಸಿದ್ದಾರೆ, ಇದೊಂದು ಪಕ್ಷಾತೀತ ಕಾರ್ಯಕ್ರಮ, ಇದೊಂದು ಅದ್ಭುತ ಧಾರ್ಮಿಕ ಕಾರ್ಯಕ್ರಮವಾಗಿದೆ. ನಂತರ  ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ  ನಿಖಿಲ ಕುಮಾರಸ್ವಾಮಿ ಸಮ್ಮುಖದಲ್ಲೆ 2023 ಕ್ಕೆ ಹೆಚ್‌.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಬೇಕು ಎಂಬ ಸಂಕಲ್ಪವನ್ನು ಶರಣಗೌಡ ಕಂದಕೂರು ಮಾಡಿದರು. ಕುಮಾರಸ್ವಾಮಿ ಸಿಎಂ ಆದ್ರೆ ನಾನು ಮತ್ತು ನಿಖಿಲ ಕುಮಾರಸ್ವಾಮಿ ಅವರು ಮಾಲಾಧಾರಿಗಳಾಗಿ ಮತ್ತೆ ಅಯ್ತಪ್ಪನ ಸೇವೆ ಮಾಡುತ್ತೇವೆ ಎಂದು ಹೇಳಿದರು.

ಶರಣಗೌಡ ಕಂದಕೂರ ನಮ್ಮ ಸಹೋದರ: ನಿಖಿಲ್‌ ಕುಮಾರಸ್ವಾಮಿ

ಗುರಮಠಕಲ್ ನ ಮಹಾ ಪಡಿಪೂಜೆ ಕಾರ್ಯಕ್ರಮಕ್ಕೆ ವಿಶೇಷ ಭಕ್ತನಾಗಿ ಬಂದಿದ್ದ ಜೆಡಿಎಸ್ ಯುವ ಘ‌ಟಕದ ರಾಜ್ಯಾಧ್ಯಕ್ಷ ನಿಖಿಲ ಕುಮಾರಸ್ವಾಮಿ ಮಾತನಾಡಿ, ನನ್ನದು ಇದು ಅನಿರೀಕ್ಷಿತ ಕಾರ್ಯಕ್ರಮವಾಗಿದೆ. ಜೆಡಿಎಸ್ ನ ಪಂಚರತ್ನ ರ್ಯಾಲಿ ಮಂಡ್ಯ ಜಿಲ್ಲೆಗೆ ಎಂಟ್ರಿ ಕೊಟ್ಟಿದೆ. ಅಲ್ಲಿ ನಾನು ಇರಬೇಕಾಗಿತ್ತು. ಆದ್ರೆ ಆ ಸಾಕ್ಷಾತ್ ಅಯ್ಯಪ್ಪನೇ ನನ್ನನ್ನು ಇಲ್ಲಿಗೆ ಕರೆಸಿದ್ದಾನೆ. ನಮ್ಮ ಹಾಗೂ ಶಾಸಕ ನಾಗನಗೌಡ ಕಂದಕೂರು ಅವರ ಕುಟಂಬದ ನಡುವೆ ಅವಿನಾಭಾವ ಸಂಬಂಧವಿದೆ. ಹಲವು ದಶಕಗಳಿಂದ ಇವರ ಕುಟುಂಬ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಜೊತೆಗಿದೆ. ಶರಣಗೌಡ ಕಂದಕೂರು ನಮ್ಮ ಮನೆಯ ಸಹೋದರನಿದ್ದಂತೆ. ಶರಣಗೌಡ ಕಂದಕೂರು ಒಬ್ಬ ಕ್ರಿಯಾಶೀಲ ಯುವಕ. 2023ರ ವಿಧಾನಸಭೆಯ ಚುನಾವಣೆಗೆ ಗುರಮಠಕಲ್ ಅಭ್ಯರ್ಥಿಯಾಗಿ ಅವರನ್ನ ಪಕ್ಷ ಘೋಷಣೆ ಮಾಡಿದೆ. ಶರಣಗೌಡ ಅವರನ್ನು ಗುರಮಠಕಲ್ ಕ್ಷೇತ್ರದ ಜನ ಮುಂದೆ ವಿಧಾನಸೌಧಕ್ಕೆ ಕಳುಹಿಸಿ ಕೊಡಬೇಕು. ಇದರಿಂದ ನಿಮ್ಮ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.
 

Follow Us:
Download App:
  • android
  • ios