ಸಂಖ್ಯಾಶಾಸ್ತ್ರವು ವ್ಯಕ್ತಿಯ ಜನ್ಮದಿನಾಂಕದ ಆಧಾರದ ಮೇಲೆ ಒಂಬತ್ತು ವಿಧಗಳಾಗಿ ವಿಂಗಡಿಸುತ್ತದೆ. ಮೊಬೈಲ್ ಸಂಖ್ಯೆಯ ಅಂಕಿಗಳ ಮೊತ್ತದಿಂದ ವ್ಯಕ್ತಿಯ ಸಂಖ್ಯೆ ನಿರ್ಧರಿಸಲ್ಪಡುತ್ತದೆ. ಜನ್ಮದಿನಾಂಕಕ್ಕೆ ಅನುಗುಣವಾದ ಮೊಬೈಲ್ ಸಂಖ್ಯೆ ನಾಯಕತ್ವ, ಆತ್ಮವಿಶ್ವಾಸ, ಸೃಜನಶೀಲತೆ, ಸ್ಥಿರತೆ, ಹೊಂದಾಣಿಕೆ, ಸಾಮರಸ್ಯ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಸಹಕಾರಿ.

ಸಂಖ್ಯಾಶಾಸ್ತ್ರವು ಭಾರತೀಯರು ಅನುಸರಿಸಿಕೊಂಡು ಬಂದಿರುವ ಭವಿಷ್ಯ ಸೂಚಕ ವಿಜ್ಞಾನವಾಗಿದೆ. ಕೆಲವರು ಇದನ್ನು ಗಣಿತ ವಿಜ್ಞಾನ ಎನ್ನುವರು. ಇನ್ನೂ ಕೆಲವರು ಅಂಕಿಅಂಶದ ಸಂಗ್ರಹಣೆ, ವ್ಯಾಖ್ಯಾನ ಎಂದು ಪರಿಗಣಿಸಿದ್ದಾರೆ. ಗಣಿತಶಾಸ್ತ್ರದ ಭಾಗವೆಂದೂ ಹೇಳುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿ ಸಂಖ್ಯೆಯು ಕೆಲವು ಶಕ್ತಿ ಅಥವಾ ಶಕ್ತಿಯನ್ನು ಹೊಂದಿರುತ್ತದೆ ಅದು ವ್ಯಕ್ತಿಯ ವ್ಯಕ್ತಿತ್ವದ ಲಕ್ಷಣಗಳು ಮತ್ತು ಅವನ/ಅವಳ ಜೀವನದ ಘಟನೆಗಳ ಮೇಲೆ ಪ್ರಭಾವ ಬೀರಬಹುದು. ನಮ್ಮ ಬದುಕು ಕೂಡ ಒಂದು ಸಂಖ್ಯೆಯ ಆಧಾರದ ಮೇಲೆಯೇ ನಡೆಯುತ್ತಿರುತ್ತದೆ. ಆದ್ದರಿಂದ ಸಂಖ್ಯಾಶಾಸ್ತ್ರವೆನ್ನುವುದು ನಿತ್ಯ ಬದುಕಿನ ಸೂಚಕವಾಗಿದೆ. ಹುಟ್ಟಿದ ದಿನಾಂಕದ ಪ್ರಕಾರ ಸಂಖ್ಯಾಶಾಸ್ತ್ರವು ನಮ್ಮನ್ನು ಒಂಬತ್ತು ವಿಭಿನ್ನ ಪ್ರಕಾರಗಳಾಗಿ ವಿಂಗಡಿಸುತ್ತದೆ. 1 ರಿಂದ 9ರ ಅಂಕೆಯೇ ಇದರ ಮೂಲಾಧಾರ. ಈ ಒಂಬತ್ತು ಅಂಕೆಗೆ ತಕ್ಕಂತೆ ಕೆಲವರು ಭಾವುಕರಾಗಿರುತ್ತಾರೆ, ಕೆಲವರು ಪ್ರೇಮದಲ್ಲಿ ಪ್ರಾಕ್ಟಿಕಲ್ ಆಗಿದ್ದರೆ, ಇನ್ನು ಕೆಲವರು ಸೌಂದರ್ಯದ ಹುಡುಕಾಟದಲ್ಲಿರುತ್ತಾರೆ, ಮತ್ತೆ ಕೆಲವರು ಪ್ರೀತಿಗೆ ಹಂಬಲಿಸಿದರೆ, ಕೆಲವರು ದುಡ್ಡಿನ ವ್ಯಾಮೋಹಕ್ಕೆ ಒಳಗಾಗಿರುತ್ತಾರೆ. ಇದು ನೀವು ಯಾವಾಗ ಜನಿಸಿದಿರಿ ಎಂಬುದರ ಮೇಲೆ ಅವಲಂಬಿತವಾಗಿದೆ.

ಇದೀಗ ನಿಮ್ಮ ಮೊಬೈಲ್​ ಸಂಖ್ಯೆಗಳು ಹಾಗೂ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮಗೆ ಅದೃಷ್ಟ ತಂದುಕೊಡುವುದು ಯಾವುದು ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ. ಈಗ ಮೊಬೈಲ್​ ಸಂಖ್ಯೆಯನ್ನು ಆಯ್ಕೆ ಮಾಡುವ ಅಧಿಕಾರ ಇರುವುದರಿಂದ, ನಿಮ್ಮ ಜನ್ಮದಿನಕ್ಕೆ ಅನುಗುಣವಾಗಿ ಅದನ್ನು ಆಯ್ಕೆಮಾಡಿಕೊಳ್ಳಬಹುದು. ಮೊಬೈಲ್​ ಸಂಖ್ಯೆಯನ್ನು ಲೆಕ್ಕಾಚಾರ ಹಾಕುವುದು ಹೇಗೆ ಎಂದರೆ: ಒಂದು ವೇಳೆ ನಿಮ್ಮ ಮೊಬೈಲ್​ ಸಂಖ್ಯೆ 9880123456 ಆಗಿದ್ದರೆ, ಇವೆಲ್ಲವನ್ನೂ ಕೂಡಿಸಬೇಕು. 9+8+8+0+1+2+3+4+5+6. ಆಗ ಸಿಗುವ ಸಂಖ್ಯೆ 46. ಇದನ್ನು ಒಟ್ಟುಗೂಡಿಸಿದರೆ ಅಂದರೆ 4+6=10 ಆಗುತ್ತದೆ. 10 ಒಟ್ಟುಗೂಡಿಸಿದರೆ 1+0=1 ಆಗುತ್ತದೆ. ಅಂದರೆ ನಿಮ್ಮ ಸಂಖ್ಯೆ 1. ಅದಕ್ಕೆ ತಕ್ಕಂತೆ ಹುಟ್ಟಿದ ದಿನ ಮತ್ತು ಮೊಬೈಲ್​ ನಂಬರ್​ ಹೀಗಿದ್ದರೆ ಒಳ್ಳೆಯದು.

ಈ ದಿನಾಂಕದಂದು ಹುಟ್ಟಿದವರಿಗೆ ಎರಡು ಮದುವೆ ಇಲ್ಲವೇ ಮತ್ತೊಂದು ಸಂಬಂಧ ಹೆಚ್ಚು! ಯಾವುದದು ಸಂಖ್ಯೆ?

-ನಿಮ್ಮ ಹುಟ್ಟಿದ ದಿನಾಂಕ 1, 10, 19, 28 ಆಗಿದ್ದರೆ- 2, 3, 4, 9 ಬರುವ ಮೊಬೈಲ್​ ಸಂಖ್ಯೆ ಪಡೆದುಕೊಂಡರೆ ಬೆಸ್ಟ್​. ಇದು ನಾಯಕತ್ವದ ಗುಣಗಳನ್ನು ಹೆಚ್ಚಿಸುತ್ತದೆ. ಅದೃಷ್ಟವನ್ನು ಹೆಚ್ಚಿಸುತ್ತದೆ. ಸಕಾರಾತ್ಮಕ ಶಕ್ತಿಯನ್ನು ಬೆಳೆಸುತ್ತದೆ ಮತ್ತು ಯಶಸ್ಸು ಮತ್ತು ಸಾಮರಸ್ಯವನ್ನು ಉತ್ತೇಜಿಸುತ್ತದೆ.

-ನಿಮ್ಮ ಹುಟ್ಟಿದ ದಿನಾಂಕ 2, 11, 20, 29 ಆಗಿದ್ದರೆ- 1, 5 ಸಂಖ್ಯೆಯು ಒಳ್ಳೆಯದು. ಇದು ಭಾವನಾತ್ಮಕ ಸ್ಥಿರತೆಗಾಗಿ ಚಂದ್ರನ ಶಕ್ತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಮನಸ್ಸು ಶಾಂತವಾಗಿರುತ್ತದೆ. 

-ನಿಮ್ಮ ಹುಟ್ಟಿದ ದಿನಾಂಕ 3, 12, 21, 30 ಆಗಿದ್ದರೆ- 1, 2, 9 ಸಂಖ್ಯೆಯು ಒಳ್ಳೆಯದು. ಇದು ಸೃಜನಶೀಲತೆ, ಸಂವಹನ ಮತ್ತು ಆಶಾವಾದವನ್ನು ಹೆಚ್ಚಿಸುತ್ತದೆ. ಸಾಮರಸ್ಯ ಮತ್ತು ನಾಯಕತ್ವವನ್ನು ಸುಗಮಗೊಳಿಸುವ ಶಕ್ತಿಯೂ ಇದೆ. 

-ನಿಮ್ಮ ಹುಟ್ಟಿದ ದಿನಾಂಕ 4, 13, 22, 31 ಆಗಿದ್ದರೆ- 5, 6, 8 ಸಂಖ್ಯೆಯು ಒಳ್ಳೆಯದು. ಇದು ಬದುಕಿನಲ್ಲಿ ಪ್ರಾಕ್ಟಿಕಲ್​ ಆಗಿರುವಂತೆ ಮಾಡುತ್ತದೆ ಜೊತೆಗೆ, ಸಮೃದ್ಧಿಯನ್ನು ಪ್ರೋತ್ಸಾಹಿಸುತ್ತದೆ.

-ನಿಮ್ಮ ಹುಟ್ಟಿದ ದಿನಾಂಕ 5, 14, 23 ಆಗಿದ್ದರೆ- 1, 6 ಸಂಖ್ಯೆಯು ಒಳ್ಳೆಯದು. ಇದು ಹೊಂದಿಕೊಳ್ಳುವಿಕೆಯ ಗುಣವಿದೆ. ಬಹುಮುಖ ಪ್ರತಿಭೆಯನ್ನುಇದು ಪ್ರತಿಧ್ವನಿಸುತ್ತದೆ. ಸಮತೋಲನ ಮತ್ತು ರೋಮಾಂಚಕ ಶಕ್ತಿಯನ್ನು ಬೆಳೆಸುತ್ತದೆ.

-ನಿಮ್ಮ ಹುಟ್ಟಿದ ದಿನಾಂಕ 6, 15, 24 ಆಗಿದ್ದರೆ- 4, 5, 7, 8 ಸಂಖ್ಯೆಯು ಒಳ್ಳೆಯದು. ಇದು ಸಾಮರಸ್ಯ ಮತ್ತು ಸಮತೋಲನವನ್ನು ಹೆಚ್ಚಿಸುತ್ತದೆ. ಸ್ಥಿರತೆ ಮತ್ತು ಸಮೃದ್ಧಿಯನ್ನು ಸಕ್ರಿಯಗೊಳಿಸುತ್ತದೆ.

-ನಿಮ್ಮ ಹುಟ್ಟಿದ ದಿನಾಂಕ 7, 16, 25 ಆಗಿದ್ದರೆ- 6, 9 ಸಂಖ್ಯೆಯು ಒಳ್ಳೆಯದು. ಇದು ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಆಳವನ್ನು ಪೂರೈಸುತ್ತದೆ. ಸಾಮರಸ್ಯ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಉತ್ತೇಜಿಸುತ್ತದೆ.

-ನಿಮ್ಮ ಹುಟ್ಟಿದ ದಿನಾಂಕ 8, 17, 26 ಆಗಿದ್ದರೆ- 4, 5, 6 ಸಂಖ್ಯೆಯು ಒಳ್ಳೆಯದು. ಇದು ಘನತೆ ಹೆಚ್ಚಿಸುತ್ತದೆ. ಹೊಂದಿಕೊಳ್ಳುವಿಕೆ ಗುಣ ವೃದ್ಧಿಸುತ್ತದೆ. ಶನಿಯ ಸ್ಥಿರಗೊಳಿಸುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.

-ನಿಮ್ಮ ಹುಟ್ಟಿದ ದಿನಾಂಕ 9, 18, 27 ಆಗಿದ್ದರೆ- 1, 2, 3, 7 ಸಂಖ್ಯೆಯು ಒಳ್ಳೆಯದು. ಇದು ಪ್ರವೃತ್ತಿ, ಸಂವಹನ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಬುದ್ಧಿವಂತಿಕೆ, ನಾಯಕತ್ವ ಮತ್ತು ದಯಾ ಗುಣಗಳನ್ನು ಬೆಳೆಸುತ್ತದೆ. 

ನಿಮ್ಮ ಹುಟ್ಟಿದ ದಿನಕ್ಕೆ ಅನುಗುಣವಾಗಿ 2025 ಹೇಗಿದೆ? ಉದ್ಯೋಗ, ಪ್ರೀತಿ, ಮದುವೆ, ಲಾಭ- ನಷ್ಟ ಹೇಗಿದೆ?