Asianet Suvarna News Asianet Suvarna News

Ram Navami 2023: ರಾಮರಾಜ್ಯ ಹೇಗಿರತ್ತೆ ಅಂದ್ರೆ?

ರಾಮ ರಾಜ್ಯ ಎಂಬುದು ಆದರ್ಶಪ್ರಾಯ ಆಡಳಿತಕ್ಕೊಂದು ಉಪಮೆ. ದೇಶ, ರಾಜ್ಯಗಳೆಲ್ಲ ರಾಮರಾಜ್ಯವಾದರೆ ಅಂಥ ಅದ್ಭುತ ಸಮಾಜ ಮತ್ತೊಂದಿಲ್ಲ ಎಂಬುದು ನಂಬಿಕೆ. ಇಷ್ಟಕ್ಕೂ ರಾಮ ರಾಜ್ಯ ಹೇಗಿರತ್ತೆ? ರಾಮನ ಆಡಳಿತದಲ್ಲಿ ಅಯೋಧ್ಯೆ ಹೇಗಿತ್ತು?

Ram Navami 2023 Mind blowing facts about Ram Rajya skr
Author
First Published Mar 25, 2023, 10:25 AM IST

ಆದರ್ಶ ರಾಜ್ಯದ ಕಲ್ಪನೆ ಅಥವಾ ಆದರ್ಶ ಆಡಳಿತದ ಕಲ್ಪನೆ ಎಂದರೆ ಅದು ರಾಮ ರಾಜ್ಯ. ರಾಮರಾಜ್ಯವು ಭಗವಾನ್ ರಾಮನ ತತ್ವಗಳಿಂದ ಸಮಾಜವನ್ನು ನಡೆಸುವ ವ್ಯವಸ್ಥೆಯಾಗಿದೆ. ಇದು ಮಹಾತ್ಮಾ ಗಾಂಧಿಯವರು ಜನಪ್ರಿಯಗೊಳಿಸಿದ ಪದವಾಗಿದೆ. ಅಚ್ಚರಿಯೆಂದರೆ ಮಹಾತ್ಮರು ತಮ್ಮ ಜೀವನದಲ್ಲಿ ವೀಕ್ಷಿಸಿದ ಏಕೈಕ ಚಲನಚಿತ್ರ 'ರಾಮರಾಜ್ಯ'ವಾಗಿತ್ತು. ಅದರಿಂದ ಅವರು ಸಾಕಷ್ಟು ಪ್ರೇರಿತರಾಗಿದ್ದರು. 

ರಾಮ ರಾಜ್ಯದ ಕೆಲವು ಪ್ರಮುಖ ಲಕ್ಷಣಗಳು
ಸದ್ಗುಣ, ನೈತಿಕತೆ ಮತ್ತು ನ್ಯಾಯವು ಪ್ರಮುಖ ಆದರ್ಶಗಳಾಗಿರುವ ಸಮಾಜವನ್ನು 'ರಾಮ ರಾಜ್ಯ' ಕಲ್ಪಿಸುತ್ತದೆ.  ಅದರ ಸುತ್ತ ರಾಜ್ಯ ಮತ್ತು ನಾಗರಿಕರ ನಡುವೆ ದಿನನಿತ್ಯದ ಸಂವಹನಗಳು ಸಂಭವಿಸುತ್ತವೆ. ಕೋಟ್ಯಂತರ ಹಿಂದೂಗಳಿಗೆ, ರಾಮ ಮತ್ತು ರಾಮರಾಜ್ಯವು ಉತ್ತಮ ಆಡಳಿತ, ಪ್ರಗತಿ, ಸಮೃದ್ಧಿ ಮತ್ತು ಶಾಂತಿಯ ಸಂಕೇತವಾಗಿದೆ. ಏಕೆಂದರೆ ರಾಮನ ಆಡಳಿತದಲ್ಲಿ ಅಯೋಧ್ಯೆ ಅಂತ್ಯಂತ ಸುಭಿಕ್ಷ ಮತ್ತು ಸಂತೋಷದ ಕಾಲಘಟ್ಟವನ್ನು ಕಂಡಿತ್ತು.

ರಾಮಾಯಣದಲ್ಲಿ ವಾಲ್ಮೀಕಿ ಋಷಿ ರಾಮರಾಜ್ಯ ಹೇಗಿತ್ತು ಎಂದು ಹೇಳುತ್ತಾರೆ, 

ಸರ್ವಂ ಮುದಿತಮೇವಾಸಿತ್ಸರ್ವೋ ಧರ್ಮಪರೋಅಭವತ್ | ರಾಮಮೇವಾನುಪಶ್ಯಂತೋ ನಾಭ್ಯಹಿಂಸನ್ಪರಸ್ಪರಮ್ || 
ಸರ್ವೇ ಲಕ್ಷಣಸಮ್ಪನ್ನಾಃ ಸರ್ವೇ ಧರ್ಮಪರಾಯಣಾಃ || 

ಪ್ರತಿಯೊಂದು ಜೀವಿಯೂ ಸಂತೋಷದಿಂದಿದ್ದ ಕಾಲ. ಪ್ರತಿಯೊಬ್ಬರೂ ಪುಣ್ಯದ ಉದ್ದೇಶವನ್ನು ಹೊಂದಿದ್ದರು. ಯಾರೂ ಯಾರನ್ನೂ ಕೊಲ್ಲುತ್ತಿರಲಿಲ್ಲ. ಎಲ್ಲಾ ಜನರು ಅತ್ಯುತ್ತಮ ಗುಣಲಕ್ಷಣಗಳನ್ನು ಹೊಂದಿದ್ದರು. ಎಲ್ಲರೂ ಪುಣ್ಯದಲ್ಲಿ ನಿರತರಾಗಿದ್ದರು. 

ನಿಜವಾಗುತ್ತೆಯೇ ಸೌರ ಚಂಡಮಾರುತದ ಬಗ್ಗೆ ಬಾಬಾ ವಾಂಗಾ ಭಯಾನಕ ಭವಿಷ್ಯ? ಬರ್ತಾರಾ ಏಲಿಯನ್ಸ್?

ಸಂತ ತುಳಸಿದಾಸರ ಪ್ರಕಾರ ರಾಮರಾಜ್ಯವೆಂದರೆ, 
'ಮುಖ್ಯಸ್ಥ ಅಥವಾ ರಾಜನು ಬಾಯಿಯಂತಿರಬೇಕು, ಅದು ಆಹಾರವನ್ನು ಸೇವಿಸುವ ಮಾರ್ಗವಾಗಿದೆ. ಆದರೆ ಪೋಷಣೆಯು ಮಾತ್ರ ದೇಹದ ದೂರದ ಕೋಶಕ್ಕೂ ಹೋಗುತ್ತದೆ. ಚಿಕ್ಕ ಬೆರಳು ಮತ್ತು ಅದರ ಉಗುರಿಗೆ ಕೂಡ ಈ ಆಹಾರ ಸತ್ವ ದೊರೆಯುತ್ತದೆ.'

ರಾಮ ರಾಜ್ಯದ ಪರಿಕಲ್ಪನೆ
ರಾಮರಾಜ್ಯದ ಪರಿಕಲ್ಪನೆಯ ಪ್ರಕಾರ, ರಾಜನು ಸಂಯಮ, ಔದಾರ್ಯ, ದಯೆ, ನ್ಯಾಯಯುತ, ಕಲ್ಯಾಣ-ಆಧಾರಿತ ಮತ್ತು ತನ್ನ ಪ್ರಜೆಗಳ ಬಗ್ಗೆ ಕಾಳಜಿ ವಹಿಸುವ ಮತ್ತು ಯೋಜಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ನಾಯಿಗೂ ರಾಮರಾಜ್ಯದಲ್ಲಿ ನ್ಯಾಯ ಸಿಕ್ಕಿತೆಂದು ಕವಿ ವರ್ಣಿಸಿದ್ದಾನೆ.

ರಾಮ ರಾಜ್ಯ ಎಂದರೇನು?
ಪ್ರಾಚೀನ ಗ್ರಂಥಗಳ ಅಧ್ಯಯನವು ರಾಮನ ಆಳ್ವಿಕೆಯಲ್ಲಿ ನೋವು, ಬಡತನ, ರೋಗ, ದುಃಖ ಅಥವಾ ತಾರತಮ್ಯಕ್ಕೆ ಅವಕಾಶವಿರಲಿಲ್ಲ ಎಂದು ಹೇಳುತ್ತದೆ. ಅವನು ತಕ್ಷಣದ ನ್ಯಾಯವನ್ನು ಒದಗಿಸುತ್ತಿದ್ದನು ಮತ್ತು ಬಡವರನ್ನು ಅಂಚಿಗೆ ತಳ್ಳಲಿಲ್ಲ. ಸತ್ಯ ಮತ್ತು ಅಹಿಂಸೆಯನ್ನು ಜನರು ಬಲಾತ್ಕಾರವಿಲ್ಲದೆ ಅನುಸರಿಸುತ್ತಿದ್ದರೆ. ಎಲ್ಲರಲ್ಲ ಮುಕ್ತ ನೈತಿಕ ಜವಾಬ್ದಾರಿ ಮತ್ತು ಶಿಸ್ತು ಇತ್ತು. ರಾಮನ ನಡವಳಿಕೆಯು ಆ ಪ್ರಜ್ಞೆಯನ್ನು ಪ್ರಜೆಗಳ ಹೃದಯದಲ್ಲಿ ಕೆತ್ತಿತ್ತು. ರಾಮನು ವನವಾಸದಿಂದ ಅಯೋಧ್ಯೆಗೆ ಹಿಂದಿರುಗಿದ ನಂತರ ಮತ್ತು ಪಟ್ಟಾಭಿಷೇಕದ ನಂತರ, ತನ್ನ ಪ್ರಜೆಗಳ ಇಚ್ಛೆಯನ್ನು ಗೌರವಿಸುವುದು ಅವನ ಮೊದಲ ಕರ್ತವ್ಯವಾಯಿತು. ತಾನು ಗೃಹಸ್ಥ, ರಾಜ ಎಂಬುದೆಲ್ಲದಕ್ಕಿಂತ ಹೆಚ್ಚಾಗಿ ರಾಜ್ಯದ ಜನರ ಹಿತ ಕಾಯುವುದು ಆತನ ಪ್ರಾಮುಖ್ಯತೆಯಾಗಿತ್ತು. 

Ram Navami 2023: ಶ್ರೀರಾಮನಿಗೊಬ್ಬಳು ಅಕ್ಕ ಇದ್ದಳು.. ಅವಳಿಗಾಗಿ ದೇವಾಲಯವೂ ಇದೆ!

ರಾಮ ರಾಜ್ಯದ ಸಾಮಾನ್ಯ ನೋಟ
ಹೆಚ್ಚಿನ ಭಾರತೀಯರು ರಾಮನ ಜೀವನದ ಕಥೆಗಳನ್ನು ಕೇಳುತ್ತಾ ಬೆಳೆದಿದ್ದಾರೆ. ಅಯೋಧ್ಯೆಯ ರಾಜನಾಗಿ ಅವನ ಆಳ್ವಿಕೆಯು ಎಷ್ಟು ನ್ಯಾಯಯುತವಾಗಿತ್ತೆಂದರೆ ಅಲ್ಲಿ ಯಾರೂ ಹಸಿವಿನಿಂದ ಬಳಲಲಿಲ್ಲ ಮತ್ತು ಯಾರನ್ನೂ ಎಂದಿಗೂ ಕೆಟ್ಟದಾಗಿ ನಡೆಸಿಕೊಳ್ಳಲಿಲ್ಲ. ಅದು ರಾಮರಾಜ್ಯದ ಸ್ಥಿತಿ. ಉತ್ತಮ ಆಡಳಿತ ಮತ್ತು ಆದರ್ಶ ರಾಜನ ಕರ್ತವ್ಯಗಳ ವಿಷಯದಲ್ಲಿ ಭಗವಾನ್ ರಾಮನ ಹೆಸರನ್ನು ಮತ್ತೆ ಮತ್ತೆ ತೆಗೆದುಕೊಳ್ಳಲಾಗುತ್ತದೆ. ರಾಮ ಮತ್ತು ರಾಮರಾಜ್ಯವು ಪ್ರತಿಯೊಬ್ಬ ಭಾರತೀಯನ ಆದರ್ಶ. ವಿಶೇಷವಾಗಿ ಹಿಂದೂಗಳಿಗೆ ಭಗವಾನ್ ರಾಮನು ಆದರ್ಶ ಆಡಳಿತಗಾರನ ಸಮಾನಾರ್ಥಕವಾಗಿದ್ದಾನೆ.
 

Follow Us:
Download App:
  • android
  • ios