ಮೇ ತಿಂಗಳಿನಲ್ಲಿ ಜನಿಸಿದವರು ಒಂದು ರೀತಿಯಲ್ಲಿ ಸುಖಪುರುಷರು ಅಥವಾ ಸುಖಿ ಸ್ತ್ರೀಯರು. ಶಾಂತ ಸ್ವಭಾವ ಹಾಗೂ ನಿಧಾನಸ್ಥರು. ಕೋಪ ಸಾಮಾನ್ಯವಾಗಿ ಬರಲ್ಲ. ಎಲ್ಲದಕ್ಕೂ ತುಂಬಾ ಯೋಚಿಸುತ್ತಾರೆ. ತೂಕದ ಆಲೋಚನೆಗಳು, ನಿರ್ಧಾರಗಳು ಇವರದಾಗಿರುತ್ತದೆ. ಎಲ್ಲರೂ ಗೌರವಿಸುವಂಥ ನಡೆನುಡಿಯವರಾಗಿರುತ್ತಾರೆ. ಎಲ್ಲರಿಗೂ ಪ್ರೀತಿಪಾತ್ರರಾಗಿರುತ್ತಾರೆ. ಕೊಂಚ ಸ್ಥೂಲಕಾಯದವರು. ಗೌರವಯುತವಾದ ಹುದ್ದೆಯಲ್ಲಿರುತ್ತಾರೆ. ಬರವಣಿಗೆಯಲ್ಲಿಯೂ ಆಸಕ್ತಿ ಇರುತ್ತದೆ. ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಬದುಕಿನಲ್ಲಿ ಎಡವುವುದು ಕಡಿಮೆ. ನಿಧಾನವೇ ಪ್ರಧಾನ ಎಂಬಂಥ ಮನಸ್ಸು. ಯಾರಿಗೂ ಕೇಡಣಿಸದ ಮನಸ್ಸು ಇವರದ್ದಾಗಿರುತ್ತದೆ. ಎಲ್ಲದರಲ್ಲಿಯೂ ಒಳ್ಳೆಯದನ್ನೇ ಕಾಣುವ ಪ್ರವೃತ್ತಿ. ಗಂಭೀರ ಸ್ವಭಾವ. ಚೆಲ್ಲು ಸ್ವಭಾವ ಇವರಿಗೆ ಹೇಳಿ ಮಾಡಿಸಿದ್ದಲ್ಲ.

ಸಿಹಿತಿಂಡಿ ಪ್ರಿಯರು. ಒಳ್ಳೆಯ ಅಡುಗೆ ಮಾಡುವವರಾಗಿರುತ್ತಾರೆ. ಬದುಕನ್ನು ಯಾವುದೇ ಕೊರತೆಗಳಿಲ್ಲದೆ ಸುಖವಾಗಿ ಕಳೆಯಲು ಇಷ್ಟಪಡುತ್ತಾರೆ. ಸಂಗೀತ, ನಾಟ್ಯ, ನಟನೆ, ಬರವಣಿಗೆ, ಕಸೂತಿ, ಹೊಲಿಗೆ, ಹೆಣಿಗೆ ಹೀಗೆ ಯಾವುದಾದರೂ ಕಲೆಯಲ್ಲಿ ಪರಿಣಿತಿ ಹೊಂದಿರುತ್ತಾರೆ.

ಫ್ಯಾಷನ್ ಪ್ರಿಯರು. ಇವರು ಹಾಕುವ ಬಟ್ಟೆಗಳು, ಮಾಡುವ ಅಲಂಕಾರ ಕಣ್ಮನ ಸೆಳೆಯುವಂತಿರುತ್ತದೆ. ನೋಡಲೂ ಆಕರ್ಷಕರಾಗಿರುತ್ತಾರೆ. ಊಟತಿಂಡಿಯಲ್ಲೂ ವೈವಿಧ್ಯತೆಯನ್ನು ಬಯಸುತ್ತಾರೆ. ಇವರು ಕಲೆಗಾರರಾಗಿರಬಹುದು, ಕಟ್ಟಡದ ವಿನ್ಯಾಸಕಾರರಾಗಿರಬಹುದು, ಕುಶಲಕರ್ಮಿಗಳಾಗಿರಬಹುದು. ಇಂಟೀರಿಯರ್‌ ಡಿಸೈನರ್ ಆಗಿರಬಹುದು. ವಿವಿಧ ವಿನ್ಯಾಸಗಳ ವಸ್ತ್ರಗಳಿಗೆ ಸಂಬಂಧಿಸಿದ ಉದ್ದಿಮೆದಾರರಾಗಿರಬಹುದು. ಇವರದ್ದು ನೂರು ಜನರಲ್ಲೂ ಎದ್ದು ಕಾಣುವ ವ್ಯಕ್ತಿತ್ವ.

ಬುದ್ಧಿವಂತರಾಗಿದ್ದರೂ ಮಂದಸ್ವಭಾವದರೂ ಆಗಿರುತ್ತಾರೆ. ಸೃಜನಶೀಲರಾಗಿರುತ್ತಾರೆ. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಬದುಕಲ್ಲಿ ಮುಂದೆ ಬರುವ ಗುಣ ಹೊಂದಿರುತ್ತಾರೆ. ತಮಗೆ ಒಳ್ಳೆಕಾಲ ಬರುವ ತನಕವೂ ತಾಳ್ಮೆಯಿಂದ ಕಾಯುತ್ತಾರೆ. ಅವರ ಕ್ಷೇತ್ರದಲ್ಲಿ ಒಂದು ಯೋಗ್ಯ ಮಟ್ಟದ ಸ್ಥಾನಮಾನವನ್ನು ಗಳಿಸಿಕೊಳ್ಳುತ್ತಾರೆ. ಉನ್ನತ ಮಟ್ಟದ ಅವಕಾಶಗಳು ದೊರೆಯುತ್ತವೆ.

ಇವರು ಉತ್ತಮ ಕತೆಗಾರರಾಗಬಹುದು. ಕತೆ ಹೊಸೆಯು ಕ್ಷೇತ್ರಗಳಲ್ಲಿ ಇವರಿಗೆ ಅವಕಾಶಗಳು ಕೈ ಬೀಸಿ ಕರೆಯಬಹುದು. ಪತ್ರಿಕೆಗಳಲ್ಲಿ, ಟಿವಿ ಸೀರಿಯಲ್‌ಗಳಲ್ಲಿ, ಸಿನಿಮಾ ಸ್ಕ್ರಿಪ್ಟ್‌ಗಳನ್ನು ಬರೆಯಬಹುದು.

ಯಾವ ದೇವರಿಗೆ ಯಾವ ಹೂವಿನ ಅರ್ಚನೆ ಅಚ್ಚುಮೆಚ್ಚು? ಅರ್ಚಿಸಿದರೆ ಹೆಚ್ಚು ಪ್ರಿಯ? ...

ಕುಟುಂಬ ವತ್ಸಲರು. ಮನೆಯವರನ್ನೆಲ್ಲ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇವರನ್ನು ಸಂಗಾತಿಯಾಗಿ ಪಡೆದವರು ಭಾಗ್ಯ ಮಾಡಿರುತ್ತಾರೆ. ಮನೆಯವರ ಹಾಗೂ ಬಂಧುಗಳ ಸುಖದುಃಖಗಳಿಗೆ ಅವರು ಕೇಳದೆಯೇ ಮಿಡಿಯುತ್ತಾರೆ. ಕೇಳದೆಯೇ ಕಷ್ಟಗಳಲ್ಲಿ ಪಾಲುಗಾರರಾಗುತ್ತಾರೆ. ತಮ್ಮಿಂದಾದ ಸಹಾಯ ಮಾಡುತ್ತಾರೆ.

ಹಣದ ವಿಚಾರದಲ್ಲಿ ಇವರು ನಂಬಲು ಅರ್ಹವಾದ ಸ್ವಭಾವದವರು. ಇವರಿಗೆ ಸಾಲ ಕೊಡಬಹುದು. ಮರಳಿ ಕೊಡಲು ತಕರಾರು ಮಾಡುವವರಲ್ಲ. ಆದರೆ ಇವರು ಇನ್ನೊಬ್ಬರಿಗೆ ಸಾಲ ಕೊಡಬಾರದು. ಯಾಕೆಂದರೆ ವಸೂಲಿ ಮಾಡುವುದೇ ಕಷ್ಟಕರ. ಗೂಂಡಾಗಳಂತೆ ಪೆಡಸಾಗಿ ವರ್ತಿಸಿ ವಸೂಲಿ ನಡೆಸುವುದು ಇವರಿಂದ ಸಾಧ್ಯವಿಲ್ಲ. ಇವರು ಸಾಲ ವಸೂಲಿಗಾರನ ಕೆಲಸ, ಬ್ಯಾಂಕಿಂಗ್ ಕೆಲಸಗಳಿಗೆ ಹೊಂದುವ ಸ್ವಭಾವದವರು ಅಲ್ಲ. ಹಾಗೇ ಉದ್ಯಮಗಳನ್ನು ಸ್ಥಾಪಿಸಿ ತುಂಬಾ ಶ್ರೀಮಂತರಾಗುವುದೂ ಸಾಧ್ಯವಿಲ್ಲ. ಆದರೆ ಇವರು ಸೃಷ್ಟಿಶೀಲ ಕೆಲಸಗಳಲ್ಲಿ ವ್ಯಸ್ತರಾಗುವುದರಿಂದ ಅದರಲ್ಲೇ ಹೆಚ್ಚಿನ ಶ್ರೇಯಸ್ಸನ್ನು ಕಾಣಲು ಸಾಧ್ಯವಿದೆ.

ಹಂಪಿಯ ಅಂಜನಾದ್ರಿಯೇ ಆಂಜನೇಯ ಜನ್ಮಸ್ಥಳ; ಹನುಮನ ಜನ್ಮಸ್ಥಳ ಮತ್ತು ವಾದಗಳು! ...

ಮೇ ತಿಂಗಳಿನಲ್ಲಿ ಜನಿಸಿದವರು ಅದೃಷ್ಟವಂತರೂ ಹೌದು. ಸಾಮಾನ್ಯವಾಗಿ ಜೂನ್, ಜುಲೈ ಮುಂತಾದ ಮಳೆಗಾಲದ ದಿನಗಳಲ್ಲಿ ಜನಿಸಿದವರಿಗೆ ಕಾಡುವ ಆರೋಗ್ಯದ ಸಮಸ್ಯೆಗಳು ಇವರನ್ನು ಕಾಡಲಾರವು. ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಇರುವುದಿಲ್ಲ. ಆದರೆ ಸಣ್ಣಪುಟ್ಟ ತೊಂದರೆಗಳು ಕಾಡಬಹಹುದು. ನಿತ್ಯ ವ್ಯಾಯಾಮ ಮಾಡುವುದರಿಂದ ಆರೋಗ್ಯ ಹಾಗೂ ಅಂಗಸೌಷ್ಟವವನ್ನು ಕಾಪಾಡಿಕೊಳ್ಳುತ್ತಾರೆ.

ಇವರ ಪ್ರೇಮಜೀವನ ಉತ್ತಮವಾಗಿರುತ್ತದೆ. ಶೃಂಗಾರಪ್ರಿಯರು. ಆದ್ದರಿಂದ ತಮ್ಮ ಸಂಗಾತಿಗಳಿಗೆ ಚೆನ್ನಾಗಿ ಸ್ಪಂದಿಸುತ್ತಾರೆ ಹಾಗೂ ಅವರಿಂದ ಪ್ರತಿಸ್ಪಂದನ ಪಡೆಯುತ್ತಾರೆ. ಸುತ್ತಾಟ ಎಂದರೆ ಇವರಿಗೆ ಇಷ್ಟ. ದೂರದೂರದ ಪ್ರಯಾಣವನ್ನು ಮಾಡುತ್ತಾರೆ ಮತ್ತು ಅದರಿಂದ ತಿಳಿವಳಿಕೆಯನ್ನು ಪಡೆಯುತ್ತಾರೆ.

ಕೊರೋನಾ ಸಂಕಷ್ಟದಲ್ಲಿ ಶಂಖ ಊದುತ್ತೀರಾ? ಶ್ವಾಸಕೋಶ ಆರೋಗ್ಯವಾಗಿದೆ ಎಂದರ್ಥ! ...