Asianet Suvarna News Asianet Suvarna News

ವಿಘ್ನವಿಲ್ಲದೆ ಮದುವೆಯಾಗ್ಬೇಕೆಂದ್ರೆ ಮೊದಲ ಕಾರ್ಡ್ ಇವರಿಗೆ ನೀಡಿ

ಮದುವೆ ಅಂದ್ಮೆಲೆ ಸಂಬಂಧಿಕರು, ಸ್ನೇಹಿತರನ್ನು ಆಹ್ವಾನಿಸೋದು ಪದ್ಧತಿ. ಅದಕ್ಕಾಗಿ ಕಾರ್ಡ್ ತಯಾರಿಸಲಾಗುತ್ತದೆ. ಸಂಪ್ರದಾಯದಂತೆ ಸಿದ್ಧವಾಗುವ ಮದುವೆ ಕಾರ್ಡ್ ಹಂಚಲೂ ಪದ್ಧತಿಯಿದೆ. ಇದರಂತೆ ನಡೆದುಕೊಂಡ್ರೆ ಮದುವೆ ಯಾವುದೆ ತೊಂದರೆಯಿಲ್ಲದೆ ನಡೆಯುತ್ತೆ
 

Place Where The First Wedding Card Is Sent
Author
First Published Nov 22, 2022, 1:17 PM IST | Last Updated Nov 22, 2022, 1:17 PM IST

 ಕಾರ್ತಿಕ ಮಾಸದಲ್ಲಿ ತುಳಸಿ ಮದುವೆ ಮುಗಿಯುತ್ತಿದ್ದಂತೆ ಮದುವೆ ಋತು ಶುರುವಾಗುತ್ತದೆ. ಅದಕ್ಕಿಂತ ಮೊದಲು ಯಾವುದೇ ಮದುವೆ ಕಾರ್ಯ ನಡೆಯುವುದಿಲ್ಲ. ಮದುವೆ ಋತು ಶುರುವಾಗ್ತಿದ್ದಂತೆ ಸಂಭ್ರಮ ಕಳೆಕಟ್ಟುತ್ತದೆ. ಈಗಾಗಲೇ ಅನೇಕ ಮದುವೆಗಳು ಫಿಕ್ಸ್ ಆಗಿವೆ. ಕೆಲವು ಮದುವೆಗಳು ನೆರವೇರಿವೆ. ಮದುವೆ ಕಾರ್ಡ್ ಗಳು ಮನೆಗೆ ಬರಲು ಶುರುವಾಗಿವೆ. ಮದುವೆ ಋತುವಿನಲ್ಲಿ ಕೆಲವೊಮ್ಮೆ ಮೂರು – ನಾಲ್ಕು ಮದುವೆಗಳು ಒಂದೇ ದಿನ ಇರುತ್ವೆ. ಯಾರ ಮದುವೆಗೆ ಹೋಗೋದು, ಯಾರ ಮದುವೆ ಬಿಡೋದು ಎಂಬ ಕನ್ಫ್ಯೂಜ್ ಶುರುವಾಗೋದಿದೆ. ಮದುವೆಗೆ ಕರೆಯಲು ಮನೆಗೆ ಬಂದ್ರೆ ಅವರನ್ನು ಸತ್ಕರಿಸಿ, ಅವರಿಗೆ ಸಿಹಿ ನೀಡಿ, ಶುಭಕೋರಿ ಕಳಿಸೋದು ನಮ್ಮ ಸಂಪ್ರದಾಯ. ಹಾಗೆ ನಿಮ್ಮ ಕುಟುಂಬದಲ್ಲಿ ಅಥವಾ ನಿಮ್ಮದೆ ಮದುವೆ ಫಿಕ್ಸ್ ಆದ್ರೆ ನೀವು ಕೂಡ ಕಾರ್ಡ್ ಹಂಚಲು ಮುಂದಾಗ್ತೀರಿ.

ಸಾಮಾನ್ಯವಾಗಿ ಮದುವೆ (Marriage) ಮಂಗಳಪತ್ರವನ್ನು ಹಿಂದೂ (Hindu ) ಪದ್ಧತಿಯಂತೆ ಮುದ್ರಿಸಲಾಗುತ್ತದೆ. ಮಂಗಳಪತ್ರ ಬರೆಯಲೆಂದೇ ಒಂದು ಮುಹೂರ್ತ ಫಿಕ್ಸ್ ಮಾಡಲಾಗುತ್ತದೆ. ಪದ್ಧತಿ ತಿಳಿಯದ ಜನರಿಗೆ, ಕಾರ್ಡ್ (Card) ಸಿದ್ಧವಾಗಿ ಬಂದ್ಮೇಲೆ ಮೊದಲ ಕಾರ್ಡ್ ಯಾರಿಗೆ ನೀಡೋದು ಎಂಬ ಗೊಂದಲ ಕಾಡಬಹುದು.  ನೀವು ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಶಾಸ್ತ್ರಗಳಲ್ಲಿ, ಮೊದಲ ಮಂಗಳಪತ್ರವನ್ನು ಯಾರಿಗೆ ನೀಡಬೇಕು ಎಂದು ಹೇಳಲಾಗಿದೆ. ಮದುವೆ ಕಾರ್ಡನ್ನು ಮೊದಲು ಯಾರಿಗೆ ನೀಡಬೇಕು ಎನ್ನುವ ಬಗ್ಗೆ ಯಾವ ನಿಯಮವಿದೆ ಎಂಬುದನ್ನು ನಾವಿಂದು ಹೇಳ್ತೆವೆ.

ಮದುವೆಯ ಮೊದಲ ಕಾರ್ಡ್ ಯಾರಿಗೆ ನೀಡಲಾಗುತ್ತೆ ಗೊತ್ತಾ? : ಯಾವುದೇ ಶುಭ ಕೆಲಸ, ಕಾರ್ಯಗಳನ್ನು ಮಾಡುವ ಮೊದಲು ದೇವರನ್ನು ನೆನೆಯಲಾಗುತ್ತದೆ. ಅದೇ ರೀತಿ ಮನೆಯಲ್ಲಿ ಮದುವೆ ಫಿಕ್ಸ್ ಆದಾಗಿನಿಂದ ಹಿಡಿದು ಪ್ರತಿ ಕೆಲಸಕ್ಕೂ ಮೊದಲು ದೇವರನ್ನು ಸ್ಮರಿಸಲಾಗುತ್ತದೆ. ಇದೇ ಕಾರಣಕ್ಕೆ ಮದುವೆಯ ಮೊದಲ ಕಾರ್ಡನ್ನು ಕೂಡ ದೇವರಿಗೆ ಬಿಟ್ಟು ಬೇರೆಯವರಿಗೆ ಕೊಡುವುದಿಲ್ಲ. ಅದು ದೇವರಿಗೆ ಮೀಸಲು.

ದೇವರ ಫೋಟೋಗೆ ಪೂಜಿಸುತ್ತೀರೋ, ಮೂರ್ತಿಗೋ? ವ್ಯತ್ಯಾಸವೇನು ತಿಳ್ಕೊಳ್ಳಿ

ಯಾವ ದೇವರಿಗೆ ಮೊದಲ ಕಾರ್ಡ್? : ದೇವರಿಗೆ ಮದುವೆಯ ಮೊದಲ ಕಾರ್ಡ್ ನೀಡಲಾಗುತ್ತದೆ ಸರಿ. ಯಾವ ದೇವರಿಗೆ ಎಂಬ ಪ್ರಶ್ನೆ ನಿಮಗೆ ಬರಬಹುದು. ವಿಘ್ನ ವಿನಾಶಕ ಎಂದೇ ಕರೆಸಿಕೊಂಡಿರುವ, ಆದಿಯಲ್ಲಿಯೇ ಮೊದಲು ಪೂಜೆ ನಡೆಯುವ ದೇವರು ಗಣೇಶನಿಗೆ ಮದುವೆಯ ಮೊದಲ ಕಾರ್ಡ್ ನೀಡಲಾಗುತ್ತದೆ. ಯಾವುದೇ ವಿಘ್ನವಿಲ್ಲದೆ ಮದುವೆ ನೆರವೇರಲಿ ಎಂದು ಗಣೇಶನಲ್ಲಿ ಪ್ರಾರ್ಥನೆ ಮಾಡಿ ಗಣೇಶನ ಪೂಜೆಯೊಂದಿಗೆ ಕಾರ್ಡ್ ಹಂಚವ ಕೆಲಸವನ್ನು ಪ್ರಾರಂಭವಾಗುತ್ತದೆ. 

ಎರಡನೇಯ ಕಾರ್ಡ್ ಯಾರಿಗೆ ನೀಡಲಾಗುತ್ತದೆ? : ಗಣೇಶನ ಪಾದಗಳಿಗೆ ಮೊದಲ ಮಂಗಳಪತ್ರವನ್ನು ಅರ್ಪಿಸಿದ ನಂತ್ರ ಎರಡನೇಯ ಕಾರ್ಡನ್ನು ವಧು ಮತ್ತು ವರನ ಅಜ್ಜಿಯರಿಗೆ ನೀಡಿ ಅವರ ಆಶೀರ್ವಾದ ಪಡೆಯಲಾಗುತ್ತದೆ. ಇದಾದ ಬಳಿಕ ಕಾರ್ಡ್ ವಿತರಣೆ ಪ್ರಕ್ರಿಯೆ ಆರಂಭವಾಗುತ್ತದೆ.

ಬಂಗಾರ ಇಡೋಕೆ, ಧರಿಸಲು ಇಲ್ಲಿವೆ ವಾಸ್ತು ಟಿಪ್ಸ್

ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಈ ಪದ್ಧತಿ : ಮದುವೆಯ ಮೊದಲ ಮಂಗಳಪತ್ರವನ್ನು ವಿನಾಯಕನಿಗೆ ನೀಡುವ ಪದ್ಧತಿ ಅನೇಕಾನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಮದುವೆ ಕಾರ್ಡ್ ನಲ್ಲಿ ಕೂಡ ಗಣೇಶನ ಚಿತ್ರವಿರುತ್ತದೆ. ಅದು ಎಷ್ಟೇ ಗ್ರ್ಯಾಂಡ್ ಕಾರ್ಡ್ ಆಗಿದ್ದರೂ, ದುಬಾರಿ ಬೆಲೆಯ, ಬಗೆ ಬಗೆಯ ವಿನ್ಯಾಸದ ಕಾರ್ಡ್ ಆಗಿದ್ದರೂ ಗಣೇಶನ ಫೋಟೋ ಇದ್ದೇ ಇರುತ್ತದೆ. ಮದುವೆಯಲ್ಲಿ ಯಾವುದೇ ಸಮಸ್ಯೆ ಬರದಿರಲಿ ಎನ್ನುವ ಕಾರಣಕ್ಕೆ ಕಾರ್ಡ್ ಮೇಲೆ ಗಣೇಶನ ಫೋಟೋ ಹಾಕಿರಲಾಗುತ್ತದೆ.

ಇದು ಗಣಪತಿಗೆ ಸಿಕ್ಕ ವರ : ಗಣಪತಿಗೆ ವರ ಸಿಕ್ಕಿದೆ. ಆದಿಯಲ್ಲಿ ಆತನನ್ನು ಮೊದಲು ಪೂಜೆ ಮಾಡಬೇಕೆಂಬ ಆಶೀರ್ವಾದವನ್ನು ಗಣಪತಿ ಪಡೆದಿದ್ದಾನೆ. ಇದೇ ಕಾರಣಕ್ಕೆ ಭಕ್ತರು ಗಣಪತಿಯನ್ನು ನೆನೆಯದೆ ಯಾವುದೇ ಕೆಲಸಕ್ಕೆ ಕೈ ಹಾಕುವುದಿಲ್ಲ. 
 

Latest Videos
Follow Us:
Download App:
  • android
  • ios