Asianet Suvarna News Asianet Suvarna News

ಕೊಪ್ಪಳ: ಚನ್ನಬಸವ ಜಾತ್ರಾಮಹೋತ್ಸವದಲ್ಲಿ ಅಪಶಕುನ, ಗಂಗಾವತಿಗೆ ಕಾದಿದೆಯಾ ಕಂಟಕ?

ಮಹಾರಥದ ಕಳಸದ ರಕ್ಷಣಾ ಕೊಡೆ ಮುರಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಆರಾಧ್ಯ ದೈವ ಚನ್ನಬಸವಸ್ವಾಮಿ ಜಾತ್ರಾಮಹೋತ್ಸವದಲ್ಲಿ ನಡೆದ ಘಟನೆ. 
 

Ominous in Channabasava Fair at Gangavathi in Koppal grg
Author
First Published Jan 5, 2023, 2:00 AM IST

ಕೊಪ್ಪಳ(ಜ.05): ಮಹಾರಥದ ಕಳಸದ ರಕ್ಷಣಾ ಕೊಡೆ ಮುರಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಆರಾಧ್ಯ ದೈವ ಚನ್ನಬಸವಸ್ವಾಮಿ ಜಾತ್ರಾಮಹೋತ್ಸವದಲ್ಲಿ ನಿನ್ನೆ(ಬುಧವಾರ) ನಡೆದಿದೆ. ಕಳಸದ ರಕ್ಷಣಾ ಕೊಡೆ‌ ಮುರಿದಿದ್ದು ಅಪಶಕುನ ಅಂತ ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. 

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದ ಮಹಾರಥೋತ್ಸವದಲ್ಲಿ ಮಹಾರಥಕ್ಕೆ ತಂತಿ ತಗುಲಿ ಈ ಅವಘಡ ಸಂಭವಿಸಿದೆ ಅಂತ ತಿಳಿದು ಬಂದಿದೆ. ಕಳಸದ ರಕ್ಷಣಾ ಕೊಡೆ ಮುರಿದ ತಕ್ಷಣವೇ ಭಕ್ತರು ಶಾಕ್ ಆಗಿದ್ದಾರೆ. 

ಚಿಕ್ಕಮಗಳೂರು: ಸಾವಿರಾರು ಜನ ಇರುಮುಡಿ ಹೊತ್ತು ದೇವಸ್ಥಾನಕ್ಕೆ ತೆರಳಿದ ಭಕ್ತರು..!

ಕಳಸದ ರಕ್ಷಣಾ ಕೊಡೆ ಮುರಿದಿದ್ದರಿಂದ ರಥ ಕೆಲಕಾಲ ಮುಂದಕ್ಕೆ ಸಾಗದೆ ನಿಂತಿತ್ತು. ಈ ಬಾರಿ ಗಂಗಾವತಿಗೆ ಕಂಟಕ ಕಾದಿದಿಯಾ? ಅಂತ ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಕೆಲ ಭಕ್ತರು ಜೆಸ್ಕಾಂ ಅಧಿಕಾರಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ಕೂಡ ನಡೆದಿದೆ. 

Follow Us:
Download App:
  • android
  • ios