Asianet Suvarna News Asianet Suvarna News

ಸುಖಾ ಸುಮ್ಮನೆ ಖರ್ಚು ಮಾಡ್ಬೇಡಿ, ಕಷ್ಟದಲ್ಲಿದ್ದವರಿಗೆ ಹೆಲ್ಪ್ ಮಾಡಿ, ಯಶಸ್ಸು ನಿಮ್ಮದೇ!

ನಮ್ಮ ಜೀವನದಲ್ಲಿ ಸಾಕಷ್ಟು ಕೆಲಸಗಳನ್ನ ಮಾಡ್ತೇವೆ. ಮಾಡಿದ ಕೆಲಸದಲ್ಲಿ ಯಶಸ್ಸು ಸಿಗ್ಬೇಕೆಂದು ಬಯಸ್ತೇವೆ. ಆದ್ರೆ ಆ ಸಂದರ್ಭದಲ್ಲಿ ನಾವು ಮಾಡುವ ಕೆಲ ತಪ್ಪು ನಮ್ಮ ಯಶಸ್ಸಿಗೆ ಅಡ್ಡಿಯಾಗುತ್ತದೆ. ಹಾಗಾಗಿ ಕೆಲಸ ಮಾಡುವ ಮುನ್ನ ಕೆಲ ಸಂಗತಿ ನೆನಪಿಟ್ಟುಕೊಳ್ಬೇಕು.
 

Motivational Quotes Learn From These Mistakes For Successful Life
Author
First Published Feb 25, 2023, 4:43 PM IST | Last Updated Feb 25, 2023, 4:48 PM IST

ಪ್ರತಿಯೊಬ್ಬ ವ್ಯಕ್ತಿಯೂ ಸಾಧಿಸುವ ಗುರಿ ಹೊಂದಿರುತ್ತಾನೆ. ತನ್ನ ಗುರಿ  ತಲುಪಲು ಎಲ್ಲ ಪ್ರಯತ್ನಗಳನ್ನೂ ಮಾಡ್ತಾನೆ. ಅದಕ್ಕಾಗಿ ಹಗಲು ರಾತ್ರಿ ಕಷ್ಟಪಟ್ಟು ದುಡಿಯುತ್ತಾನೆ. ತಾನು ಮಾಡುವ ಕೆಲಸದಲ್ಲಿ ಸಫಲತೆ ಇರಬೇಕು ಎಂದು ಬಯಸುತ್ತಾನೆ. ಹೀಗೆ ಗುರಿಯತ್ತ ಪಯಣ ಬೆಳೆಸುವಾಗ ದಾರಿ ಮಧ್ಯದಲ್ಲಿ ಅನೇಕ ಸೋಲುಗಳು ತಪ್ಪುಗಳು ನಡೆದೇ ನಡೆಯುತ್ತವೆ.

ಸೋಲೇ ಗೆಲುವಿನ ಮೆಟ್ಟಿಲು ಎನ್ನುವ ಮಾತಿನಂತೆ ಸೋಲಿನಿಂದ ಮನುಷ್ಯ (Human) ಅನೇಕ ವಿಷಯಗಳನ್ನು ಕಲಿಯಬಹುದು. ಆದರೆ ಕೆಲವೊಮ್ಮೆ ಗೊತ್ತಿದ್ದೂ ಗೊತ್ತಿದ್ದೂ ತಪ್ಪುಗಳು ನಡೆದುಹೋಗುತ್ತದೆ. ತಿಳಿದೋ ತಿಳಿಯದೆಯೋ ನಾವು ಮಾಡುವ ಕೆಲವು ತಪ್ಪುಗಳು ಯಶಸ್ಸಿಗೆ ಅಡ್ಡಿಯಾಗುತ್ತವೆ. ಅದು ನಮ್ಮ ಮೇಲೆ ನಕಾರಾತ್ಮಕ (Negative ) ಪ್ರಭಾವ ಬೀರಬಹುದು. ಹಾಗಾಗಿ ನಾವು ಮಾಡುವ ಚಿಕ್ಕ ಪುಟ್ಟ ತಪ್ಪುಗಳಿಂದ ಬುದ್ಧಿ ಕಲಿತು ಮುಂದಿನ ಜೀವನದಲ್ಲಿ ಅಂತಹ ತಪ್ಪುಗಳು ನಡೆಯದೇ ಇರುವಂತೆ ಎಚ್ಚರವಹಿಸಿದಾಗ ಯಶಸ್ಸು ಶತಸಿದ್ಧ.

ಒಬ್ಬ ವ್ಯಕ್ತಿ ಕಷ್ಟದಲ್ಲಿದ್ದಾಗ ಇನ್ನೊಬ್ಬರು ಸಹಾಯ ಮಾಡಿದರೆ, “ಅವನು ಬಹಳ ಪುಣ್ಯ ಮಾಡಿದ್ದ ಅನ್ಸುತ್ತೆ. ಯಾರೋ ಒಬ್ರು ದೇವ್ರ ಹಾಗೆ ಬಂದು ಅವನನ್ನು ಕಾಪಾಡಿದ್ರು” ಅಂತ ಹೇಳ್ತಾರೆ. ಕಷ್ಟದಲ್ಲಿದ್ದ ವ್ಯಕ್ತಿ ಒಳ್ಳೆಯ ಕೆಲಸ ಮಾಡಿ ನಾಲ್ಕು ಜನರ ಸ್ನೇಹ (Friendship), ಪ್ರೀತಿ ಗಳಿಸಿದ್ದಾಗ ಮಾತ್ರ ಅವನ ಬಗ್ಗೆ ಜನರು ಹೀಗೆ ಮಾತನಾಡಲು ಸಾಧ್ಯ. ಹಾಗಾಗಿ ಒಬ್ಬ ವ್ಯಕ್ತಿ ಒಳ್ಳೆಯ, ಧಾರ್ಮಿಕ ಕೆಲಸಗಳನ್ನು ಮಾಡಿದಾಗ ಅದರ ಒಳ್ಳೆಯ ಫಲ ಅವನನ್ನು ಕಾಪಾಡುತ್ತದೆ ಹಾಗೂ ಅವನ ಯಶಸ್ಸಿಗೂ ಕಾರಣವಾಗುತ್ತೆ.

Holi Astrology: ಹೋಳಿಯಿಂದ ಯುಗಾದಿವರೆಗೆ ಈ ರಾಶಿಗಳಿಗಿದೆ ಧನವೃಷ್ಟಿ..

ಧರ್ಮ ಧನಂ ಚ ಧಾನ್ಯಂ ಚ ಗುರೋರ್ವಚನಮೌಷಧಮ್| ಸುಗೃಹಿತಂ ಚ ಕರ್ತವ್ಯಂ ಅನ್ಯಥಾ ತು ನ ಜೀವತಿ ||
ಧರ್ಮ, ಧನ, ಧಾನ್ಯ, ಗುರುವಚನ ಮತ್ತು ಔಷಧ ಇವನ್ನು ಯೋಗ್ಯರೀತಿಯಲ್ಲಿ ಸ್ವೀಕರಿಸದಿದ್ದರೆ ಜೀವಕ್ಕೆ ಅಪಾಯ ಎಂಬುದು ಈ ಶ್ಲೋಕದ ತಾತ್ಪರ್ಯ.

ಧರ್ಮ ಮಾರ್ಗದಲ್ಲಿ ನಡೆಯಿರಿ : ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತಿದೆ. ಒಬ್ಬ ವ್ಯಕ್ತಿ ಧರ್ಮ ಮಾರ್ಗದಲ್ಲಿ ನಡೆದಾಗ ಅಥವಾ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿ, ಶೃದ್ಧೆಯಿಂದ ಮಾಡಿದಾಗ ಅವನು ಎಲ್ಲ ಕ್ಷೇತ್ರದಲ್ಲಿಯೂ ಯಶಸ್ಸು ಕಾಣುತ್ತಾನೆ. ಧರ್ಮ, ಧಾರ್ಮಿಕ ಪದ್ಧತಿಗಳಲ್ಲಿ ನಂಬಿಕೆ ಇಲ್ಲದೇ ತಪ್ಪುಗಳನ್ನು ಎಸೆದಾಗ ಅವನು ಎಷ್ಟೇ ಪ್ರಯತ್ನಪಟ್ಟರೂ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ.

ದುಂದು ವೆಚ್ಚ ಮಾಡಬೇಡಿ : ಧನ ಎಂದರೆ ಹಣ. ಹಣ, ಸಂಪತ್ತು, ಆಸ್ತಿಗಾಗಿಯೇ ಒಬ್ಬ ವ್ಯಕ್ತಿ ಏನೆಲ್ಲ ಮಾಡುತ್ತಾನೆ. ಕೆಲವರ ಬಳಿ ಹೇರಳವಾದ ಸಂಪತ್ತು ಇದ್ದರೂ ಅದನ್ನು ಹೇಗೆ ಬಳಸಿಕೊಳ್ಳಬೇಕು, ಬೆಳೆಸಿಕೊಂಡುಹೋಗಬೇಕು ಎನ್ನುವ ಜ್ಞಾನವಿರುವುದಿಲ್ಲ. ಅನವಶ್ಯಕ ಖರ್ಚು ಮಾಡಿ ದುಂದುವೆಚ್ಚ ಮಾಡುತ್ತಾರೆ. ತಂದೆ, ಅಜ್ಜ ಮಾಡಿದ ಆಸ್ತಿಯನ್ನು ಇವರು ಕುಳಿತು ಅನುಭವಿಸುತ್ತಿರುತ್ತಾರೆ. ಅದಕ್ಕಾಗಿ ಸಂಪತ್ತನ್ನು ಕೂಡ ಯೋಗ್ಯ ರೀತಿಯಲ್ಲಿ ಬಳಸಿಕೊಳ್ಳದೇ ಇದ್ದರೆ ಅದರಿಂದ ನಮ್ಮ ಅವನತಿ ಆಗುತ್ತದೆಯೇ ವಿನಃ ಯಶಸ್ಸು ಸಿಗುವುದಿಲ್ಲ.

Sadhesati Upay: ಶನಿವಾರ ಈ ಬಣ್ಣ ಧರಿಸಿದ್ರೆ ಶನಿಯೇ ನಿಮ್ಮ ರಕ್ಷಕ

ಹಿರಿಯರ ಮಾತನ್ನು ಪಾಲಿಸಿ, ಗೌರವಿಸಿ : ಎಲ್ಲ ವಿದ್ಯೆಗೂ ಒಬ್ಬ ಗುರು ಅಥವಾ ಹಿರಿಯರು ಇರುತ್ತಾರೆ. ಹಿರಿಯರ ಮಾತನ್ನು ಕೇಳದೇ ಗುರುವಚನ ಪಾಲಿಸದೇ ಇದ್ದರೆ ಯಾರೊಬ್ಬನೂ ಯಶಸ್ವಿಯಾಗಲಾರ. ಯಾವುದೇ ಒಂದು ವಿಷಯದ ಮೇಲೆ ಸಂಪೂರ್ಣ ಜ್ಞಾನ ಪಡೆದಾಗಲೇ ಅವನು ಅದರಲ್ಲಿ ಪ್ರವೀಣನಾಗಲು ಸಾಧ್ಯ. ಎಲ್ಲರ ಬಳಿಯೂ ಸ್ವಲ್ಪ ಸ್ವಲ್ಪ ಜ್ಞಾನ ಸಂಪಾದಿಸಿಕೊಳ್ಳುವವನು ಯಾವ ಕೆಲಸಕ್ಕೂ ಯೋಗ್ಯನಾಗುವುದಿಲ್ಲ. ನಮಗೆ ಖಾಯಿಲೆಯಾದಾಗ ಔಷಧವನ್ನು ಒಂದು ಪ್ರಮಾಣದಲ್ಲಿ ಸ್ವೀಕರಿಸಿದಾಗ ಮಾತ್ರ ಅದು ಖಾಯಿಲೆಯ ಮೇಲೆ ಪರಿಣಾಮ ಬೀರಲು ಸಾಧ್ಯ. ವೈದ್ಯರ ಸಲಹೆಯನ್ನು ತಿರಸ್ಕರಿಸಿ ನಮ್ಮದೇ ಆದ ರೀತಿಯಲ್ಲಿ ನಾವು ಔಷಧ ಸೇವನೆ ಮಾಡಿದರೆ ಅದರ ಪರಿಣಾಮವನ್ನು ನಾವೇ ಅನುಭವಿಸಬೇಕಾಗುತ್ತದೆ. ಹಾಗೆಯೇ ಎಲ್ಲ ಕ್ಷೇತ್ರದಲ್ಲಿಯೂ ಪರಿಣಿತರ ಸಲಹೆಯನ್ನು, ಮಾರ್ಗದರ್ಶನವನ್ನು ಪಡೆದು ಮುಂದುವರೆದಾಗ ಸಕ್ಸೆಸ್ ನಮ್ಮದಾಗುತ್ತೆ.
 

Latest Videos
Follow Us:
Download App:
  • android
  • ios