2023ರಲ್ಲಿ ಮೊದಲ 3 ಜನ್ಮರಾಶಿಯ ರೊಮ್ಯಾಂಟಿಕ್‌ ಲೈಫ್‌ ಹೀಗಿರುತ್ತೆ ನೋಡಿ!

ಪ್ರೀತಿ ಪ್ರೇಮ ಪ್ರಣಯಗಳು ಬದುಕಿನ ಅವಿಭಾಜ್ಯ ಅಂಗ. ಇನ್ನೇನು ಕೆಲವೇ ದಿನಗಳಲ್ಲಿ 2022 ಮುಗಿದು 2023 ಕಾಲಿಡಲಿದೆ. ಬರುವ ವರ್ಷ ನಿಮ್ಮ ಬದುಕಿನಲ್ಲಿ ಲವ್‌, ರೊಮ್ಯಾನ್ಸ್‌ ಇವೆಲ್ಲಾ ಹೇಗಿರುತ್ತವೆ? ಯಾವ್ಯಾವ ಜನ್ಮರಾಶಿಯವರ ಪ್ರೇಮಾದೃಷ್ಟ ಹೇಗಿರುತ್ತೆ? ಇಲ್ಲಿ ನಾವು ಹನ್ನೆರಡೂ ಜನ್ಮರಾಶಿಗಳ ಮುಂಬರುವ ವರ್ಷದ ಲವ್‌ ಲೈಫ್‌ ಭವಿಷ್ಯವನ್ನು ಕೊಟ್ಟಿದ್ದೇವೆ. ನಿಮ್ಮದು ಹೇಗಿದೆ, ನೋಡಿಕೊಳ್ಳಿ.

Romantic life of Aries Taurus and Gemini in 2023

ಮೇಷ ರಾಶಿ

ಲವ್ ಜಾತಕ ಪ್ರಕಾರ, ಮುಂಬರುವ ವರ್ಷ ಮೇಷ ರಾಶಿಯವರಿಗೆ ತುಂಬಾ ಅನುಕೂಲಕರವಾಗಿದೆ. ನಿಮ್ಮ ಸಂಬಂಧದ ಬಗ್ಗೆ ಸಂಪೂರ್ಣವಾಗಿ ಪ್ರಾಮಾಣಿಕರಾಗಿರುವಿರಿ. ನಿಮ್ಮ ಸಂಗಾತಿಯೊಂದಿಗೆ ಸಂತೋಷದ ಸಮಯವನ್ನು ಕಳೆಯಲು ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತೀರಿ. ಅವಿವಾಹಿತರಿಗೆ ನಿಮ್ಮ ಸಂಗಾತಿ ಮದುವೆ ಪ್ರಸ್ತಾಪ ಮಾಡುವ ಸಾಧ್ಯತೆಯಿದೆ. ಹಾಗಾದರೆ 2023ರ ಅಂತ್ಯದ ವೇಳೆಗೆ ನೀವು ಪ್ರೇಮ ವಿವಾಹ ಆಗಬಹುದು. ಇನ್ನೂ ಪ್ರೇಮಿಸದವರು ಚಿಂತಿಸಬೇಕಾಗಿಲ್ಲ! ನಿಮ್ಮ ಜೀವನಕ್ಕೆ ಯಾರೋ ವಿಶೇಷ ವ್ಯಕ್ತಿ ಪ್ರವೇಶ ಮಾಡಲು ಸಿದ್ಧರಾಗಿದ್ದಾರೆ. ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಯಾರೋ ಪ್ರಯತ್ನಿಸುತ್ತಾರೆ ಮತ್ತು ಒಂದು ಹೆಜ್ಜೆ ಮುಂದಿಡುತ್ತಾರೆ. ನಿಮ್ಮ ಹೃದಯಕ್ಕೆ ದಾರಿ ಮಾಡಿಕೊಳ್ಳುತ್ತಾರೆ.

ವೈವಾಹಿಕ ದೃಷ್ಟಿಕೋನದಿಂದ, ರಾಹು ಮತ್ತು ಕೇತುಗಳ ಸ್ಥಾನದ ಪ್ರಭಾವದಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆಯಿದೆ. ಏಪ್ರಿಲ್ ತಿಂಗಳ ನಂತರ, ಗುರುವಿನ ಆಶೀರ್ವಾದದಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಸುಧಾರಣೆ ಕಂಡುಬರುತ್ತದೆ. ಸಂಗಾತಿಯೊಂದಿಗೆ ಮಧುರ ಸಮಯವನ್ನು ಕಳೆಯುತ್ತೀರಿ. ಸಂಬಂಧದಲ್ಲಿ ಪ್ರೀತಿ ಮತ್ತು ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳುತ್ತೀರಿ. ಪರಸ್ಪರರ ಕಡೆಗೆ ಆಕರ್ಷಣೆ ಮತ್ತು ಸಮರ್ಪಣೆ ಹೆಚ್ಚಾಗುತ್ತದೆ. ಸಂಗಾತಿಯೊಂದಿಗೆ ವಿಹಾರಕ್ಕೆ ಹೋಗುವ ಸಾಧ್ಯತೆಯಿದೆ.

ವೃಷಭ ರಾಶಿ

ಈ ವರ್ಷ ನಿಮ್ಮ ಸಂಬಂಧದಲ್ಲಿ ಸಾಮರಸ್ಯ ಮತ್ತು ಮಾಧುರ್ಯವನ್ನು ತರುತ್ತದೆ. ಜನವರಿ 2023ರಿಂದ ಏಪ್ರಿಲ್ 2023ರವರೆಗೆ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ ಮತ್ತು ಪರಸ್ಪರ ನಂಬಿಕೆ ಹೆಚ್ಚಾಗುತ್ತದೆ. ಈ ವರ್ಷ ಅವಿವಾಹಿತರು ಮದುವೆಯ ಕರೆಗಂಟೆ ಕೇಳಿಸಿಕೊಳ್ಳಬಹುದು. ಶೀಘ್ರದಲ್ಲೇ ನಿಮ್ಮ ಸಂಗಾತಿಯನ್ನು ಮದುವೆಯಾಗಬಹುದು. ಅಕ್ಟೋಬರ್ ತಿಂಗಳಲ್ಲಿ ಪ್ರಣಯದ ಹೆಚ್ಚಳವನ್ನು ನೋಡುತ್ತೀರಿ. ಡಿಸೆಂಬರ್ 2023ರ ಆಸುಪಾಸಿನಲ್ಲಿ ಸಂಭಾಷಣೆಯ ಸಮಯದಲ್ಲಿ ನಿಮ್ಮ ಸ್ವರ ಮತ್ತು ನಿಮ್ಮ ಮಾತುಗಳ ಸಂದರ್ಭದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ಅದು ನಿಮ್ಮ ಸಂಬಂಧದಲ್ಲಿ ಜಗಳ ಉಂಟುಮಾಡಬಹುದು. ಇದೆಲ್ಲ ಇದ್ದರೂ ಮುಂಬರುವ ವರ್ಷ ನಿಮ್ಮ ಪ್ರೀತಿ ಅಥವಾ ವೈವಾಹಿಕ ಜೀವನದ ವಿಷಯದಲ್ಲಿ ನಿಮಗೆ ತುಂಬಾ ಅನುಕೂಲಕರವಾಗಿರುತ್ತದೆ.

Annapurna Jayanti 2022: ಅನ್ನಪೂರ್ಣೆಯ ಕೋಪಕ್ಕೀಡು ಮಾಡೋ ಈ ತಪ್ಪುಗಳನ್ನು ತಪ್ಪಿಯೂ ಮಾಡ್ಬೇಡಿ!

ಮಿಥುನ ರಾಶಿ

ಮಿಥುನ ರಾಶಿಯವರ ಲವ್ ಜಾತಕ ಪ್ರಕಾರ, ಮುಂಬರುವ ವರ್ಷ ಮಧ್ಯಮ ಫಲಪ್ರದವಾಗಿರುತ್ತದೆ. ಜನವರಿಯಿಂದ ಏಪ್ರಿಲ್ ವರೆಗೆ ನಿಮ್ಮ ಪ್ರೇಮ ಜೀವನದಲ್ಲಿ ಮತ್ತು ಮದುವೆಯಲ್ಲಿ ಸಾಕಷ್ಟು ಏರಿಳಿತಗಳಿಗೆ ಸಾಕ್ಷಿಯಾಗಬಹುದು. ಅವುಗಳಲ್ಲಿ ಹೆಚ್ಚಿನ ಏರಿಳಿತಗಳು ಮತ್ತು ವಿವಾದಗಳು ಜನವರಿ ತಿಂಗಳಲ್ಲಿ ಇರುತ್ತದೆ. ಗುರುವು ಹನ್ನೊಂದನೇ ಮನೆಗೆ ಸಾಗುತ್ತಾನೆ ಮತ್ತು ಏಪ್ರಿಲ್ 22, 2023ರಂದು ನಿಮ್ಮ ಐದನೇ ಮತ್ತು ಏಳನೇ ಮನೆಯನ್ನು ನೋಡುತ್ತಾನೆ. ಈ ಪರಿವರ್ತನೆಯು ನಿಮ್ಮ ಸಂಬಂಧ ಅಥವಾ ವೈವಾಹಿಕ ಜೀವನದಲ್ಲಿ ಪ್ರಣಯ(Love) ಮತ್ತು ತಿಳುವಳಿಕೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಮುಂಬರುವ ವರ್ಷದಲ್ಲಿ ಅವಿವಾಹಿತರು ಭಾವಿ ಸಂಗಾತಿಗಳಿಗೆ ಮದುವೆ ಪ್ರಸ್ತಾಪ ಮಾಡಲು ಅವಕಾಶಗಳಿವೆ ಮತ್ತು ಸಕಾರಾತ್ಮಕ(Positive)ಉತ್ತರವನ್ನು ಪಡೆಯುವ ದೊಡ್ಡ ಸಾಧ್ಯತೆಗಳಿವೆ. ನಿರೀಕ್ಷೆ ಆಶಾದಾಯಕವಾಗಿರಲಿ, ಅವರು ʻಓಕೆ' ಎಂದು ಹೇಳುವ ಸಂಭವವೇ ಹೆಚ್ಚಿದೆ!

ಹಳೆ ಬಟ್ಟೆಗಳನ್ನು ಮನೆಯಲ್ಲಿಟ್ರೆ ಜೀವನದಲ್ಲಿ ಉದ್ಧಾರವೇ ಆಗಲ್ವಂತೆ

ಕಟಕ ರಾಶಿ

ಮುಂಬರುವ ವರ್ಷ ನಿಮ್ಮ ಸಂಬಂಧ(Relation)ಗಳಲ್ಲಿ ಮತ್ತು ವೈವಾಹಿಕ ಜೀವನದಲ್ಲಿಯೂ ಕೆಲವು ಏರಿಳಿತಗಳನ್ನು ತರುತ್ತದೆ. ಈ ವರ್ಷ ಐದನೇ ಮನೆಯಲ್ಲಿ ಮಂಗಳನ ಆಶೀರ್ವಾದದೊಂದಿಗೆ ಪ್ರಾರಂಭವಾಗುತ್ತದೆ. ಇದು ನಿಮ್ಮ ಪ್ರೇಮ ಜೀವನ(Love life)ದಲ್ಲಿ ಹೆಚ್ಚು ಘರ್ಷಣೆಗಳು ಮತ್ತು ವಾದಗಳನ್ನು ಸೃಷ್ಟಿಸುತ್ತದೆ. ಆದರೆ ಗುರು ಧನಾತ್ಮಕ ಸ್ಥಾನದಲ್ಲಿ ಇರುವುದರಿಂದ ಏಪ್ರಿಲ್ 2023ರವರೆಗೆ ಯಾವುದೇ ಪ್ರಮುಖ ಜಗಳಗಳು ಸಂಭವಿಸುವುದಿಲ್ಲ. ನಿಮ್ಮ ಸಂಬಂಧ ಸುರಕ್ಷಿತ ಮತ್ತು ಸುಭದ್ರವಾಗಿರುತ್ತದೆ. ಮೇ 2023ರಲ್ಲಿ, ಕೆಲಸದ ಒತ್ತಡ ಹೆಚ್ಚಾಗಬಹುದು. ಇದು ನಿಮ್ಮ ಸಂಬಂಧದಲ್ಲಿ ಸ್ವಲ್ಪ ಒತ್ತಡ ಉಂಟುಮಾಡಬಹುದು. ನಂತರ ಉದ್ವೇಗ(Anxiety) ನಿಧಾನವಾಗಿ ಮರೆಯಾಗುತ್ತದೆ ಮತ್ತು ನಿಮ್ಮ ಸಂಗಾತಿಯೊಂದಿಗೆ ಹಾಯಾಗಿರುತ್ತೀರಿ. ಜೂನ್ ತಿಂಗಳಿನ ವೇಳೆಗೆ, ನಿಮ್ಮ ಸಂಬಂಧ ಸುಧಾರಿಸುತ್ತದೆ ಮತ್ತು ಉತ್ತಮ ಬಂಧವನ್ನು ನೀವು ಕಾಣಬಹುದು. ಅವಿವಾಹಿತರು ಒಂದು ಹೆಜ್ಜೆ ಮುಂದಿಡಲು, ಸಂಗಾತಿಯನ್ನು ಮದುವೆಯಾಗಲು ಯೋಜಿಸಬಹುದು. 2023ರ ಕೊನೆಯ ತಿಂಗಳು(Month) ನಿಮ್ಮ ಪ್ರೇಮಜೀವನದಲ್ಲಿ ಹೆಚ್ಚು ಅನ್ಯೋನ್ಯತೆ ಮತ್ತು ಪ್ರಣಯವನ್ನು ತರುತ್ತದೆ. ಸಂಗಾತಿಯೊಂದಿಗೆ ವಿಶೇಷ ಕ್ಷಣಗಳನ್ನು ಪಡೆಯುತ್ತೀರಿ.

 

Latest Videos
Follow Us:
Download App:
  • android
  • ios