ಭಾರತದಲ್ಲಿರುವ ಪಂಚಭೂತ ಶಿವ ದೇವಾಲಯಗಳು ಮತ್ತು ಅದರ ವಿಶೇಷತೆಗಳು

ಪ್ರಕೃತಿಯಲ್ಲಿನ ಪಂಚಭೂತಗಳಾದ ಗಾಳಿ, ನೀರು, ಬೆಂಕಿ, ಭೂಮಿ ಮತ್ತು ಆಕಾಶವನ್ನು ದೇಶದ ವಿವಿಧೆಡೆ ಪಂಚಭೂತ ಶಿವಾಲಯಗಳನ್ನು ನಿರ್ಮಾಣ ಮಾಡಲಾಗಿದೆ. 

Pancha Bhoota Shiva Temples of India Kalahasti Ekambareswarar and Chidambara gods sat

ಬೆಂಗಳೂರು (ಜೂ.08): ನಮ್ಮ ಪ್ರಕೃತಿಯಲ್ಲಿನ ಗಾಳಿ, ನೀರು, ಬೆಂಕಿ, ಭೂಮಿ ಮತ್ತು ಆಕಾಶವನ್ನು ಪಂಚಭೂತಗಳು ಎಂದು ಕರೆಯಲಾಗುತ್ತದೆ. ಈ ಪಂಚಭೂತಗಳು ಮನುಷ್ಯನ ಜೀವನಕ್ಕೆ ಅತ್ಯವಶ್ಯಕವಾಗಿವೆ. ಇವುಗಳನ್ನು ಪೂಜಿಸಲೆಂದು ನಮ್ಮ ದೇಶದ ವಿವಿಧ ಸ್ಥಳಗಳಲ್ಲಿ ಪಂಚಭೂತ ಶಿವಾಲಯಗಳನ್ನು ನಿರ್ಮಾಣ ಮಾಡಲಾಗಿದೆ. 

ಪುರಾಣಗಳ ಪ್ರಕಾರ ಪಂಚಭೂತಗಳೆಂದರೆ 5 ಮೂಲ ವಸ್ತುಗಳು ಎಂದರ್ಥವಾಗುತ್ತದೆ. ಪಂಚವೆಂದರೆ ಐದು, ಭೂತ ಎಂದರೆ- ಮೂಲ ವಸ್ತುಗಳು,  ಸ್ಥಳ ಎಂದರೆ- ಸ್ಥಾನ ಆಗಿದೆ. ನಮ್ಮ ಪ್ರಕೃತಿಯಲ್ಲಿರುವ ಮೂಲಭೂತ ವಸ್ತುಗಳಾದ ಗಾಳಿ, ನೀರು, ಬೆಂಕಿ, ಭೂಮಿ ಮತ್ತು ಆಕಾಶ ಇವು ಪಂಚಭೂತಗಳಾಗಿವೆ. ಇವುಗಳಿಲ್ಲದೇ ಯಾವ ಜೀವರಾಶಿಗಳೂ ಕೂಡ ಬದುಕಲು ಸಾಧ್ಯವಿಲ್ಲ. ಹಿಂದೂ ಪುರಾಣದ ಪ್ರಕಾರ ನಮ್ಮ ದೇಶದಲ್ಲಿ ಸ್ಥಾಪಿಸಲಾದ 5 ಲಿಂಗಗಳು ಐದು ಮೂಲ ವಸ್ತುಗಳನ್ನು ಪ್ರತಿನಿಧಿಸುತ್ತವೆ ಎಂದು ಸಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನ ವೇದ ವಿಜ್ಞಾನ ವಲ್ಲರಿ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನಲ್ಲಿ ಐದು ಪಂಚಭೂತ ದೇವಾಲಯಗಳ ಹೆಸರನ್ನು ಉಲ್ಲೇಖಿಸಲಾಗಿದೆ.

ಅಯೋಧ್ಯೆ ಜನರು ಖುಷಿಯಾಗಿರಬಾರದೆಂದು ಸೀತಾಮಾತೆ ಶಾಪ ಇದೆಯೇ?

1. ಶ್ರೀ ಕಾಳಹಸ್ತಿ (ವಾಯು-ಗಾಳಿ): ಇಲ್ಲಿ ಶಿವನು ಕಾಳಹಸ್ತೀಶ್ವರನಾಗಿ ಮುಖ್ಯ ದೇವರಾಗಿದ್ದಾನೆ. ಇಲ್ಲಿರುವ ಶಿವಲಿಂಗವು ಐದು ಮೂಲ ಭೂತ ವಸ್ತುಗಳಾದ (ಐದು ಮೂಲ ಭೂತಲಿಂಗಗಳು). ಅಪ್ಪು. ತೇಜಸ್, ವಾಯು, ಆಕಾಶ ಹಾಗೂ ಪೃಥ್ವಿಗಳನ್ನು ನಿರೂಪಿಸುವ ಐದು ಪರಮೋತ್ಕೃಷ್ಟ ಲಿಂಗಗಳಲ್ಲಿ ಒಂದಾಗಿದೆ.

2.ಏಕಾಂಬರೇಶ್ವರ ದೇವಾಲಯ ಕಂಚೀಪುರಂ (ಪೃಥ್ವಿ-ಭೂಮಿ): ತಮಿಳುನಾಡು ರಾಜ್ಯದ ಕಂಚೀಪುರಂನಲ್ಲಿರುವ ಏಕಾಂಬರೇಶ್ವರರ ಮಂದಿರವು ಶಿವನಿಗೆ ಸಮರ್ಪಿಸಲ್ಪಟ್ಟಿರುವ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ.

3.ತಿರುವಣ್ಣಾಮಲೈ (ಅಗ್ನಿ-ಬೆಂಕಿ): ಅಣ್ಣಾಮಲೈಯಾರ್ ಮಂದಿರವು ಶಿವನಿಗೆ ಅರ್ಪಿತವಾದ ಒಂದು ಪ್ರಸಿದ್ಧ ಹಿಂದೂ ದೇವಾಲಯ. ಇದು ತಮಿಳುನಾಡಿನ ತಿರುವಣ್ಣಾಮಲೈ ಪಟ್ಟಣದ ಅಣ್ಣಾಮಲೈ ಬೆಟ್ಟದ ಕೆಳಗಿದೆ.

4.ಚಿದಂಬರ್ (ಆಕಾಶ- ಬಾಹ್ಯಾಕಾಶ)ನಲ್ಲಿರುವ  ಚಿದಂಬರಂ ನಟರಾಜ ಮಂದಿರ: ಚಿದಂಬರಂ ದೇವಾಲಯವು ತಮಿಳುನಾಡಿನ ಚಿದಂಬರಂನ ದೇವಾಲಯಗಳ ನಗರದ ಮಧ್ಯ ಭಾಗದಲ್ಲಿ ನೆಲೆಯಾಗಿರುವ ಶಿವನಿಗೆ ಸಮರ್ಪಿತವಾದ ಒಂದು ಪ್ರಸಿದ್ಧ ಹಿಂದೂ ದೇವಲಾಯವಾಗಿದೆ.

ಕೋಲಾರಮ್ಮನ ಪವಾಡ: ಉಗ್ರರೂಪಿ ದೇವಿಯನ್ನ ನೋಡೋದೇ ಅಸಾಧ್ಯ! ಚೇಳು ಕಚ್ಚಿದವರಿಗೆ ಮದ್ದಿದೆ ಇಲ್ಲಿ!

5.ತಿರುವನೈಕೋಯಿಲ್ (ಜಲ-ನೀರು): ತಿರುನೈಕೋಯಿಲ್ ತಿರುಚಿ ನಗರದ ಮಧ್ಯ ಭಾಗದಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಭಾರತದ ಪವಿತ್ರ ಸ್ಥಳಗಳಲ್ಲಿ ಒಂದಾದ ಐತಿಹಾಸಿಕವಾದ ಚಿಕ್ಕ ನಗರ ಶ್ರೀರಂಗಂನ ಪಕ್ಕದಲ್ಲಿದೆ. ಇಲ್ಲಿರುವ ಶಿವನ ದೇವಾಲಯಕ್ಕೆ ತಿರುಚಿ ಸ್ಥಳೀಯ ಜನರು ಜಂಬಹುಕೇಶ್ವರರ್ ಕೋಯಿಲ್  ಎಂದೂ ಕರೆಯುತ್ತಾರೆ. ಇದು, ಪಂಚಭೂತಗಳ ಒಡೆಯ ಭೂತನಾಥ (ಇದು ಕೂಡ ಶಿವನ ಹೆಸರು) ಎಂದೂ ಸಹ ಪ್ರಸಿದ್ಧಿಯಾಗಿದೆ.

Latest Videos
Follow Us:
Download App:
  • android
  • ios