ನರಕ ಚತುರ್ದಶಿ ಯಾವಾಗ? ಶುಭ ಸಮಯ, ಪೂಜಾ ವಿಧಾನ ಮತ್ತು ಮಹತ್ವ ಇಲ್ಲಿದೆ..

ನರಕ ಚತುರ್ದಶಿಯನ್ನು ಏಕೆ ಆಚರಿಸಲಾಗುತ್ತದೆ ಮತ್ತು ಅದರ ಮಹತ್ವವೇನು? ಈ ದಿನ ಯಾರನ್ನು ಪೂಜಿಸಲಾಗುತ್ತದೆ? ಪೂಜೆಯ ವಿಧಾನ ಮತ್ತು ಮುಹೂರ್ತ ಯಾವುದು ತಿಳಿಯೋಣ.

Narak Chaturdashi 2022 shubh muhurt significance puja vidhi skr

ಈ ತಿಂಗಳಲ್ಲಿ ಅನೇಕ ಉಪವಾಸಗಳು ಮತ್ತು ಹಬ್ಬಗಳು ಬರುತ್ತವೆ. ಅಕ್ಟೋಬರ್ 23ರಂದು ಧನ ತ್ರಯೋದಶಿ ಮತ್ತು ಅಕ್ಟೋಬರ್ 24ರಂದು ನರಕ ಚತುರ್ದಶಿ ಮತ್ತು ದೀಪಾವಳಿಗಳು ಒಂದೇ ದಿನದಲ್ಲಿ ಬೀಳುತ್ತವೆ. ನರಕ ಚತುರ್ದಶಿಯನ್ನು ನರಕ ಚೌದಾಸ್ ಎಂದೂ ಕರೆಯುತ್ತಾರೆ.

ನರಕ ಚತುರ್ದಶಿಯನ್ನು ಏಕೆ ಆಚರಿಸಲಾಗುತ್ತದೆ?
ನರಕ ಚತುರ್ದಶಿಯ ಪುರಾಣವು ಬೆಳಕಿನ ಶಕ್ತಿಯಿಂದ ಅಥವಾ ದೈವಿಕ ಒಳ್ಳೆಯತನದಿಂದ ಕತ್ತಲೆ ಅಥವಾ ಕೆಟ್ಟತನದ ನಿರ್ಮೂಲನೆಯನ್ನು ಸಂಕೇತಿಸುತ್ತದೆ. ಅದಕ್ಕಾಗಿಯೇ ಈ ದಿನದಂದು ಭಾರತದಾದ್ಯಂತ ದೀಪಗಳನ್ನು ಬೆಳಗಿಸಲಾಗುತ್ತದೆ.

ನರಕ ಚತುರ್ದಶಿ ಅಂದರೆ ನರಕ ಚೌಡವನ್ನು ಆಚರಿಸುವುದರ ಹಿಂದೆ ಪೌರಾಣಿಕ ಕಥೆಯಿದೆ. ದಂತಕಥೆಯ ಪ್ರಕಾರ, ನರಕಾಸುರ ಎಂಬ ರಾಕ್ಷಸನು ತನ್ನ ಶಕ್ತಿಗಳಿಂದ ದೇವತೆಗಳು ಮತ್ತು ಋಷಿಗಳನ್ನು ಬಹಳಷ್ಟು ಕಿರುಕುಳ ನೀಡುತ್ತಾನೆ. 16 ಸಾವಿರ ಮಹಿಳೆಯರನ್ನು ಬಂಧಿಯಾಗಿಸಿದ್ದನು. ನರಕಾಸುರನ ಭೀಭತ್ಸದಿಂದ ತೊಂದರೆಗೀಡಾದ ಎಲ್ಲಾ ದೇವತೆಗಳು ಮತ್ತು ಋಷಿಗಳು ಸಹಾಯ ಬೇಡಿ ಶ್ರೀಕೃಷ್ಣನ ಬಳಿಗೆ ಹೋದರು. ನರಕಾಸುರನಿಗೆ ಮಹಿಳೆಯ ಕೈಯಲ್ಲಿ ಬಿಟ್ಟು ಮತ್ತಾರದೇ ಕೈಲಿ ಸಾವಿಲ್ಲ ಎಂಬ ವರವಿರುತ್ತದೆ.  

ಹೀಗಾಗಿ ಶ್ರೀಕೃಷ್ಣನು ತನ್ನ ಪತ್ನಿ ಸತ್ಯಭಾಮೆ ಮತ್ತು ಕಾಳಿಯ ಸಹಾಯದಿಂದ ಅವನನ್ನು ಕೊಂದು ಎಲ್ಲಾ ಬಂಧಿತ ಸ್ತ್ರೀಯರನ್ನು ಮುಕ್ತಗೊಳಿಸುತ್ತಾನೆ. ಈ ಸಂತೋಷದಲ್ಲಿ ಜನರು ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸುತ್ತಾರೆ. ನರಕಾಸುರನನ್ನು ಕೊಂದ ದಿನ ಕಾರ್ತಿಕ ಮಾಸದ ಅಮಾವಾಸ್ಯೆ. ಇದು ದಕ್ಷಿಣ ಭಾರತದಲ್ಲಿ ಆಶ್ವೀಜ ಮಾಸದಲ್ಲಿ ಬರುತ್ತದೆ. 

Diwali colors 2022: ವಾಸ್ತು ಪ್ರಕಾರ ಯಾವ ಕೋಣೆಗೆ ಯಾವ ಬಣ್ಣ ಉತ್ತಮ?

ಈ ಕಾರಣಕ್ಕಾಗಿ, ಪ್ರತಿ ವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಶ್ರೀಕೃಷ್ಣ ಮತ್ತು ಯಮರಾಜನನ್ನು ಪೂಜಿಸಲಾಗುತ್ತದೆ. ಈ ಬಾರಿಯ ದೀಪಾವಳಿ ಮತ್ತು ನರಕ ಚೌಡಗಳು ಒಂದೇ ದಿನದಲ್ಲಿ ಬೀಳುತ್ತಿವೆ.

ನರಕ ಚತುರ್ದಶಿ ಪೂಜಾ ವಿಧಾನ(Narak Chaturdashi 2022 Puja Vidhi)
ಸಾಮಾನ್ಯವಾಗಿ, ಈ ದಿನ ಜನರು ಸಾಮಾನ್ಯಕ್ಕಿಂತ ಮುಂಚೆಯೇ ಏಳುತ್ತಾರೆ. ವಿಶೇಷವಾದ ಗಿಡಮೂಲಿಕೆಗಳ ತೈಲಗಳಿಂದ ಎಲ್ಲರೂ ದೇಹಕ್ಕೆ ಮಸಾಜ್ ಮಾಡಿಕೊಳ್ಳುತ್ತಾರೆ ಮತ್ತು ಧಾರ್ಮಿಕ ಸ್ನಾನ ಮಾಡುತ್ತಾರೆ. ಇದನ್ನು ಅಭ್ಯಂಗ ಸ್ನಾನ ಎಂದೂ ಕರೆಯುತ್ತಾರೆ, ಇದನ್ನು ಚಂದ್ರನ ಉಪಸ್ಥಿತಿಯಲ್ಲಿ ಸೂರ್ಯೋದಯಕ್ಕೆ ಮೊದಲು ಮಾಡಬೇಕು. ಈ ಸ್ನಾನಕ್ಕೆ ಬಳಸುವ ಎಳ್ಳಿನ ಎಣ್ಣೆಯು ವ್ಯಕ್ತಿಯನ್ನು ಬಡತನ ಮತ್ತು ದುರದೃಷ್ಟದಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ನಂತರ ಶುದ್ಧ ಅಥವಾ ಹೊಸ ಬಟ್ಟೆಗಳನ್ನು ಧರಿಸಲಾಗುತ್ತದೆ. ಅವರ ಸ್ಥಳೀಯ ಸ್ಥಳಗಳ ಕುಟುಂಬ ದೇವಾಲಯಕ್ಕೆ, ವಿಶೇಷವಾಗಿ ಕುಲ ದೇವತೆಗೆ ಭೇಟಿ ನೀಡಲಾಗುತ್ತದೆ. ಭಾರತದ ಕೆಲವು ಭಾಗಗಳಲ್ಲಿ ಈ ದಿನದಂದು ಪೂರ್ವಜರಿಗೆ ಆಹಾರವನ್ನು ನೀಡಲಾಗುತ್ತದೆ.

Dhanteras 2022: ದೀಪಾವಳಿಯ ಮೊದಲ ದಿನ ತಪ್ಪಿಯೂ ಈ 5 ವಸ್ತುಗಳನ್ನು ಕೊಳ್ಬೇಡಿ!

ಬೆಳಗಿನ ಉಪಾಹಾರವನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಆನಂದಿಸಲಾಗುತ್ತದೆ. ವಿಶೇಷವಾದ ಸಿಹಿ ತಿನಿಸುಗಳೊಂದಿಗೆ ಅದ್ದೂರಿ ಊಟವನ್ನು ಸಹ ಆನಂದಿಸಲಾಗುತ್ತದೆ. ಸಂಜೆ, ಪಟಾಕಿಗಳನ್ನು ಸಿಡಿಸಲಾಗುತ್ತದೆ, ಅದನ್ನು ಎಲ್ಲರೂ ಬಹಳ ಸಂಭ್ರಮದಿಂದ ವೀಕ್ಷಿಸುತ್ತಾರೆ.
ಈ ದಿನ ಸಂಜೆ ಶ್ರೀಕೃಷ್ಣನ ಪೂಜೆ ಮಾಡಿ ಮನೆಯ ಮುಖ್ಯ ದ್ವಾರದಲ್ಲಿ ಎಣ್ಣೆಯ ದೀಪವನ್ನು ಹಚ್ಚಿ. ಈ ದಿನ ದಾನ ಮಾಡುವುದು ಕೂಡ ಮಂಗಳಕರ. ಶ್ರೀಕೃಷ್ಣನನ್ನು ಆರಾಧಿಸಿ. ಹಾಗೆಯೇ ಯಮರಾಜನ ಹೆಸರಿನಲ್ಲಿ ದೀಪವನ್ನು ಹಚ್ಚಿ. ಈ ದಿನ ಯಮರಾಜನನ್ನು ಪೂಜಿಸುವುದರಿಂದ ಅಕಾಲಿಕ ಮರಣದ ಭಯ ದೂರವಾಗುತ್ತದೆ.

ನರಕ ಚತುರ್ದಶಿ ಮುಹೂರ್ತ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನಾಂಕವು 23 ಅಕ್ಟೋಬರ್ 2022 ರಂದು ಸಂಜೆ 6.03 ರಿಂದ ಪ್ರಾರಂಭವಾಗಿ ಮರುದಿನ ಸಂಜೆ 5.07 ಕ್ಕೆ ಕೊನೆಗೊಳ್ಳುತ್ತದೆ.

Latest Videos
Follow Us:
Download App:
  • android
  • ios