ಮರಣಶಯ್ಯೆಯಲ್ಲಿ ಲಕ್ಷ್ಮಣನಿಗೆ ರಾವಣ ಹೇಳಿದ ಸಕ್ಸಸ್ ಮಂತ್ರ ಪಾಲಿಸಿದ್ರೆ ಜೀವನದಲ್ಲಿ ಸೋಲು ಅಸಾಧ್ಯ

ರಾಮಾಯಣ ಕಾಲದಲ್ಲಿ ರಾವಣ, ಲಕ್ಷ್ಮಣನಿಗೆ ಯಶಸ್ಸಿನ ಮಂತ್ರವನ್ನು ಹೇಳ್ತಾನೆ. ಈ ಸೂತ್ರಗಳು ಅಲ್ಲಿಗೆ ಮಾತ್ರ ಸೀಮಿತವಾಗಿಲ್ಲ. ಈಗ್ಲೂ ನೀವು ಅದರ ಪಾಲನೆ ಮಾಡಿ, ಜೀವನದಲ್ಲಿ ಸಕ್ಸಸ್ ಕಾಣ್ಬಹುದು. 

ravana spoke the success mantra to lakshmana before dying roo

ವಾಸ್ತವವಾಗಿ, ರಾಮನೇ, ಲಕ್ಷಣನಿಗೆ, ರಾವಣನಿಂದ ಉಪದೇಶ ಪಡೆಯುವಂತೆ ಸಲಹೆ ನೀಡುತ್ತಾನೆ. ರಾವಣ ಮರಣಶಯ್ಯೆಯಲ್ಲಿದ್ದಾಗ, ಶ್ರೀರಾಮನು ಲಕ್ಷ್ಮಣನಿಗೆ ನೀತಿ, ರಾಜಕೀಯ ಮತ್ತು ಅಧಿಕಾರದ ಮಹಾನ್ ವಿದ್ವಾಂಸನಾಗಿರುವ ರಾವಣ  ಇಹಲೋಕ ತ್ಯಜಿಸುತ್ತಾನೆ. ನೀನು ಅವನ ಬಳಿಗೆ ಹೋಗಿ ಅವನಿಂದ ಬೇರೆ ಯಾರಿಗೂ ನೀಡಲಾದಂತಹ ಕೆಲವು ಜೀವನ ಪಾಠಗಳನ್ನು ತೆಗೆದುಕೊಳ್ಳಬೇಕು ಎನ್ನುತ್ತಾನೆ. ಆ ಸಮಯದಲ್ಲಿ ರಾವಣನ ತಲೆ ಬಳಿ ಹೋಗಿ ಲಕ್ಷ್ಮಣ ನಿಲ್ಲುತ್ತಾನೆ. ಆದ್ರೆ ರಾವಣ ಏನೂ ಹೇಳೋದಿಲ್ಲ. ಆಗ ವಾಪಸ್ ಬಂದ ಲಕ್ಷ್ಮಣ, ರಾವಣ ನನಗೆ ಏನೂ ಹೇಳಿಲ್ಲ ಎನ್ನುತ್ತಾನೆ. ಅಲ್ಲಿ ಏನೇನಾಯ್ತು ಎಂಬುದನ್ನು ವಿವರಿಸುತ್ತಾನೆ, ಇದನ್ನು ಕೇಳಿದ ರಾಮ, ನೀನು ರಾವಣನ ತಲೆ ಬಳಿಯಲ್ಲ ಆತನ ಕಾಲಿನ ಬಳಿ ಹೋಗಿ ನಿಲ್ಲು. ಜ್ಞಾನವನ್ನು ಪಡೆಯುವ ವೇಳೆ ಕಾಲಿನ ಬಳಿ ನಿಲ್ಲಬೇಕು ಎನ್ನುತ್ತಾನೆ. ಇದನ್ನು ಕೇಳಿದ ಲಕ್ಷ್ಮಣ, ರಾಮ ಹೇಳಿದಂತೆ ರಾವಣನ ಕಾಲಿನ ಬಳಿ ಹೋಗಿ ನಿಲ್ತಾನೆ.

ಪಂಡಿತ ರಾವಣ, ಲಕ್ಷ್ಮಣನಿಗೆ ಹೇಳಿದ ಯಶಸ್ಸಿನ ಪಾಠ : 

ರಾವಣನ ಮೊದಲ ಸಲಹೆ :  ಲಕ್ಷ್ಮಣ ಪಾದದ ಬಳಿ ಬಂದು ನಿಂತ ನಂತ್ರ ರಾವಣ, ಆತನಿಗೆ ಅಮೂಲ್ಯ ಸಲಹೆಗಳನ್ನು ನೀಡ್ತಾನೆ. ಒಬ್ಬ ವ್ಯಕ್ತಿ ತನ್ನ ಶತ್ರುವನ್ನು ತನಗಿಂತ ದುರ್ಬಲ ಎಂದು ಪರಿಗಣಿಸಬಾರದು. ಕೆಲವೊಮ್ಮೆ ನಾವು ದುರ್ಬಲ ಎಂದು ಪರಿಗಣಿಸಿದವನು ನಮಗಿಂತ ಬಲಶಾಲಿಯಾಗುತ್ತಾನೆ.

50 ವರ್ಷಗಳ ನಂತರ ಕನ್ಯಾರಾಶಿಯಲ್ಲಿ ತ್ರಿಗ್ರಾಹಿ ಯೋಗ, ಮೂರು ರಾಶಿಗೆ ದುಡ್ಡೇ ದುಡ್ಡು ಶ್ರೀಮಂತಿಕೆ ಭಾಗ್ಯ

ರಾವಣನ ಎರಡನೇ ಸಲಹೆ : ಒಬ್ಬ ವ್ಯಕ್ತಿ ತನ್ನ ಶಕ್ತಿಯನ್ನು ಎಂದಿಗೂ ದುರುಪಯೋಗಪಡಿಸಿಕೊಳ್ಳಬಾರದು. ಶಕ್ತಿಯನ್ನು ಸಧರ್ಮಕ್ಕೆ ಮಾತ್ರ ಬಳಸಬೇಕು. ಅಹಂಕಾರವು ಒಬ್ಬ ವ್ಯಕ್ತಿಯನ್ನು ಹಲ್ಲು ಮುರಿಯುವಂತೆ ಮಾಡುತ್ತದೆ.

ರಾವಣನ ಮೂರನೆಯ ಸಲಹೆ :  ಒಬ್ಬ ವ್ಯಕ್ತಿಯು ಯಾವಾಗಲೂ ತನ್ನ ಹಿತೈಷಿಗಳ ಮಾತನ್ನು ಕೇಳಬೇಕು. ಯಾವುದೇ ಹಿತೈಷಿಯು ತನ್ನ ಸ್ವಂತ ಜನರಿಗೆ ಹಾನಿಯನ್ನು ಬಯಸುವುದಿಲ್ಲ. ಹಿತೈಷಿಗಳು ನಮಗೆ ಒಳ್ಳೆದಾಗಲಿ ಎನ್ನುವ ಕಾರಣಕ್ಕೆ ಸಲಹೆ ನೀಡಿರುತ್ತಾರೆ.

ರಾವಣನ ನಾಲ್ಕನೇ ಸಲಹೆ : ಲಕ್ಷ್ಮಣನಿಗೆ ಜ್ಞಾನ ನೀಡುವ ರಾವಣ, ನಾವು ಯಾವಾಗಲೂ ಶತ್ರು ಮತ್ತು ಮಿತ್ರರನ್ನು ಗುರುತಿಸಬೇಕು. ಅನೇಕ ಬಾರಿ, ನಾವು ಯಾರನ್ನು ನಮ್ಮ ಸ್ನೇಹಿತರೆಂದು ಪರಿಗಣಿಸುತ್ತೇವೆಯೋ ಅವರು ನಮ್ಮ ಶತ್ರುಗಳಾಗಿರುತ್ತಾರೆ. ನಾವು ನಮ್ಮ ಶತ್ರುಗಳು, ಪರಿಚಿತರು ಎಂದು ಪರಿಗಣಿಸುವವರು  ನಿಜವಾಗಿ ನಮ್ಮವರಾಗಿರುತ್ತಾರೆ.

ದ್ವಿಗ್ರಹ ಯೋಗದಿಂದ ಮಿಥುನ ಜೊತೆ ಈ ರಾಶಿಗೆ ಡಬಲ್ ಲಾಭ, ಕೈ ತಂಬಾ ಹಣ

ರಾವಣನ ಐದನೇ ಸಲಹೆ : ರಾವಣ, ಲಕ್ಷ್ಮಣನಿಗೆ ಕೊನೆಯ ಹಾಗೂ ಅತ್ಯುತ್ತಮ ಸಲಹೆ ನೀಡಿದ್ದಾನೆ. ನಾವು ಎಂದಿಗೂ ಪತ್ನಿಯನ್ನು ಹೊರತುಪಡಿಸಿ, ಇನ್ನೊಬ್ಬ ಮಹಿಳೆಯ ಮೇಲೆ ಕೆಟ್ಟ ದೃಷ್ಟಿ ಹಾಕಬಾರದು. ಅವರ ಸಹವಾಸಕ್ಕೆ ಹೋಗಬಾರದು, ನಾವು ಹೀಗೆ ಮಾಡಿದಲ್ಲಿ ಅಂಥ ವ್ಯಕ್ತಿಯ ಸರ್ವನಾಶವಾಗುತ್ತದೆ.
 

Latest Videos
Follow Us:
Download App:
  • android
  • ios