Asianet Suvarna News Asianet Suvarna News

Nostradamus 2022 Prediction: ವಿಶ್ವನಾಯಕರ ಸಾವು, ಭೂಮಿಗೆ ಕ್ಷುದ್ರಗ್ರಹ ಡಿಕ್ಕಿ!

ವಿಶ್ವದಲ್ಲಿ ಏನೇ ಮಹತ್ವದ ಘಟನೆ ಸಂಭವಿಸಿದರೂ ಅದನ್ನು ಈ ಹಿಂದೆಯೇ ಫ್ರೆಂಚ್ ಜ್ಯೋತಿಷಿ ನಾಸ್ಟ್ರಾದಾಮಸ್ ಹೇಳಿದ್ದಾನೆ ಎನ್ನಲಾಗುತ್ತದೆ. ಅವನ ಹಲವು ಭವಿಷ್ಯವಾಣಿಗಳು ನಿಜವಾಗಿವೆ. 2022ರ ಭವಿಷ್ಯದ ಬಗ್ಗೆ ಆತ ಹೇಳಿರುವುದೇನು? ಅದು ಇಲ್ಲಿದೆ.

Nostradamus astrology Prediction for year 2022
Author
Bengaluru, First Published Dec 31, 2021, 2:20 PM IST

ಖ್ಯಾತ ಫ್ರೆಂಚ್‌ ಜ್ಯೋತಿಷಿ, ಭೌತಜ್ಞಾನಿ ನಾಸ್ಟ್ರಾಡಾಮಸ್‌ನ (Nostradamus) ಭವಿಷ್ಯವಾಣಿಯು ಅತ್ಯಂತ ಜನಪ್ರಿಯ. 'ಲೆಸ್‌ ಪ್ರೊಫೆಟಿಸ್' ಎಂಬುದು ಆತ ಬರೆದ ಪುಸ್ತಕ. ಇದು ಪ್ರಕಟವಾದುದು 1555ರಲ್ಲಿ. ಅದರಲ್ಲಿ ವಿಶ್ವದಲ್ಲಿ ಮುಂದೆ ಏನಾಗಲಿದೆ ಎಂಬ ಭವಿಷ್ಯವಾಣಿಗಳು ಇದೆ. ಯುದ್ಧಗಳು, ಸೋಕು ರೋಗಗಳು, ಅಣ್ವಸ್ತ್ರ ದಾಳಿಗಳು, ರಾಷ್ಟ್ರನಾಯಕರ ಹತ್ಯೆ, ಕ್ರಾಂತಿಗಳೆಲ್ಲದರ ಬಗ್ಗೆ ಅದರಲ್ಲಿ ಹೇಳಿದ್ದಾನೆ. ಈ ಪುಸ್ತಕದಲ್ಲಿ ಒಟ್ಟು 6338 ಭವಿಷ್ಯವಾಣಿಗಳು ಇವೆ. 2022ರಲ್ಲಿ ವಿಶ್ವದಲ್ಲಿ ನಡೆಯಲಿರುವ ಹಲವಾರು ಪ್ರಮುಖ ಸಂಗತಿಗಳ ಬಗ್ಗೆ ಜ್ಯೋತಿಷಿ ನಾಸ್ಟ್ರಾಡಾಮಸ್‌ ಮುನ್ಸೂಚನೆ ನೀಡಿದ್ದಾರೆ. 2022ರ ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿ ಜಗತ್ತನ್ನೇ ತಲ್ಲಣಗೊಳಿಸುವಂತಿದೆ.
ಭೂಮಿ ಬಿಸಿಯೇರುತ್ತದೆ

'ಸೂರ್ಯನಂತೆಯೇ ಹೊಳೆಯುವ ಸಮುದ್ರ ಕೂಡ ಬಿಸಿಯೇರಲಿದೆ. ಸಮುದ್ರದಲ್ಲಿರುವ ಜೀವಂತ ಮೀನುಗಳು ಬೆಂದುಹೋಗಲಿವೆ' ಎಂದು ಆತ ಬರೆಯುತ್ತಾನೆ. ಅಂದರೆ ಆತ ಸೂರ್ಯನ ಪ್ರಖರ ಕಿರಣಗಳು ಅಥವಾ ಸೂರ್ಯನ ಜ್ವಾಲೆಗಳಿಂದ ಉಂಟಾಗುವ ಭೂಮಿ ತಾಪಮಾನದ ಬಗ್ಗೆ ಸೂಚ್ಯವಾಗಿ ಹೇಳುತ್ತಿದ್ದಾನೆ. ಧ್ರುವಪ್ರದೇಶಗಳಲ್ಲಿ ಮಂಜುಗಡ್ಡೆ ಕರಗಲಿದೆ, ಸಮುದ್ರದ ಮಟ್ಟ ಹೆಚ್ಚಲಿದೆ, ನಗರಗಳು ಮುಳುಗಲಿವೆ, ಭೂಕಂಪ ಹೆಚ್ಚಲಿದೆ, ಕುಡಿಯುವ ನೀರು ಸಿಗಲಿಕ್ಕಿಲ್ಲ. ಇದರಿಂದೆಲ್ಲ ಮನುಷ್ಯರೊಳಗಿನ ಅಸಹನೆ ಹೆಚ್ಚಿ ತುತ್ತು ಅನ್ನಕ್ಕಾಗಿ ಬಡಿದಾಟ ಉಂಟಾಗಲಿದೆ. ಪ್ರಕೃತಿ ವಿಕೋಪಗಳು, ಸುನಾಮಿ, ನೆರೆ, ಭೂಕಂಪ, ಎಲ್ಲವೂ ಉಂಟಾಗಿ ಲಕ್ಷಾಂತರ ಮಂದಿ ಸಾಯಲಿದ್ದಾರೆ. 

ಕ್ಷುದ್ರಗ್ರಹ ಡಿಕ್ಕಿ (Asteroid)
ಭೂಮಿಗೆ ದೊಡ್ಡದೊಂದು ಕ್ಷುದ್ರಗ್ರಹ ಬಂದು ಬಡಿಯಲಿದ್ದು, ಇದರಿಂದಾಗಿ ದೊಡ್ಡ ಪ್ರಮಾಣದ ಜೀವಿಗಳು ಅಳಿಯಲಿವೆ. ಇದು ಯಾವಾಘ ಉಂಟಾಗಬಹುದು ಎಂಬುದನ್ನು ಭವಿಷ್ಯವಾಣಿ ಖಚಿತವಾಗಿ ಹೇಳಿಲ್ಲ. ಆದರೆ ದೊಡ್ಡದೊಂದು ಬೆಂಕಿಯ ಉಂಡೆ ಆಕಾಶದಿಂಧ ಭೂಮಿಗೆ ಬಂದು ಅಪ್ಪಳಿಸಲಿದೆ ಎಂದಿದ್ದಾನೆ.

ಈ ವರ್ಷದ ರಾಶಿ ಭವಿಷ್ಯ ಹೇಗಿದೆ?

ವಿಶ್ವ ನಾಯಕರ ನಿರ್ಗಮನ (Death of a leader)
ವಿಶ್ವದ ದೊಡ್ಡ ನಾಯಕನೊಬ್ಬ ಹಠಾತ್ ನಿರ್ಗಮಿಸಲಿದ್ದಾನೆ. ಆತನ ಜಾಗದಲ್ಲಿ ಬೇರೆಯವರು ಬರಲಿದ್ದಾರೆ- ಎಂದು ನಾಸ್ಟ್ರಾದಾಮಸ್‌ ಹೇಳುತ್ತಾನೆ. ಇದು ಯಾರೆಂದು ಸ್ಪಷ್ಟವಾಗಿಲ್ಲ. ಬಹುಶಃ ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬಗ್ಗೆ ಹೇಳುತ್ತಿರಬಹುದೆಂಧು ಭಾವಿಸಲಾಗಿದೆ, ಆದರೆ ಅದು ಬ್ರಿಟನ್ ರಾಣಿ ಎಲಿಜಬೆತ್, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಗಿರಬಹುದೆಂದೂ ಕೆಲವರು ಭಾವಿಸಿದ್ದಾರೆ. 

ಅಣುಬಾಂಬ್‌ ಸ್ಪೋಟ (Nuclear Blast)
2022ರಲ್ಲಿ ಅಣುಬಾಂಬ್‌ ಸ್ಪೋಟ ನಡೆಯಲಿರುವ ಬಗ್ಗೆ ನಾಸ್ಟ್ರಾಡಾಮಸ್‌ ಮುನ್ಸೂಚನೆ ನೀಡಿದ್ದಾನೆ. ಈ ಅಣುಬಾಂಬ್‌ ಸ್ಪೋಟದಿಂದಾಗಿ ಹವಾಮಾನವೇ ಬದಲಾವಣೆ ಆಗಲಿದೆ. ಭಾರಿ ಹಾನಿ ಉಂಟಾಗಲಿದೆ ಎಂದಿದ್ದಾನೆ. ಈ ಸಂದರ್ಭದಲ್ಲಿ ಭೂಮಿಯ ಸ್ಥಿತಿಯಲ್ಲಿಯೂ ಬದಲಾವಣೆ ಉಂಟಾಗಲಿದೆ ಎಂದು ಫ್ರೆಂಚ್‌ ಜ್ಯೋತಿಷಿ ಸೂಚನೆ ನೀಡಿದ್ದಾನೆ. 

ಮಾನವರನ್ನು ನಿಯಂತ್ರಿಸುವ ಕೃತಕ ಕಂಪ್ಯೂಟರ್‌ (Artificial intelligence) 
2022ರ ಬಳಿಕ ಮಾನವರನ್ನು ಕಂಪ್ಯೂಟರ್‌ ಮೆದುಳು ಅಥವಾ ಕೃತಕ ಬುದ್ಧಿಮತ್ತೆಯು ನಿಯಂತ್ರಣ ಮಾಡಲಿದೆ ಎಂಬ ವಿಚಾರವನ್ನು ನಾಸ್ಟ್ರಾಡಾಮಸ್‌ ಹೇಳಿದ್ದಾನೆ. ಮುಂದಿನ ವರ್ಷದಲ್ಲಿ ಕೃತಕ ಬುದ್ಧಿವಂತಿಕೆಯು (artificial intelligence) ಮಾನವರ ತೊಡಗುವಿಕೆಯೊಂದಿಗೆ ಕಂಪ್ಯೂಟರ್‌ ಅನ್ನು ನಿಯಂತ್ರಣ ಮಾಡಲಿದೆ. ಇದರಿಂದಾಗಿ ಈ ಮಾನವರನ್ನೇ ಈ ಕಂಪ್ಯೂಟರ್‌ ನಿಯಂತ್ರಣ ಮಾಡಲಿದೆ. ಈ ರೋಬೋಟ್‌ಗಳು ಮಾನವ ಕುಲಕ್ಕೇ ಅಂತ್ಯ ಹಾಡಲಿದೆ ಎಂದಿದ್ದಾರೆ.

ಯಾವ ರಾಶಿಯವರು ಈ ವರ್ಷ ಸಪ್ತಪದಿ ತುಳಿಯುತ್ತಾರೆ?

ಮೂರು ದಿನದ ಕಗ್ಗತ್ತಲು (Dark in Earth)
2022ರಲ್ಲಿ ಇಡೀ ವಿಶ್ವದಲ್ಲಿ ಸುಮಾರು 72 ಗಂಟೆಗಳ ಕಾಲ ಅಂದರೆ ಮೂರು ದಿನಗಳ ಕಾಲ ಕಗ್ಗತ್ತಲು ಇರಲಿದೆ. ಕಣಿವೆ ಪ್ರದೇಶದಲ್ಲಿ ಹಿಮವು ಬೀಳುವ ಸಾಧ್ಯತೆ ಇದೆ. ಈ ಪ್ರಕೃತಿ ವಿಕೋಪವು ಹಲವಾರು ಪ್ರದೇಶಗಳಲ್ಲಿ ಯುದ್ಧಕ್ಕೆ ಅಂತ್ಯ ಹಾಡಲಿದೆ. ಮೂರು ದಿನಗಳ ಕಾಲ ವಿಶ್ವದಲ್ಲಿ ಕತ್ತಲು ಆವರಿಸಲಿದೆ ಎಂದು ನಾಸ್ಟ್ರಾಡಾಮಸ್‌ ಮುನ್ಸೂಚನೆ ನೀಡಿದ್ದಾರೆ. ಇದು ಏನೆಂಬುದು ಸ್ಪಷ್ಟವಾಗಿಲ್ಲ. 

Follow Us:
Download App:
  • android
  • ios