ಈ ನವರಾತ್ರಿಯಂದು ನಿಮ್ಮ ಸಂಕಲ್ಪಗಳನ್ನು ಸಾಕಾರಗೊಳಿಸಿ ಗುರುದೇವ್ ಶ್ರೀ ಶ್ರೀ ರವಿಶಂಕರ್
ನವರಾತ್ರಿಯ ಒಂಭತ್ತು ದಿವಸಗಳ, ರಾತ್ರಿಗಳ ಪಯಣವನ್ನು ನಾವು ಉಪವಾಸ, ಪ್ರಾರ್ಥನೆ ಮಾಡುತ್ತಾ, ಮೌನದಲ್ಲಿದ್ದುಕೊಂಡು, ಧ್ಯಾನ ಮಾಡುತ್ತಾ ಕಳೆದಾಗ, ನಮ್ಮ ನಿಜ ಸ್ವಭಾವದೆಡೆಗೆ ತೆರಳುತ್ತೇವೆ. ಪ್ರೇಮ, ಶಾಂತಿ, ಸಂತೋಷಗಳೇ ನಮ್ಮ ನಿಜವಾದ ಸ್ವಭಾವ. ಜೀವನದಲ್ಲಿ ಸತ್ವವು ಪ್ರಧಾನವಾದಾಗ ಖಂಡಿತವಾಗಿಯೂ ಜಯವು ನಿಮ್ಮನ್ನು ಹಿಂಬಾಲಿಸುತ್ತದೆ. ನಮ್ಮ ಸಂಕಲ್ಪಗಳು ಸಾಕಾರವಾಗುತ್ತವೆ. ಸತ್ವಗುಣವು ಹೆಚ್ಚಾಗಿದ್ದಾಗ ನಮ್ಮ ಗುರಿಗಳನ್ನು ಪ್ರಯತ್ನರಹಿತವಾಗಿಯೇ ಸಾಧಿಸಬಹುದು.
Navratri 2024 ಇಡೀ ವಿಶ್ವಕ್ಕೆ ಕಾರಣವಾಗಿರುವ ತ್ರಿಗುಣಗಳನ್ನು ಮೀರಿ, ಆನಂದದ ಅನುಭೂತಿಯನ್ನು ಹೊಂದಲು, ನವರಾತ್ರಿಯ ಒಂಭತ್ತು ದಿನಗಳು ಒಳ್ಳೆಯ ಸದವಕಾಶ. ನವರಾತ್ರಿಯ ಮೊದಲನೆಯ ಮೂರು ದಿವಸಗಳು ಅಸ್ತಿತ್ವದ ತಮೋಗುಣದೊಡನೆ, ಎಂದರೆ ಅಂಧಕಾರ, ಗಾಢತೆ, ಬಲವಾದ ಅಂಶದೊಂದಿಗೆ ಸಂಬಂಧಪಟ್ಟರೆ, ಮುಂದಿನ ಮೂರು ದಿವಸಗಳು ರಜೋಗುಣಕ್ಕೆ ಸಂಬಂಧಪಟ್ಟಿವೆ. ರಜೋಗುಣವು ಚಟುವಟಿಕೆಯನ್ನು, ಚಡಪಡಿಕೆಯನ್ನು ಪ್ರತಿನಿಧಿಸುತ್ತದೆ. ಕೊನೆಯ ಮೂರು ದಿನಗಳು ಸತ್ವ ಗುಣಕ್ಕೆ, ಶುದ್ಧತೆಗೆ ಮುಡಿಪಾಗಿವೆ.
ಈ ಮೂರು ಗುಣಗಳು ನಮ್ಮ ಜೀವನವನ್ನು ಆಳುತ್ತಿದ್ದರೂ, ನಾವು ಅವುಗಳನ್ನು ಗುರುತಿಸುವ, ಅವುಗಳ ಬಗ್ಗೆ ಚಿಂತನೆ ನಡೆಸುವ ಕಾರ್ಯವನ್ನೇ ಮಾಡುವುದಿಲ್ಲ. ಈ ಸೃಷ್ಟಿಯಲ್ಲಿ ಈ ತ್ರಿಗುಣಗಳನ್ನು, ಜಗನ್ಮಾತೆಯ ಭಾಗವಾಗಿ ಪರಿಗಣಿಸಲಾಗಿದೆ. ನವರಾತ್ರಿಯ ಸಮಯದಲ್ಲಿ ನಾವು ಜಗನ್ಮಾತೆಯ ಆರಾಧನೆಯೊಂದಿಗೆ ಈ ಮೂರು ಗುಣಗಳ ನಡುವೆ ಸಾಮರಸ್ಯವನ್ನು ಕಂಡುಕೊಳ್ಳುತ್ತೇವೆ ಮತ್ತು ವಾತಾವರಣದಲ್ಲಿ ಸತ್ವ ಗುಣವು ಹೆಚ್ಚುತ್ತದೆ. ನಮ್ಮ ಚೇತನವು ತಮೋ ಗುಣ, ರಜೋಗುಣಗಳನ್ನು ದಾಟಿ, ಕೊನೆಯ ಮೂರು ದಿನಗಳಲ್ಲಿ ಸತ್ವದಲ್ಲಿ ಅರಳುತ್ತದೆ.
ಇಂದು ಶುಕ್ರವಾರ ಯಾವ ರಾಶಿಗೆ ಶುಭ? ಯಾವ ರಾಶಿಗೆ ಅಶುಭ?
ನಿಮ್ಮ ಸಂಕಲ್ಪಗಳನ್ನು ಸಾಕಾರಗೊಳಿಸುವ ಸರಳವಾದ ದಾರಿಯೆಂದರೆ, ಸ್ಪಷ್ಟವಾದ ಸಂಕಲ್ಪವನ್ನು ಹೊಂದುವುದು, ಅದನ್ನು ವಿಶ್ವಕ್ಕೆ ಬಿಟ್ಟುಬಿಡುವುದು ಮತ್ತು ಅದರ ಬಗ್ಗೆ ಮೋಹವನ್ನು ಹೊಂದದೆಯೇ ಅದಕ್ಕಾಗಿ ಕೆಲಸ ಮಾಡುವುದು. ನಮ್ಮ ಸಂಕಲ್ಪಗಳನ್ನು ಸಾಕಾರಗೊಳಿಸಿಕೊಳ್ಳಲು ಅತೀ ಶಕ್ತಿಶಾಲಿಯಾದ ಸಮಯವೇ ನವರಾತ್ರಿ.
ನಮ್ಮ ಸಂಕಲ್ಪಕ್ಕೆ ಬಹಳ ಬಲವಿದೆ ಮತ್ತು ನಮ್ಮ ಪ್ರತಿಯೊಂದು ಕಾರ್ಯವನ್ನೂ ಅದು ಮುನ್ನಡೆಸುತ್ತದೆ. ನಮ್ಮ ಕೈ ಚಲಿಸುವ ಮೊದಲು ನಮ್ಮ ಮನಸ್ಸು ಹಾಗೆ ಮಾಡುವ, ಅದರ ಉದ್ದೇಶವನ್ನು ಹೊಂದಿರುತ್ತದೆ. ಬಲಹೀನವಾದ ಮನಸ್ಸು ಬಲಹೀನವಾದ ಸಂಕಲ್ಪಗಳನ್ನೇ ಹೊರತರುತ್ತದೆ. ಆದರೆ ಜ್ಞಾನದಲ್ಲಿ ಮತ್ತು ಧ್ಯಾನದಲ್ಲಿ ನಮ್ಮ ಸಮಯವನ್ನು ಕಳೆದರೆ, ನಮ್ಮ ಸಂಕಲ್ಪಗಳು ಬಲವಾಗುತ್ತವೆ ಮತ್ತು ಅವು ಬೇಗನೆ ಸಾಕಾರಗೊಳ್ಳುತ್ತವೆ.
ನವರಾತ್ರಿಯ ಒಂಭತ್ತು ದಿವಸಗಳ, ರಾತ್ರಿಗಳ ಪಯಣವನ್ನು ನಾವು ಉಪವಾಸ, ಪ್ರಾರ್ಥನೆ ಮಾಡುತ್ತಾ, ಮೌನದಲ್ಲಿದ್ದುಕೊಂಡು, ಧ್ಯಾನ ಮಾಡುತ್ತಾ ಕಳೆದಾಗ, ನಮ್ಮ ನಿಜ ಸ್ವಭಾವದೆಡೆಗೆ ತೆರಳುತ್ತೇವೆ. ಪ್ರೇಮ, ಶಾಂತಿ, ಸಂತೋಷಗಳೇ ನಮ್ಮ ನಿಜವಾದ ಸ್ವಭಾವ. ಜೀವನದಲ್ಲಿ ಸತ್ವವು ಪ್ರಧಾನವಾದಾಗ ಖಂಡಿತವಾಗಿಯೂ ಜಯವು ನಿಮ್ಮನ್ನು ಹಿಂಬಾಲಿಸುತ್ತದೆ. ನಮ್ಮ ಸಂಕಲ್ಪಗಳು ಸಾಕಾರವಾಗುತ್ತವೆ. ಸತ್ವಗುಣವು ಹೆಚ್ಚಾಗಿದ್ದಾಗ ನಮ್ಮ ಗುರಿಗಳನ್ನು ಪ್ರಯತ್ನರಹಿತವಾಗಿಯೇ ಸಾಧಿಸಬಹುದು.
ಕೆಲವರು ಧ್ಯಾನ ಮಾಡಲು ಕುಳಿತಾಗ, ತಮ್ಮ ಸುತ್ತಲೂ ಇರುವ ಎಲ್ಲಾ ತಪ್ಪುಗಳನ್ನೂ ತಿದ್ದಬೇಕೆಂದು ಆಲೋಚಿಸುತ್ತಿರುತ್ತಾರೆ. ಇಲ್ಲಿ ಕರ್ತೃತ್ವಭಾವ ಹೆಚ್ಚಾಗಿರುತ್ತದೆ. ಆಂತರ್ಯದೊಳಗೆ ಹೊಕ್ಕುವಾಗ ಸ್ವೀಕಾರವಿರಬೇಕು. ಎಲ್ಲವೂ ಹೇಗಿದೆಯೋ ಹಾಗೆಯೇ ಸರಿಯಾಗಿದೆ ಎಂಬ ಸ್ವೀಕಾರಭಾವವನ್ನು ಹೊಂದಬೇಕು. ಕೆಲವೊಮ್ಮೆ ಒಂದು ಬಯಕೆಯು ಗೀಳಾಗಿ ತಿರುಗಿ, ನಿಮ್ಮ ಗುರಿಯನ್ನು ಪಡೆಯಲು ಸಾಧ್ಯವಾಗದೆ ಇರುವಂತಹ ಒಂದು ಅಡಚಣೆಯಾಗಿ ತಿರುಗುತ್ತದೆ. ಜ್ವರತೆಯಿಲ್ಲದಂತಹ ಒಂದು ಬಯಕೆಯೊಡನೆ, ನಿಮಗೆ ಏನೆಲ್ಲಾ ಒಳ್ಳೆಯದೋ ಅದು ನಿಮ್ಮ ಬಳಿಗೆ ಸಹಜವಾಗಿಯೇ ಬರುತ್ತದೆ ಎಂಬ ವಿಶ್ವಾಸವನ್ನು ನೀವು ಹೊಂದಬೇಕು. ಅಲ್ಪಕಾಲದಲ್ಲಿ ಯಾವುದೋ ಒಂದು ನಿಮಗೆ ಉತ್ತಮವಲ್ಲ ಎಂದನಿಸಿದರೂ ಸಹ, ಸಮಯ ಕಳೆದಂತೆ ಉತ್ತಮವಾದದ್ದೇ ಅನಾವರಣಗೊಳ್ಳುತ್ತದೆಂಬ ವಿಶ್ವಾಸವನ್ನು ಹೊಂದಿ.
3 ರಾಶಿಗೆ 65 ದಿನ ಐಷಾರಾಮಿ ಜೀವನ, ಮಂಗಳ ನಿಂದ ಅದೃಷ್ಟ
ಈ ಒಂಭತ್ತು ದಿನಗಳು, ಎಲ್ಲಾ ಕ್ಷುಲ್ಲಕವಾದ ವಿಷಯಗಳನ್ನು, ಬಯಕೆಗಳನ್ನು, ಸವಾಲುಗಳನ್ನು ಬದಿಗಿಟ್ಟು, ನಿಮ್ಮ ಆಂತರ್ಮುಖರಾಗಿ.
"ನಾನು ನಿನಗೆ ಸೇರಿದ್ದೇನೆ. ನಿನ್ನ ಇಚ್ಛೆಯಂತೆ ನೀನು ನನ್ನನು ನಡೆಸು" ಎಂದು ಜಗನ್ಮಾತೆಯಲ್ಲಿ ಪ್ರಾರ್ಥಿಸಿ. ಈ ಬಲವಾದ ಶ್ರದ್ಧೆಯೊಂದಿಗೆ, ನಿಮ್ಮ ಆಧ್ಯಾತ್ಮಿಕ ಸಾಧನೆಯನ್ನು ಮುಂದುವರೆಸಿದಾಗ, ನಿಮ್ಮಲ್ಲಿ ಯಾವ ಅಭಾವವೂ ಇರುವುದಿಲ್ಲ. ನಿಮಗೆ ಬೇಕಾದುದೆಲ್ಲವೂ ಸಹಜವಾಗಿಯೇ ನಿಮ್ಮ ಬಳಿಗೆ ಬರುತ್ತದೆ.