Asianet Suvarna News Asianet Suvarna News

Astrology Tips: ದೇವರ ಮನೆಯಲ್ಲಿ ದೀಪ ಬೆಳಗುವಾಗ ಆಗದಿರಲಿ ಈ ತಪ್ಪು!

ಸೌಭಾಗ್ಯದ ಸಂಕೇತ ದೀಪ. ಹಾಗಾಗಿಯೇ ಯಾವುದೇ ಶುಭ ಕಾರ್ಯ ಶುರುವಾಗುವುದು ದೀಪ ಬೆಳಗುವ ಮೂಲಕ. ಪ್ರತಿ ದಿನ ದೇವರ ಮನೆಯಲ್ಲಿ ದೀಪ ಹಚ್ಚಿಯೆ ಪೂಜೆ ಮಾಡಲಾಗುತ್ತದೆ. ಈ ದೀಪ ಹಚ್ಚುವ ಮೊದಲು ಅದರ ನಿಯಮ ತಿಳಿದ್ರೆ ಒಳ್ಳೆಯದು.
 

Rules To Keep In Mind While Lighting Diya At Home Temple
Author
First Published Nov 8, 2022, 12:43 PM IST

ಮನೆಯ ಕತ್ತಲೆಂಬ ನೋವನ್ನು ಹೊಡೆದೋಡಿಸಿ ಬೆಳಕೆಂಬ ಸುಖವನ್ನು ನೀಡುವುದು ದೀಪ. ಹಿಂದೂ ಧರ್ಮದಲ್ಲಿ ದೀಪಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಯಾವುದೇ ಸಭೆ, ಸಮಾರಂಭವಿರಲಿ, ಪೂಜೆ, ಪುಣ್ಯ ಕೆಲಸಗಳಿರಲಿ, ದೀಪ ಹಚ್ಚುವ ಮೂಲಕವೇ ಶುಭಾರಂಭ ಮಾಡಲಾಗುತ್ತದೆ. ವ್ಯಕ್ತಿಯ ಮರಣದ ನಂತ್ರ ಆತನ ಆತ್ಮವನ್ನು ದೀಪಕ್ಕೆ ಹೋಲಿಕೆ ಮಾಡಲಾಗುತ್ತದೆ. ಪ್ರತಿ ದಿನ ಮನೆಯಲ್ಲಿ ದೀಪ ಬೆಳಗುವ ಸಂಪ್ರದಾಯ ಹಿಂದೂ ಧರ್ಮದಲ್ಲಿದೆ. ಕಾರ್ತಿಕ ಮಾಸದಲ್ಲಿ ತಿಂಗಳ ಪೂರ್ತಿ ಮನೆ ತುಂಬ ದೀಪವನ್ನು ಹಚ್ಚಲಾಗುತ್ತದೆ. 

ದೇವರ (God) ಮನೆಯಲ್ಲಿ ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ದೀಪ (Lamp) ವನ್ನು ಹಚ್ಚಿಲಾಗುತ್ತದೆ. ಕೆಲವರ ಮನೆಯಲ್ಲಿ ಇಡೀ ದಿನ, ದೇವರ ಮನೆಯಲ್ಲಿ ದೀಪ ಬೆಳಗುತ್ತಿರುತ್ತದೆ. ದೀಪ ಆರಿ ಹೋದ್ರೆ ಅದನ್ನು ಅಪಶಕುನವೆಂದು ಭಾವಿಸಲಾಗುತ್ತದೆ. ದೀಪ ಹಚ್ಚಿದ್ರೆ ಸಾಲದು, ದೀಪವನ್ನು ಹೇಗೆ ಹಚ್ಚಬೇಕು ಎಂಬುದು ತಿಳಿದಿರಬೇಕು. ಸುಖ, ಸಂತೋಷಕ್ಕೆ ಕಾರಣವಾಗುವ ದೀಪವನ್ನು ಹಚ್ಚುವ ವೇಳೆ ಜ್ಯೋತಿಷ್ಯ ಶಾಸ್ತ್ರದ ಸಲಹೆಯನ್ನು ಪಾಲನೆ ಮಾಡಿದ್ರೆ ಫಲ ಪ್ರಾಪ್ತಿಯಾಗುತ್ತದೆ. ನಾವಿಂದು ದೇವರ ಮನೆಯಲ್ಲಿ ದೀಪ ಹಚ್ಚುವಾಗ ಏನೆಲ್ಲ ನೆನಪಿಟ್ಟುಕೊಳ್ಳಬೇಕು ಎಂಬುದನ್ನು ನಿಮಗೆ ಹೇಳ್ತೇವೆ. 

ಮನುಷ್ಯ ಪ್ರಾಣಿಗಿಂತ ಏಕೆ ವಿಭಿನ್ನ ಹೇಳಿ? ಚಾಣಕ್ಯ ಏನು ಹೇಳಿದ್ದಾನೆ ಕೇಳಿಸ್ಕೊಳ್ಳಿ

ದೀಪ ಇಡುವ ದಿಕ್ಕು (Direction) ಮುಖ್ಯ : ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ದೀಪವನ್ನು ಬೆಳಗಿಸುವ ಮೊದಲು ಅದರ ದಿಕ್ಕನ್ನು ನೋಡಿಕೊಳ್ಳಬೇಕು. ಪೂಜೆಯ ಸಮಯದಲ್ಲಿ ದೀಪವನ್ನು ತಪ್ಪು ದಿಕ್ಕಿ (Direction) ನಲ್ಲಿ ಇಡಬಾರದು. ತಪ್ಪು ದಿಕ್ಕಿನಲ್ಲಿ ಇರಿಸಲಾದ ದೀಪವು ನಿಮಗೆ ಹಾನಿ ಮಾಡುತ್ತದೆ. ಆರ್ಥಿಕ (Financial) ನಷ್ಟದ ಜೊತೆಗೆ ಅನೇಕ ಆರೋಗ್ಯ (Health) ಸಮಸ್ಯೆಗಳು ಉಂಟಾಗುತ್ತವೆ. ದೇವರ ಮನೆಯಲ್ಲಿ ಯಾವಾಗ್ಲೂ  ಪಶ್ಚಿಮ ದಿಕ್ಕಿನಲ್ಲಿ ದೀಪವನ್ನು ಬೆಳಗಬೇಕು. ಈ ದಿಕ್ಕಿನಲ್ಲಿ ದೀಪವನ್ನು ಹಚ್ಚುವುದ್ರಿಂದ ಧನಾತ್ಮಕ ಶಕ್ತಿ ಮನೆಯನ್ನು ಆಕರ್ಷಿಸುತ್ತದೆ.  

ದೀಪ ಬೆಳಗುವಾಗ ಈ ನಿಯಮ ಪಾಲಿಸಿ : ದೇವರ ಮನೆಯಲ್ಲಿ ನೀವು ಎರಡು ರೀತಿಯ ದೀಪಗಳನ್ನು ಹಚ್ಚಬಹುದು. ನೀವು ದೇವರ ಬಲಭಾಗದಲ್ಲಿ ತುಪ್ಪದ ದೀಪವನ್ನು ಮತ್ತು  ದೇವರ ಎಡಭಾಗದಲ್ಲಿ ಎಣ್ಣೆಯ ದೀಪವನ್ನು ಹಚ್ಚುವುದು ಮಂಗಳಕರ. ಶಾಸ್ತ್ರಗಳ ಪ್ರಕಾರ, ಮನೆಯ ಯಾವಾಗ್ಲೂ ತುಪ್ಪದ ದೀಪ ಹಚ್ಚುವುದು ಹೆಚ್ಚು ಶುಭವೆಂದು ಪರಿಗಣಿಸಲಾಗಿದೆ. 

ಇಂಥ ದೀಪ ಹಚ್ಚಬೇಡಿ : ದೇವರ ಮನೆಯಲ್ಲಿ ಯಾವಾಗ್ಲೂ ಒಡೆದ ದೀಪವನ್ನು ಹಚ್ಚಬಾರದು. ಹಾಳಾದ, ಮುರಿದ ದೀಪದ ಬಳಕೆಯು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಯಾವುದೇ ಆಸೆ ಇದ್ರಿಂದ ಈಡೇರುವುದಿಲ್ಲ. ಲಕ್ಷ್ಮಿಯ ಕೋಪಕ್ಕೂ ಇದು ಕಾರಣವಾಗುತ್ತದೆ. ಹಾಗಾಗಿ ಹಾಳಾದ ದೀಪವನ್ನು ಬೆಳಗಬೇಡಿ.  

ಮುಂಜಾನೆ ಎದ್ದ ತಕ್ಷಣ ಈ ಕೆಲಸ ಮಾಡಿದ್ರೆ ಲಕ್ಷ್ಮೀ ದೇವಿ ಪ್ರಸನ್ನಳಾಗ್ತಾಳೆ

ದೀಪದ ಬೆಳಕು ಹೀಗಿರಲಿ : ಎಂದೂ ಮಂದವಾದ ಅಥವಾ ಅತಿ ಉರಿಯ ದೀಪವನ್ನು ಬೆಳಗಬಾರದು. ಹಾಗೆಯೇ ದೀಪದ ಬೆಳಕು ದೇವರ ಮೇಲೆ ಬೀಳುವಂತೆ ನೋಡಿಕೊಳ್ಳುವುದು ಮುಖ್ಯ.

ಬತ್ತಿಯ ಬಗ್ಗೆ ಗಮನವಿರಲಿ : ದೀಪ ಬೆಳಗುವಾಗ ಬಳಸುವ ಬತ್ತಿ ಕೂಡ ಮಹತ್ವ ಪಡೆಯುತ್ತದೆ. ನೀವು ನೇರವಾಗಿರುವ ಬತ್ತಿಯನ್ನು ಬಳಸಬೇಕು. ತುಪ್ಪದ ದೀಪ ಹಚ್ಚುವಾಗ ಅದಕ್ಕೆಂದೇ ಮಾಡಿದ ವಿಶೇಷ ಬತ್ತಿ ಬಳಸಬೇಕು. ಎಣ್ಣೆ ದೀಪವಾದ್ರೆ ಒಂದು ಬತ್ತಿಯನ್ನು ಎಂದಿಗೂ ಬಳಸಬಾರದು. ಎರಡು ಬತ್ತಿಯ ದೀಪವನ್ನು ಬೆಳಗಬೇಕು. ಎರಡೂ ಬತ್ತಿ ಒಂದೇ ನೇರದಲ್ಲಿರಬೇಕು. ಒಂದು ಬತ್ತಿ ಉರಿಯುತ್ತಿದ್ದು, ಇನ್ನೊಂದು ಬತ್ತಿ ಆರಿದ್ದರೆ ಅದು ಒಳ್ಳೆಯದಲ್ಲ. 

ದೀಪ ಹಚ್ಚುವುದ್ರಿಂದಾಗುವ ಲಾಭಗಳು : ಪ್ರತಿ ದಿನ ದೇವರ ಮನೆಯಲ್ಲಿ ದೀಪ ಹಚ್ಚುವಾದ ಕೆಲವು ಸರಳ ನಿಯಮಗಳನ್ನು ಅನುಸರಿಸಿದರೆ, ಜೀವನದಲ್ಲಿ ಯಾವಾಗಲೂ ಸಮೃದ್ಧಿ ಇರುತ್ತದೆ ಮತ್ತು ಪೂಜೆಯ ವಿಶೇಷ ಫಲಗಳು ಸಿಗುತ್ತವೆ.
 

Follow Us:
Download App:
  • android
  • ios