Raksha Bandhan: ರಾಖಿ ಕಟ್ಟೋ ಮುನ್ನ ಈ ಕೆಲಸ ಮಾಡಿಬಿಡಿ

ಸಹೋದರ – ಸಹೋದರಿ ಮಧ್ಯೆ ಬಾಂಧವ್ಯ ಬೆಸೆಯುವ ಹಬ್ಬ ರಕ್ಷಾ ಬಂಧನ. ರಕ್ಷಾ ಬಂಧನದ ದಿನ ರಾಖಿ ಕಟ್ಟಿ, ಸಿಹಿ ನೀಡುವುದು ವಾಡಿಕೆ. ಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕು ಎನ್ನುವವರು ಮೊದಲೇ ಸಿದ್ಧತೆ ಮಾಡಿಕೊಳ್ಬೇಕು. 
 

Raksha Bandhan 2022 Must do works before tieing Raksha to brothers

ಸಹೋದರ – ಸಹೋದರಿಯರ ಹಬ್ಬ ರಕ್ಷಾ ಬಂಧನ. ರಕ್ಷಾ ಬಂಧನದ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನದಂದು ಸಹೋದರಿಯರು ಸಹೋದರನ ಮಣಿಕಟ್ಟಿಗೆ ರಾಖಿ ಕಟ್ಟುತ್ತಾರೆ. ಸಹೋದರನಿಗೆ ದೀರ್ಘಾಯುಷ್ಯ ಮತ್ತು ಸಂತೋಷ ಪ್ರಾಪ್ತಿಯಾಗ್ಲಿ ಎಂದು ಪ್ರಾರ್ಥಿಸುತ್ತಾರೆ. ಈ ಹಬ್ಬದಲ್ಲಿ ಸಹೋದರ, ಸಹೋದರಿಗೆ ಉಡುಗೊರೆ ನೀಡುವ ಪದ್ಧತಿಯಿದೆ. ಸಹೋದರಿಯನ್ನು ಸದಾ ರಕ್ಷಿಸುವ ಭರವಸೆಯನ್ನೂ ಆತ ನೀಡುತ್ತಾನೆ. ಹಿಂದೂ ಧರ್ಮದಲ್ಲಿ ರಕ್ಷಾ ಬಂಧನಕ್ಕೆ ವಿಶೇಷ ಮಹತ್ವವಿದೆ. ಶುಭ ಮುಹೂರ್ತದಲ್ಲಿಯೇ ಸಹೋದರನಿಗೆ ರಾಖಿ ಕಟ್ಟಿದ್ರೆ ಒಳ್ಳೆಯದು ಎಂದು ನಂಬಲಾಗಿದೆ. ಈ ಬಾರಿ ಆಗಸ್ಟ್ 11ರಂದು ರಕ್ಷಾ ಬಂಧನ ಆಚರಿಸಲಾಗ್ತಿದೆ. ಹಬ್ಬದ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಬಗೆ ಬಗೆಯ ರಕ್ಷಾ ಬಂಧನ ಬರಲು ಶುರುವಾಗಿದೆ. ಸಹೋದರ – ಸಹೋದರಿಯರು ಇದಕ್ಕೆ ಈಗಿನಿಂದಲೇ ತಯಾರಿ ಶುರು ಮಾಡುತ್ತಿದ್ದಾರೆ. ರಕ್ಷಾ ಬಂಧನ ಇನ್ನೂ ತುಂಬಾ ದಿನವಿದೆ ಎಂದು ಆರಾಮಾಗಿರುವ ಬದಲು ಈಗ್ಲೇ ಕೆಲ ಕೆಲಸ ಮಾಡಿದ್ರೆ ನಿಮ್ಮಿಷ್ಟದಂತೆ ನೀವು ರಕ್ಷಾಬಂಧನವನ್ನು ಆಚರಿಸಬಹುದು. ಇಂದು ನಾವು ರಕ್ಷಾಬಂಧನಕ್ಕೂ ಮುನ್ನ ನೀವು ಏನೆಲ್ಲ ಮಾಡ್ಬೇಕು ಎಂಬುದನ್ನು ಹೇಳ್ತೇವೆ. 

ರಕ್ಷಾ ಬಂಧನ (Raksha Bandhan )ದ ತಯಾರಿ ಹೀಗಿರಲಿ :
ರಾಖಿ ಕಳುಹಿಸಿ :
ರಕ್ಷಾ ಬಂಧನದಲ್ಲಿ ಸಹೋದರನ ಕೈಗೆ ರಾಖಿ ಕಟ್ಟಬೇಕು. ಆದ್ರೆ ಎಲ್ಲ ಸಹೋದರ (Brother) ರೂ ನಮ್ಮ ಜೊತೆ ಇರೋದಿಲ್ಲ. ಕೆಲವರು ವಿದೇಶದಲ್ಲಿರುತ್ತಾರೆ. ಮತ್ತೆ ಕೆಲವರು ನಮ್ಮಿಂದ ತುಂಬಾ ದೂರದಲ್ಲಿರುತ್ತಾರೆ. ಅವರಿಗೆ ರಕ್ಷಾ ಬಂಧನದ ದಿನವೇ ರಾಖಿ ತಲುಪಬೇಕೆಂದ್ರೆ ನೀವು ಇಂದೇ ರಕ್ಷಾ ಬಂಧನವನ್ನು ಅವರಿಗೆ ಕಳುಹಿಸುವುದು ಒಳ್ಳೆಯದು. ಕೊನೆ ಕ್ಷಣದಲ್ಲಿ ರಾಖಿ ಕಳುಹಿಸಿದ್ರೆ ಅದು ಹಬ್ಬ (Festival) ದ ದಿನ ಸಹೋದರನಿಗೆ ತಲುಪದೇ ಇರಬಹುದು. ಕೆಲ ಸಹೋದರರು, ಸಹೋದರಿ ಕಳುಹಿಸುವ ರಾಖಿಯ ನಿರೀಕ್ಷೆಯಲ್ಲಿರುತ್ತಾರೆ. ಅವರಿಗೆ ರಾಖಿ ಸಿಕ್ಕಿಲ್ಲವೆಂದ್ರೆ ಬೇಸರವಾಗುತ್ತದೆ. 

ತಂಗಿಗೆ ಉಡುಗೊರೆ ಖರೀದಿ : ರಾಖಿಯಂತೆ ಸಹೋದರರು ಕೂಡ ಮುಂಚಿತವಾಗಿಯೇ ಉಡುಗೊರೆ ಖರೀದಿ ಮಾಡುವುದು ಒಳ್ಳೆಯದು. ಈಗ ನಿಮಗೆ ಸಾಕಷ್ಟು ಸಮಯವಿದೆ. ನಿಮ್ಮ ಸಹೋದರಿಗೆ ಇಷ್ಟವಾಗುವ ವಸ್ತುವನ್ನು ನೀವು ಅಲ್ಲಿ – ಇಲ್ಲಿ ಹುಡುಕಿ ಖರೀದಿ ಮಾಡಬಹುದು. ಸಹೋದರಿ ದೂರದಲ್ಲಿದ್ದರೆ ಈಗ್ಲೇ ಪೋಸ್ಟ್ ಮಾಡಿದ್ರೆ ಸಮಯಕ್ಕೆ ಸರಿಯಾಗಿ ನಿಮ್ಮ ಉಡುಗೊರೆ ಅವರಿಗೆ ತಲುಪುತ್ತದೆ.

Raksha Bandhan ಪೂಜಾ ತಟ್ಟೆಯಲ್ಲಿ ಈ ವಸ್ತುಗಳಿರಿಸಿ.. ಸಹೋದರಗೆ ಶುಭ ಹಾರೈಸಿ

ಟಿಕೆಟ್ ಬುಕ್ ಮಾಡಿ : ರಕ್ಷಾ ಬಂಧನದ ಹಿಂದಿನ ದಿನ ನಿಮಗೆ ಬಸ್, ರೈಲು ಅಥವಾ ವಿಮಾನದ ಟಿಕೆಟ್ ಸಿಗದೆ ಇರಬಹುದು. ಕೆಲ ಸಹೋದರ – ಸಹೋದರಿಯರು ಎಷ್ಟೇ ದೂರದಲ್ಲಿದ್ದರೂ ರಕ್ಷಾ ಬಂಧನದ ದಿನ ಒಟ್ಟಿಗೆ ಸೇರುತ್ತಾರೆ. ದೂರದ ಊರಿಂದ ಹಬ್ಬಕ್ಕಾಗಿ ತವರಿಗೆ ಬರ್ತಾರೆ. ಇಲ್ಲವೆ ಸಹೋದರ, ಸಹೋದರಿ ಮನೆಗೆ ಹೋಗ್ತಾನೆ. ಹಾಗಿರುವಾಗ ನೀವು ಟಿಕೆಟ್ ಈಗ್ಲೇ ಬುಕ್ ಮಾಡುವುದು ಒಳ್ಳೆಯದು. ಕೊನೆ ಕ್ಷಣದಲ್ಲಿ ಟಿಕೆಟ್ ಸಿಗಲಿಲ್ಲವೆಂದ್ರೆ ನಿಮ್ಮ ಪ್ಲಾನ್ ಹಾಳಾಗುತ್ತದೆ. ಕಡಿಮೆ ದರದಲ್ಲಿ ಹಾಗೂ ಟೆನ್ಷನ್ ಫ್ರೀ ಆಗಿ ಪ್ರಯಾಣ ಬೆಳೆಸಬೇಕೆಂದ್ರೆ ಈಗ್ಲೇ ಟಿಕೆಟ್ ಬುಕ್ ಮಾಡೋದು ಒಳ್ಳೆಯದು.

ಶ್ರಾವಣ ಮಾಸದಲ್ಲಿ ಕೂದಲು ಕತ್ತರಿಸಬಾರದು, ಯಾಕೆ ತಿಳಿದಿದೆಯೇ?

ಅಗತ್ಯ ಸಾಮಗ್ರಿ : ರಕ್ಷಾ ಬಂಧನದಂದು ರಾಖಿ ಕಟ್ಟುವ ಪದ್ಧತಿ ಬೇರೆ ಬೇರೆಯಾಗಿದೆ. ಸಾಮಾನ್ಯವಾಗಿ ಆರತಿ ಬೆಳಗಿ, ಸಿಹಿ ನೀಡಿ, ರಾಖಿ ಕಟ್ಟುತ್ತಾರೆ. ಚೆಂದದ ಆರತಿ, ನಿಮ್ಮ ಕೈನಲ್ಲಿ ಸಿದ್ಧವಾದ ಸಿಹಿಯನ್ನು ಸಹೋದರನಿಗೆ ತಿನ್ನಿಸಬೇಕೆಂದ್ರೆ ಅದಕ್ಕೂ ನೀವು ಈಗಿನಿಂದ್ಲೇ ತಯಾರಿ ನಡೆಸಬೇಕು. ಕೆಲವರು ಸ್ವಂತ ರಾಖಿ ತಯಾರಿಸ್ತಾರೆ. ಅವರು ಕೂಡ ಈಗ್ಲೇ ಕೆಲಸ ಶುರು ಮಾಡಿದ್ರೆ ಒಳ್ಳೆಯದು. 

Latest Videos
Follow Us:
Download App:
  • android
  • ios