11: 11 Portal Significance : ನಾಳೆ ನವೆಂಬರ್ 11. ವರ್ಷದ 11ನೇ ತಿಂಗಳ 11ನೇ ದಿನಾಂಕ ನಿಮ್ಮ ಅದೃಷ್ಟ ಬದಲಿಸುವ ಶಕ್ತಿ ಹೊಂದಿದೆ. ನಾಳೆ ಒಂದೇ ಒಂದು ಉಪಾಯ ನಿಮ್ಮ ಜೀವನ ಬದಲಿಸಬಲ್ಲದು. ಏನು ಮಾಡ್ಬೇಕು ನೀವೇ ನೋಡಿ.
ಎಲ್ಲರೂ ನಿರೀಕ್ಷೆಯಿಂದ ಕಾಯ್ತಿದ್ದ ಸಮಯ ಬಂದಿದೆ. ನವೆಂಬರ್ (November) ತಿಂಗಳು ಬರ್ತಿದ್ದಂತೆ ದಿನಾಂಕ 11ಕ್ಕೆ ಕಾಯುವವರ ಸಂಖ್ಯೆ ಹೆಚ್ಚಾಗುತ್ತದೆ. ಹನ್ನೊಂದನೇ ತಿಂಗಳ ಹನ್ನೊಂದನೇ ದಿನ ಬಹಳಷ್ಟು ವಿಶೇಷತೆಯನ್ನು ಪಡೆದಿದೆ. Manifestation ( ಅಭಿವ್ಯಕ್ತಿ ಶಕ್ತಿ) ನಂಬುವವರಿಗೆ ಈ ದಿನ ಬಹಳಷ್ಟು ಸ್ಪೇಷಲ್. ಈ ದಿನ ಬ್ರಹ್ಮಾಂಡ ನಿಮ್ಮ ಮಾತನ್ನು ಕೇಳುತ್ತದೆ ಎಂಬ ಬಲವಾದ ನಂಬಿಕೆ ಇದೆ.
11 :11ರ ವಿಶೇಷತೆ ಏನು? :
ಸಂಖ್ಯಾಶಾಸ್ತ್ರದ ಪ್ರಕಾರ, ಸಂಖ್ಯೆ 11 ಸೂರ್ಯ ಮತ್ತು ಚಂದ್ರರ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಇದರರ್ಥ ಈ ಸಂಖ್ಯೆ ಸಮತೋಲನ, ಆತ್ಮವಿಶ್ವಾಸ ಮತ್ತು ಜೀವನದಲ್ಲಿ ಹೊಸ ಆರಂಭಗಳನ್ನು ಸೂಚಿಸುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಈ ದಿನದಂದು ಮಾಡಿದ ನಿರ್ಣಯಗಳು ಮತ್ತು ಶುಭಾಶಯಗಳು ತ್ವರಿತವಾಗಿ ಸಾಕಾರಗೊಳ್ಳುತ್ತವೆ. ಈ ದಿನ ವಿಶ್ವ ನಿಮ್ಮ ಶಕ್ತಿಗೆ ತಕ್ಷಣ ಪ್ರತಿಕ್ರಿಯಿಸುತ್ತದೆ. ಪ್ರತಿ ವರ್ಷ, ನವೆಂಬರ್ ಹನ್ನೊಂದನ್ನು 11:11 ಪೋರ್ಟಲ್ ಎಂದೂ ಕರೆಯುತ್ತಾರೆ. ಇದು ಶಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಯಿಂದ ತುಂಬಿರುತ್ತದೆ. ಸಂಖ್ಯಾಶಾಸ್ತ್ರದಲ್ಲಿ, ಸಂಖ್ಯೆ 11 ಅನ್ನು ಮಾಸ್ಟರ್ ಸಂಖ್ಯೆ ಎಂದೇ ಪರಿಗಣಿಸಲಾಗುತ್ತದೆ. ಯಾವುದಾದ್ರೂ ಆಸೆ ಈಡೇರದೆ ಉಳಿದಿದ್ದರೆ, ಈ ದಿನ ಅದನ್ನು ಈಡೇರಿಸಿಕೊಳ್ಳಬಹುದು.
ಸಂಖ್ಯಾಶಾಸ್ತ್ರದಲ್ಲಿ ಇವು ಅತ್ಯಂತ ಅದೃಷ್ಟದ ಜನ್ಮ ದಿನಾಂಕಗಳು
11:11 ದಿನ ಏನೆಲ್ಲ ಮಾಡಬೇಕು? :
• ಈ ದಿನ ನೀವು ಯಾವುದೇ ಆಸೆಯನ್ನು ಈಡೇರಿಸಿಕೊಳ್ಳಲು ಬಯಸಿದ್ದರೆ ಮೊದಲು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ನಿಮ್ಮ ಉದ್ದೇಶ ಸ್ಪಷ್ಟವಾಗಿರಲಿ. ಧನಾತ್ಮಕ ಚಿಂತನೆಗೆ ಹೆಚ್ಚು ಒಲವು ನೀಡಿ.
• ಲವಂಗದ ಎಲೆ ತೆಗೆದುಕೊಂಡು ಅದರ ಮೇಲೆ ನಿಮ್ಮ ಆಸೆ ಈಡೇರಿದಂತೆ ಬರೆಯಬೇಕು. ನನ್ನ ಆರೋಗ್ಯ ಸುಧಾರಿಸಲಿ ಎಂದು ಬರೆಯುವುದಲ್ಲ. ನನ್ನ ಆರೋಗ್ಯ ಸುಧಾರಿಸಿದೆ. ನಾನು ಆರೋಗ್ಯವಂತನಾಗಿದ್ದೇನೆ ಎಂದು ಬರೆಯಬೇಕು. ಕೆಲಸದಲ್ಲಿ ಬಡ್ತಿ ಬಯಸಿದ್ರೆ ಅದನ್ನೂ ನೀವು ಬರೆಯಬಹುದು. ನನಗೆ ಬಡ್ತಿ ಸಿಕ್ಕಿದೆ ಎಂದು ಬರೆಯುವ ಜೊತೆಗೆ ಲವಂಗದ ಎಲೆ ಹಿಂಭಾಗದಲ್ಲಿ 11 :11 ಬರೆಯಬೇಕು. ನಿಮ್ಮ ಎಲ್ಲ ಕನಸು ಈಡೇರಿದೆ. ನೀವು ಖುಷಿಯಾಗಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ನಂತರ ಆ ಬೇವಿನ ಎಲೆಯನ್ನು ಸುಟ್ಟು, ಅದರ ಭಸ್ಮವನ್ನು ಮನೆಯ ಹೊರಗೆ ಇರುವ ಗಿಡದ ಕೆಳಗೆ ಹಾಕಿ. ಇದು ನಿಮ್ಮ ಆಸೆಯನ್ನು ಶೀಘ್ರವಾಗಿ ಈಡೇರಿಸುತ್ತದೆ. ಲವಂಗದ ಎಲೆ ಮೇಲೆ ಎಂದಿಗೂ ನಕಾರಾತ್ಮಕ ವಿಷ್ಯವನ್ನು ಬರೆಯಬೇಡಿ.
ನಾಳೆ ನವೆಂಬರ್ 11 ರಾತ್ರಿ 10:11 ರಿಂದ ಈ ರಾಶಿಗೆ ರಾಜನಂತಹ ಜೀವನ, ಗುರುವಿನ ಹಿಮ್ಮುಖ ಚಲನೆಯಿಂದ ಲಾಭ
• ನಿಮ್ಮ ಆಸೆಯನ್ನು ನೀವು ಬೆಳಿಗ್ಗೆ 11 ಗಂಟೆ 11 ನಿಮಿಷಕ್ಕೆ ಅಥವಾ ರಾತ್ರಿ 11 ಗಂಟೆ 11 ನಿಮಿಷಕ್ಕೆ ಬರೆಯಬೇಕು. ನಿಮ್ಮ ಒಂದೇ ಆಸೆಯನ್ನು 11 ಬಾರಿ ಬರೆಯಬೇಕು. ನೀವು ಒಂದು ಪೇಪರ್ ಮೇಲೆಯೂ ಇದನ್ನು ಬರೆಯಬಹುದು. ಅದಕ್ಕೆ ನೀವು ಕಪ್ಪು ಪೆನ್ ಬಳಸಬೇಡಿ. ಬೇರೆ ಯಾವುದೇ ಬಣ್ಣದ ಪೆನ್ನಿನಲ್ಲಿ ನೀವು ಬರೆಯಬಹುದು. ಕನಸು ಬರೆದ ನಂತ್ರ ಎಂಜಲ್ ನಂಬರ್ 1176 ಬರೆಯುವಂತೆ ಕೆಲವರು ಸಲಹೆ ನೀಡುತ್ತಾರೆ.
• ನೀವು ಬರೆದ ಆಸೆಯನ್ನು ಓದಬೇಕು. ಈಗಾಗಲೇ ಅದು ಈಡೇರಿದೆ ಎನ್ನುವಂತೆ ಬರೆಯಲು ಮರೆಯಬೇಡಿ. ನಂತ್ರ ಕಾಗದವನ್ನು ಸರಿಯಾಗಿ ಪೋಲ್ಡ್ ಮಾಡಿ ಅದನ್ನು ನಿಮ್ಮ ತಲೆದಿಂಬಿನ ಕೆಳಗೆ ಇಡಿ. 11 ದಿನಗಳ ಕಾಲ ದಿಂಬಿನ ಕೆಳಗೆ ಇದನ್ನು ಇಡಬೇಕು.
• ನೀವು ಪ್ರತಿ ದಿನ 11 :11 ಕ್ಕೆ ನಿಮ್ಮ ಆಸೆಯನ್ನು ಓದಬೇಕು. 12ನೇ ದಿನಕ್ಕೆ ನಿಮ್ಮ ಆಸೆ ಈಡೇರಿರುತ್ತದೆ. ನೀವು ಆ ಕಾಗದವನ್ನು ಸುಟ್ಟು ಬ್ರಹ್ಮಾಂಡಕ್ಕೆ ಅರ್ಪಿಸಿ. ಬ್ರಹ್ಮಾಂಡಕ್ಕೆ ಧನ್ಯವಾದ ಹೇಳಬೇಕು.
• ಒಂದು ವೇಳೆ ನವೆಂಬರ್ 11 ರಂದು ನಿಮಗೆ ಇದನ್ನು ಮಾಡಲು ಸಾಧ್ಯವಾಗಿಲ್ಲ ಎಂದಾದಲ್ಲಿ ನೀವು ನವೆಂಬರ್ 29 ರಂದೂ ಇದನ್ನು ಮಾಡಬಹುದು.
