ರಾಹು ಗ್ರಹ ಪರಿವರ್ತನೆ - ಈ 3 ರಾಶಿಯವರಿಗೆ ಈ ವರ್ಷವಿಡೀ ಭಾರಿ ಧನಲಾಭ!
ರಾಹು ಗ್ರಹದ ನಕ್ಷತ್ರ ಬದಲಾವಣೆ ಸಮಯ ಬಂದಿದೆ. ಜೂನ್ 14 ರಂದು ರಾಹುವು ಭರಣಿ ನಕ್ಷತ್ರಕ್ಕೆ ಕಾಲಿಡಲಿದ್ದು, ಈ ನಕ್ಷತ್ರದಲ್ಲಿ 2023ರ ಫೆಬ್ರವರಿ 20 ರವರೆಗೆ ಸ್ಥಿತನಾಗಿರುತ್ತಾನೆ. ಹೀಗಾಗಿ ಭರಣಿ ನಕ್ಷತ್ರದ ರಾಶಿಯಾದ ಮೇಷ ಸೇರಿದಂತೆ ಇನ್ನೂ ಎರಡೂ ರಾಶಿಯವರಿಗೆ ಈ ವರ್ಷವಿಡೀ ಅದೃಷ್ಟವಿದ್ದು, ಅವುಗಳ ಬಗ್ಗೆ ತಿಳಿಯೋಣ...
ತುಂಬಾ ಕೆಟ್ಟ ಪರಿಣಾಮಗಳನ್ನು (Bad effects) ಅನುಸರಿಸುತ್ತಿದ್ದರೆ, ಕಷ್ಟಗಳನ್ನೇ ನೋಡಿತ್ತಿದ್ದರೆ, ಮಾಡುವ ಕೆಲಸದಲ್ಲಿ ಯಶಸ್ಸು (Success) ಸಿಗದಿದ್ದರೆ ಇದೇನು ಗ್ರಹಚಾರ ಎಂದು ಹೇಳುವುದು ರೂಢಿ. ಅಂದರೆ ಗ್ರಹಗತಿಗಳು ಸರಿಯಾಗಿಲ್ಲದಿದ್ದರೆ ಕೆಟ್ಟ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಜ್ಯೋತಿಷ ಶಾಸ್ತ್ರದಲ್ಲಿ (Astrology) ರಾಹುವನ್ನು ಪಾಪಿ ಗ್ರಹ ಎಂದು ಪರಿಗಣಿಸಲಾಗಿದೆ. ರಾಹು-ಕೇತುವನ್ನು (Rahu and Ketu) ಛಾಯಾ ಗ್ರಹ (ನೆರಳು) ಎಂದೂ ಹೇಳಲಾಗಿದೆ. ಈ ಎರಡು ಗ್ರಹಗಳ ವಕ್ರದೃಷ್ಟಿ ಬಿದ್ದರೆ ಆ ವ್ಯಕ್ತಿಯು ಜೀವನವು ಬಹಳ ಕಷ್ಟಕರವಾಗಿರುತ್ತದೆ.
ಜೂನ್ 14 ರಂದು ರಾಹು ಗ್ರಹವು (Rahu Planet) ನಕ್ಷತ್ರವನ್ನು (Star) ಬದಲಾಯಿಸುತ್ತಿದೆ. ಈಗ ರಾಹುವು ಮೇಷ ರಾಶಿ (Aries) ಹಾಗೂ ಕೃತ್ತಿಕಾ (Kruthika) ನಕ್ಷತ್ರದಲ್ಲಿ ಸ್ಥಿತವಾಗಿದ್ದಾನೆ. ಇನ್ನು ಒಂದು ವಾರದಲ್ಲಿ ರಾಹುವು ಭರಣಿ ನಕ್ಷತ್ರಕ್ಕೆ ಚಲಿಸಲಿದ್ದು, ಈ ನಕ್ಷತ್ರದಲ್ಲಿ ಮುಂದಿನ ವರ್ಷದ ಅಂದರೆ 2023ರ ಫೆಬ್ರವರಿ (February) 20 ರವರೆಗೆ ಸ್ಥಿತನಾಗಿರುತ್ತಾನೆ. ಇದು ಎಲ್ಲ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ.
ಭರಣಿ ನಕ್ಷತ್ರದ (Bharani Nakshatra) ಬಗ್ಗೆ ತಿಳಿಯೋಣ
ನಕ್ಷತ್ರ ಕೂಟದಲ್ಲಿ ಭರಣಿ ನಕ್ಷತ್ರವು 2ನೇ ನಕ್ಷತ್ರವಾಗಿದೆ. ಭರಣಿ ನಕ್ಷತ್ರದ ಅಧಿಪತಿ ಶುಕ್ರ ಗ್ರಹವಾಗಿದೆ. ಇದರಿಂದಾಗಿ ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಯಾವಾಗಲೂ ಸುಖವಾಗಿರಲು ಬಯಸುತ್ತಾರೆ. ಇವರಿಗೆ ಐಶಾರಾಮಿ ಬದುಕು (Luxury life) ಎಂದರೆ ಬಹಳ ಪ್ರೀತಿ. ಈ ನಕ್ಷತ್ರದವರು ನೋಡಲು ಆಕರ್ಷಕವಾಗಿಯೂ, ಸುಂದರವಾಗಿಯೂ ಇರುತ್ತಾರೆ. ಇವರ ವ್ಯಕ್ತಿತ್ವ ಆಕರ್ಷಕವಾಗಿದ್ದು, ಇತರರನ್ನು ತಮ್ಮತ್ತ ಸೆಳೆಯುತ್ತದೆ. ಇವರು ಪ್ರೀತಿ – ಪ್ರೇಮಕ್ಕೆ (Love) ಹೆಚ್ಚಿ ಪ್ರಾಮುಖ್ಯತೆ ಕೊಡುತ್ತಾರೆ. ಇವರು ಛಲಗಾರರಾಗಿದ್ದು, ಒಂದು ಕೆಲಸವನ್ನು ಮಾಡಬೇಕೆಂದರೆ ಪೂರೈಸದ ಹೊರತು ನೆಮ್ಮದಿ ಕಾಣುವವರಲ್ಲ. ಅಲ್ಲದೆ, ಇವರಿಗೆ ಸಮಾಜದಲ್ಲಿ ಗೌರವ, ಪ್ರತಿಷ್ಠೆಗಳು ಹೆಚ್ಚಿರುತ್ತದೆ.
ಭರಣಿ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳ ರಾಶಿಯು ಮೇಷವಾಗಿರುತ್ತದೆ. ಮೇಷ ರಾಶಿಯ ಅಧಿಪತಿ ಮಂಗಳ ಗ್ರಹವಾಗಿದ್ದು, ಈ ನಕ್ಷತ್ರದ ಅಧಿಪತಿ ಶುಕ್ರ ಗ್ರಹವಾಗಿದೆ. ಹೀಗಾಗಿ ಮಂಗಳ ಮತ್ತು ಶುಕ್ರಗಳೆರಡೂ ಈ ನಕ್ಷತ್ರದಲ್ಲಿ ಜನಿಸಿದವರ ಮೇಲೆ ಪ್ರಭಾವವನ್ನು ಬೀರುತ್ತವೆ. ಆದ್ದರಿಂದ ಧೈರ್ಯಶಾಲಿಗಳು, ನಿರ್ಭೀತರೂ ಆಗಿರುತ್ತಾರೆ. ಭರಣಿ ನಕ್ಷತ್ರಕ್ಕೆ ರಾಹು ಪ್ರವೇಶ ಮಾಡಲಿರುವುದರಿಂದ ಮೂರು ರಾಶಿಯವರಿಗೆ ಈ ಬಾರಿ ತುಂಬಾ ಅದೃಷ್ಟ ಒಲಿಯಲಿದೆ. ಅಂದರೆ, ಇಷ್ಟು ದಿನ ಸುಪ್ತ ಸ್ಥಿತಿಯಲ್ಲಿದ್ದ ಅದೃಷ್ಟವು (Luck) ಈಗ ಜಾಗೃತವಾಗಲಿದ್ದು, ಇವರನ್ನು ಎತ್ತರಕ್ಕೆ ಕೊಂಡೊಯ್ಯಲಿದೆ. ಮುಂದಿನ 8 ತಿಂಗಳುಗಳ ಕಾಲ ಈ ನಕ್ಷತ್ರದಲ್ಲಿ ರಾಹುವಿನ ಉಪಸ್ಥಿತಿ ಇರಲಿದ್ದು, 3 ರಾಶಿಯ ವ್ಯಕ್ತಿಗಳಿಗೆ ಬಹಳವಾಗಿಯೇ ಶುಭ ಫಲಗಳನ್ನು ನೀಡುತ್ತದೆ. ಈ ಸಮಯದಲ್ಲಿ ಅವರು ಹಣದ ಪ್ರಯೋಜನಗಳನ್ನು (Benefits) ಪಡೆಯುತ್ತಾರೆ. ಆ 3 ರಾಶಿ ಚಕ್ರಗಳ ಬಗ್ಗೆ ತಿಳಿಯೋಣ...
ಇದನ್ನು ಓದಿ: ಭಾನುವಾರ, ಏಕಾದಶಿ ದಿನ ತುಳಸಿಗೆ ನೀರು ಹಾಕಬಾರದು, ಏಕೆ ಗೊತ್ತಾ?
ಮೇಷ ರಾಶಿ (Aries)
ರಾಹುವಿನ ನಕ್ಷತ್ರ ಬದಲಾವಣೆಯು ಮೇಷ ರಾಶಿಯವರಿಗೆ ಬಂಪರ್ ಅದೃಷ್ಟವನ್ನು ತಂದು ಕೊಡುತ್ತಿದೆ. ವೃತ್ತಿ (Profession) ಮತ್ತು ಆರ್ಥಿಕ ಸ್ಥಿತಿಗೆ (Economic Status) ಸಂಬಂಧಿಸಿ ಅಧಿಕ ಶುಭಫಲವನ್ನು ನೀಡಲಿದೆ. ಈ ಸಂದರ್ಭದಲ್ಲಿ ನಿಮಗೆ ಬಾರದೇ ಉಳಿದಿದ್ದ ಹಣವು ವಾಪಸ್ ಬರಲಿದೆ. ಆದಾಯದಲ್ಲಿ (Income) ಹೆಚ್ಚಳವಾಗಲಿದೆ.
ವೃಷಭ ರಾಶಿ (Taurus)
ಭರಣಿ ನಕ್ಷತ್ರಕ್ಕೆ ರಾಹುವಿನ ಪ್ರವೇಶವು ವೃಷಭ ರಾಶಿಯವರಿಗೆ ಸಂಪತ್ತಿನ ಲಾಭವನ್ನು ನೀಡುತ್ತದೆ. ಇವರಿಗೆ ಅನೇಕ ಅವಕಾಶಗಳ ಮೂಲಕ ಸಾಕಷ್ಟು ಪ್ರಯೋಜನಗಳು ಲಭಿಸಲಿವೆ. ಇವರಿಗೆ ವೃತ್ತಿಜೀವನದಲ್ಲಿ ಸಹ ತ್ವರಿತ ಏರುಗತಿ ಸಿಗಲಿದೆ. ಜೊತೆಗೆ ಪ್ರಮೋಶನ್ (Promotion) ಪಡೆಯುವ ಭಾಗ್ಯವೂ ಇದೆ.
ತುಲಾ ರಾಶಿ (Libra)
ರಾಹುವಿನ ನಕ್ಷತ್ರ ಬದಲಾವಣೆಯು ತುಲಾ ರಾಶಿಯ ವ್ಯಕ್ತಿಗಳಿಗೆ ಸಂಪತ್ತಿನ ವಿಷಯದಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಇವರ ಆರ್ಥಿಕ ಪರಿಸ್ಥಿತಿಯಲ್ಲಿ ಏಳ್ಗೆಯಾಗಲಿದ್ದು, ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗುತ್ತವೆ. ಮನೆಯಲ್ಲಿ (Home) ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ.
ಇದನ್ನು ಓದಿ: ಹಂದಿ, ಹಾವು, ಕಾಗೆ ಅಡ್ಡ ಬಂದರೂ ಅಪಶಕುನಾವೇ? ಏನು ಹೇಳುತ್ತೆ ಶಾಸ್ತ್ರ?
ವೃಷಭ ಮತ್ತು ತುಲಾ ರಾಶಿಗೆ ಹೇಗೆ ಸಂಬಂಧ..?
ಭರಣಿ ನಕ್ಷತ್ರದ ರಾಶಿಯು ಮೇಷವಾಗಿದ್ದರೂ ವೃಷಭ ಮತ್ತು ತುಲಾ ರಾಶಿಯವರಿಗೆ ಹೇಗೆ ಅದೃಷ್ಟ ಬರುತ್ತದೆ ಎಂಬ ಪ್ರಶ್ನೆ ಏಳುವುದು ಸಹಜ. ಏಕೆಂದರೆ, ಭರಣಿ ನಕ್ಷತ್ರದ ಅಧಿಪತಿ ಗ್ರಹವು ಶುಕ್ರ ಗ್ರಹವಾಗಿದೆ. ಹಾಗಾಗಿ ಈ ನಕ್ಷತ್ರದವರಿಗೆ ಅತ್ಯಂತ ಲಾಭ ಉಂಟಾಗಲಿದೆ. ಜೊತೆಗೆ ವೃಷಭ ಮತ್ತು ತುಲಾ ರಾಶಿಯ ಅಧಿಪತಿ ಗ್ರಹವು ಶುಕ್ರ ಆಗಿರುವುದರಿಂದ ಈ ರಾಶಿಯಲ್ಲಿ ಜನಿಸಿದವರಿಗೆ ಸಹ ಉತ್ತಮ ಫಲಗಳು ಸಿಗಲಿವೆ.