Asianet Suvarna News Asianet Suvarna News

ಚರಿತ್ರೆ ಪುಟಗಳಲ್ಲಿ ಅಚ್ಚಳಿಯದೆ ಉಳಿವ ಮೊಹರಂ: ಮುಸ್ಲಿಮರ ಪಾಲಿನ ಭಾವೈಕ್ಯತೆ ಸಾರುವ ಹಬ್ಬ

ಮೊಹರಂ ಮುಸ್ಲಿಮರ ಹಬ್ಬವಾಗಿ ಉಳಿದಿಲ್ಲ. ಬದಲಾಗಿ ಹಿಂದೂ ಮತ್ತು ಮುಸ್ಲಿಮರು ಸೇರಿ ಭಾವೈಕ್ಯತೆಯಿಂದ ಆಚರಿಸುವ ಹಬ್ಬವಾಗಿದೆ. ಹಲವೆಡೆ ಧರ್ಮದ ನಿಯಮಗಳಿಗೆ ವಿರುದ್ಧವಾಗಿ ಆಚರಣೆಗಳು ನಡೆಯುವುದೂ ಇದೆ. ಆದರೆ ಮೊಹರಂ ಸಾರುವ ಮಹತ್ವಗಳೇ ಭಿನ್ನವಾದದ್ದು.
 

muharram remains unprinted in the pages of history A festival of spirituality for Muslims gvd
Author
First Published Jul 17, 2024, 9:55 AM IST | Last Updated Jul 17, 2024, 10:31 AM IST

ನಾಸಿರ್ ಸಜಿಪ, ಮಂಗಳೂರು

ಭಾವೈಕ್ಯತೆ ಸಾರುವ ಹಬ್ಬ ಎಂದೆ ಜನಜನಿತವಾಗಿರುವ  ಮೊಹರಂ ಮತ್ತೆ ಬಂದಿದೆ. ಜಾತಿ, ಧರ್ಮದ ಗಡಿ ಮೀರಿ ಆಚರಿಸುವ ಮೊಹರಂ ಮುಸ್ಲಿಮರ ಪಾಲಿನ ಹೊಸ ವರ್ಷ. ಈ ಬಾರಿ ಜುಲೈ ತಿಂಗಳ ಆಗಮನದೊಂದಿಗೆ ಇಸ್ಲಾಮಿಕ್ ಕ್ಯಾಲೆಂಡರ್‌ನ ಹಿಜರಿ ಶಕೆ 1446 ಕೂಡಾ ಕಾಲಿಟ್ಟಿದೆ. ಅಂದರೆ ಈ ದಿನದಂದು ಮುಸ್ಲಿಮರಿಗೆ ಹೊಸ ವರ್ಷದ ಸಂಭ್ರಮ. ಕರ್ನಾಟಕದ ಹಲವು ಭಾಗಗಳಲ್ಲಿ ಮೊಹರಂ ಎನ್ನುವುದು ಕೇವಲ ಮುಸ್ಲಿಮರ ಹಬ್ಬವಾಗಿ ಉಳಿದಿಲ್ಲ. ಬದಲಾಗಿ ಈ ಹಬ್ಬವನ್ನು ಹಿಂದೂ, ಮುಸ್ಲಿಮರು ಸೇರಿ ಭಾವೈಕ್ಯದಿಂದ ಆಚರಿಸುತ್ತಾರೆ. ಹಲವೆಡೆ ಧರ್ಮದನಿಯಮಗಳಿಗೆ ವಿರುದ್ಧವಾಗಿ ಆಚರಣೆಗಳು ನಡೆಯುವುದೂ ಇದೆ. 

ಆದರೆ ಮೊಹರಂ ಸಾರುವ ಮಹತ್ವಗಳೇ ಭಿನ್ನವಾ ದದ್ದು. ಇಸ್ಲಾಂ ಅತಿಯಾದ ಸಂಭ್ರಮಾಚರಣೆಯೋ ಶೋಕಾಚರಣೆಯೋ ಕಲಿಸಿಲ್ಲ. ಧಾರ್ಮಿಕವಾಗಿ ಮೊಹರಂಗೆ ದೊಡ್ಡ ಮಹತ್ವವಿದೆ. ಐತಿಹಾಸಿಕ ಘಟನೆ ಗಳ ಹಿನ್ನೆಲೆಯೂ ಈ ಹಬ್ಬಕ್ಕಿದೆ. ಹಲವು ಚಾರಿತ್ರಿಕ ಘಟನೆಗಳನ್ನು ನೆನಪು ಮಾಡಿಕೊಡುವುದೂ ಇದೇ ಮೊಹರಂ. ಹಲವು ಪ್ರವಾದಿಗಳ ಜೀವನಕ್ಕೆ ಸಂಬಂಧಿ ಸಿದ ಐತಿಹಾಸಿಕ ಘಟನೆಗಳು ನಡೆದಿದ್ದೂ ಇದೇ ಮೊಹರಂನಲ್ಲೇ. ಹೀಗಾಗಿ ಈ ತಿಂಗಳು ಮುಸ್ಲಿಮರ ಪಾಲಿಗೆ ವಿಶೇಷ. ಹಿಂದಿನ ರೀತಿ ಹಬ್ಬದ ಆಚರಣೆ ಈಗಿಲ್ಲ. ಹಬ್ಬದ ಆಚರಣೆ ಈಗೀಗ ಎಲ್ಲೆ ಮೀರುತ್ತಿದೆ. ಧರ್ಮದ ಚೌಕಟ್ಟಿನಾಚೆಗೆ ಸಂಭ್ರಮಾಚರಣೆ ನಡೆಯುತ್ತಿದೆ. 

‘ಬ್ರ್ಯಾಂಡ್‌ ಬೆಂಗಳೂರು’ 27ಕ್ಕೆ ಸರ್ವ ಶಾಸಕರ ಸಭೆ: ಡಿ.ಕೆ.ಶಿವಕುಮಾರ್‌ ಭರವಸೆ

ವಿವಿಧ ರೀತಿಯ ಕುಣಿತಗಳು, ಡಂಗುರ ಸಾರುವ ಮೆರವಣಿಗೆಗಳನ್ನೂ ಇತ್ತೀಚೆಗೆ ಮೊಹರಂ ಆಚರಣೆ ವೇಳೆ ಕಾಣುತ್ತಿ ದ್ದೇವೆ. ಈ ದಿನದಂದು ಕರ್ಬಲಾದ ನೆನಪು, ಶೋಕಾಚರಣೆ ಹೆಸರಿನಲ್ಲಿ ದೇಹಕ್ಕೆ ಗಾಯ ಮಾಡಿಕೊಳ್ಳುವ ಸಂಪ್ರದಾಯವೂ ಇದೆ. ದುಃಖದ ದಿನವಾಗಿ, ಬಲಿದಾನದ ತಿಂಗಳಾಗಿ ಆಚರಿಸುವ ಪರಿಪಾಠವೂ ಇದೆ. ಮೊಹರಂ ಎಂದ ತಕ್ಷಣ ಹರಿತವಾದ ಆಯುಧಗಳಿಂದ ದೇಹಕ್ಕೆ ಗಾಯ ಮಾಡಿಕೊಳ್ಳುವ ದೃಶ್ಯಗಳು ಕಣ್ಣೆದುರಿಗೆ ಬಂದು ನಿಲ್ಲುವುದು ಸಹಜ. ಮೊಹರಂ ತಿಂಗಳ 10 ದಿನವನ್ನು ದುಃಖದ ದಿನವಾಗಿ ಪರಿಗಣಿಸುವವರು ಹೀಗೆ ವಿಶಿಷ್ಟ ರೀತಿಯಲ್ಲಿ ಹಬ್ಬ ಆಚರಿಸುತ್ತಾರೆ.  ಮುಹರ್ರ೦ ತಿಂಗಳಲ್ಲಿ ನಡೆದ ಕರ್ಬಲಾ ಯುದ್ಧವೇ ಈ ದುಃಖದ ದಿನದ ಹಿಂದಿರುವ ಕಾರಣ. ಆದರೆ ಇಸ್ಲಾಂ ಧರ್ಮದಲ್ಲಿ ಶೋಕಾಚ ರಣೆ ಎಂಬ ಕಲ್ಪನೆಯೇ ಇಲ್ಲ ಎನ್ನುವುದು ಕಟು ವಾಸ್ತವ. 

ಕರ್ಬಲಾ ಯುದ್ಧ, ಹಝತ್ ಹುಸೈನ್‌ರ ಹತ್ಯೆ: ಮೊಹರಂ ತಿಂಗಳಲ್ಲಿ ನಡೆದ ಇನ್ನೊಂದು ಘಟನೆ ಕರ್ಬಲಾ ಯುದ್ಧ. ಪ್ರವಾದಿ ಮುಹಮ್ಮದ್ ಅವರ ಮರಣದ ಬಳಿಕ ಅಬೂಬಕರ್, ಉಮರ್‌ಬಿನ್ ಖತ್ತಾಬ್, ಉಸ್ಮಾನ್ ಬಿನ್ ಅಫ್ಘಾನ್ ಹಾಗೂ ಅಲೀ ಬಿನ್ ಅಬೀತಾಲಿಬ್ ಅರೇಬಿಯಾದಲ್ಲಿ ಆಳ್ವಿಕೆ ನಡೆಸುತ್ತಾರೆ. ಇವರ ಆಡಳಿತವು ಖಲೀಫಾ ಆಡಳಿತ ಎಂದೇ ಖ್ಯಾತಿಗಳಿಸಿತ್ತು. ಇವರ ಆಡಳಿತ ಕೊನೆಗೊಂಡ ಬಳಿಕ ಮುಆವಿಯಾ ಎಂಬವರು ಅಧಿಕಾರಕ್ಕೇರುತ್ತಾರೆ. ಮುಆವಿಯಾ ಪ್ರಜಾಸತ್ತಾತ್ಮಕ, ಸರ್ವ ಧರ್ಮಕ್ಕೂ ಸಮಾನತೆ ಸಾರುವ ಆಡಳಿತವನ್ನು ನಡೆಸಿ ಇತರರಿಗೆ ಮಾದರಿಯಾಗುತ್ತಾರೆ.

ಮುಆವಿಯಾತಮ್ಮ ಅಧಿಕಾರದ ಬಳಿಕ ಮಗಯಝೀದ್‌ಗೆ ಪಟ್ಟ ಕಟ್ಟುವುದಕ್ಕೆ ಮುಂದಾಗುತ್ತಾರೆ. ಈ ಮೂಲಕ ಅಲ್ಲಿಯ ತನಕವಿದ್ದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬದಲಾಗಿ, ವಂಶಾಡಳಿತಕ್ಕೆ ಒತ್ತು ಕೊಡುತ್ತಾರೆ. ಆದರೆ ಪ್ರವಾದಿ ಮುಹಮ್ಮದರ ಮೊಮ್ಮಗ ಹುಸೈನ್ ಇದನ್ನು ವಿರೋಧಿಸುತ್ತಾರೆ. ಪ್ರವಾದಿ ಮತ್ತು ಖಲೀಫಾಗಳು ತೋರಿಸಿಕೊಟ್ಟಮಾದರಿ ಆಡಳಿತವು ವಂಶಾಡಳಿದತ್ತ ಹೋಗುವುದನ್ನು ವಿರೋಧಿಸಿ ಬಂಡೇಳುತ್ತಾರೆ. ಇದರ ಹೊರತಾಗಿಯೂ ಯಝೀದ್ ಗೆ ಪಟ್ಟ ಕಟ್ಟಲಾಗುತ್ತದೆ. ಆ ವೇಳೆಯಲ್ಲಿ ಯಝೀದ್ ವಿರುದ್ಧ ಹುಸೈನ್ ಸಮರ ಸಾರುತ್ತಾರೆ. ಅನ್ಯಾಯದ ವಿರುದ್ಧ ಹೋರಾಡಿದ ಹುಸೈನ್ ದುರಾದೃಷ್ಟವಶಾತ್ ಕರ್ಬಲಾ ಎಂಬಲ್ಲಿನಡೆದಯುದ್ಧದಲ್ಲಿ ಹುತಾತ್ಮರಾಗುತ್ತಾರೆ. ಈ ಘಟನೆ ಇಸ್ಲಾಮಿನ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ.

ತಾಸೂಆ ಮತ್ತೂ ಆಶೂರಾಹ್: ಮುಸ್ಲಿಂ ಸಮುದಾಯಕ್ಕೆ ಸೇರಿದ ಯಾವುದೇ ಹಬ್ಬವಿದ್ದರೂ ಅಲ್ಲಿ ವ್ರತಗಳನ್ನು ಆಚರಿಸುವ ಸಂಪ್ರದಾಯವಿದೆ. ಬಡವನ ಹಸಿವಿನ ಅನುಭವ ಆಗರ್ಭ ಶ್ರೀಮಂತನಿಗೂ ಆಗಬೇಕು ಎನ್ನುವ ಉದ್ದೇಶ ದೊಂದಿಗೆ ಉಪವಾಸದ ಸಂಪ್ರದಾಯವನ್ನು ಮೊಹರಂನಲ್ಲೂ ಆಚರಿಸಲಾಗುತ್ತದೆ. ಮೊಹರಂ ತಿಂಗಳ 9 ಮತ್ತು 10ನೇ ದಿನ(ಈ ವರ್ಷ ಜುಲೈ 16 ಮತ್ತು 17)ಗಳಲ್ಲಿ ಉಪವಾಸ ಆಚರಿಸುತ್ತಾರೆ. ತಾಸೂಆ ಹಾಗೂ ಆಶೂರಾಹ್ ಎಂದೇ ಕರೆಯಲ್ಪಡುವ ಈ ಎರಡು ದಿನಗಳು ವಿಶ್ವದಾದ್ಯಂತನೆಲೆಸಿರುವಮುಸ್ಲಿಮರಿಗೆ ಅತ್ಯಂತ ಪ್ರಮುಖ ಹಾಗೂ ಮಹತ್ವ.

ಏನಿದು ಮೊಹರಂ, ಹಿಜರಿ ವರ್ಷ?: ಪ್ರವಾದಿ ಮುಹಮ್ಮದ್ ಅವರು ಕ್ರಿಸ್ತ ಶಕ 570ರಲ್ಲಿ ಸೌದಿ ಅರೇಬಿಯಾದ ಮೆಕ್ಕಾ ನಗರದಲ್ಲಿ ಹುಟ್ಟಿ ಬೆಳೆದರು. ತಮ್ಮ 40ನೇ ವಯಸ್ಸಿನಲ್ಲಿರುವಾಗ ಪ್ರವಾದಿತ್ವ ಪ್ರಾಪ್ತಿಯಾದ ಬಳಿಕ ಧರ್ಮ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ವೇಳೆ ಅವರಿಗೆ ಶತ್ರುಗಳ ಉಪಟಳ ಎದುರಾಗುತ್ತದೆ. ಶತ್ರುಗಳು ನಾನಾ ರೀತಿಯಲ್ಲಿ ಪ್ರವಾದಿ ಮುಹಮ್ಮದ್ ಹಾಗೂ ಅವರ ಅನುಯಾಯಿಗಳಿಗೆ ಕಾಟ ಕೊಡಲು ಆರಂಭಿಸುತ್ತಾರೆ. ಅವರ ಕಾಟ ತಾಳಲಾರದೆ ಮುಹಮ್ಮದರಿಗೆ ಮೆಕ್ಕಾ ದಿಂದ ಮದೀನಾಕ್ಕೆ ವಲಸೆ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಹೀಗೆ ಮಹಮ್ಮದರು ಹೋಗುವ ಯಾತ್ರೆಯೇ ಹಿಜರಿ ಎಂದೇ ಪ್ರಸಿದ್ದಿ ಗಳಿಸುತ್ತದೆ. ಅಲ್ಲಿಂದಲೇ ಹಿಜರಿ ಶಕೆ ಅಥವಾ ಇಸ್ಲಾಮಿಕ್ ಕ್ಯಾಲೆ ಲೆಂಡರ್ ವರ್ಷ ಆರಂಭಗೊಳ್ಳುತ್ತದೆ.

ಮದೀನಾದಲ್ಲಿ ನೆಲೆ ಕಂಡುಕೊಂಡ ಪ್ರವಾದಿ ಮುಹಮ್ಮದರು, ಅಲ್ಲಿ ಯಹೂದಿ ಗೋತ್ರದ ಜನರು ಪ್ರವಾದಿ ಮೂಸಾ (ಮೋಸಸ್) ಅವರ ಮೇಲಿನ ಪ್ರೀತಿಯಿಂದ ಉಪವಾಸ ಆಚರಿಸುವುದನ್ನು ಕಾಣು ತ್ತಾರೆ. ಪರೋವನನಿಂದ ಜನರನ್ನು ಮೂಸಾ ರಕ್ಷಿಸಿದ ಕಾರಣಕ್ಕೆ ಯಹೂದಿಗಳು ಮುಹರ್ರಂ 10 ದಿನಕ್ಕೆ ವ್ರತ ಆಚರಿಸುತ್ತಾರೆ ಎನ್ನು ವುದರ ಬಗ್ಗೆ ಮುಹಮ್ಮದರು ತಿಳಿದುಕೊಳ್ಳುತ್ತಾರೆ. ಆದರೆ ಮೂಸಾ ಅವರ ವಿಚಾರದಲ್ಲಿ ಸಂಭ್ರಮಿಸಲು ಯಹೂದಿಯರಿಗಿಂತ ತಮಗೆ ಹೆಚ್ಚಿನ ಹಕ್ಕಿದೆ ಎನ್ನುವ ಮುಹಮ್ಮದರು, ಮುಂದಿನ ವರ್ಷ ತಾವು ಬದುಕುಳಿದರೆ 10ನೇ ದಿನದ ಜೊತೆಗೆ 9ನೇ ದಿನವೂ ಉಪವಾಸ ಆಚರಿಸುವ ಸಂಕಲ್ಪ ಮಾಡುತ್ತಾರೆ. ಇದೇ ಕಾರಣಕ್ಕೆ ಮುಸ್ಲಿಮರು ಈ ಎರಡು 2 ದಿನ ಉಪವಾಸ ಆಚರಿಸುತ್ತಾರೆ.

ಕರಾವಳಿ, ಮಲೆನಾಡಲ್ಲಿ ಭಾರಿ ಮಳೆ, ನಷ್ಟ: ನೂರಾರು ಮನೆಗಳಿಗೆ ಹಾನಿ

ಪ್ರವಾದಿ ಮೂಸಾ ಮತ್ತು ಅವರ ಅನುಯಾಯಿಗಳನ್ನು ಅಲ್ಲಾಹನು ಈಜಿಪ್ಟ್ ಸರ್ವಾಧಿಕಾರಿ ಪರೋವನನಿಂದ ರಕ್ಷಿಸಿದ ಇನ್ನೊಂದು ಪ್ರಮುಖ ಘಟನೆಯೂ ಈ ತಿಂಗಳ ಮಹತ್ವ ಸೂಚಿಸು ತದೆ. ಪ್ರಥಮ ಪ್ರವಾದಿ ಆದಮ್ ಅವರ ಪಶ್ಚಾತ್ತಾಪವನ್ನು ಅಲ್ಲಾಹನು ಸ್ವೀಕರಿಸಿದ್ದ ತಿಂಗಳು ಕೂಡಾ ಮೊಹರಂ. ಪ್ರವಾದಿ ನೂಹ್ ಅವರ ಹಡಗು ಭಾರಿ ಚಂಡಮಾರುತದಿಂದ ಪಾರಾಗಿ ಜೂದೀ ಬೆಟ್ಟದ ಮೇಲೆ ತಂಗಿ, ನೂಹ್ ಹಾಗೂ ಅವರ ಅನುಯಾಯಿಗಳು ಪಾರಾಗುವುದು, ಪ್ರವಾದಿ ಯೂನುಸ್ ಮೀನಿನ ಹೊಟ್ಟೆಯಿಂದ ಹೊರಗೆ ಬಂದ ಚರಿತ್ರೆಯನ್ನೂ ಈ ಮೊಹರಂ ನೆನಪಿಸುತ್ತದೆ. ಅಲ್ಲದೇ ಪ್ರವಾದಿ ಇಬ್ರಾಹಿಂ ಅವರು ನಮ್ಮೂದನ ಬೆಂಕಿಯಿಂದ ಸುರಕ್ಷಿತ ಪಾರಾಗಿ ಬಂದಿದ್ದು ಕೂಡ ಮೊಹರಂ ಹಾಗೂ ಇಸ್ಲಾಮಿನ ಚರಿತ್ರೆಯಲ್ಲಿ ದೊಡ್ಡದೊಂದು ಇತಿಹಾಸ.

Latest Videos
Follow Us:
Download App:
  • android
  • ios