ಹಸ್ತದಲ್ಲಿ ಶನಿ ಪರ್ವತ ಉಬ್ಬಾಗಿದ್ದರೆ ಅದೃಷ್ಟ..!
ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಹಸ್ತದಲ್ಲಿರುವ ರೇಖೆ, ಚಿಹ್ನೆ ಮತ್ತು ಪರ್ವತಗಳನ್ನು ನೋಡಿ ಭವಿಷ್ಯದ ವಿಚಾರಗಳನ್ನು ತಿಳಿಯಬಹುದಾಗಿದೆ. ಅಷ್ಟೇ ಅಲ್ಲದೆ ವ್ಯಕ್ತಿಯ ಭವಿಷ್ಯ, ವಿವಾಹ, ಅದೃಷ್ಟ ಮುಂತಾದ ವಿಷಯಗಳ ಬಗ್ಗೆ ಸಂಕೇತವನ್ನು ನೀಡುತ್ತದೆ. ಅದರಲ್ಲೂ ಶನಿ ಪರ್ವತವು ವ್ಯಕ್ತಿಯ ಅದೃಷ್ಟವನ್ನು ತಿಳಿಸುವ ಸಂಕೇತವಾಗಿದೆ. ಹಾಗಾಗಿ ಶನಿ ಪರ್ವತದ ಬಗ್ಗೆ ಇನ್ನಷ್ಟು ತಿಳಿಯೋಣ.
ಹಸ್ತ ಸಾಮುದ್ರಿಕಾ ಶಾಸ್ತ್ರವು ವ್ಯಕ್ತಿಯ ಭವಿಷ್ಯವನ್ನು ತಿಳಿಯುವ ವಿಚಾರದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹಸ್ತದಲ್ಲಿರುವ ರೇಖೆಯನ್ನು ಗಮನಿಸಿ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ತಿಳಿಯಬಹುದಾಗಿದೆ. ಹಸ್ತದಲ್ಲಿ ಸೂರ್ಯ, ಚಂದ್ರ, ಬುಧ, ಗುರು, ಶುಕ್ರ ಮತ್ತು ಶನಿ ಗ್ರಹಗಳ ಪ್ರತೀಕವಾಗಿ ಪರ್ವತಗಳಿರುತ್ತವೆ. ಹಸ್ತದಲ್ಲಿರುವ ಶನಿ ಪರ್ವತದ ಶುಭ ಮತ್ತು ಅಶುಭ ಲಕ್ಷಣಗಳ ಬಗ್ಗೆ ತಿಳಿಯೋಣ.
ಹಸ್ತದಲ್ಲಿ ಶನಿ ಪರ್ವತವು ಮಧ್ಯದ ಬೆರಳಿನ ಕೆಳಭಾಗದಲ್ಲಿರುತ್ತದೆ. ಅಂದರೆ ಮಧ್ಯದ ಬೆರಳಿನ ಆರಂಭವನ್ನು ಶನಿ ಪರ್ವತವೆಂದು ಕರೆಯಲಾಗುತ್ತದೆ. ಶನಿ ಪರ್ವತದ ಸ್ಥಳವು ಅಗಲವಾಗಿದ್ದು ಅದು ಸ್ವಲ್ಪ ಉಬ್ಬಾಗಿದ್ದರೆ ಅದನ್ನು ಅದೃಷ್ಟದ ಸಂಕೇತವೆಂದು ಹೇಳಲಾಗುತ್ತದೆ. ಹಸ್ತದಲ್ಲಿ ಅಂತಹ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ಭಾಗ್ಯಶಾಲಿ ಎಂದು ಪರಿಗಣಿಸಲಾಗುತ್ತದೆ. ಅಂತಹ ಲಕ್ಷಣವನ್ನು ಹೊಂದಿರುವ ವ್ಯಕ್ತಿಯು ಜೀವನದಲ್ಲಿ ಉತ್ತಮ ಪದವಿಯನ್ನು ಮತ್ತು ಯಶಸ್ಸನ್ನು ಗಳಿಸುತ್ತಾನೆ. ಕೆಲಸ ಕಾರ್ಯಗಳ ವಿಷಯದಲ್ಲಿ ಅತ್ಯಂತ ನಿಷ್ಠರಾಗಿರುತ್ತಾರೆ. ಅಷ್ಟೇ ಅಲ್ಲದೆ ಬದ್ಧತೆಯನ್ನು ತೋರುತ್ತಾರೆ. ಇತರರ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸ ಕಾರ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಕಠಿಣ ಪರಿಶ್ರಮದಿಂದ ಗುರಿಯನ್ನು ತಲುಪಲು ಸತತವಾಗಿ ಪ್ರಯತ್ನ ಪಡುತ್ತಾರೆ. ಶನಿ ಪರ್ವತದ ಜಾಗವು ಹೆಚ್ಚು ಉಬ್ಬು ಆಗಿದ್ದರೆ ಅಂತಹ ವ್ಯಕ್ತಿಯ ವ್ಯಾಪಾರ - ವ್ಯವಹಾರದಲ್ಲಿ ಕಾಲಕಾಲಕ್ಕೆ ಬದಲಾವಣೆಯನ್ನು ಕಾಣುವಂತೆ ಆಗುತ್ತದೆ.
ಇದನ್ನು ಓದಿ: ನಿಮ್ಮ ರಾಶಿಗೆ ಅನುಗುಣವಾಗಿ ಗುರು ವಂದನೆ ಸಲ್ಲಿಸಿ, ಬದುಕಿಕೊಂದು ದಾರಿ ಕಾಣಿಸುತ್ತೆ!
ಹಸ್ತದಲ್ಲಿ ಶನಿ ಪರ್ವತದ ಮೇಲ್ಭಾಗದಲ್ಲಿ ಸ್ಪಷ್ಟವಾಗಿ ಕಾಣುವ ಇತರ ಚಿಹ್ನೆಗಳಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಶನಿ ಪರ್ವತದಲ್ಲಿ ನಕ್ಷತ್ರದ ಚಿಹ್ನೆ ಇದ್ದರೆ ಶುಭವಲ್ಲ, ಅಶುಭದ ಸಂಕೇತವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಶನಿ ಪರ್ವತದ ಮೇಲ್ಭಾಗದಲ್ಲಿ ಕ್ರಾಸ್ ಅಥವಾ ದ್ವೀಪದ ಚಿಹ್ನೆ ಇದ್ದರೆ ಅದು ಉತ್ತಮವಲ್ಲ, ಅಶುಭದ ಸಂಕೇತವೆಂದು ಹೇಳಲಾಗುತ್ತದೆ. ಇದರಿಂದ ವಾಹನ ಅಪಘಾತಗಳಂತಹ ದುರ್ಘಟನೆಗಳು ಘಟಿಸುವ ಸಂಭವವಿರುತ್ತದೆ. ಹಾಗಾಗಿ ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದಿರಬೇಕು. ನಿತ್ಯ ಶನಿ ಮಂತ್ರವನ್ನು ಜಪಿಸುತ್ತಿರಬೇಕು. ಅಷ್ಟೇ ಅಲ್ಲದೆ ಈ ರೀತಿಯ ಚಿಹ್ನೆಗಳಿಂದ ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳು ಸದಾ ಕಾಡುತ್ತಿರುತ್ತವೆ. ಇಂಥ ಸಂದರ್ಭದಲ್ಲಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ. ಪರಿಹಾರಾರ್ಥವಾಗಿ ಶನಿ ದೇವರ ಆರಾಧನೆ ಮಾಡುವುದು, ಪ್ರತಿನಿತ್ಯ ಶನಿದೇವರ ಮಂತ್ರ ಮತ್ತು ಸ್ತೋತ್ರಗಳನ್ನು ಜಪಿಸಬೇಕಾಗುತ್ತದೆ.
ವ್ಯಕ್ತಿಯ ಹಸ್ತದಲ್ಲಿ ಶನಿ ಪರ್ವತದ ಪ್ರದೇಶವು ಉಬ್ಬಾಗಿರುವುದರ ಜೊತೆ ಜೊತೆಗೆ ಗುರು ಮತ್ತು ಸೂರ್ಯ ಪರ್ವತವು ಸಹ ಉಬ್ಬಾಗಿದ್ದರೆ ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಇಂತಹ ವ್ಯಕ್ತಿಗಳು ಜೀವನದಲ್ಲಿ ಹೆಚ್ಚಿನ ಧನವನ್ನು ಗಳಿಸುವುದಲ್ಲದೆ, ಅದೃಷ್ಟವಂತರಾಗಿರುತ್ತಾರೆ. ಬುದ್ಧಿವಂತಿಕೆ ಮತ್ತು ಪರಿಶ್ರಮದಿಂದ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ.
ಇದನ್ನು ಓದಿ: ಗ್ರಹಗಳ ಅಶುಭ ಪ್ರಭಾವದಿಂದ ಪಾರಾಗಲು ಧರಿಸಿ ಈ ರುದ್ರಾಕ್ಷಿ ...!!!
ಶನಿ ಪರ್ವತದ ಬೆರಳು ಹೆಚ್ಚು ಉದ್ದವಾಗಿದ್ದರೆ ಅಂತಹ ವ್ಯಕ್ತಿಗಳು ಶಾಂತಿಪ್ರಿಯರು ಆಗಿರುತ್ತಾರೆ. ಈ ವ್ಯಕ್ತಿಗಳು ಪ್ರಾಮಾಣಿಕರು ಮತ್ತು ಧಾರ್ಮಿಕ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿದವರೂ ಆಗಿರುತ್ತಾರೆ. ಶನಿ ಪರ್ವತದ ಮೇಲೆ ಹೆಚ್ಚು ರೇಖೆಗಳಿದ್ದು ಅದು ತುಂಡು ತುಂಡಾಗಿ ಇದ್ದರೆ ಅದು ದೋಷಪೂರ್ಣವಾಗಿದೆ ಎಂದು ಹೇಳಲಾಗುತ್ತದೆ.
- ಭಾಗ್ಯರೇಖೆಯು ಶನಿ ಪರ್ವತದ ಬಳಿ ಬಂದು ಪೂರ್ಣಗೊಳ್ಳುತ್ತದೆ. ಹಾಗಾಗಿ ವ್ಯಕ್ತಿಯ ಅದೃಷ್ಟಕ್ಕೆ ಹಾಗೂ ಶನಿ ಗ್ರಹಕ್ಕೆ ನೇರ ಸಂಬಂಧವಿದೆ ಎಂದು ಹೇಳಲಾಗುತ್ತದೆ.
- ಶನಿ ಪರ್ವತದಲ್ಲಿ ಒಂದು ರೇಖೆ ಇದ್ದರೆ ಅಂತಹ ವ್ಯಕ್ತಿಯು ಹೆಚ್ಚಿನ ಅದೃಷ್ಟವಂತನಾಗುತ್ತಾನೆ.
- ಒಂದಕ್ಕಿಂತ ಹೆಚ್ಚು ರೇಖೆಗಳು ಶನಿ ಪರ್ವತದಲ್ಲಿದ್ದರೆ ಜೀವನದಲ್ಲಿ ನಿರಂತರವಾಗಿ ಸಮಸ್ಯೆಗಳು ಕಾಡುತ್ತಿರುತ್ತವೆ.
ಇದನ್ನು ಓದಿ: ವಾಸ್ತು ದೋಷ ನಿವಾರಣೆಗೆ ಕರ್ಪೂರದ ಪರಿಹಾರ
- ಶನಿ ಪರ್ವತದಲ್ಲಿ ಒಂದು ರೇಖೆಯು ಇನ್ನೊಂದನ್ನು ತುಂಡರಿಸಿದ್ದರೆ, ಅದು ದೌರ್ಭಾಗ್ಯ ಮತ್ತು ಚಿಂತೆಯ ಸೂಚಕವಾಗಿರುತ್ತದೆ.
- ಶನಿ ಪರ್ವತದ ಮೇಲೆ ಬಿಂದು ಉಂಟಾಗಿದ್ದರೆ ಅದು ಆಕಸ್ಮಿಕ ಘಟನೆಗಳ ಸೂಚಕವಾಗಿದೆ.
- ಶನಿ ಪರ್ವತದ ಮೇಲೆ ವೃತ್ತ ಅಥವಾ ಗೋಲಾಕಾರದ ಚಿಹ್ನೆ ಇದ್ದರೆ ಅಂತಹ ವ್ಯಕ್ತಿಗೆ ವಿವಾಹದ ಮೇಲೆ ಆಸಕ್ತಿ ಇರುವುದಿಲ್ಲ. ಅಂಥವರು ಬ್ರಹ್ಮಚಾರಿಯಾಗಿರಲು ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತದೆ.