Asianet Suvarna News Asianet Suvarna News

Ganesha idol ಗಿಫ್ಟ್ ಆಗಿ ಕೊಡ್ತಿದೀರಾ? ಈ ವಿಷಯಗಳು ಗೊತ್ತಿರಲಿ..

ಗಣೇಶನ ವಿಗ್ರಹವನ್ನು ಉಡುಗೊರೆಯಾಗಿ ಕೊಡುವುದು ಕೆಲವರು ಶುಭವೆಂದು ಪರಿಗಣಿಸತ್ತಾರೆ. ಮತ್ತೆ ಕೆಲವರು ಗಣೇಶನನ್ನು ಉಡುಗೊರೆಯಾಗಿ ಕೊಟ್ಟರೆ ಕಷ್ಟಗಳು ಹೆಚ್ಚುತ್ತವೆ ಎನ್ನುತ್ತಾರೆ. ಯಾವುದು ನಿಜ? ಗಣೇಶನ ವಿಗ್ರಹ ಉಡುಗೊರೆಯಾಗಿ ನೀಡುವಾಗ ಯಾವೆಲ್ಲ ವಿಷಯ ಪರಿಗಣಿಸಬೇಕು ಗೊತ್ತಾ?

Rules to Follow While Buying Ganesha Idols for Gifting skr
Author
First Published Dec 21, 2022, 3:06 PM IST

ವಿವಾಹದಲ್ಲಿ, ಗೃಹಪ್ರವೇಶದಲ್ಲಿ ಅಥವಾ ಇನ್ನಾವುದೇ ಶುಭ ಸಮಾರಂಭದಲ್ಲಿ ಉಡುಗೊರೆಗಳನ್ನು ಕೊಡಬೇಕೆಂದಾಗ ಬಹುತೇಕರು ಗಣೇಶನ ವಿಗ್ರಹ ಕೊಡುವ ಬಗ್ಗೆ ಯೋಚಿಸುತ್ತಾರೆ. ಮತ್ತೆ ಕೆಲವರು ಗಣೇಶನ ವಿಗ್ರಹ ಉಡುಗೊರೆಯಾಗಿ ಪಡೆದರೆ ಕಷ್ಟಗಳು ಹೆಚ್ಚುತ್ತವೆ ಎಂದು ನಂಬುತ್ತಾರೆ. ಯಾವುದು ನಿಜ?
ನಿಜವೆಂದರೆ ಉಡುಗೊರೆಯಾಗಿ ಗಣೇಶನ ವಿಗ್ರಹವನ್ನು ಪರಿಗಣಿಸುವುದು ಬಹಳ ಉತ್ತಮ ಆಯ್ಕೆ. ಆತ ವಿಘ್ನ ನಿವಾರಕ. ಹಾಗಾಗಿ, ಗಣೇಶನ ವಿಗ್ರಹ ಉಡುಗೊರೆಯಾಗಿ ಪಡೆಯುವುದರಿಂದ ವಿಘ್ನಗಳು ಹೆಚ್ಚುವುದಿಲ್ಲ. ಬದಲಿಗೆ ತಗ್ಗುತ್ತವೆ. ಆದರೆ, ಹೀಗೆ ಗಣೇಶನ ವಿಗ್ರಹ(Ganesha idol)ವನ್ನು ಉಡುಗೊರೆಯಾಗಿ ಆಯ್ಕೆ ಮಾಡುವಾಗ ಕೆಲವೊಂದು ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. 

ನೀವು ಉಡುಗೊರೆ ಅಂಗಡಿಯಲ್ಲಿ ವಿವಿಧ ಗಾತ್ರಗಳಲ್ಲಿ ಮತ್ತು ವಿಭಿನ್ನ ಭಂಗಿಗಳಲ್ಲಿ ಇರುವ ಗಣೇಶನ ವಿಗ್ರಹಗಳನ್ನು ಕಾಣಬಹುದು. ಅಂತಿಮ ಆಯ್ಕೆಯನ್ನು ಮಾಡಲು ಬಂದಾಗ ನೀವು ಗೊಂದಲಕ್ಕೊಳಗಾಗಬಹುದು. ಆದರೆ, ನೀವು ಕೆಲವು ನಿಯಮಗಳು ಮತ್ತು ಸತ್ಯಗಳ ಬಗ್ಗೆ ತಿಳಿದಿದ್ದರೆ, ನಿಮ್ಮ ಶಾಪಿಂಗ್ ಸುಲಭವಾಗಬಹುದು ಮತ್ತು ಯಾವುದೇ ಗೊಂದಲವಿಲ್ಲದೆ ಕಾರ್ಯಗತಗೊಳಿಸಬಹುದು. ನಿಮ್ಮ ಮನೆಗೆ ಗಣೇಶನ ವಿಗ್ರಹ ತರುವಾಗ ಮತ್ತು ಉಡುಗೊರೆಗಾಗಿ ಗಣೇಶನ ವಿಗ್ರಹವನ್ನು ಆಯ್ಕೆ ಮಾಡುವ ಮೊದಲು ನಿಯಮಗಳನ್ನು ತಿಳಿದುಕೊಳ್ಳಲು ಬಯಸುವಿರಾ? 

ಎಡಮುರಿ ಗಣಪ(Left trunk Ganesha)
ಯಾವಾಗಲೂ ಎಡಕ್ಕೆ ಸೊಂಡಿಲನ್ನು ಹೊಂದಿರುವ ಗಣೇಶ ವಿಗ್ರಹವನ್ನು ಮಾತ್ರ ಖರೀದಿಸಿ. ಗಣಪತಿಯು ತನ್ನ ಸೊಂಡಿಲನ್ನು ಎಡಕ್ಕೆ ಹೊಂದಿದ್ದರೆ, ಅತ್ಯಂತ ಸುಲಭವಾಗಿ ಮತ್ತು ಸಾಮಾನ್ಯ ಪೂಜೆ ಮತ್ತು ಕಡಿಮೆ ನೈವೇದ್ಯಗಳಿಂದ ಸಂತೋಷಪಡುತ್ತಾನೆ. ಆದರೆ, ನೀವು ಬಲಮುರಿ ಗಣೇಶ ವಿಗ್ರಹವನ್ನು ಆರಿಸಿದ್ದರೆ, ವಿಗ್ರಹವು ವಿಶೇಷ ಪೂಜೆಗಳನ್ನು ಮತ್ತು ಸಂತೃಪ್ತವಾಗಿರಲು ಹೆಚ್ಚಿನ ಗಮನವನ್ನು ಬಯಸುತ್ತದೆ. ಇದಕ್ಕೆ ಹೆಚ್ಚಿನ ಮಡಿ  ಅಗತ್ಯ.

ಗುಣಪಡಿಸಲಾಗದ ಕಾಯಿಲೆಗಳನ್ನೂ ಹೇಳಹೆಸರಿಲ್ಲದಂತೆ ಮಾಡುವ ಅಶ್ವಿನಿ ಕುಮಾರರು!

ನೃತ್ಯದ ಭಂಗಿ ಬೇಡ
ನಿಂತಿರುವ ಮತ್ತು ಕುಳಿತುಕೊಳ್ಳುವ ಎರಡೂ ಭಂಗಿಯಲ್ಲಿರುವ ಗಣೇಶನ ವಿಗ್ರಹಗಳು ಕಚೇರಿ ಮತ್ತು ಮನೆಗೆ ಉತ್ತಮವೆಂದು ಪರಿಗಣಿಸಲಾಗಿದೆ. ಆದರೆ ನಟರಾಜ ಗಣೇಶ ಎನಿಸಿಕೊಳ್ಳುವ  ನೃತ್ಯ ಭಂಗಿಯನ್ನು ಹೊಂದಿರುವ ಗಣೇಶ ವಿಗ್ರಹವನ್ನು ತೆಗೆದುಕೊಳ್ಳಬಾರದು. ಇದಕ್ಕೆ ಪೂಜಾ ಕೋಣೆಯಲ್ಲಿ ಆದ್ಯತೆ ಇಲ್ಲ. ಸ್ವೀಕರಿಸುವವರು ಸೃಜನಶೀಲ ವ್ಯಕ್ತಿಯಾಗಿದ್ದರೆ ಮಾತ್ರ ನೃತ್ಯದ ಭಂಗಿಯು ಪರಿಪೂರ್ಣ ಆಯ್ಕೆಯಾಗಿದೆ.

ಗಣೇಶನ ಕಲಾತ್ಮಕ ಪ್ರಾತಿನಿಧ್ಯ(Creative Ganesha)
ಗಣಪತಿಯು ದಿಂಬಿನ ಮೇಲೆ ಒರಗಿರುವುದು ಅಥವಾ ಬಾಳೆ ಎಲೆಯ ಮೇಲೆ ಮಲಗುವುದು ಇತ್ಯಾದಿ ಕಲಾತ್ಮಕ ಗಣೇಶನ  ವಿಗ್ರಹಗಳನ್ನು ಉಡುಗೊರೆಯಾಗಿ ಮತ್ತು ಮನೆಯ ಅಲಂಕಾರಗಳಾಗಿ ಬಳಸಬಹುದು. ಆದರೆ, ಈ ವಿಗ್ರಹಗಳು ಪೂಜಾ ಕೊಠಡಿಗಳಲ್ಲಿ ಇಡಲು ಅಲ್ಲ, ಏಕೆಂದರೆ ಇವುಗಳನ್ನು ಪೂಜಿಸಲು ಉದ್ದೇಶಿಸಿಲ್ಲ ಎಂಬುದನ್ನು ನೆನಪಿಡಿ.

ವಿಗ್ರಹದ ಗಾತ್ರ(Size of the idol)
ಪೂಜೆಗಾಗಿ, ವಿಗ್ರಹದ ಗರಿಷ್ಠ ಎತ್ತರವು 18 ಇಂಚುಗಳಾಗಿರಬೇಕು. ಮನೆ ಅಲಂಕಾರಿಕವಾಗಿ ಬಳಸಲು ಖರೀದಿಸಿದರೆ ನಿಮ್ಮ ಆಯ್ಕೆಯ ಯಾವುದೇ ಗಾತ್ರದ ಗಣೇಶನ ವಿಗ್ರಹವನ್ನು ನೀವು ಖರೀದಿಸಬಹುದು. ಆದರೆ, ವಿಗ್ರಹವನ್ನು ಪ್ರಾರ್ಥನೆ ಸಲ್ಲಿಸಲು ಮತ್ತು ಪೂಜಾ ಕೋಣೆಗೆ ಆಯ್ಕೆ ಮಾಡಿದಾಗ, 18 ಇಂಚುಗಳಿಗಿಂತ ಹೆಚ್ಚಿನ ಎತ್ತರವಿರುವ ಉತ್ಪನ್ನವನ್ನು ಆಯ್ಕೆ ಮಾಡದಂತೆ ಸೂಚಿಸಲಾಗಿದೆ. ಪೂಜಾ ಕೊಠಡಿಗಳಲ್ಲಿ, ಮೂರ್ತಿಗಳನ್ನು ಯಾವಾಗಲೂ ಎತ್ತರದ ವೇದಿಕೆಯ ಮೇಲೆ ಇರಿಸಬೇಕು.

Lord Ganesha's head: ಕತ್ತರಿಸಿದ ಗಣೇಶನ ತಲೆ ಏನಾಯಿತು?

ಮುರಿದ ವಿಗ್ರಹವನ್ನು ಎಂದಿಗೂ ಖರೀದಿಸಬೇಡಿ
ಅಂತಿಮ ಸಲಹೆಯಂತೆ, ಯಾವುದೇ ಮುರಿದ ಗಣೇಶನ ವಿಗ್ರಹ(Broken idol)ವನ್ನು ಖರೀದಿಸಬೇಡಿ ಅಥವಾ ಇರಿಸಬೇಡಿ. ಮುರಿದ ಅಥವಾ ಹಾನಿಗೊಳಗಾದ ವಿಗ್ರಹಗಳು ನಿಮ್ಮ ಮನೆಗೆ ದುರದೃಷ್ಟವನ್ನು ಮಾತ್ರ ಆಹ್ವಾನಿಸುತ್ತವೆ. ಅಂತಹ ವಿಗ್ರಹಗಳು ಮನೆಯಲ್ಲಿ ಯಾವುದಾದರೂ ಇದ್ದರೆ ಜಲಮೂಲಗಳಲ್ಲಿ ಮುಳುಗಿಸಬೇಕು.

Follow Us:
Download App:
  • android
  • ios